Just In
Don't Miss!
- Finance
UMANG APP: ಇಪಿಎಫ್ಗೆ ಸಂಬಂಧಿಸಿದ ಆ್ಯಪ್, ವೈಶಿಷ್ಟ್ಯಗಳೇನು ತಿಳಿಯಿರಿ
- News
ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
- Movies
ಜಾಕಿ ಚಾನ್ ತಮ್ಮ ಮಗನಿಗೆ ಸಾವಿರಾರು ಕೋಟಿ ಆಸ್ತಿಯನ್ನು ಕೊಡುತ್ತಿಲ್ಲವೇಕೆ?
- Lifestyle
ಭಾನುವಾರದ ಭವಿಷ್ಯ: ಈ ದಿನ ಯಾವ ರಾಶಿಯವರಿಗೆ ಅದೃಷ್ಟದ ದಿನ
- Sports
ಹೈದರಾಬಾದ್ ಸೋಲಿಸಿ ಅಗ್ರ ಸ್ಥಾನಕ್ಕೇರಿದ ಮುಂಬೈ ಇಂಡಿಯನ್ಸ್
- Education
Ninasam Diploma Admission 2020-21: ಮೇ ತಿಂಗಳಲ್ಲಿ ನೀನಾಸಂ ಡಿಪ್ಲೋಮಾ ಪ್ರವೇಶಾತಿ ಆರಂಭ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಸಿಂಗಲ್-ಚಾನೆಲ್ ಎಬಿಎಸ್ ವೆರಿಯೆಂಟ್ ಬಿಡುಗಡೆ
ಟಿವಿಎಸ್ ಮೋಟಾರ್ ಕಂಪನಿ ತನ್ನ ಅಪಾಚೆ ಆರ್‌ಟಿಆರ್ 200 4ವಿ ಬೈಕಿನ ಬೇಸ್ ವೆರಿಯೆಂಟ್ ಆದ ಸಿಂಗಲ್-ಚಾನೆಲ್ ಎಬಿಎಸ್' ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಸಿಂಗಲ್-ಚಾನೆಲ್ ಎಬಿಎಸ್ ವೆರಿಯೆಂಟ್ ಬೆಲೆಯು ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.1.28 ಲಕ್ಷಗಳಾಗಿದೆ.

ಹೊಸ ಫೀಚರ್ ಗಳೊಂದಿಗೆ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಟಾಪ್-ಸ್ಪೆಕ್ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಪ್ರತ್ಯೇಕವಾಗಿ ಪರಿಚಯಿಸಲಾಯಿತು. ಟಾಪ್-ಸ್ಪೆಕ್ ಟಿವಿಎಸ್ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿನಂತೆ ನವೀಕರಿಸಿದ ಬೇಸ್ ವೆರಿಯೆಂಟ್ ಕೂಡ ರೈನ್, ಅರ್ಬನ್ ಮತ್ತು ಸ್ಪೋರ್ಟ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿರುತ್ತದೆ.

ಇನ್ನು ಈ ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಸಿಂಗಲ್-ಚಾನೆಲ್ ಎಬಿಎಸ್'ವೆರಿಯೆಂಟ್ ಮಾದರಿಯಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಸಸ್ಪೆಂಕ್ಷನ್ ಸೆಟಪ್ ಅನ್ನು ನೀಡಲಾಗಿದೆ.
MOST READ: ಯೂನಿಕಾರ್ನ್ ಬೈಕಿನ ಬೆಲೆ ಹೆಚ್ಚಿಸಿದ ಹೋಂಡಾ ಮೋಟಾರ್‌ಸೈಕಲ್

ಇದರೊಂದಿಗೆ ಹೊಂದಾಣಿಕೆ ಮಾಡಬಹುದಾದ ಬ್ರೇಕ್ ಮತ್ತು ಕ್ಲಚ್ ಲಿವರ್‌ಗಳನ್ನು ಸಹ ನೀಡಲಾಗುತ್ತದೆ. ಟಾಪ್-ಸ್ಪೆಕ್ ‘ಡ್ಯುಯಲ್-ಚಾನೆಲ್ ಎಬಿಎಸ್' ವೆರಿಯೆಂಟ್ ನಂತೆ ಹೊಸ ಬೇಸ್ ವೆರಿಯೆಂಟ್ ಅದರ ಎಂಜಿನ್ ಅನ್ನು ವಿಭಿನ್ನ ರೈಡಿಂಗ್ ಮೋಡ್‌ಗಳಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ನೀಡವಂತೆ ನವೀಕರಿಸಿದೆ.

ಬೇಸ್ ವೆರಿಯೆಂಟ್ ಸಿಂಗಲ್-ಚಾನೆಲ್ ಎಬಿಎಸ್ ಮಾದರಿಯಲ್ಲಿ ಅದೇ 197.7 ಸಿಸಿ ಸಿಂಗಲ್-ಸಿಲಿಂಡರ್ ಆಯಿಲ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.
MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ಈ ಎಂಜಿನ್ ರೈನ್ ಮತ್ತು ಅರ್ಬನ್ ರೈಡಿಂಗ್ ಮೋಡ್‌ಗಳಲ್ಲಿ 17.2 ಬಿಹೆಚ್‍ಪಿ ಪವರ್ ಮತ್ತು 16.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಇನ್ನು ‘ಸ್ಪೋರ್ಟ್' ಮೋಡ್ ನಲ್ಲಿ 20.4 ಬಿಹೆಚ್‍ಪಿ ಪವರ್ ಮತ್ತು 17.25 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಮೂರು ರೈಡಿಂಗ್ ಮೋಡ್‌ಗಳಲ್ಲಿ 105 ಕಿ.ಮೀ ನಿಂದ 127 ಕಿ.ಮೀ ಗಳ ನಡುವೆ ಟಾಪ್ ಸ್ಪೀಡ್ ಬದಲಾಗುತ್ತದೆ

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಸಿಂಗಲ್-ಚಾನೆಲ್ ಎಬಿಎಸ್'ವೆರಿಯೆಂಟ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಅದೇ ಶೋವಾ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸೆಟಪ್ ಅನ್ನು ಹೊಂದಿದೆ, ಇವೆರಡೂ ಪ್ರೀ ಲೋಡ್ ಹೊಂದಾಣಿಕೆ ಮಾಡಬಹುದಾಗಿದೆ.
MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍ಮಾಸ್ಟರ್ ಬೈಕ್

ಇನ್ನು ಈ ಹೊಸ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ ಮತ್ತು ಹಿಂಭಾಗದಲ್ಲಿ 270 ಎಂಎಂ ಮತ್ತು 240 ಎಂಎಂ ಪೆಟಲ್ ಡಿಸ್ಕ್ ಬ್ರೇಕ್ ಗಳನ್ನು ಅಳವಡಿಸಿದ್ದಾರೆ. ಇದರೊಂದಿಗೆ ಸಿಂಗಲ್-ಚಾನೆಲ್ ಸೂಪರ್-ಮೋಟೋ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಸಿಂಗಲ್-ಚಾನೆಲ್ ಎಬಿಎಸ್'ವೆರಿಯೆಂಟ್ ಮ್ಯಾಟ್ ಬ್ಲೂ ಬಣ್ಣವನ್ನು ಹೊಂದಿದೆ. ಇದನ್ನು ಈ ಹಿಂದೆ ಟಾಪ್-ಸ್ಪೆಕ್ ರೂಪಾಂತರದಲ್ಲಿ ಪರಿಚಯಿಸಲಾಯಿತು. ಹೊಸ ಬಣ್ಣದ ಆಯ್ಕೆಯ ಹೊರತಾಗಿ, ಗ್ಲೋಸ್ ಬ್ಲ್ಯಾಕ್ ಮತ್ತು ಪರ್ಲ್ ವೈಟ್ ಎಂಬ ಬಣ್ಣಗಳಲ್ಲಿಯು ಲಭ್ಯವಿರುತ್ತದೆ. ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಕೆಟಿಎಂ ಡ್ಯೂಕ್ 200 ಮತ್ತು ಬಜಾಜ್ ಎನ್‌ಎಸ್ 200 ಬೈಕುಗಳಿಗೆ ಪೈಪೋಟಿ ನೀಡುತ್ತದೆ.