ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಯಮಹಾ ತನ್ನ ಹೊಸ ಟ್ರೇಸರ್ 9 ಜಿಟಿ ಎಬಿಎಸ್ ಬೈಕನ್ನು ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಸ್ಪೋರ್ಟ್ಸ್ ಟೂರರ್ ಬೈಕ್ ಮಾದರಿಯು ಹೊಸ ಎಂಟಿ-09 ಎಬಿಎಸ್ ಮಾದರಿಯನ್ನು ಆಧರಿಸಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಎಂಟಿ-09 ಬೈಕಿನ ಮಾದರಿಯಲ್ಲಿರು ಎಂಜಿನ್, ಹೊಸ ಫ್ರೇಮ್, ಹಗುರವಾದ ಅಲ್ಯೂಮಿನಿಯಂ ಮತ್ತು ಐಎಂಯು ಯುನಿಟ್ ಅನ್ನು ಹೊಂದಿದೆ. ಈ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್ ಆಕರ್ಷಕ ವಿನ್ಯಾಸವನ್ನು ಹೊಂದಿದೆ. ಈ ಹೊಸ ಬೈಕಿನಲ್ಲಿ ಹೆಚ್ಚುವರಿ ಫೇರಿಂಗ್, ಎತ್ತರದ ವಿಂಡ್‌ಸ್ಕ್ರೀನ್ ಮುಂಭಾಗ, ನಕಲ್ ಗಾರ್ಡ್‌ಗಳು, ಅಂಡರ್‌ಬೆಲ್ಲಿ ಎಕ್ಸಾಸ್ಟ್, ಸ್ಪ್ಲಿಟ್ ಸೀಟ್ ಮತ್ತು 18-ಲೀಟರ್ ಸಾಮರ್ಥ್ಯದ ಪ್ಯೂಯಲ್ ಟ್ಯಾಂಕ್ ಅನ್ನು ಹೊಂದಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಈ ಹೊಸ ಬೈಕಿನಲ್ಲಿ ಮೊನೊ ಫೋಕಸ್ ಟ್ವಿನ್-ಲೆನ್ಸ್ ಎಲ್ಇಡಿ ಹೆಡ್‌ಲ್ಯಾಂಪ್, ಮರುವಿನ್ಯಾಸಗೊಳಿಸಲಾದ ಟೈಲ್‌ಲ್ಯಾಂಪ್ ಮತ್ತು 3.5 ಇಂಚಿನ ಬಣ್ಣದ ಟಿಎಫ್‌ಟಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ನಾಲ್ಕು ರೈಡಿಂಗ್ ಮೋಡ್‌ಗಳನ್ನು ನೀಡಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕಿನಲ್ಲಿ , ಕ್ರೂಸ್ ಕಂಟ್ರೋಲ್, ಕ್ವಿಕ್ ಶಿಫ್ಟರ್, ಟ್ರ್ಯಾಕ್ಷನ್ ಕಂಟ್ರೋಲ್, ಸ್ಲಿಪ್ಪರ್ ಕ್ಲಚ್ ಮತ್ತು ಇತರ ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಬೈಕಿನ ಹೃದಯ ಭಾಗ ಎಂದೇ ಹೇಳಬಹುದಾದ ಎಂಜಿನ್ ಬಗ್ಗೆ ಹೇಳುವುದಾದರೆ, ಈ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕಿನಲ್ಲಿ ಅದೇ 888 ಸಿಸಿ ಇನ್-ಲೈನ್ ಮೂರು-ಸಿಲಿಂಡರ್ ವಾಟರ್-ಕೂಲ್ಡ್ ಎಂಜಿನ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಈ ಎಂಜಿನ್ 118 ಬಿಹೆಚ್‌ಪಿ ಪವರ್ ಮತ್ತು 93 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಫೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಇನ್ನು ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕಿನ ಸಸ್ಪೆಂಕ್ಷನ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಟಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಸ್ವಿಂಗಾರ್ಮ್ ಸೆಟಪ್ ಅನ್ನು ಒಳಗೊಂಡಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಇನ್ನು ಪ್ರಮುಖವಾಗಿ ಸುರಕ್ಷತೆಯಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಈ ಹೊಸ ಯಮಹಾ ಬೈಕಿನ ಮುಂಭಾಗದಲ್ಲಿ ಡ್ಯುಯಲ್ ಡಿಸ್ಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಆಕರ್ಷಕ ವಿನ್ಯಾಸದಲ್ಲಿ ಬಿಡುಗಡೆಗೊಂಡ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್

ಈ ಹೊಸ ಯಮಹಾ ಟ್ರೇಸರ್ 9 ಜಿಟಿ ಎಬಿಎಸ್ ಬೈಕಿನ ಬೆಲೆಯು ಜಪಾನ್ ಮಾರುಕಟ್ಟೆಯಲ್ಲಿ ಯೆನ್ 1,452,000 ಗಳಾಗಿದೆ, ಭಾರತೀಯ ಕರೆನ್ಸಿಯಲ್ಲಿ ರೂ,9.72 ಲಕ್ಷಗಳಾಗಿದೆ. ಇನ್ನು ಈ ಹೊಸ ಹೊಸ ಟ್ರೇಸರ್ 9 ಜಿಟಿ ಎಬಿಎಸ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆಯಾಗಿದೆ.

Most Read Articles

Kannada
Read more on ಯಮಹಾ yamaha
English summary
Yamaha Tracer 9 GT ABS launched in Japan. Read In Kannada.
Story first published: Saturday, June 26, 2021, 17:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X