3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಭಾರತೀಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಟಿವಿಎಸ್ ಭಾರತದಲ್ಲಿ ನವೀಕರಿಸಿದ 2022 ಅಪಾಚೆ RTR 160 ಮತ್ತು RTR 180 ಅನ್ನು ಬಿಡುಗಡೆ ಮಾಡಿದೆ. ಹೊಸ ಟಿವಿಎಸ್ ಅಪಾಚೆ RTR 160 ಬೆಲೆಯು 1,17,790 ರೂ.ಗಳಿಂದ ಪ್ರಾರಂಭವಾದರೆ, RTR 180 ಬೆಲೆಯು 1,30,950 ರೂ.ನಿಂದ ಪ್ರಾರಂಭವಾಗುತ್ತದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಟಿವಿಎಸ್ RTR 160 & RTR 180 ಬೆಲೆ ಮತ್ತು ಬಣ್ಣದ ಆಯ್ಕೆ

ಟಿವಿಎಸ್ ಅಪಾಚೆ RTR 160 ಅನ್ನು ಮೂರು ರೂಪಾಂತರಗಳಲ್ಲಿ ನೀಡಲಾಗುತ್ತಿದೆ. ಮೂರು ಹೊಸ ರೈಡಿಂಗ್ ಮೋಡ್‌ಗಳ ಜೊತೆಗೆ RTR 160 ಸ್ಪೋರ್ಟ್ಸ್ ಡ್ರಮ್ ಬ್ರೇಕ್‌ಗಳ ಮೂಲ ರೂಪಾಂತರವು 1,17,790 ರೂ. ಇದ್ದರೆ, ಮಿಡ್-ಸ್ಪೆಕ್ RTR 160 ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್ ಮತ್ತು ಮೂರು ರೈಡಿಂಗ್ ಮೋಡ್‌ಗಳೊಂದಿಗೆ ಬೆಲೆಯು 1,21,290 ರೂ.ವೆರೆಗೆ ಆಗುತ್ತದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

RTR 160ನ ಅತ್ಯಂತ ದುಬಾರಿ ರೂಪಾಂತರವು 1,24,590 ರೂ.ಗಳಿದ್ದು,ಇದು ಸ್ಪೋರ್ಟ್ಸ್ ಡಿಸ್ಕ್ ಬ್ರೇಕ್‌ಗಳು, ಮೂರು ರೈಡಿಂಗ್ ಮೋಡ್‌ಗಳು ಮತ್ತು ಟಿವಿಎಸ್ ನ SmartXonnect ಸಂಪರ್ಕಿತ ವಾಹನ ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

2022 ಟಿವಿಎಸ್ ಅಪಾಚೆ RTR 160 ಅನ್ನು 5 ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತಿದೆ. ಮ್ಯಾಟ್ ಬ್ಲೂ, ರೇಸಿಂಗ್ ರೆಡ್, ಗ್ಲೋಸ್ ಬ್ಲಾಕ್, ಟಿ-ಗ್ರೇ ಮತ್ತು ಪರ್ಲ್ ವೈಟ್ ಎಂಬ ಐದು ಬಣ್ಣಗಳನ್ನು ಒಳಗೊಂಡಿದೆ. 2022 ಟಿವಿಎಸ್ ಅಪಾಚೆ RTR 180 ಗ್ಲೋಸ್ ಬ್ಲಾಕ್ ಮತ್ತು ಪರ್ಲ್ ವೈಟ್ ಎಂಬ ಎರಡು ಬಣ್ಣಗಳಲ್ಲಿ ಮಾತ್ರ ಲಭ್ಯವಿದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ವಿನ್ಯಾಸ ಮತ್ತು ವೈಶಿಷ್ಟ್ಯಗಳು

ಹೊಸ ಟಿವಿಎಸ್ ಅಪಾಚೆ ಆರ್‌ಟಿಆರ್ 160 ಮತ್ತು ಆರ್‌ಟಿಆರ್ 180 ಎರಡೂ ಕೂಡ ಹಳೆಯ ಮಾದರಿಗಳಿಗೆ ಹೋಲಿಸಿದರೆ ಕೆಲವು ವಿನ್ಯಾಸ ಬದಲಾವಣೆಗಳಾಗಿವೆ. ಎರಡೂ ಬೈಕ್‌ಗಳು ಹೊಸ ಸ್ಟೈಲಿಂಗ್ ಮತ್ತು ಗ್ರಾಫಿಕ್ಸ್ ಜೊತೆಗೆ ಭವ್ಯವಾದ ಹೊಸ ಎಲ್‌ಇಡಿ ಹೆಡ್‌ಲೈಟ್‌ನೊಂದಿಗೆ ಅದರ ಮೇಲಿನ ಅಂಚುಗಳಲ್ಲಿ ಸಂಯೋಜಿತ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿವೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಎರಡೂ ಬೈಕ್‌ಗಳು 3D ಅಂಶದೊಂದಿಗೆ ಹೊಸ LED ಟೈಲ್‌ಲೈಟ್ ಅನ್ನು ಸಹ ಹೊಂದಿವೆ. ಇತರ ಬದಲಾವಣೆಗಳು ಹೊಸ TVS SmartXonnect ವ್ಯವಸ್ಥೆಯ ರೂಪದಲ್ಲಿ ಬರುತ್ತವೆ, ಇದು ಹೊಸ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್‌ನೊಂದಿಗೆ ಬರುತ್ತದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

SmartXonnect ವ್ಯವಸ್ಥೆಯು ಕರೆ ಮತ್ತು sms ನೋಟಿಫಿಕೇಷನ್, ಲ್ಯಾಪ್ ಟೈಮರ್, ಕ್ರ್ಯಾಶ್ ಅಲರ್ಟ್ ಜೊತೆಗೆ ಇತರ ವೈಶಿಷ್ಟ್ಯಗಳಾದ ಟರ್ನ್ ಮೂಲಕ ನ್ಯಾವಿಗೇಷನ್ ಅನ್ನು ಸಪೋರ್ಟ್ ಮಾಡುತ್ತದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಗೇರ್ ಪೊಸಿಷನ್ ಇಂಡಿಕೇಟರ್, ಗೇರ್ ಶಿಫ್ಟ್ ಅಸಿಸ್ಟ್ ಮತ್ತು ಡಿಸ್‌ಪ್ಲೇಯ ತೀವ್ರತೆಯನ್ನು ಸಹ ಬದಲಾಯಿಸಲು ಬಳಕೆದಾರರಿಗೆ ಸಪೋರ್ಟ್ ಮಾಡುತ್ತದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಎಂಜಿನ್ ಮತ್ತು ರೈಡಿಂಗ್ ಮೋಡ್‌ಗಳು

ಟಿವಿಎಸ್ ಅಪಾಚೆ RTR 160 ಮತ್ತು 180 ಎರಡನ್ನೂ ಮಿತಿಯಾದ ಭಾರದಲ್ಲಿ ಇರಿಸಲಾಗಿದೆ, ಹಳೆಯ ಮಾದರಿಗಳಿಗೆ ಹೋಲಿಸಿದರೆ ಮೊದಲನೆಯದು ಸುಮಾರು 2 ಕೆ.ಜಿ ಮತ್ತು ಎರಡನೆಯದು ಸುಮಾರು ಒಂದು ಕೆ.ಜಿಯಷ್ಟು ಹಗುರವಾಗಿರುತ್ತದೆ. ಎರಡೂ ಬೈಕ್‌ಗಳು ಮೊದಲಿಗಿಂತ ಹೆಚ್ಚು ಶಕ್ತಿಶಾಲಿಯಾಗಿವೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಟಿವಿಎಸ್ ಅಪಾಚೆ RTR 160 2V ಏರ್-ಕೂಲ್ಡ್ 159.7cc ಸಿಂಗಲ್ ಸಿಲಿಂಡರ್ ಎಂಜಿನ್‌ನಿಂದ ಪವರ್ ಪಡೆಯುವುದನ್ನು ಮುಂದುವರೆಸಿದೆ, ಇದು ಈಗ 8,750rpm ನಲ್ಲಿ 15.82bhp ಮತ್ತು 700rpm ನಲ್ಲಿ 13.85Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಟಿವಿಎಸ್ RTR 180 ತನ್ನ ಆಯಿಲ್ ಕೂಲ್ಡ್ 177.4cc ಸಿಂಗಲ್ ಸಿಲಿಂಡರ್ ಎಂಜಿನ್ ಅನ್ನು ಸಹ ಉಳಿಸಿಕೊಂಡಿದೆ. ಈ ಪವರ್‌ಪ್ಲಾಂಟ್ ಈಗ 9,000rpm ನಲ್ಲಿ 16.78bhp ಮತ್ತು 7,000rpm ನಲ್ಲಿ 15.5Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದರ ಎಂಜಿನ್ ಅನ್ನು 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಎರಡೂ ಬೈಕ್‌ಗಳು ಸ್ಪೋರ್ಟ್, ಅರ್ಬನ್ ಮತ್ತು ರೈನ್ ಎಂಬ ಮೂರು ರೈಡಿಂಗ್ ಮೋಡ್‌ಗಳನ್ನು ಹೊಂದಿವೆ. ಈ ಎಲ್ಲಾ ಮೋಡ್‌ಗಳು ಎಂಜಿನ್ ಕಾರ್ಯಕ್ಷಮತೆ ಮತ್ತು ಬ್ರೇಕಿಂಗ್ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತವೆ. ಎರಡೂ ಬೈಕ್‌ಗಳು ಉತ್ತಮ ರೋಡ್ ಗ್ರಿಪ್‌ನೊಂದಿಗೆ ಬಂದಿದ್ದು, ಅಗಲವಾದ 120 ಎಂಎಂ ಹಿಂಭಾಗದ ಟೈರ್ ಅನ್ನು ಹೊಂದಿವೆ. 2022 RTR 160 ಮತ್ತು 180 ನಲ್ಲಿ ಹೊಸ X-ರಿಂಗ್ ಚೈನ್ ಕಾಣಬಹುದು, ಇದು ಸಾಮಾನ್ಯ ಚೈನ್ ಡ್ರೈವ್ ಸೆಟಪ್‌ಗಿಂತ ಹೆಚ್ಚು ಕಾಲ ಬಾಳಿಕೆ ಬರಲಿದೆ.

3 ರೈಡಿಂಗ್ ಮೋಡ್‌ಗಳೊಂದಿಗೆ ಹೊಸ ಲುಕ್‌ನಲ್ಲಿ ಬಿಡುಗಡೆಯಾದ 2022 ಅಪಾಚೆ RTR 160-180

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಟಿವಿಎಸ್ ಸ್ಪೋರ್ಟ್‌ನಿಂದ RTR 160 ಮತ್ತು RTR 180 ನ ಹೊಸ 2022 ಮಾಡೆಲ್‌ಗಳು ಕೆಲವು ಬದಲಾವಣೆಗಳೊಂದಿಗೆ ವಿನ್ಯಾಸ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಜೊತೆಗೆ ಉತ್ತಮ ಕಾರ್ಯಕ್ಷಮತೆ, ರೈಡಿಂಗ್ ಮೋಡ್‌ಗಳ ಸೇರ್ಪಡೆಯನ್ನು ಯಾರೂ ಊಹಿಸಿರಲಿಲ್ಲ. ವಿಶೇಷವಾಗಿ ಮಳೆಯಲ್ಲಿ ಚಲಿಸುವಾಗ ಈ ಮೋಡ್‌ಗಳು ಸಾಕಷ್ಟು ಸಹಕರಿಸಲಿವೆ.

Most Read Articles

Kannada
English summary
2022 Apache RTR 160 180 launched in new avatar with 3 riding modes
Story first published: Thursday, September 8, 2022, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X