ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ದೇಶಿಯ ಮಾರುಕಟ್ಟೆಯಲ್ಲಿರುವ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಗಳಲ್ಲಿ ಒಂದಾದ ಯಮಹಾ ತನ್ನ ಅತ್ಯಂತ ಜನಪ್ರಿಯ ದ್ವಿಚಕ್ರ ವಾಹನ ಮಾದರಿಯಾದ ಎಂಟಿ 15 ಬೈಕಿನ ಬೆಲೆಯನ್ನು ಕಡಿಮೆ ಮಾಡಿದೆ. ಈ ಬೆಲೆ ಕಡಿತವು ಯಮಹಾ ಮೋಟಾರ್ ಸೈಕಲ್ ಉತ್ಸಾಹಿಗಳಲ್ಲಿ ಉತ್ಸಾಹವನ್ನುಂಟು ಮಾಡಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಈ ಬೆಲೆ ಕಡಿತವು ಭವಿಷ್ಯದಲ್ಲಿ ಎಂಟಿ 15 ಬೈಕ್ ಮಾರಾಟವನ್ನು ಹೆಚ್ಚಿಸುವ ನಿರೀಕ್ಷೆಗಳಿವೆ. ಒಂದೆಡೆ ಎಂಟಿ 15 ಬೈಕಿನ ಬೆಲೆ ಕಡಿತವನ್ನು ಘೋಷಿಸಿರುವ ಯಮಹಾ ಕಂಪನಿಯು ಮತ್ತೊಂದೆಡೆ ಆಘಾತವನ್ನು ನೀಡಿದೆ. ಕಂಪನಿಯು ತನ್ನ ಇತರ ಕೆಲವು ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿರುವುದಾಗಿ ತಿಳಿಸಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಯಮಹಾ ತನ್ನ ದ್ವಿಚಕ್ರ ವಾಹನಗಳ ಮಾದರಿಗಳಾದ ವೈಝಡ್‌ಎಫ್ ಆರ್ 15 ವಿ3, ವೈಝಡ್‌ಎಫ್ಐ ವಿ3, ವೈಝಡ್‌ಎಸ್ ಎಫ್‌ಐ ವಿ3 ಹಾಗೂ ಹೊಸ ಫಾಸಿನೋ 125 ಹೈಬ್ರಿಡ್ ಸ್ಕೂಟರ್'ಗಳ ಬೆಲೆಗಳನ್ನು ಹೆಚ್ಚಿಸಿದೆ. ಈ ವಾಹನಗಳ ಬೆಲೆಯು 1.28% ನಿಂದ 2.86% ವರೆಗೂ ಏರಿಕೆಯಾಗಿದೆ. ಅಂದರೆ ರೂ. 2 ಸಾವಿರದಿಂದ ರೂ. 2,500 ಗಳವರೆಗೆ ಏರಿಕೆಯಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಯಮಹಾ ಆರ್ 15

ಯಮಹಾ ಆರ್ 15 ಬೈಕಿನ ಬೆಲೆಯನ್ನು ರೂ. 2 ಸಾವಿರಗಳಷ್ಟು ಏರಿಸಲಾಗಿದೆ. ಹಿಂದೆ ರೂ. 1,54,600 ಗಳಾಗಿದ್ದ ಈ ಬೈಕಿನ ಬೆಲೆ, ಬೆಲೆ ಏರಿಕೆಯ ನಂತರ ರೂ. 1,56,600 ಗಳಾಗಿದೆ. ಆರ್ 15 ಡಾರ್ಕ್ ನೈಟ್ ಟಾಪ್ ಎಂಡ್ ಮಾದರಿಯ ಬೆಲೆ ರೂ. 1,58,700 ಗಳಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಯಮಹಾ ಎಫ್‌ಝಡ್ ಎಫ್‌ಐ ವಿ3

ಈ ಬೈಕ್ ಅನ್ನು ಭಾರತದಲ್ಲಿ ಎರಡು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಈ ಹಿಂದೆ ಈ ಎರಡೂ ಬೈಕುಗಳ ಬೆಲೆ ರೂ. 1,04,700 ಗಳಾಗಿತ್ತು. ಈ ಎರಡೂ ಬೈಕುಗಳ ಬೆಲೆಯನ್ನು ರೂ. 2,500 ಗಳಷ್ಟು ಹೆಚ್ಚಿಸಲಾಗಿದೆ. ಬೆಲೆ ಏರಿಕೆಯ ನಂತರ ಈ ಬೈಕುಗಳ ಬೆಲೆ ರೂ. 1,07,200 ಗಳಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಯಮಹಾ ಎಫ್‌ಝಡ್‌ಎಸ್ ಎಫ್‌ಐ ವಿ3

ಯಮಹಾ ಎಫ್‌ಝಡ್‌ಎಸ್ ಎಫ್‌ಐ ವಿ3 ಬೈಕ್ ಅನ್ನು ಒಟ್ಟು ಐದು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಡಾರ್ಕ್ ನೈಟ್ ಹಾಗೂ ವಿಂಟೇಜ್ ಗ್ರೀನ್ ಎಂಬ ಎರಡು ಬಣ್ಣದ ಬೈಕುಗಳ ಬೆಲೆ ದುಬಾರಿಯಾಗಿದೆ. ಇತರ ಬಣ್ಣಗಳಾದ ಮ್ಯಾಟ್ ರೆಡ್, ಮ್ಯಾಟ್ ಬ್ಲ್ಯಾಕ್ ಹಾಗೂ ಮ್ಯಾಟ್ ಬ್ಲೂ ಬೈಕುಗಳ ಬೆಲೆ ಒಂದೇ ಆಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಈ ಎಲ್ಲಾ ಬಣ್ಣದ ಬೈಕುಗಳ ಬೆಲೆ ರೂ. 2,500 ಗಳಷ್ಟು ಏರಿಕೆಯಾಗಿದೆ. ಬೆಲೆ ಏರಿಕೆಯ ನಂತರ ಮ್ಯಾಟ್ ರೆಡ್, ಮ್ಯಾಟ್ ಬ್ಲಾಕ್ ಹಾಗೂ ಮ್ಯಾಟ್ ಬ್ಲೂ ಬಣ್ಣದ ಬೈಕುಗಳ ಬೆಲೆ ರೂ. 1,10,700 ಗಳಾಗಿದೆ. ಇನ್ನು ಡಾರ್ಕ್ ನೈಟ್ ಬಣ್ಣದ ಬೈಕಿನ ಬೆಲೆ ರೂ. 1,12,700 ಗಳಾದರೆ, ವಿಂಟೇಜ್ ಗ್ರೀನ್ ಬೈಕಿನ ಬೆಲೆ ರೂ. 1,11,700 ಗಳಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಯಮಹಾ ಫಾಸಿನೋ ಹೈಬ್ರಿಡ್

ಯಮಹಾ ಫಾಸಿನೋ ಸ್ಕೂಟರ್ ಅನ್ನು ಎರಡು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. ಇವುಗಳಲ್ಲಿ ಡ್ರಮ್ ಹಾಗೂ ಡಿಸ್ಕ್ ಬ್ರೇಕ್ ಮಾದರಿಗಳು ಸೇರಿವೆ. ಈ ಎರಡೂ ಮಾದರಿಗಳ ಬೆಲೆಯನ್ನು ರೂ. 2 ಸಾವಿರಗಳಷ್ಟು ಏರಿಸಲಾಗಿದೆ. ಈ ಹಿಂದೆ ರೂ. 70,000 ಗಳಿದ್ದ ಫಾಸಿನೋ 125 ಹೈಬ್ರಿಡ್ ಸ್ಕೂಟರ್ ಬೆಲೆ ಈಗ ರೂ. 72,000 ಗಳಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಇನ್ನು ಡಿಸ್ಕ್ ಬ್ರೇಕ್ ಮಾದರಿಯ ಬೆಲೆ ರೂ. 77,530 ಗಳಾಗಿದೆ. ಈ ಬೆಲೆ ಏರಿಕೆಯು ಭಾರತೀಯ ಗ್ರಾಹಕರಿಗೆ ಆಘಾತವನ್ನುಂಟು ಮಾಡಿರುವುದು ಸುಳ್ಳಲ್ಲ. ಫಾಸಿನೋ 125 ಹೈಬ್ರಿಡ್ ಸ್ಕೂಟರ್ ಅನ್ನು ಯಮಹಾ ಕಂಪನಿಯು ಇತ್ತೀಚೆಗಷ್ಟೇ ಭಾರತದಲ್ಲಿ ಬಿಡುಗಡೆಗೊಳಿಸಿತ್ತು.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಬಿಡುಗಡೆಯಾದ ಒಂದು ತಿಂಗಳೊಳಗೆ ಈ ಸ್ಕೂಟರಿನ ಬೆಲೆಯನ್ನು ಹೆಚ್ಚಿಸಲಾಗಿದೆ. ಈ ಸ್ಕೂಟರ್ ಜುಲೈ 23 ರಂದು ದೇಶದಲ್ಲಿ ಬಿಡುಗಡೆಯಾಗಿತ್ತು ಎಂಬುದು ಗಮನಾರ್ಹ. ಈ ಸ್ಕೂಟರ್ ಬೆಲೆಯನ್ನು ಹೆಚ್ಚಿಸಿ ಎಂಟಿ 15 ಬೈಕಿನ ಬೆಲೆಯನ್ನು ಗಣನೀಯವಾಗಿ ಕಡಿಮೆ ಮಾಡಲಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಯಮಹಾ ಎಂಟಿ -15

ಯಮಹಾ ಎಂಟಿ -15 ಬೈಕ್ ಅನ್ನು ಭಾರತದಲ್ಲಿ ಮೂರು ಬಣ್ಣಗಳಲ್ಲಿ ಮಾರಾಟ ಮಾಡಲಾಗುತ್ತದೆ. ಡಾರ್ಕ್ ಮ್ಯಾಟ್ ಬ್ಲೂ ಹಾಗೂ ಮೆಟಾಲಿಕ್ ಬ್ಲ್ಯಾಕ್‌ನಲ್ಲಿ ಮಾರಾಟವಾಗುವ ಎಂಟಿ -15 ಬೈಕಿನ ಬೆಲೆಯನ್ನು ಮಾತ್ರ ಕಡಿಮೆ ಮಾಡಲಾಗಿದೆ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಈ ಬೈಕಿನ ಬೆಲೆಯನ್ನು ಒಂದು ಸಾವಿರ ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಆದರೆ ಐಸ್ ಫ್ಲೂ ವರ್ಮಿಲಿಯನ್ ಬಣ್ಣದಲ್ಲಿರುವ ಬೈಕಿನ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಈ ಮಾದರಿಯ ಬೈಕಿನ ಬೆಲೆ ರೂ. 1,45,900 ಗಳಾಗಿದೆ. ಇನ್ನು ಉಳಿದ ಎರಡು ಬಣ್ಣಗಳಲ್ಲಿ ಮಾರಾಟವಾಗುವ ಬೈಕುಗಳ ಬೆಲೆ ರೂ. 1,44,900 ಗಳಾಗಿದೆ. ಅಂದರೆ ಈ ಹಿಂದೆ ಇದ್ದ ಬೆಲೆಗಿಂತ 0.69% ನಷ್ಟು ಕಡಿಮೆಯಾಗಿದೆ. ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಯಮಹಾ ಕಂಪನಿಯು ತನ್ನ ಬೈಕ್ ಗಳ ಬೆಲೆಯನ್ನು ಹೆಚ್ಚಿಸಿತ್ತು.

ಒಂದು ಬೈಕಿನ ಬೆಲೆ ಇಳಿಸಿ, ಮೂರು ಬೈಕುಗಳ ಬೆಲೆ ಏರಿಕೆ ಮಾಡಿದ ಯಮಹಾ

ಆಗ ಬೈಕುಗಳ ಬೆಲೆಯನ್ನು ಒಂದು ಸಾವಿರ ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಈಗ ಬೆಲೆಯನ್ನು ಕಡಿಮೆ ಮಾಡಿದೆ. ಯಮಹಾ ಕಂಪನಿಯು ಎಂಟಿ -15 ಬೈಕಿನ ಬೆಲೆಯನ್ನು ಕಡಿಮೆ ಮಾಡಿದ್ದರೂ ಉಳಿದ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸುವ ಮೂಲಕ ತನ್ನ ಗ್ರಾಹಕರಿಗೆ ಸಿಹಿ ಕಹಿಯ ಅನುಭವವನ್ನು ನೀಡಿದೆ.

Most Read Articles

Kannada
Read more on ಯಮಹಾ yamaha
English summary
Yamaha reduces price of mt15 and increases price of r15 fz fi fascino details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X