ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಐಕಾನಿಕ್ ವೈಜೆಡ್ಎಫ್-ಆರ್7 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಹೊಸ ರೂಪದಲ್ಲಿ ಪರಿಚಯಿಸಬಹುದು. 2022ರ ಮಾಡೆಲ್ ಆಗಿ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಮಾರುಕಟ್ಟೆಗೆ ಲಗ್ಗೆ ಇಡಲಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಕ್ಯಾಲಿಫೋರ್ನಿಯಾದ ಸಿಎಆರ್ಬಿ ಸಂಸ್ಥೆಗೆ ಸಲ್ಲಿಸಿದ ದಾಖಲೆಗಳ ಪ್ರಕಾರ. ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಕೆಲವು ವರದಿಯ ಪ್ರಕಾರ, ಸೂಪರ್‌ಬೈಕ್ ವರ್ಲ್ಡ್ ಚಾಂಪಿಯನ್‌ಶಿಪ್ ಮತ್ತು ಸುಜುಕ 8 ಅವರ್ಸ್ ರೇಸ್‌ಗಳಲ್ಲಿ ಯಮಹಾ ಆರ್7 ಬಳಸಲಾದ 750ಸಿಸಿ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಈ ಬೈಕಿನಲ್ಲಿ ನೀಡಲಾಗುವುದಿಲ್ಲ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಸಿಎಆರ್ಬಿ ಫೈಲಿಂಗ್ಸ್ ಪ್ರಕಾರ, ಯಮಹಾ ವೈಜೆಡ್ಎಫ್-ಆರ್7 ಬೈಕಿನಲ್ಲಿ 689ಸಿಸಿ ಎಂಜಿನ್ ಅನ್ನು ಅಳವಡಿಸುತ್ತಾರೆ. ಇನ್ನು ಇದು ಯಮಹಾ ಎಂಟಿ-07 ರಲ್ಲಿ ಬಳಸಲಾದ ಪ್ರಸ್ತುತ ಪ್ಯಾರಲಲ್-ಟ್ವಿನ್ ಗಾತ್ರ ಮತ್ತು ಟೆನೆರೆ 700 ರಷ್ಟಿದೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕಿನಲ್ಲಿರುವ 689ಸಿಸಿ ಸಿಪಿ2 ಎಂಜಿನ್ 9,000 ಆರ್‌ಪಿಎಂನಲ್ಲಿ 72 ಬಿಹೆಚ್‌ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 68 ಎನ್‌ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಇನ್ನು ಎಪ್ರಿಲಿಯಾ ಆರ್ಎಸ್ 660 ಮಾದರಿಗೆ ಮಹಾ ನಿಜಕ್ಕೂ ಎಂಟಿ-07 ರ ಪೂರ್ಣ-ಆವೃತ್ತಿಯನ್ನು ಅಭಿವೃದ್ದಿ ಪಡಿಸುತ್ತಿದೆ ಎಂಬ ವದಂತಿಗಳು ಕೂಡ ಇವೆ. ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕ್ ಎಂಟಿ -07 ರಂತೆಯೇ ಆರ್7 ಅದೇ ಚಾಸಿಸ್ ಮತ್ತು ಸಸ್ಪೆಂಕ್ಷನ್ ಅನ್ನು ಬಳಸುತ್ತದೆಯೇ? ಇದು ಅತ್ಯಂತ ಪ್ರಮುಖವಾದ ಪ್ರಶ್ನೆಯಾಗಿದೆ.

MOST READ: ಬಿಡುಗಡೆಯಾಯ್ತು ಹೊಸ ಕವಾಸಕಿ ವಲ್ಕನ್ ಎಸ್ ಬೈಕ್

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಯಮಹಾ ವೈಜೆಡ್ಎಫ್-ಆರ್7 ಬೈಕಿಗೆ ಟೌಟರ್ ಚಾಸಿಸ್ ಮತ್ತು ಹೆಚ್ಚಿನ-ಸ್ಪೆಕ್ ಬ್ರೇಕಿಂಗ್ ಯುನಿಟ್ ಗಳೊಂದಿಗೆ ಟ್ರ್ಯಾಕ್‌ಗೆ ಹೆಚ್ಚು ಸೂಕ್ತವಾಗಿಸುತ್ತದೆ. ಇನ್ನು ಈ ಹೊಸ ಯಮಹಾ ವೈಜೆಡ್ಎಫ್-ಆರ್7 ಬೈಕ್ ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಹೊಂದಿರಲಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಈ ಹೊಸ ಬೈಕಿನಲ್ಲಿ ಟ್ರ್ಯಾಕ್ಷನ್ ಕಂಟ್ರೋಲ್, ಎಬಿಎಸ್ ಮತ್ತು ವ್ಹೀಲಿ ಕಂಟ್ರೋಲ್ ಗಳೊಂದಿಗೆ ಸಮಗ್ರ ಎಲೆಕ್ಟ್ರಾನಿಕ್ಸ್ ಸೂಟ್ ಅನ್ನು ಸಹ ನಿರೀಕ್ಷಿಸಬಹುದು. ಎಲ್ಲಾ ಸೇರಿಸಿದ ಕಿಟ್‌ನೊಂದಿಗೆ, ಆರ್7 ಮಾದರಿಯು ಎಂಟಿ -07 ಬೈಕ್ ಗಿಂತ ತುಸು ದುಬಾರಿಯಾಗಿರುತ್ತದೆ.

MOST READ: ಬಿಡುಗಡೆಯಾಯ್ತು ಹೊಸ ಟ್ರಯಂಫ್ ಬೊನೊವೆಲ್ಲಿ ಸ್ಪೀಡ್‍‍ಮಾಸ್ಟರ್ ಬೈಕ್

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಇನ್ನು ಯಮಹಾ ತನ್ನ ವೈಝಡ್ಎಫ್ ಆರ್15 ವಿ3 ಬೈಕಿನ ಬೆಲೆಯನ್ನು ಇತ್ತೀಚೆಗೆ ಹೆಚ್ಚಿಸಿದೆ. ಇದರಿಂದಾಗಿ ಯಮಹಾ ವೈಝಡ್ಎಫ್ ಆರ್15 ವಿ3 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ. ಇತ್ತೀಚಿನ ವರದಿಗಳ ಪ್ರಕಾರ, ಯಮಹಾ ಕಂಪನಿಯು ತನ್ನ ಎಂಟ್ರಿ ಲೆವೆಲ್ ಸ್ಪೋರ್ಟ್ಸ್ ಬೈಕ್ ವೈಝಡ್ಎಫ್ ಆರ್15 ವಿ3 ಮಾದರಿಯ ಬೆಲೆಯನ್ನು ರೂ.1,200 ಗಳವರೆಗೆ ಹೆಚ್ಚಿಸಲಾಗಿದೆ.

ಹೊಸ ರೂಪದಲ್ಲಿ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್

ಯಮಹಾ ತನ್ನ ಐಕಾನಿಕ್ ವೈಜೆಡ್ಎಫ್-ಆರ್7 ಬೈಕನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತ್ತೇವೆ. ಆದರೆ ಈ ಐಕಾನಿಕ್ ಯಮಹಾ ವೈಜೆಡ್ಎಫ್-ಆರ್7 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳಿಲ್ಲ.

Most Read Articles

Kannada
Read more on ಯಮಹಾ yamaha
English summary
Yamaha YZF-R7 May Be Launched As 2022 Model. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X