90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಎಲೆಕ್ಟ್ರಿಕ್ ವಾಹನಗಳು ಪರಿಸರ ಸ್ನೇಹಿಯಾಗಿವೆ. ಇದರ ಜೊತೆಗೆ ಪೆಟ್ರೋಲ್, ಡೀಸೆಲ್ ಮೇಲೆ ವ್ಯಯಿಸುವ ಹಣವನ್ನು ಉಳಿಸಬಹುದು. ಭಾರತದಲ್ಲಿಯೂ ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ ಇನ್ನೂ ಹಲವಾರು ಜನರು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಹಿಂಜರಿಯುತ್ತಿದ್ದಾರೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಹಲವು ಗಂಟೆ ಕಾಯಬೇಕು ಎಂಬುದು ಈ ಹಿಂಜರಿಕೆಗೆ ಪ್ರಮುಖ ಕಾರಣವಾಗಿದೆ. ಇದರ ಜೊತೆಗೆ ಇವಿಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿ ಜನರು ಎಲೆಕ್ಟ್ರಿಕ್ ವಾಹನ ಖರೀದಿಸಲು ಹಿಂದೇಟು ಹಾಕುತ್ತಿದ್ದಾರೆ. ಈಗ ಅತಿ ವೇಗದಲ್ಲಿ ಚಾರ್ಜ್ ಆಗುವ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ವರದಿಯಾಗಿದೆ. ಇದಕ್ಕೆ ಸಂಬಂಧಿಸಿದ ವಿವರಗಳನ್ನು ಈ ಲೇಖನದಲ್ಲಿ ನೋಡೋಣ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಕಂಪನಿಯೊಂದು ಅತಿ ವೇಗದಲ್ಲಿ ಚಾರ್ಜ್ ಆಗುವ ತಂತ್ರಜ್ಞಾನವನ್ನು ಹೊಂದಿರುವ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದೆ ಎಂದು ವರದಿಯಾಗಿದೆ. ಈ ಹೊಸ ಬ್ಯಾಟರಿ ಕೇವಲ 90 ಸೆಕೆಂಡುಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ. ಇಂಗ್ಲೆಂಡ್ ಮೂಲದ ಮಹ್ಲೆ ಹಾಗೂ ಅಲೋಟ್ರೋಪ್ ಎನರ್ಜಿ ಎಂಬ ಎರಡು ಕಂಪನಿಗಳು ಹೊಸ ಹೈ ಸ್ಪೀಡ್ ರೀಚಾರ್ಜೆಬಲ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲು ಕೈಜೋಡಿಸಿವೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಎಲೆಕ್ಟ್ರಿಕ್ ವಾಹನಗಳ ಜಗತ್ತಿನಲ್ಲಿ ಕ್ರಾಂತಿಯನ್ನುಂಟು ಮಾಡಲು ಈ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬ್ಯಾಟರಿಯನ್ನು ಸದ್ಯಕ್ಕೆ ಕಾನ್ಸೆಪ್ಟ್ ಮಾದರಿಯಾಗಿ ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಬ್ಯಾಟರಿಯನ್ನು ಶೀಘ್ರವೇ ಬಳಸಲು ಸಾಧ್ಯವಾಗುವಂತೆ ಅಭಿವೃದ್ಧಿಪಡಿಸಲು ಕಂಪನಿಯು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಕಂಪನಿಗಳು ಕಾರ್ಯ ನಿರತವಾಗಿವೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ವೇಗವಾಗಿ ಚಾರ್ಜ್ ಆಗುವ ಈ ಬ್ಯಾಟರಿಯು ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸ ಬಯಸುವ ಜನರಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಸ್ಪಷ್ಟವಾಗಿ ಹೇಳುವುದಾದರೆ ಈ ಬ್ಯಾಟರಿಯ ರಚನೆಯು ಚಾರ್ಜ್ ಮಾಡಲು ಹೆಚ್ಚು ಸಮಯ ಕಾಯುವುದನ್ನು ನಿವಾರಿಸಲಿದೆ. ಈಗ ಮಾರುಕಟ್ಟೆಯಲ್ಲಿರುವ ಬಹುತೇಕ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಗರಿಷ್ಠ 6 ರಿಂದ 8 ಗಂಟೆಗಳ ಅಗತ್ಯವಿದೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಇನ್ನು ವೇಗದ ಚಾರ್ಜಿಂಗ್ ಕೇಂದ್ರಗಳಲ್ಲಿ ಚಾರ್ಜ್ ಮಾಡಿದರೆ 3 ರಿಂದ 4 ಗಂಟೆಗಳಲ್ಲಿ ಪೂರ್ತಿಯಾಗಿ ಚಾರ್ಜ್ ಮಾಡಬಹುದು. ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಗಂಟೆಗಟ್ಟಲೇ ಕಾಯಬೇಕಾದ ಪರಿಸ್ಥಿತಿಯಲ್ಲಿ ಹೊಸ ಸೂಪರ್ ಫಾಸ್ಟ್ ಚಾರ್ಜಿಂಗ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಬ್ಯಾಟರಿಯನ್ನು ಲಿಥಿಯಂ ಕಾರ್ಬನ್ ನಿಂದ ಉತ್ಪಾದಿಸಲಾಗಿದೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಈ ಬ್ಯಾಟರಿಯನ್ನು ಉತ್ಪಾದಿಸಲು ಬಹಳ ಅಪರೂಪದ ವಸ್ತುಗಳ ಅಗತ್ಯವಿದೆ ಎಂದು ಹೇಳಲಾಗಿದೆ. ಆದರೆ ಸಾಂಪ್ರದಾಯಿಕ ಬ್ಯಾಟರಿಯನ್ನು ತಯಾರಿಸಲು ಬಳಸುವ ಅದೇ ಉತ್ಪನ್ನಗಳಿಂದಲೇ ಈ ಬ್ಯಾಟರಿಯನ್ನು ಸಹ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದ ಹೊಸ ಹೈ ಸ್ಪೀಡ್ ಚಾರ್ಜಿಂಗ್ ಬ್ಯಾಟರಿಯು ಸಾಮಾನ್ಯ ಬ್ಯಾಟರಿಯಂತೆಯೇ ಮಾರಾಟಕ್ಕೆ ಬರುವ ನಿರೀಕ್ಷೆಗಳಿವೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಈ ಬ್ಯಾಟರಿಯನ್ನು ಹಗುರವಾದ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಪ್ರತ್ಯೇಕವಾಗಿ ತಯಾರಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಟಾಪ್ ಎಂದ ಬ್ಯಾಟರಿಗಳಲ್ಲಿ ಬಳಸುವಂತೆಯೇ ಆನೋಡ್ ಹಾಗೂ ಸೂಪರ್ ಕೆಪಾಸಿಟರ್‌ಗಳನ್ನು ಕ್ಯಾಥೋಡ್‌ನಲ್ಲಿ ಬಳಸಲಾಗುತ್ತದೆ. ಇವುಗಳನ್ನು ಆರ್ಗಾನಿಕ್ ಎಲೆಕ್ಟ್ರೋ ಲೈಟ್ ಗಳ ಮೂಲಕ ಬೇರ್ಪಡಿಸಲಾಗಿದೆ. ಇದರಿಂದ ತಕ್ಷಣವೇ ಶಾಖವು ಪ್ರಸರಿಸುತ್ತದೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ನಂತರ ಹೆಚ್ಚು ವೇಗದ ಚಾರ್ಜಿಂಗ್ ಹಾಗೂ ಅಧಿಕ ವಿದ್ಯುತ್ ಉತ್ಪಾದನೆಗೆ ಅನುವು ಮಾಡಿಕೊಡುತ್ತದೆ. ಇದೆಲ್ಲವನ್ನೂ ನೈಸರ್ಗಿಕವಾಗಿ ಮಾಡಲಾಗಿದೆ ಎಂಬುದು ಗಮನಾರ್ಹ. ಮಹ್ಲೆ ಹಾಗೂ ಅಲೋಟ್ರೋಪ್ ಎನರ್ಜಿ ಕಂಪನಿಗಳು ಈ ಫೀಚರ್‌ನೊಂದಿಗೆ ಅಲ್ಟ್ರಾ ಫಾಸ್ಟ್ ಬ್ಯಾಟರಿಯನ್ನು ಅಭಿವೃದ್ಧಿಪಡಿಸಿವೆ. ಪೂರ್ತಿಯಾಗಿ ಚಾರ್ಜ್ ಆದ ನಂತರ ಈ ಬ್ಯಾಟರಿಯನ್ನು ಬಳಸುವ ವಾಹನಗಳು ಗರಿಷ್ಠ 25 ಕಿ.ಮೀಗಳವರೆಗೆ ಚಲಿಸಬಹುದು ಎಂದು ಹೇಳಲಾಗಿದೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಆದರೆ ವ್ಯಾಪ್ತಿಯ ಬಗ್ಗೆ ಕಂಪನಿಯು ಯಾವುದೇ ಸ್ಪಷ್ಟನೆ ನೀಡಿಲ್ಲ. ಈ ಅಲ್ಟ್ರಾಫಾಸ್ಟ್ ಚಾರ್ಜ್ಡ್ ಬ್ಯಾಟರಿಯು ಇನ್ನೂ ಹೆಚ್ಚು ದೂರ ಚಲಿಸಬಹುದು ಎಂದು ನಿರೀಕ್ಷಿಸಲಾಗಿದೆ. ಸ್ವಿಸ್ ಇಂಜಿನಿಯರಿಂಗ್ ಕಂಪನಿಯಾದ ಎಬಿಬಿ ಇವಿಗಳನ್ನು ವೇಗವಾಗಿ ಚಾರ್ಜ್ ಮಾಡುವ ಚಾರ್ಜರ್ ಗಳನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಚಾರ್ಜರ್ ಮೂಲಕ ಯಾವುದೇ ಎಲೆಕ್ಟ್ರಿಕ್ ಕಾರನ್ನು ಕೇವಲ 15 ನಿಮಿಷಗಳಲ್ಲಿ ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಈ ಚಾರ್ಜರ್ ಎಲೆಕ್ಟ್ರಿಕ್ ಕಾರುಗಳನ್ನು ಸಾಮಾನ್ಯ ಚಾರ್ಜರ್ ಗಳಿಗಿಂತ ಹೆಚ್ಚು ವೇಗವಾಗಿ ಚಾರ್ಜ್ ಮಾಡುತ್ತದೆ. ಈ ಚಾರ್ಜರ್ ವಿಶ್ವದ ಅತ್ಯಂತ ವೇಗದ ಚಾರ್ಜರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಾರ್ಜರ್ ಮೂಲಕ ಕೇವಲ 3 ನಿಮಿಷಗಳಲ್ಲಿ 100 ಕಿ.ಮೀಗಳವರೆಗೆ ಚಲಿಸುವಷ್ಟು ಚಾರ್ಜ್ ಮಾಡಬಹುದು ಎಂದು ಎಬಿಬಿ ಕಂಪನಿ ಹೇಳಿದೆ.

90 ನಿಮಿಷಗಳಲ್ಲಿ ಪೂರ್ತಿಯಾಗಿ ಚಾರ್ಜ್ ಆಗುತ್ತದೆ ಈ ಇವಿ ಬ್ಯಾಟರಿ

ಈ ಉಪಕರಣವನ್ನು ಜಾಗತಿಕವಾಗಿ ತರಲು ಕಂಪನಿಯು 3 ಮಿಲಿಯನ್ ಅಮೆರಿಕನ್ ಡಾಲರ್ ಗಳನ್ನು ಹೂಡಿಕೆ ಮಾಡಲು ಸಜ್ಜಾಗಿದೆ. ಎಬಿಬಿ ಕಂಪನಿಯು ಹೊಸ ಟೆರ್ರಾ 360 ಮಾಡ್ಯುಲರ್ ಚಾರ್ಜರ್ ಅನ್ನು ವಿನ್ಯಾಸಗೊಳಿಸುತ್ತಿದೆ. ಈ ಚಾರ್ಜರ್ ಅನ್ನು ಯಾವುದೇ ಎಲೆಕ್ಟ್ರಿಕ್ ಕಾರುಗಳಲ್ಲಿ ಬಳಸಬಹುದು.

ಗಮನಿಸಿ: ಕೊನೆಯ ಆರು ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
Uk firms develops ultra fast charging battery details
Story first published: Sunday, October 10, 2021, 10:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X