Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
10 ವರ್ಷದ ಮಗನಿಗೆ ತಂದೆ ನೀಡಿದ ದುಬಾರಿ ಉಡುಗೊರೆ ಕಂಡು ಹುಬ್ಬೇರಿಸಿದ ಆಫ್ರಿಕಾ ಜನ!
ಮಕ್ಕಳು ವಾಹನ ಚಾಲನೆ ಮಾಡುವುದು ವಿಶ್ವದ ಪ್ರತಿಯೊಂದು ದೇಶದಲ್ಲೂ ಕಾನೂನು ಬಾಹಿರವಾಗಿದೆ. ಕೆಲವು ದೇಶಗಳಲ್ಲಿ ಮಕ್ಕಳು ಬೈಕು, ಕಾರುಗಳನ್ನು ಓಡಿಸಿದರೆ ಹೆತ್ತ ಪೋಷಕರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲಾಗುತ್ತದೆ. ಇದೆಲ್ಲವೂ ತಿಳಿದಿರುವ ಶ್ರೀಮಂತ ತಂದೆಯೊಬ್ಬರು ತನ್ನ ಹತ್ತು ವರ್ಷದ ಮಗನಿಗೆ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

ಮಗನ ವಯಸ್ಸಿಗೆ ನೀಡಬಾರದಂತಹ ದುಬಾರಿ ಸೂಪರ್ ಕಾರಿನ ಉಡುಗೊರೆಯಿಂದಾಗಿ ಹಲವರು ಆಘಾತಕ್ಕೊಳಗಾಗಿದ್ದಾರೆ. ಈ ಘಟನೆ ಆಫ್ರಿಕಾದಲ್ಲಿ ನಡೆದಿದೆ. ಮೊಹಮ್ಮದ್ ಅವಲ್ ಮುಸ್ತಫಾ ಎಂಬ ಹತ್ತು ವರ್ಷದ ಬಾಲಕನ ಹುಟ್ಟುಹಬ್ಬದ ಸಂದರ್ಭದಲ್ಲಿ ದುಬಾರಿ ಲಂಬೋರ್ಘಿನಿ ಅವಾಂಟೇಟರ್ ಕಾರನ್ನು ಉಡುಗೊರೆಯಾಗಿ ನೀಡಲಾಗಿದೆ.

ಹಳದಿ ಬಣ್ಣದ ಅವಾಂಟೇಟರ್ ಮುಂದೆ ನಿಂತಿರುವ ಹುಡುಗನ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಲ್ಯಾಂಬೋರ್ಗಿನಿಯನ್ನು ಪಡೆಯುವ ಮೂಲಕ, ಈ ಹುಡುಗ ಆಫ್ರಿಕಾದ ಅತ್ಯಂತ ಶ್ರೀಮಂತ ಬಾಲಕನಾಗಿದ್ದಾನೆ. ವರದಿಗಳ ಪ್ರಕಾರ, ಈ ಕಾರನ್ನು ಹೊರತುಪಡಿಸಿ, ಅವರ ಬಳಿ ಇನ್ನೂ ಅನೇಕ ಅಪರೂಪದ ಕಾರುಗಳಿವೆ.

ಬಾಲಕನನ್ನು ಮಾಂಬಾ ಜೂನಿಯರ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಈತ ಪ್ರಸಿದ್ಧ ಅಂತರ್ಜಾಲ ಸೂಪರ್ ಸ್ಟಾರ್ ಇಸ್ಮಾಯಿಲಿಯಾ ಮುಸ್ತಫಾ ಅವರ ಮಗ. ತಮ್ಮ ಮಗನ 10 ನೇ ಹುಟ್ಟುಹಬ್ಬವನ್ನು ಆಚರಿಸಲು 300,000 ಪೌಂಡ್ ವೆಚ್ಚದಲ್ಲಿ ಲ್ಯಾಂಬೋರ್ಗಿನಿ ಅವೆಂಟಡಾರ್ ಅನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದಾರೆ.

ಭಾರತದಲ್ಲಿ ಇದರ ಬೆಲೆ ಸುಮಾರು ರೂ. 2.82 ಕೋಟಿ ರೂ. ಇದೆ. ಇದೊಂದೆ ಅಲ್ಲದೇ ಇವರ ಕುಟುಂಬದ ಪ್ರತಿಯೊಬ್ಬರು ದುಬಾರಿ ಬೆಲೆಯ ಕಾರುಗಳನ್ನು ಹೊಂದಿದ್ದಾರೆ. ತಮ್ಮ ಕಾರು ಸಂಗ್ರಹವನ್ನು ಮತ್ತಷ್ಟು ಹೆಚ್ಚಿಸಲು ಹೊಸ ಲಂಬೋರ್ಗಿನಿ ಅವೆಂಟಡಾರ್ ಅನ್ನು ಉಡುಗೊರೆಯಾಗಿ ನೀಡಲಾಗಿದೆ.

ಈಗಾಗಲೇ ಸಣ್ಣ ಅರಣ್ಯದಲ್ಲಿ ಅನೇಕ ಲ್ಯಾಂಬೋರ್ಗಿನಿ ಕಂಪನಿಯ ಉತ್ಪನ್ನಗಳು ಬಳಕೆಯಲ್ಲಿವೆ. ಆದರೆ ಇದೇ ಮೊದಲ ಬಾರಿಗೆ ಅವಂಟೇಟರ್ ತನ್ನ ಮನೆಗೆ ನೀಡಲಾಗಿದೆ. ಈ ಕಾರನ್ನು ಹೊರತುಪಡಿಸಿ, ಅವರು ರೋಲ್ಸ್-ರಾಯ್ಸ್ ಉತ್ಪನ್ನಗಳನ್ನು ಸಹ ಬಳಸುತ್ತಿದ್ದಾರೆ.

ಮಾಂಬಾ ಸೀನಿಯರ್ (ಬಾಲಕನ ತಂದೆ) ಇಸ್ಮಾಯಿಲಿಯಾ ಅವರನ್ನು ಈ ಹಿಂದೆ ತೆರಿಗೆ ವಂಚನೆ ಆರೋಪದ ಮೇಲೆ ಪೊಲೀಸರು ಎರಡು ಬಾರಿ ಬಂಧಿಸಿದ್ದರು. ಅವರು ಪ್ರಸ್ತುತ ಆಫ್ರಿಕಾದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದಾರೆ. ಇದನ್ನು ಖಚಿತಪಡಿಸಿಕೊಳ್ಳುವಂತೆ ತಮ್ಮ 10 ವರ್ಷದ ಮಗನಿಗೆ ಅತ್ಯಂತ ದುಬಾರಿ ಕಾರನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದಾರೆ.

ಲ್ಯಾಂಬೋರ್ಗಿನಿ ಅವೆಂಟಾಡೋರ್ ವಿಶ್ವದಾದ್ಯಂತ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿದೆ. ಈ ಕಾರನ್ನು 2011 ರಲ್ಲಿ ಮೊದಲ ಬಾರಿಗೆ ಲ್ಯಾಂಬೋರ್ಗಿನಿ ಪರಿಚಯಿಸಿತು. ಲಂಬೋರ್ಘಿನಿಯ ಇತರ ಉತ್ಪನ್ನಗಳಂತೆ ಇದು ಶೀಘ್ರದಲ್ಲೇ ಅನೇಕರ ನೆಚ್ಚಿನ ವಾಹನವಾಯಿತು.

ಇದಕ್ಕೆ ಕಾರಣ ಲ್ಯಾಂಬೋರ್ಗಿನಿ ಅವೆಂಟಡಾರ್ ನ ವಿಶೇಷ ನೋಟ ಮತ್ತು ಸೂಪರ್ ಫಾಸ್ಟ್ ಸಾಮರ್ಥ್ಯ. ಅವೆಂಡಾರ್ 6.5 ಲೀಟರ್ ವಿ 12 ಎಂಜಿನ್ 740 ಬಿಎಚ್‍ಪಿ ಪವರ್ ಮತ್ತು 690 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಎಂಜಿನ್‍ನೊಂದಿಗೆ 7-ಸ್ಪೀಡ್ ಸೆಮಿ ಆಟೋಮ್ಯಾಟಿಕ್ ಗೇರ್‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಅವೆಂಡಾರ್ ಎಸ್‍ವಿ ಗಂಟೆಗೆ 0-100 ಕಿ.ಮೀ ಅಕ್ಸೆಲೆರೆಷನ್ ಅನ್ನು ಕೇವಲ 2.8 ಸೆಕೆಂಡುಗಳಲ್ಲಿ ಮುಟ್ಟುತ್ತದೆ. ಟಾಪ್ ಸ್ಫೀಡ್ ಪ್ರತಿ ಗಂಟೆಗೆ 350 ಕಿ.ಮೀಗಳಾಗಿದೆ. ಈ ಎಂಜಿನ್ ನೊಂದಿಗೆ 7-ಸ್ಪೀಡ್ ಸಿಂಗಲ್-ಕ್ಲಚ್ ಅನ್ನು ಜೋಡಿಸಲಾಗಿದೆ. ಈ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರ್ ತೂಕವನ್ನು ಕೇವಲ 1,550 ಕೆಜಿಗೆ ಇಳಿಸಲಾಗಿದೆ.

ಹೆಚ್ಚಿನ ಕಾರ್ಯಕ್ಷಮತೆಯನ್ನು ರೂಪಿಸಲು, ಲ್ಯಾಂಬೊರ್ಗಿನಿಯ ಎಂಜಿನಿಯರ್‌ಗಳು ಹೊಸ ಲ್ಯಾಂಬೊರ್ಗಿನಿ ಅವೆಂಟಡಾರ್ ಅಲ್ಟಿಮೇ ಸೂಪರ್ ಕಾರಿನಲ್ಲಿ ಫ್ಹೋರ್ ಸ್ಪೋಕ್ ಸ್ಟೀಯರಿಂಗ್ ಮತ್ತು ಮೂರು ವಿಭಿನ್ನ ಹಂತದ ಆಕ್ಟಿವ್ ರೇರ್ ಸ್ಪಾಯ್ಲರ್ ಅನ್ನು ಅಳವಡಿಸಿದ್ದಾರೆ. ಲ್ಯಾಂಬೊರ್ಗಿನಿ ಅವೆಂಟಡಾರ್ ಕ್ರಮವಾಗಿ ಮುಂಭಾಗ ಮತ್ತು ಹಿಂಭಾಗದ 20 ಇಂಚು ಮತ್ತು 21 ಇಂಚಿನ ವ್ಹೀಲ್ ಆಯ್ಕೆಯೊಂದಿಗೆ ಬರುತ್ತದೆ. ಸೂಪರ್ ಕಾರ್ ಒಳಗೆ, ಐಷಾರಾಮಿ ಫೀಚರ್ಸ್ ಗಳನ್ನು ಹೊಂದಿವೆ.

ಈ ಕಾರಿನಲ್ಲಿ ಕಸ್ಟಮೈಸ್ ಮಾಡಬಹುದಾದ ಟಿಎಫ್‌ಟಿ ಡಿಜಿಟಲ್ ಡ್ರೈವರ್ ಡಿಸ್ ಪ್ಲೇಯನ್ನು ಹೊಂದಿದೆ, ಇನ್ನು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಕನೆಕ್ಟಿವಿಟಿಯೊಂದಿರುವ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಹೊಂದಿರಲಿದೆ, ಇದರಲ್ಲಿ ವಾಯ್ಸ್ ಕಮಾಂಡ್ ಫೀಚರ್ ಅನ್ನು ನೀಡಲಾಗುತ್ತದೆ.

ಭಾರತೀಯ ಮಾರುಕಟ್ಟೆಯಲ್ಲಿ ಲ್ಯಾಂಬೊರ್ಗಿನಿ ಕಂಪನಿಯು ತನ್ನ ಟ್ರ್ಯಾಕ್ ಆಧಾರಿತ ಹುರಾಕನ್ ಕಾರನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಹೊಸ ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಇದೇ ತಿಂಗಳ 15 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ. ಲ್ಯಾಂಬೊರ್ಗಿನಿ ಹುರಾಕನ್ ಎಸ್‌ಟಿಒ ಕಾರು ಮಾದರಿಯು ಹುರಾಕನ್ ಪರ್ಫಾರ್ಮೆಂಟೆ ಮತ್ತು ಹುರಾಕನ್ ಇವೊ ಮಾದರಿಗಳಲ್ಲಿರುವಂತಹ ಒಂದೇ ರೀತಿಯ ಎಂಜಿನ್ ಅನ್ನು ಬಳಸುತ್ತದೆ.