ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾ ಮೊದಲಿನಿಂದಲೂ ಒರಿಜಿನಲ್ ವಸ್ತುಗಳನ್ನು ಕಾಪಿ ಮಾಡುವುದರಲ್ಲಿ ನಿಪುಣರು. ಒರಿಜಿನಲ್ ವಸ್ತುಗಳು ಥೇಟ್ ಅದೇ ರೀತಿ ಉತ್ಪಾದಿಸುವುದ್ದಾರೆ. ಅದೇ ರೀತಿ ಹಲವಾರು ಜನಪ್ರಿಯ ವಾಹನಗಳ ಡಿಸೈನ್ ಕದ್ದು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಾರೆ.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಒರಿಜನಲ್ ಮಾದರಿಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಅನ್ನು ತಯಾರಿಸುತ್ತಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಜನಪ್ರಿಯವಾದ ಹಲವು ಕಾರು ಮತ್ತು ಬೈಕುಗಳ ಡಿಸೈನ್ ಕದ್ದು ಹಲವು ಬಾರಿ ಛೀಮಾರಿ ಹಾಕಿಸಿಕೊಂಡರು ಕೂಡ ಚೀನಾ ಮಾತ್ರ ಕಾಪಿ ಮಾಡುವ ಬುದ್ದಿಯನ್ನು ಬಿಟ್ಟಿಲ್ಲ. ಚೀನಾ ಜನಪ್ರಿಯ ಮಾದರಿಗಳ ಡಿಸೈನ್ ಕದ್ದು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುವುದನ್ನು ಒಂದು ಹವ್ಯಾಸ ಮಾಡಿಕೊಂಡಿದ್ದಾರೆ ಎಂದು ಹೇಳಬಹುದು.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಆಧಾರಿತ ಬೈಕಿನ ವಿನ್ಯಾಸವನ್ನು ಕಾಪಿ ಮಾಡಿ ಚೀನಾ ಮೂಲದ ಕ್ಸಿಯಾಂಗ್‌ಶುವಾಯಿ ಹೆವಿ ಮೆಷಿನರಿ ಕಂಪನಿಯು ಜೆಎಸ್ಎಕ್ಸ್500ಐ ಎಂಬ ಹೊಸ ಬೈಕನ್ನು ತಯಾರಿಸಿದೆ. ಟಿವಿಎಸ್ ಕಂಪನಿಯು 2018ರ ಆಟೋ ಎಕ್ಸ್‌ಪೋದಲ್ಲಿ ಮೊದಲ ಬಾರಿಗೆ ಝೆಪ್ಲಿನ್ ಕಾನ್ಸೆಪ್ಟ್ ಮಾದರಿಯನ್ನು ಅನಾವರಣಗೊಳಿಸಿದ್ದರು.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಜೆಎಸ್ಎಕ್ಸ್500ಐ ಎಂಬ ಕಾಪಿ ಕ್ಯಾಟ್ ಮಾದರಿಯು ಡಲ್ ವೇಟ್ ಮಾಡರ್ನ್-ರೆಟ್ರೊ ಬೈಕ್ ಆಗಿದ್ದು, ಇದು ಹೆಡ್ ಲ್ಯಾಂಪ್ ಮತ್ತು ವಿಶಾಲವಾದ ಫ್ಯೂಯಲ್ ಟ್ಯಾಂಕ್ ಅನ್ನು ಒಳಗೊಂಡಿದೆ. ಇದರ ರೇಡಿಯೇಟರ್ ಗ್ರಿಲ್, ಎಂಜಿನ್ ಕೌಲ್, ಸೈಡ್ ಪ್ಯಾನೆಲ್‌ಗಳು ಮತ್ತು ಹಿಂಭಾಗವು ಕೂಡ ಝೆಪ್ಲಿನ್ ಕಾನ್ಸೆಪ್ಟ್ ಮಾದರಿಗೆ ಹೋಲುತ್ತದೆ.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಜೆಎಸ್ಎಕ್ಸ್500ಐ ಬೈಕ್ ಯುಎಸ್‌ಡಿ ಫ್ರಂಟ್ ಫೋರ್ಕ್‌ಗಳನ್ನು ಸಹ ಪಡೆಯುತ್ತದೆ, ಆದರೆ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನಲ್ಲಿರುವಂತಹ ಗೋಲ್ಡನ್ ಫಿನಿಶಿಂಗ್ ಅನ್ನು ಹೊಂದಿಲ್ಲ. ಇನ್ನು ಅಲಾಯ್ ವ್ಹೀಲ್ ಗಳು ಮತ್ತು ಎಕ್ಸಾಸ್ಟ್ ಸಹ ವಿಭಿನ್ನ ವಿನ್ಯಾಸವನ್ನು ಹೊಂದಿದೆ,

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಜೆಎಸ್ಎಕ್ಸ್500ಐ ಬೈಕ್ ಆಲ್-ಎಲ್ಇಡಿ ಲೈಟಿಂಗ್, ಪ್ರೀಲೋಡ್-ಹೊಂದಾಣಿಕೆ ಮಾಡಬಹುದಾದ ಮೊನೊಶಾಕ್ ಮತ್ತು ಡಿಸ್ಕ್ ಬ್ರೇಕ್ ಗಳನ್ನು ಹೊಂದಿವೆ. ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ನೀಡಲಾಗಿದೆ.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಚೀನಾದ ಜೆಎಸ್ಎಕ್ಸ್500ಐ ಬೈಕ್ 2,150 ಎಂಎಂ ಉದ್ದ, 890 ಎಂಎಂ ಅಗಲ ಮತ್ತು 1,180 ಎಂಎಂ ಎತ್ತವನ್ನು ಹೊಂದಿದೆ. ಇನ್ನು ಈ ಬೈಕ್ 1,460 ಎಂಎಂ ಉದ್ದದ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಇನ್ನು ಈ ಬೈಕಿನ ಎರಡು ಕಡೆಗಳನ್ನು 17 ಇಂಚಿನ ವ್ಹೀಲ್ ಗಳನ್ನು ಪಡೆಯುತ್ತದೆ.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಇನ್ನು ಎಂಜಿನ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಕಾಪಿ ಕ್ಯಾಟ್ ಜೆಎಸ್ಎಕ್ಸ್500ಐ ಬೈಕಿನಲ್ಲಿ 71 ಸಿಸಿ, ವಾಟರ್-ಕೂಲ್ಡ್, ಟ್ವಿನ್-ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ ಅನ್ನು 44.87 ಬಿಹೆಚ್‍ಪಿ ಪವರ್ ಮತ್ತು 41 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತ.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಈ ಎಂಜಿನ್ ನೊಂದಿಗೆ 6-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇನ್ನು ಈ ಬೈಕ್ 150 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ ಎಂದು ತಯಾರಕರು ಹೇಳಿದ್ದಾರೆ.

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನ ಡಿಸೈನ್ ಕಾಪಿ ಮಾಡಿದ ಚೀನಾ ಕಂಪನಿ

ಟಿವಿಎಸ್ ಝೆಪ್ಲಿನ್ ಕಾನ್ಸೆಪ್ಟ್ ಬೈಕಿನಲ್ಲಿ 220 ಸಿಸಿ, ಸಿಂಗಲ್-ಸಿಲಿಂಡರ್ ಎಂಜಿನ್ ಹೊಂದಿದ್ದು, 1.2 ಕಿ.ವ್ಯಾಟ್ ರೀಜನರೇಟ್ ಎಲೆಕ್ಟ್ರಿಕ್ ಮೋಟರ್ ಮತ್ತು 48ವಿ ಎಲ್೦-ಐಯಾನ್ ಬ್ಯಾಟರಿಯೊಂದಿಗೆ ಜೋಡಿಯಾಗಿದೆ. ಚೀನಾ ಕಂಪನಿಯು ವಿನ್ಯಾಸವನ್ನು ಕಾಪಿ ಮಾಡಿದ್ದಾರೆ. ಆದರೆ ಕಾರ್ಯಕ್ಷಮತೆ, ಫೀಚರ್ಸ್ ಮತ್ತು ತಂತ್ರಜ್ಙಾನಗಳು ವಿಭಿನ್ನವಾಗಿದೆ

Most Read Articles

Kannada
English summary
TVS Zeppelin Cruiser Design Copycat From China Company. Read In Kannada.
Story first published: Saturday, June 26, 2021, 19:44 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X