ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಯಮಹಾ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತಮ್ಮ ವೈಜೆಡ್ಎಫ್ ಆರ್ 15 ವಿ3.0 ಮತ್ತು ಎಂಟಿ-15 ಬೈಕ್‌ಗಳ ಬೆಲೆಯನ್ನು ಏರಿಸಲಾಗಿದೆ. ಇದೀಗ ಹೊಸ ಯಮಹಾ ವೈಜೆಡ್ಎಫ್ ಆರ್ 15 ವಿ3.0 ಮತ್ತು ಎಂಟಿ-15 ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ತುಸು ದುಬಾರಿಯಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಯಮಹಾ ವೈಜೆಡ್ಎಫ್ ಆರ್ 15 ವಿ3.0 ಬೈಕಿನ ಎಲ್ಲಾ ಬಬಣ್ಣಗಳ ಆಯ್ಕೆಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಈ ಫುಲ್ ಫೇರ್ಡ್ ಬೈಕ್ ಥಂಡರ್ ಗ್ರೇ, ಮೆಟಾಲಿಕ್ ರೆಡ್, ರೇಸಿಂಗ್ ಬ್ಲೂ, ಮತ್ತು ಡಾರ್ಕ್ ನೈಟ್ ಒಟ್ಟು ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಬೈಕಿನ ಎಲ್ಲಾ ಬಣ್ಣಗಳ ಮಾದರಿಗಳ ಬೆಲೆಯನ್ನು ಬೆಲೆಯನ್ನು ರೂ,2,500 ಗಳವರೆಗೆ ಹೆಚ್ಚಿಸಲಾಗಿದೆ. ಇದೀಗ ಯಮಹಾ ವೈಜೆಡ್ಎಫ್ ಆರ್ 15 ವಿ3.0 ಬೈಕಿನ ಬೆಲೆಯು ರೂ.1,54,600 ಗಳಿಂದ ರೂ.1,56,700 ಗಳಾಗಿರುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಯಮಹಾ ಎಂಟಿ-15 ಬೈಕಿನ ಮೆಟಾಲಿಕ್ ಬ್ಲ್ಯಾಕ್, ಡಾರ್ಕ್ ಮ್ಯಾಟ್ ಬ್ಲೂ ಮತ್ತು ಐಸ್ ಫ್ಲೂ-ವರ್ಮಿಲಿಯನ್ ಬಣ್ಣಗಳ ಆಯ್ಕೆಯ ಮಾದರಿಗಳ ಬೆಲೆಯನ್ನು ಹೆಚ್ಚಿಸಿದೆ. ಈ ಬೈಕಿನ ಮೆಟಾಲಿಕ್ ಬ್ಲ್ಯಾಕ್ ಮತ್ತು ಡಾರ್ಕ್ ಮ್ಯಾಟ್ ಬ್ಲೂ ಬಣ್ಣಗಳ ಮಾದರಿಗಳ ಬೆಲೆ ರೂ.5,000 ಗಳವರೆಗೆ ಹೆಚ್ಚಿಸಿದರೆ, ಐಸ್ ಫ್ಲೂ-ವರ್ಮಿಲಿಯನ್ ಬಣ್ಣದ ಮಾದರಿಯ ಬೆಲೆಯು ರೂ.4,000 ಗಳವರೆಗೆ ಹೆಚ್ಚಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಈ ಯಮಹಾ ವೈಜೆಡ್ಎಫ್ ಆರ್ 15 ವಿ3.0 ಮತ್ತು ಎಂಟಿ-15 ಬೈಕ್‌ಗಳಲ್ಲಿ 155 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 18.3 ಬಿಹೆಚ್‍ಪಿ ಪವರ್ ಮತ್ತು 14.1 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಸ್ಲಿಪ್ಪರ್ ಅಸಿಸ್ಟೆಡ್ ಕ್ಲಚ್ನೊಂದಿಗೆ ಸ್ಟ್ಯಾಂಡರ್ಡ್ ಸಿಕ್ಸ್-ಸ್ಪೀಡ್ ಗೇರ್ ಬಾಕ್ಸ್ ಜೋಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಈ ಯಮಹಾ ಆರ್15 ವಿ3 ಬೈಕಿನಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್ ಮತ್ತು ಟೈಲ್-ಲ್ಯಾಂಪ್, ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಸಂಪೂರ್ಣ ಡಿಜಿಟಲ್ ಎಲ್‌ಸಿಡಿ, ಮತ್ತು ಸ್ಪ್ಲಿಟ್-ಸ್ಟೈಲ್ ಸ್ಟೆಪ್-ಅಪ್ ಸೀಟ್ ಅನ್ನು ಹೊಂದಿದೆ. ಇನ್ನು ಈ ಹೊಸ ಮಾದರಿಯಲ್ಲಿ ರೇಡಿಯಲ್ ಟಯರ್, ಡ್ಯುಯಲ್ ಡ್ಯುಯಲ್-ಹಾರ್ನ್ ಮತ್ತು ಸೈಡ್-ಸ್ಟ್ಯಾಂಡ್ ಆಕ್ಟಿವೇಟೆಡ್ ಎಂಜಿನ್ ಕಟ್-ಆಫ್ ಫೀಚರ್ಸ್ ಗಳನ್ನು ಒಳಗೊಂಡಿವೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಈ ಯಮಹಾ ಆರ್15 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಸಸ್ಪೆಂಕ್ಷನ್ ಸೆಟಪ್ ಅನ್ನು ಒಳಗೊಂಡಿದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂಗಾಗಿ ಮುಂಭಾಗದಲ್ಲಿ 282 ಎಂಎಂ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

2021ರ ಯಮಹಾ ಆರ್15 ವಿ3 ಬೈಕ್ ಬೈಕ್ ಅಗ್ರೇಸಿವ್ ಮತ್ತು ಆಕರ್ಷಕ ಲುಕ್ ಅನ್ನು ಹೊಂದಿದೆ. ಯಮಹಾ ಆರ್15 ವಿ3 ಮಾದರಿ ದೇಶಿಯ ಮಾರುಕಟ್ಟೆಯಲ್ಲಿ ಕೆಟಿಎಂ ಆರ್‌ಸಿ 200 ಮತ್ತು ಸುಜುಕಿ ಜಿಕ್ಸರ್ ಎಸ್‌ಎಫ್‌ ಬೈಕುಗಳಿಗೆ ಪೈಪೋಟಿ ನೀಡುತ್ತದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಇನ್ನು ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಬೆಲೆ ಏರಿಕೆ ಪಡೆದುಕೊಂಡ ಯಮಹಾ ವೈಜೆಡ್ಎಫ್ ಆರ್ 15 ವಿ3, ಎಂಟಿ-15 ಬೈಕ್‌ಗಳು

ಇನ್ನು ಈ ಹೊಸ ಬೈಕಿನ ತೂಕದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಹೊಸ ಯಮಹಾ ಎಂಟಿ-15 ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ. ಪರ್ಫಾಮೆನ್ಸ್ ಪ್ರಿಯರಿಗೆ ಈ ಬೈಕ್ ಒಂದು ಉತ್ತಮ ಆಯ್ಕೆಗಳಲ್ಲಿ ಒಂದಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha YZF R15 V3.0 & MT-15 Prices Increased Again. Read In Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X