Just In
Don't Miss!
- Sports
ವಿಂಡೀಸ್ ಪ್ರವಾಸದಲ್ಲಿ ಹಿರಿಯ ಆಟಗಾರರಿಗೆ ವಿಶ್ರಾಂತಿ, ಸಂಜು ಸ್ಯಾಮ್ಸನ್ಗೆ ಸಿಗಲಿದೆ ಮತ್ತೊಂದು ಅವಕಾಶ?
- News
ಅಮೃತ್ ನಗರೋತ್ಥಾನ ಯೋಜನೆಯಡಿ ಬೆಂಗಳೂರು ಪೂರ್ವ ವಲಯಕ್ಕೆ 450 ಕೋಟಿ ಮಂಜೂರು
- Movies
ಹಿಂದಿಗೆ ಹೋಗುತ್ತಿದೆ ಏಳು ವರ್ಷ ಹಳೆಯ ಕನ್ನಡ ಸಿನಿಮಾ: ಅಕ್ಷಯ್-ಶಾಹಿದ್ ನಡುವೆ ಪೈಪೋಟಿ!
- Finance
ಸರ್ವೀಸ್ ಚಾರ್ಜ್ ಬಗ್ಗೆ ಗ್ರಾಹಕರು ದೂರು ನೀಡುವುದು ಹೇಗೆ?
- Lifestyle
ಯಾರೂ ಇಲ್ಲದಿದ್ದಾಗ ಪುರುಷ ಈ ರೀತಿ ವಿಲಕ್ಷಣವಾಗಿ ವರ್ತಿಸುತ್ತಾನೆ, ಗೊತ್ತಾ? ಇದನ್ನು ಓದಿದ್ರೆ ನೀವು ಶಾಕ್ ಆಗೋದು ಪಕ್ಕಾ!
- Technology
ಜಬ್ರೋನಿಕ್ಸ್ ಡ್ರಿಪ್ ಸ್ಮಾರ್ಟ್ವಾಚ್ ಬಿಡುಗಡೆ! ಲಾಂಗ್ ಬ್ಯಾಟರಿ ಬ್ಯಾಕ್ಅಪ್ ವಿಶೇಷ!
- Education
Karnataka Second PUC Results 2022 : ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ಉತ್ತರ ಪತ್ರಿಕೆಯ ಪ್ರತಿಗಳು ಜು.6ರಿಂದ ಲಭ್ಯ
- Travel
ಸೂರ್ಯ, ಅಲೆಗಳು ಮತ್ತು ಮರಳು ಇವುಗಳ ಸಮ್ಮಿಲನ ಕಡಲತೀರದ ಪಟ್ಟಣ - ಮಲ್ಪೆ
ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಹೊಸ ಯಮಹಾ ಎಂಟಿ-15 ಬೈಕ್
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಯಮಹಾ ತನ್ನ ಎಂಟಿ-15 ಬೈಕ್ ಹೊಸ ನವೀಕರಣಗಳೊಂದಿಗೆ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಯಮಹಾ ಎಂಟಿ-15 ನೇಕೆಡ್ ಬೈಕ್ ಒಂದೆರಡು ಬದಲಾವಣೆಗಳನ್ನು ಪಡೆಯುವ ಸಾಧ್ಯತೆಯಿದೆ.

ಈ ಹೊಸ ಬೈಕಿನ ಬಿಡುಗಡೆಯ ದಿನಾಂಕವನ್ನು ಕಂಪನಿಯು ಬಹಿರಂಗಪಡಿಸಿಲ್ಲ, ಕೆಲವು ವರದಿಗಳ ಪ್ರಕಾರ ಈ ಹೊಸ ಯಮಹಾ ಎಂಟಿ-15 ಬೈಕ್ ಈ ತಿಂಗಳು ಅಥವಾ ಮಾರ್ಚ್ ತಿಂಗಳುಗಳಲ್ಲಿ ಬಿಡುಗಡೆಯಾಗಬಹುದು. ಈ ಹೊಸ ಯಮಹಾ ಎಂಟಿ-15 ಬೈಕ್ ಬ್ಲೂಟೂತ್-ಸಕ್ರಿಯಗೊಳಿಸಿದ ಎಲ್ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್‌ನ ಸೇರ್ಪಡೆಯಾಗಿದೆ. ಹೊಸ ಯಮಹಾ ವೈಝಡ್ಎಫ್ ಆರ್15 ವಿ4 ಈಗಾಗಲೇ ಅದರ ಹಿಂದಿನ ಅಪ್‌ಡೇಟ್‌ನೊಂದಿಗೆ ಬ್ಲೂಟೂತ್ ಕನೆಕ್ಟಿವಿಟಿಯನ್ನು ಪಡೆದಿದೆ ಎಂದು ಪರಿಗಣಿಸಿದರೆ ಇದು ಆಶ್ಚರ್ಯವೇನಿಲ್ಲ.

ಈ ಕ್ಲಸ್ಟರ್ ನಲ್ಲಿ ಗೇರ್ ಸ್ಥಾನ, ರೈಡ್ ಮೋಡ್‌ಗಳು, ಸರಾಸರಿ ವೇಗ, ಇಂಧನ ದಕ್ಷತೆ ಮತ್ತು ಹೆಚ್ಚಿನ ಮಾಹಿತಿಯನ್ನು ಪ್ರದರ್ಶಿಸುತ್ತದೆ. ಇದು ಕರೆ ಮತ್ತು ಅಧಿಸೂಚನೆ ನವೀಕರಣಗಳು ಮತ್ತು ಫೋನ್ ಬ್ಯಾಟರಿ ಮಟ್ಟವನ್ನು ಸಹ ಪ್ರದರ್ಶಿಸುತ್ತದೆ.

ಯಮಹಾ ಎಂಟಿ-15 ಬೈಕ್ ಹೆಚ್ಚಿನ ಯುನಿಟ್ ಗಳನ್ನು ಆರ್15 ಮಾದರಿಯೊಂದಿಗೆ ಹಂಚಿಕೊಳ್ಳುವುದರಿಂದ, ಬ್ಲೂಟೂತ್ ಅನ್ನು ಪಡೆಯುವ ಸಮಯವಾಗಿದೆ, ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಅದೇ 155 ಸಿಸಿ ಲಿಕ್ವಿಡ್ ಕೂಲಿಂಗ್ ಎಂಜಿನ್ ಅನ್ನು ಹೊಂದಿರುತ್ತದೆ. ಈ ಎಂಜಿನ್ 18.5 ಬಿಹೆಚ್‍ಪಿ ಪವರ್ ಮತ್ತು 13.9 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

2022ರ ಹೊಸ ಯಮಹಾ ಎಂಟಿ-15 ಬೈಕಿನಲ್ಲಿ ಹೆಡ್‌ಲ್ಯಾಂಪ್ ಕ್ಲಸ್ಟರ್‌ನಲ್ಲಿ ಡ್ಯುಯಲ್ ಎಲ್‌ಇಡಿ ಸೆಟ್ ಅಪ್ ಹೊಂದಿರುವ ಹೊಸ ಬೈಕಿನಲ್ಲಿ ಮೇಲಿನ ಎರಡು ಲೈಟ್‌ಗಳು ಡೇ ಟೈಮ್ ರನ್ನಿಂಗ್ ಲೈಟ್‌ಗಳಾಗಿ ಕಾರ್ಯನಿರ್ವಹಿಸಿದ್ದಲ್ಲಿ, ಅದರ ಕೆಳಭಾಗದಲ್ಲಿಯೇ ಎಲ್ಇಡಿ ಹೆಡ್‌ಲ್ಯಾಂಪ್ ಅನ್ನು ಜೊಡಣೆ ಮಾಡಲಾಗಿದೆ.

ಹಾಗೆಯೇ ಹೊಸ ಬೈಕಿನಲ್ಲಿ ಅಳವಡಿಸಲಾಗಿರುವ ಆಕರ್ಷಕ ಫ್ಯೂಲ್ ಟ್ಯಾಂಕ್ ಕೂಡಾ ಬೈಕಿನ ಬಲಿಷ್ಠತೆಗೆ ಮತ್ತಷ್ಟು ಮೆರಗು ತಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂಟಿ-10 ಬೈಕಿನಿಂದಲೂ ಕೆಲವು ವಿನ್ಯಾಸಗಳನ್ನು ಎಂಟಿ-15 ಮಾದರಿಯಲ್ಲಿ ಎರವಲು ಪಡೆಯಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಈ ಹೊಸ ಬೈಕಿನ ತೂಕದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಹೊಸ ಯಮಹಾ ಎಂಟಿ-15 ಬೈಕ್ 138 ಕೆಜಿ ತೂಕವನ್ನು ಹೊಂದಿದೆ. ಈ ಬೈಕಿನ ಹಿಂಭಾಗದಲ್ಲಿ ರೇಡಿಯಲ್ ಟಯರ್ ಅನ್ನು ಅಳವಡಿಸಲಾಗಿದೆ. ಹೊಸ ಬಿಎಸ್-6 ಎಂಜಿನ್‍ನ ಯಮಹಾ ಎಂಟಿ-15 ಬೈಕ್ ಬಿಎಸ್-6 ಮಾಲಿನ್ಯ ನಿಯಮಕ್ಕೆ ಅನುಗುಣವಾಗಿ 2020ರಲ್ಲಿ ನವೀಕರಿಸಲಾಗಿತ್ತು.

ಇದರಿಂದ ಈ ಬೈಕಿನ ಪರ್ಫಾಮೆನ್ಸ್ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಆದರೆ ದೊಡ್ಡ ಮಟ್ಟದ ಬದಲಾವಣೆಗಳನ್ನು ಮಾಡಲಾಗಿತ್ತಿಲ್ಲ. ಬದಲಾವಣೆಗಳ ಪಟ್ಟಿಯು ಹೊಸ ವೈಶಿಷ್ಟ್ಯಗಳೊಂದಿಗೆ ಮಾತ್ರ ಕೊನೆಗೊಳ್ಳುವುದಿಲ್ಲ. ಹೊಸ ಯಮಹಾ ವೈಝಡ್ಎಫ್ ಆರ್15 ವಿ4 ಹಳೆಯ ಟೆಲಿಸ್ಕೋಪಿಕ್ ಸೆಟಪ್‌ಗೆ ಬದಲಾಗಿ ಫೋರ್ಕ್‌ಗಳನ್ನು ಸಹ ಪಡೆಯುತ್ತದೆ.

ಈಗ ಯಮಹಾ ತನ್ನ ಪ್ರೀಮಿಯಂ ಕೊಡುಗೆಗಳೊಂದಿಗೆ ಎಲ್ಲವನ್ನೂ ಹೊರತಂದಿದೆ, ಎಂಟಿ-15 ತನ್ನ ಮುಂದಿನ ಅಪ್‌ಡೇಟ್‌ನಲ್ಲಿ R15 ನಿಂದ ಅಪ್ ಸೈಡ್ ಡೌನ್ ಫೋರ್ಕ್‌ಗಳನ್ನು ಎರವಲು ಪಡೆಯಬಹುದು. ಇನ್ನು ಈ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಹೆಚ್ಚಿಈ ಬೈಕಿನಲ್ಲಿ ಹೆಚ್ಚಿನ ಸುರಕ್ಷೆತೆಗಾಗಿ ಡ್ಯುಯಲ್ ಚಾನೆಲ್ ಬಿಎಸ್ ಅನ್ನು ನೀಡಬಹುದು ಎಂದು ನಿರೀಕ್ಷಿಸುತ್ತೇವೆ.

ಇನ್ನು ಯಮಹಾ ಮೋಟಾರ್ ಇಂಡಿಯಾ ಇಂದು ದೇಶೀಯ ಮಾರುಕಟ್ಟೆಯಲ್ಲಿ ತನ್ನ 2022ರ ಎಫ್‌ಜೆಡ್ 25 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದೆ. ಈ ಹೊಸ ಯಮಹಾ ಎಫ್‌ಜೆಡ್ 25 ಕ್ವಾರ್ಟರ್-ಲೀಟರ್ ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿರುತ್ತದೆ. ಈ ಯಮಹಾ ಎಫ್‌ಜೆಡ್ 25 ಬೈಕ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೈಗೆಟುಕುವ ಕ್ವಾರ್ಟರ್-ಲೀಟರ್ ಮೋಟಾರ್‌ಸೈಕಲ್‌ಗಳಲ್ಲಿ ಒಂದಾಗಿದೆ ಮತ್ತು ಹೊಸ ಬಣ್ಣದ ಆಯ್ಕೆಗಳೊಂದಿಗೆ ಪರಿಚಯಿಸಲಾಗಿದೆ. ಈ 2022ರ ಎಫ್‌ಜೆಡ್ 25 ಹೊಸ ಮ್ಯಾಟ್ ಕಾಪರ್ ಶೇಡ್ ಮತ್ತು ಮ್ಯಾಟ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ.

ಎಫ್‌ಜೆಡ್ 25 ಬೈಕ್ ರೇಸಿಂಗ್ ಬ್ಲೂ ಮತ್ತು ಮೆಟಾಲಿಕ್ ಬ್ಲ್ಯಾಕ್ ಪೇಂಟ್ ಆಯ್ಕೆಗಳನ್ನು ಮುಂದುವರಿಸುತ್ತದೆ. ಹೊಸ ಬಣ್ಣಗಳ ಸೇರ್ಪಡೆಯೊಂದಿಗೆ ಮಾದರಿ ವರ್ಷದ ನವೀಕರಣವಾಗಿದೆ ಮತ್ತು ಯಾವುದೇ ಯಾಂತ್ರಿಕ ಬದಲಾವಣೆಗಳನ್ನು ಅಳವಡಿಸಲಾಗಿಲ್ಲ. ಹೊಸ ಯಮಹಾ ಎಫ್‌ಜೆಡ್ 25 ಬೈಕ್ ವೈಶಿಷ್ಟ್ಯಗಳು ನೆಗೆಟಿವ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕನ್ಸೋಲ್, ಸೈಡ್ ಸ್ಟ್ಯಾಂಡ್ ಎಂಜಿನ್ ಕಟ್-ಆಫ್ ಸ್ವಿಚ್, ಹೀಟ್ ಶೀಲ್ಡ್‌ನೊಂದಿಗೆ ಸೈಡ್-ಮೌಂಟೆಡ್ ಎಕ್ಸಾಸ್ಟ್ ಸಿಸ್ಟಂ, ತೀಕ್ಷ್ಣವಾಗಿ ಕಾಣುವ ಎಲ್‌ಇಡಿ ಹೆಡ್‌ಲ್ಯಾಂಪ್‌ನೊಂದಿಗೆ ಅಗ್ರೇಸಿವ್ ಫಾಸಿಕ, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್‌ಗಳನ್ನು ಹೊಂದಿದೆ.

ಯಮಹಾ ಎಂಟಿ-15 ಬೈಕ್ ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಶೀಘ್ರದಲ್ಲೆ ಬಿಡುಗಡೆಯಾಗಲಿದೆ. ಈ ಹೊಸ ಯಮಹಾ ಎಂಟಿ-15 ಬೈಕಿನ ಬೆಲೆಯು ಪ್ರಸ್ತುತ ಮಾದರಿಗಿಂತ ತುಸು ದುಬಾರಿಯಾಗಿರುತ್ತದೆ ಎಂದು ನಿರೀಕ್ಷಿಸುತ್ತೇವೆ.