ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಟಿವಿಎಸ್ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಅಪಾಚೆ ಸರಣಿಯಲ್ಲಿರುವ ಎಲ್ಲಾ ಮಾದರಿಗಳ ಬೆಲೆಗಳನ್ನು ಹೆಚ್ಚಿಸಿದೆ. ಟಿವಿಎಸ್ ಸರಣಿಯಲ್ಲಿರುವ ಬೈಕುಗಳ ಮಾದರಿಗಳ ಆಧರಿಸಿ ರೂ.3000 ವರೆಗೆ ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಟಿವಿಎಸ್ ಅಪಾಚೆ ಸರಣಿಯಲ್ಲಿ ಆರ್‌ಟಿಆರ್ 160, ಆರ್‌ಟಿಆರ್ 180, ಆರ್‌ಟಿಆರ್ 160 4ವಿ, ಆರ್‌ಟಿಆರ್ 200 4ವಿ ಮತ್ತು ಬ್ರ್ಯಾಂಡ್‌ನ ಪ್ರಮುಖ ಆರ್‌ಆರ್ 310 ಮಾದರಿಗಳನ್ನು ಒಳಗೊಂಡಿದೆ. ಹೊಸ ಬೆಲೆಗಳ ವಿವರಗಳನ್ನು ಟಿವಿಎಸ್ ತನ್ನ ವೆಬ್‌ಸೈಟ್‌ನಲ್ಲಿ ಸಹ ನವೀಕರಿಸಲಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಟಿವಿಎಸ್ ಅಪಾಚೆ ಸರಣಿಯಲ್ಲಿ ಬೈಕುಗಳ ಮಾರಾಟದಲ್ಲಿ ಉತ್ತಮ ಬೆಳವಣಿಗೆಯನ್ನು ಕಂಡಿದೆ.

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಟಿವಿಎಸ್ ಅಪಾಚೆ ಸರಣಿಯ ಬೆಲೆ ಏರಿಕೆ ಬಗ್ಗೆ ಮಾದರಿವಾರು ನೋಡುವುದಾದರೆ, ಆರ್‌ಟಿಆರ್ 160 ಬೈಕಿನ ಬೆಲೆಯು ರೂ.1,500 ವರೆಗೆ ಹೆಚ್ಚಿಸಲಾಗಿದೆ. ಇನ್ನು ಆರ್‌ಟಿಆರ್ 160 4ವಿ ಮತ್ತು ಆರ್‌ಟಿಆರ್ 180 ಬೈಕುಗಳ ಬೆಲೆಗಳನ್ನು ರೂ.1,770 ವರೆಗೆ ಹೆಚ್ಚಿಸಿದೆ.

MOST READ: ದುಬಾರಿಯಾಯ್ತು ಜನಪ್ರಿಯ ಬಿಎಸ್-6 ಯಮಹಾ ಎಂಟಿ-15 ಬೈಕ್

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಇನ್ನು ಟಿವಿಎಸ್ ಅಪಾಚೆ ಆರ್‌ಟಿಆರ್ 200 4ವಿ ಬೆಲೆಯನ್ನು ರೂ.2,020 ಗಳವರೆಗೆ ಹೆಚ್ಚಿಸಿದರೆ, ರೇಂಜ್-ಟಾಪಿಂಗ್ ಆರ್ಆರ್ 310 ಬೈಕಿನ ಬೆಲೆಯನ್ನು ರೂ.3,000 ಗಳವರೆಗೆ ಹೆಚ್ಚಿಸಲಾಗಿದೆ.

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಎಂಟ್ರಿ ಲೆವೆಲ್ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಬೈಕಿನ ಆರಂಭಿಕ ಬೆಲೆಯು ರೂ.1.02 ಲಕ್ಷಗಳಾಗಿದೆ. ಇನ್ನು ಟಾಪ್-ಸ್ಪೆಕ್ ಟಿವಿಎಸ್ ಅಪಾಚೆ ಆರ್ಆರ್ 310 ಬೈಕಿನ ಬೆಲೆಗಳು ರೂ.2.45 ಲಕ್ಷದಿಂದ ರೂ.2.48 ಲಕ್ಷಕ್ಕೆ ಏರಿಸಿದೆ. ಈ ಎಲ್ಲಾ ಬಲೆಗಳು ದೆಹಲಿಯ ಎಕ್ಸ್ ಶೋರೂಂ ಪ್ರಕಾರವಾಗಿದೆ.

MOST READ: ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡ 2021ರ ಕವಾಸಕಿ ನಿಂಜಾ 1000 ಎಸ್‌ಎಕ್ಸ್ ಬೈಕ್

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಸರಣಿಯಲ್ಲಿರುವ ಬೆಲೆ ಏರಿಕೆಯ ಹೊರತಾಗಿ, ಅಪಾಚೆ ಸರಣಿಯ ಎರಡೂ ಮಾದರಿಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಎಲ್ಲಾ ಮಾದರಿಗಳು ಮೊದಲಿನಂತೆಯೇ ಅದೇ ಫೀಚರ್ ಗಳು, ಉಪಕರಣಗಳು ಮತ್ತು ಸ್ಟೈಲಿಂಗ್ ಅನ್ನು ಹೊಂದಿವೆ.

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಟಿವಿಎಸ್ ಬೆಲೆ ಏರಿಕೆಗೆ ಯಾವುದೇ ನಿರ್ದಿಷ್ಟ ಕಾರಣವನ್ನು ತಿಳಿಸಿಲ್ಲ. ಆದರೆ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮತ್ತು ನಿರ್ವಹಣೆ ವೆಚ್ಚ ಅಧಿಕವಾಗುತ್ತಿರುವುದರಿಂಡ ಅಪಾಚೆ ಸರಣಿಯ ಬೈಕುಗಳ ಬೆಲೆ ಏರಿಕೆ ಮಾಡಿರಬಹುದು ಎಂದು ನಿರೀಕ್ಷಿಸುತ್ತೇವೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಟಿವಿಎಸ್ ಕಳೆದ ವರ್ಷ ತನ್ನ ಸಂಪೂರ್ಣ ಅಪಾಚೆ ಸರಣಿಯ ಎಲ್ಲಾ ಮಾದರಿಗಳು ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ ನವೀಕರಿಸಿದೆ. ಆರ್‌ಟಿಆರ್ 200 4ವಿ, ಆರ್‌ಟಿಆರ್ 4ವಿ ಮತ್ತು ಆರ್‌ಆರ್ 310 ನಂತಹ ಮಾದರಿಗಳು ಕೆಲವು ಸ್ಟೈಲಿಂಗ್ ಮತ್ತು ಫೀಚರ್ ನವೀಕರಣಗಳನ್ನು ಸಹ ಪಡೆದಿವೆ.

Apache Model

New Price Old Price Difference
RTR 160 Drum ₹1,02,070 ₹1,00,550 ₹1,520
RTR 160 Disc ₹1,05,070 ₹1,03,550 ₹1,520
RTR 180 ₹1,08,270 ₹1,06,500 ₹1,770
RTR 160 4V Drum ₹1,07,270 ₹1,05,500 ₹1,770
RTR 160 4V Disc ₹1,10,320 ₹1,08,550 ₹1,770
RTR 200 4V Single ₹1,27,020 ₹1,25,000 ₹2,020
RTR 200 4V Dual-Channel ₹1,33,070 ₹1,31,050 ₹2,020
RR 310 ₹2,48,000 ₹2,45,000 ₹3,000
ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

2020ರ ಡಿಸೆಂಬರ್‌ ತಿಂಗಳಲ್ಲಿ ಒಟ್ಟು ದ್ವಿಚಕ್ರ ವಾಹನಗಳ 2,58,239 ಯುನಿಟ್‌ಗಳನ್ನು ಮಾರಾಟಗೊಳಿಸಿವೆ. ಇನ್ನು 2019ರ ಡಿಸೆಂಬರ್ ತಿಂಗಳಲ್ಲಿ ಟಿವಿಎಸ್ ಕಂಫನಿಯು ದ್ವಿಚಕ್ರ ವಾಹನಗಳ 2,15,619 ಯುನಿಟ್‌ಗಳನ್ನು ಮಾರಾಟಗೊಳಿಸಿತ್ತು. ಇನ್ನು 2019ರ ಡಿಸೆಂಬರ್ ತಿಂಗಳ ಮಾರಾಟವನ್ನು ಕಳೆದ ತಿಂಗಳ ಮಾರಾಟಕ್ಕೆ ಹೋಲಿಸಿದರೆ ಶೇ.19 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ.

ದುಬಾರಿಯಾಯ್ತು ಜನಪ್ರಿಯ ಟಿವಿಎಸ್ ಅಪಾಚೆ ಬೈಕುಗಳು

ಇನ್ನು ಟಿವಿಎಸ್ ಕಂಪನಿಯ ದ್ವಿಚಕ್ರ ವಾಹನಗಳ ರಫ್ತಿನಲ್ಲಿಯು ಬೆಳವಣಿಗೆಯನ್ನು ಸಾಧಿಸಿದೆ. ಟಿವಿಎಸ್ ಮೋಟಾರ್ ಕಂಪನಿ ಸ್ಕೂಟರ್ ಮಾರಾಟದಲ್ಲಿ ಶೇ.4 ರಷ್ಟು ಬೆಳವಣಿಗೆಯನ್ನು ಸಾಧಿಸಿದೆ. ಕಳೆದ ತಿಂಗಳು ಟಿವಿಎಸ್ ಮೋಟಾರ್ ಕಂಪನಿಯು ಸ್ಕೂಟರ್ 77,705 ಯುನಿಟ್‌ಗಳನ್ನು ಮಾರಾಟಗೊಳಿಸಿವೆ.

Most Read Articles

Kannada
English summary
TVS Apache Series Prices Hiked By Up To Rs 300. Read In Kannada.
Story first published: Monday, January 11, 2021, 12:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X