150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಭಾರತದ ಪ್ರಮುಖ ಟೈಯರ್ ಉತ್ಪಾದನಾ ತಯಾರಕ ಕಂಪನಿಯಾಗಿರುವ ಅಪೋಲೊ ಟೈರ್ಸ್ ಗ್ರಾಹಕರ ಬೇಡಿಕೆ ಆಧರಿಸಿ ಮತ್ತೇರಡು ಹೊಸ ಉತ್ಪನ್ನಗಳನ್ನು ಪರಿಚಯಿಸಿದ್ದು, 150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಕಂಪನಿಯು ಎಂಡ್ಯೂರೋ ಆಫ್-ರೋಡ್ ಮತ್ತು ಎಂಡ್ಯೂರೋ ಸ್ಟ್ರೀಟ್ ಟೈರ್‌ಗಳ ಟ್ರ್ಯಾಂಪ್ಲರ್ ಶ್ರೇಣಿಯನ್ನು ಪರಿಚಯಿಸಿದೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಎಂಡ್ಯೂರೋ ಆಫ್-ರೋಡ್ ಮತ್ತು ಎಂಡ್ಯೂರೋ ಸ್ಟ್ರೀಟ್ ಟೈರ್‌ಗಳ ಟ್ರ್ಯಾಂಪ್ಲರ್ ಶ್ರೇಣಿಯನ್ನು ಕಂಪನಿಯು ಸ್ಪೋರ್ಟ್ ಟೂರಿಂಗ್, ಅಡ್ವೆಂಚರ್ ಟೂರಿಂಗ್, ಕ್ರೂಸರ್ ಮತ್ತ ಸ್ಟ್ರೀಟ್ ಸ್ಪೋರ್ಟ್ ಬೈಕ್ ಮಾದರಿಗಳಿಗಾಗಿ ಪರಿಚಯಿಸಿದೆ. ಹೊಸ ಟ್ರ್ಯಾಂಪ್ಲರ್ ಟೈರ್ ಶ್ರೇಣಿಯು ಎರಡು ಮಾದರಿಯಲ್ಲಿ ಲಭ್ಯವಿದ್ದು, ಟ್ರ್ಯಾಂಪ್ಲರ್ ಎಕ್ಸ್ಆರ್ ಮತ್ತು ಟ್ರ್ಯಾಂಪ್ಲರ್ ಎಸ್‌ಟಿ ಮಾದರಿಗಳಲ್ಲಿ ಖರೀದಿಸಬಹುದಾಗಿದೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಟ್ರ್ಯಾಂಪ್ಲರ್ ಎಕ್ಸ್ಆರ್ ಎಂಡ್ಯೂರೋ ಆಫ್-ರೋಡ್ ಮತ್ತು ಎಂಡ್ಯೂರೋ ಸ್ಟ್ರೀಟ್ ಟೈರ್‌ಗಳು 70:30 ಪ್ರೊಫೈಲ್ ಹೊಂದಿರುವ ಎಂಡ್ಯೂರೋ ಆಫ್-ರೋಡ್ ಟೈರ್‌ಗಳಾಗಿದ್ದರೆ ಟ್ರ್ಯಾಂಪ್ಲರ್ ಎಸ್‌ಟಿ ಶ್ರೇಣಿಯು ಡ್ಯುಯಲ್ ಸ್ಪೋರ್ಟ್ಸ್ ಸಾಮರ್ಥ್ಯಗಳಿಗಾಗಿ 80:20 ಪ್ರೊಫೈಲ್‌ ಹೊಂದಿರುವ ಎಂಡ್ಯೂರೊ ಸ್ಟ್ರೀಟ್ ಟೈರ್ ಮಾದರಿಗಳಾಗಿವೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಅಪೋಲೊ ಟೈರ್ಸ್ ಕಂಪನಿಯು ಹೊಸ ಟ್ರ್ಯಾಂಪ್ಲರ್ ಟೈರ್ ಶ್ರೇಣಿಯನ್ನು ಚೆನ್ನೈನಲ್ಲಿರುವ ತನ್ನ ಸಂಶೋಧನಾ ಅಭಿವೃದ್ದಿ ಕೇಂದ್ರದಲ್ಲಿ ಸಿದ್ದಪಡಿಸಿದ್ದು, ಗುಜರಾತಿನ ವಡೋದರಾದಲ್ಲಿರುವ ಅತ್ಯಾಧುನಿಕ ಉತ್ಪಾದನಾ ಸೌಲಭ್ಯದಲ್ಲಿ ತಯಾರಿಸಲಾಗುತ್ತದೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಸ್ಪೋರ್ಟ್ ಸ್ಟೀಲ್ ರೇಡಿಯಲ್ ತಂತ್ರಜ್ಞಾನ ಪ್ರೇರಣೆ ಹೊಂದಿರುವ ಹೊಸ ಟ್ರ್ಯಾಂಪ್ಲರ್ ಟೈರ್ ಶ್ರೇಣಿಯು ಅಡ್ವೆಂಚರ್ ಟೂರಿಂಗ್ ಮತ್ತು ಸ್ಟ್ರೀಟ್ ಸ್ಪೋರ್ಟ್ ಸೆಗ್ಮೆಂಟ್‌ಗಳಿಗೆ ಉತ್ತಮ ಆಯ್ಕೆಯಾಗಿದ್ದು, ಹೊಸ ತಲೆಮಾರಿನ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಹೊಸ ಉತ್ಪನ್ನಗಳನ್ನು ಪರಿಚಯಿಸಿರುವುದಾಗಿ ಏಷ್ಯಾ ಪೆಸಿಫಿಕ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ (ಎಪಿಎಂಇಎ), ಅಪೊಲೊ ಟೈರ್ಸ್ ಲಿಮಿಟೆಡ್ ಅಧ್ಯಕ್ಷ ಸತೀಶ್ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಹೊಸದಾಗಿ ಪರಿಚಯಿಸಲಾದ ಅಪೋಲೊ ಟ್ರ್ಯಾಂಪ್ಲರ್ ಎಕ್ಸ್‌ಆರ್ ಟೈರ್‌ಗಳು ಪ್ರೀಮಿಯಂ ಮಾದರಿಗಳಿಗೆ ಮಾತ್ರವಲ್ಲದೇ ಮಧ್ಯಮ ಕ್ರಮಾಂಕದ ಅಡ್ವೆಂಚರ್ ಮತ್ತು ಕ್ಲಾಸಿಕ್ ಮಾದರಿಗಳಾದ ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ಸ್, ಯಮಹಾ ಎಫ್‌ಜೆಡ್ ಸರಣಿಗಳು, ಸುಜುಕಿ ಜಿಕ್ಸರ್ ಮತ್ತು ಇಂಟ್ರುಡರ್, ಕೆಟಿಎಂ ಸರಣಿಗಳು, ಬಜಾಜ್ ಡೊಮಿನಾರ್ ಮತ್ತು ಬಿಎಂಡಬ್ಲ್ಯುಜಿ 310 ಆರ್‌ ನಂತಹ ಮೋಟಾರ್‌ಸೈಕಲ್‌ಗಳಿಗೆ ಇದು ಸರಿಹೊಂದುತ್ತವೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಇದಲ್ಲದೆ ಅಪೋಲೊ ಟ್ರ್ಯಾಂಪ್ಲರ್ ಎಸ್‌ಟಿ ಟೈರ್‌ಗಳು ಪ್ರೀಮಿಯಂ ಬೈಕ್‌ಗಳ ಜೊತೆಗೆ ಬಜಾಜ್ ಪಲ್ಸರ್, ಟಿವಿಎಸ್ ಅಪಾಚೆ ಸರಣಿಗಳು, ಯಮಹಾ ಫೇಜರ್ ಮತ್ತು ಎಂಟಿ 15 ನಂತಹ ಮೋಟಾರ್‌ಸೈಕಲ್‌ಗಳಿಗೆ ಸರಿಹೊಂದುತ್ತವೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಅಪೋಲೊ ಹೊಸ ಟೈರ್‌ಗಳು ವಿಶಿಷ್ಟವಾದ ಟ್ರೆಡ್ ಪ್ಯಾಟರ್ನ್, ಅತ್ಯುತ್ತಮವಾದ ಟ್ರೆಡ್ ಬ್ಲಾಕ್‌ಗಳನ್ನು ಒಳಗೊಂಡಿದ್ದು, ಆನ್-ರೋಡ್ ಹ್ಯಾಂಡ್ಲಿಂಗ್ ಮತ್ತು ಆಫ್-ರೋಡ್ ಹ್ಯಾಂಡ್ಲಿಂಗ್ ಅನ್ನು ಉತ್ತಮವಾಗಿ ನಿಭಾಯಿಸಬಲ್ಲವು.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಹಾಗೆಯೇ ಹೊಸ ಅಪೋಲೊ ಟ್ರ್ಯಾಂಪ್ಲರ್ ಟೈರ್ ಶ್ರೇಣಿಗಳು ದೊಡ್ಡದಾದ ಸೆಂಟ್ರಲ್ ಬ್ಲಾಕ್‌ಗಳೊಂದಿಗೆ ಎಲ್ಲಾ ಹವಾಮಾನ ಪರಿಸ್ಥಿತಿಗಳಿಗೆ ಸೂಕ್ತವಾಗಿರಲಿದ್ದು, ಉತ್ತಮ ಹಿಡಿತ ಮತ್ತು ಕಡಿಮೆ ರೋಲಿಂಗ್ ಶಬ್ದದೊಂದಿಗೆ ಬೈಕ್ ಅನ್ನು ಹೆಚ್ಚಿನ ವೇಗದಲ್ಲೂ ಸ್ಥಿರವಾಗಿ ಇರಿಸಲು ಸಹಕಾರಿಯಾಗಿವೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಇನ್ನು ದೇಶದಲ್ಲಿ ಮಾರಾಟವಾಗುವ ಟೈರ್‌ಗಳಿಗೆ ಹೊಸ ಮಾನದಂಡಗಳನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ಹೊಸ ಮಾನದಂಡಗಳನ್ನು ಸಿದ್ದಪಡಿಸಿದ್ದು, ಹೊಸ ಕ್ರಮದೊಂದಿಗೆ ಭಾರತದಲ್ಲಿ ಗುಣಮಟ್ಟ ಮತ್ತು ಸುರಕ್ಷಿತ ಟೈರ್‌ಗಳ ಉತ್ಪಾದನೆಗೆ ಅನುವು ಮಾಡಿಕೊಡುತ್ತಿದೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಹೊಸ ಟೈರ್ ಉತ್ಪಾದನಾ ಮಾನದಂಡಗಳು ಮುಂಬರುವ ಅಕ್ಟೋಬರ್ 1ರಿಂದಲೇ ಅಧಿಕೃತವಾಗಿ ಜಾರಿಗೆ ಬರಲಿದ್ದು, ಹೊಸ ಮಾನದಂಡಗಳೊಂದಿಗೆ ಹೊಸ ವಾಹನಗಳಲ್ಲಿ ಗರಿಷ್ಠ ಸುರಕ್ಷತೆಯನ್ನು ಖಾತ್ರಿಪಡಿಸಲಿದೆ. ಟೈರ್‌ಗಳು ಒಂದು ವಾಹನದ ಪ್ರಮುಖ ಅಂಶವಾಗಿದ್ದು, ಟೈರ್ ಉತ್ತಮವಾಗಿ ಕಾರ್ಯನಿರ್ವಹಣೆ ಮಾಡದಿದ್ದರೆ ವಾಹನವು ಎಷ್ಟೇ ಉತ್ತಮವಾಗಿದ್ದರೂ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಕೆಲವು ಟೈರ್ ಮಾದರಿಗಳು ಉತ್ತಮ ತಂತ್ರಜ್ಞಾನ ಪ್ರೇರಣೆಯೊಂದಿಗೆ ನಿರ್ಮಾಣಗೊಂಡಿದ್ದರೆ ಇನ್ನು ಕೆಲವು ಟೈರ್ ಮಾದರಿಗಳು ಕಳಪೆ ಗುಣಮಟ್ಟದೊಂದಿಗೆ ಅಗ್ಗದ ದರದಲ್ಲೂ ಖರೀದಿಗೆ ಲಭ್ಯವಿವೆ. ಕಳಪೆ ಟೈರ್ ಮಾದರಿಗಳು ಕೆಲವೊಮ್ಮೆ ಗುಣಮಟ್ಟದ ಕೊರತೆಯಿಂಗಾಗಿ ಅಪಘಾತಗಳಿಗೆ ಎಡೆಮಾಡಿಕೊಡುವ ಸಾಧ್ಯತೆಗಳಿದ್ದು, ಇದರಿಂದ ಹೊಸ ಸುರಕ್ಷಾ ಮಾನದಂಡಗಳೊಂದಿಗೆ ಕೇಂದ್ರ ಸರ್ಕಾರವು ಟೈರ್ ಉತ್ಪಾದನೆ ಮೇಲೆ ನಿಯಂತ್ರಣ ಸಾಧಿಸಲು ಮುಂದಾಗಿದೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಭಾರತದಲ್ಲಿ ಟೈರ್ ಮಾರುಕಟ್ಟೆಯು ಹೆಚ್ಚಾಗಿ ಅಸಂಘಟಿತವಾಗಿದ್ದು, ಅದನ್ನು ನಿಯಂತ್ರಿಸಲಾಗುತ್ತಿಲ್ಲ. ಇದರಿಂದ ಹೊಸ ಮಾನದಂಡಗಳ ಮೂಲಕ ಟೈರ್ ಉತ್ಪಾದನೆಗೆ ಕನಿಷ್ಠ ಉತ್ಪಾದನಾ ಗುಣಮಟ್ಟಗಳ ಅಳವಡಿಕೆ ಖಚಿತಪಡಿಸಲು ಮುಂದಾಗಿರುವ ಕೇಂದ್ರ ಸಾರಿಗೆ ಇಲಾಖೆಯು ಟೈರ್ ಉತ್ಪಾದಕರಿಗೆ ಹೊಸ ಮಾನದಂಡಗಳನ್ನು ಪರಿಚಯಿಸುತ್ತಿದೆ.

150ಸಿಸಿ ಯಿಂದ 500ಸಿಸಿ ಬೈಕ್ ಮಾದರಿಗಾಗಿ ಹೊಸ ಟೈರ್ ಉತ್ಪನ್ನಗಳನ್ನು ಪರಿಚಯಿಸಿದ ಅಪೋಲೊ ಟೈರ್ಸ್

ಹೊಸ ಮಾನದಂಡಗಳ ಪ್ರಕಾರ ಟೈರ್ ಉತ್ಪಾದನೆಗಾಗಿ ಟೈರ್ ಉತ್ಪಾದಕರು ರೋಲಿಂಗ್ ರೆಸಿಸ್ಟೆನ್ಸ್, ರೋಲಿಂಗ್ ಸೌಂಡ್ ಮತ್ತು ವೆಟ್ ಗ್ರಿಪ್ ಮಾನದಂಡಗಳನ್ನು ಟೈರ್‌ನಲ್ಲಿ ಅಳವಡಿಸುವುದು ಕಡ್ಡಾಯವಾಗಲಿದೆ.

Most Read Articles

Kannada
English summary
Apollo tyres introduced tramplr range of enduro off road and enduro street tyres
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X