ಇವಿ ಸ್ಕೂಟರ್ ಬಿಡಿಭಾಗಗಳ ಪೂರೈಕೆಗಾಗಿ ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಇಂಧನಗಳ ಬೆಲೆ ಹೆಚ್ಚಳ ಪರಿಣಾಮ ಎಲೆಕ್ಟ್ರಿಕ್ ವಾಹನಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚುತ್ತಿದ್ದು, ಪ್ರೀಮಿಯಂ ಸ್ಕೂಟರ್ ತಯಾರಕ ಕಂಪನಿಯಾಗಿರುವ ಎಥರ್ ಎನರ್ಜಿ(Ather Energy) ತನ್ನ ಮಾರಾಟ ಮಳಿಗೆಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಅತ್ಯುತ್ತಮ ಫೀಚರ್ಸ್‌ಗಳೊಂದಿಗೆ ದುಬಾರಿ ಬೆಲೆ ನಡುವೆಯೂ ಎಥರ್ ಕಂಪನಿಯು ಇವಿ ಸ್ಕೂಟರ್ ಮಾರಾಟದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಕಂಪನಿಯು ಕಳೆದ ಕೆಲ ತಿಂಗಳ ಅವಧಿಯಲ್ಲಿ ದೇಶದ ಪ್ರಮುಖ ನಗರಗಳಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಹೊಸ ಶೋರೂಂಗಳಿಗೆ ಚಾಲನೆ ನೀಡಿದೆ. ಎಥರ್ ಕಂಪನಿಯು ಇದುವರೆಗೆ ಸುಮಾರು 30 ಹೊಸ ಶೋರೂಂಗಳಿಗೆ ಚಾಲನೆ ನೀಡಿದ್ದು, ಕಂಪನಿಯು ಈ ವರ್ಷಾಂತ್ಯಕ್ಕೆ ಮತ್ತಷ್ಟು ಹೊಸ ಮಾರಾಟ ಸೌಲಭ್ಯವನ್ನು ತೆರೆಯುವ ಗುರಿಹೊಂದಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಶೀಘ್ರದಲ್ಲೇ ಮತ್ತಷ್ಟು ಹೊಸ ಉತ್ಪನ್ನಗಳ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಯೋಜನೆಗೆ ಪೂರಕವಾಗಿ ಕಂಪನಿಯು ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕವನ್ನು ತೆರೆಯುತ್ತಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಎರಡನೇ ಘಟಕದ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದ ಮಧ್ಯಂತರ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ. ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಗುರಿಹೊಂದಿದ್ದು, ಹೊಸ ಯೋಜನೆಗಳಿಗಾಗಿ ಕಂಪನಿಯು ಮುಂದಿನ ಐದು ವರ್ಷಗಳಲ್ಲಿ ರೂ. 650 ಕೋಟಿ ಹೂಡಿಕೆ ಮಾಡಲು ನಿರ್ಧರಿಸಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಹೊಸ ಯೋಜನೆಯೊಂದಿಗೆ ಹೆಚ್ಚಿನ ಉತ್ಪಾದನೆಗಾಗಿ ಕೈಗೊಳ್ಳಲಿರುವ ಕಂಪನಿಯು ಬಿಡಿಭಾಗಗಳ ಪೂರೈಕೆ ಕಂಪನಿಗಳೊಂದಿಗೆ ಕೈಜೋಡಿಸುತ್ತಿದ್ದು, ಪ್ರಮುಖ ಬಿಡಿಭಾಗಗಳ ಪೂರೈಕೆಗಾಗಿ ಇತ್ತೀಚೆಗೆ ಕಂಪನಿಯು ಭಾರತ್ ಎಫ್‌ಐಎಚ್‌ನೊಂದಿಗೆ ಹೊಸ ಪಾಲುದಾರಿಕೆ ಪ್ರಕಟಿಸಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಭಾರತ್ ಎಫ್‌ಐಎಚ್‌ ಕಂಪನಿಯು ವಿವಿಧ ಬ್ರಾಂಡ್‌ಗಳಿಗೆ ಪ್ರಮುಖ ಬಿಡಿಭಾಗಗಳ ಪೂರೈಕೆ ಮಾಡುವ ಪ್ರಮುಖ ಕಂಪನಿಗಳಲ್ಲಿ ಒಂದಾಗಿದ್ದು, ಇದೀಗ ಕಂಪನಿಯು ಎಥರ್ ಎನರ್ಜಿ ಕಂಪನಿಯ ಇವಿ ಸ್ಕೂಟರ್‌ಗಳಿಗೂ ಅಗತ್ಯವಿರುವ ಪ್ರಮುಖ ಬಿಡಿಭಾಗಗಳನ್ನು ಪೂರೈಸುವ ಪಾಲುದಾರಿಕೆ ಪ್ರಕಟಿಸಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಹೊಸ ಪಾಲುದಾರಿಕೆ ಅಡಿಯಲ್ಲಿ ಭಾರತ್ ಎಫ್‌ಐಎಚ್‌ ಕಂಪನಿಯು ಎಥರ್ ಸ್ಕೂಟರ್‌ಗಳಿಗೆ ಬ್ಯಾಟರಿ ನಿರ್ವಹಣಾ ವ್ಯವಸ್ಥೆ, ಡ್ಯಾಶ್‌ಬೋರ್ಡ್ ಅಸೆಂಬ್ಲಿ, ಪೆರಿಫೆರಲ್ ಕಂಟ್ರೋಲಿಂಗ್ ಯುನಿಟ್‌, ಡ್ರೈವ್ ಕಂಟ್ರೋಲ್ ಮಾಡ್ಯೂಲ್‌ಗಳಿಗಾಗಿ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್(ಪಿಸಿಬಿ) ಅಸೆಂಬ್ಲಿಗಳನ್ನು ಪೂರೈಕೆ ಮಾಡಲಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಹೊಸ ಪಾಲುದಾರಿಕೆಯು ಎಥರ್ ಎನರ್ಜಿಯ ಉತ್ಪಾದನಾ ಹೆಚ್ಚಳ ಯೋಜನೆಗೆ ಪೂರಕವಾಗಿದ್ದು, ಹೊಸ ಯೋಜನೆಗಳಿಗಾಗಿ ಕಂಪನಿಯು ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿದೆ. ಮುಂದಿನ ಮೂರು ವರ್ಷಗಳಲ್ಲಿ ವಾರ್ಷಿಕವಾಗಿ 1 ಮಿಲಿಯನ್ ಸ್ಕೂಟರ್ ಉತ್ಪಾದನೆ, 5 ಸಾವಿರ ಫಾಸ್ಟ್ ಚಾರ್ಜಿಂಗ್ ಮತ್ತು 600 ಮಾರಾಟ ಮಳಿಗೆಗಳನ್ನು ತೆರೆಯುವ ಯೋಜನೆಯಲ್ಲಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಇನ್ನು ದುಬಾರಿ ಬೆಲೆ ನಡುವೆಯೂ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿರುವ ಎಥರ್ ಎನರ್ಜಿ ಕಂಪನಿಯು ಮುಂಬರುವ ಕೆಲ ತಿಂಗಳಿನಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಇದುವರೆಗೂ ರೂ. 650 ಕೋಟಿ ಮೌಲ್ಯದ ಇವಿ ಸ್ಕೂಟರ್ ಉದ್ಯಮ ವ್ಯವಹಾರ ಕೈಗೊಂಡಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಎಥರ್ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಇವಿ ಸ್ಕೂಟರ್‌ಗಳಿಂತಲೂ ತುಸು ಕಡಿಮೆ ಮೈಲೇಜ್ ಹೊರತುಪಡಿಸಿ ಪ್ರೀಮಿಯಂ ಫೀಚರ್ಸ್ ಮತ್ತು ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ತಾಂತ್ರಿಕ ಸೇವೆಗಳ ವಿಚಾರವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹೊಂದಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಹೀಗಾಗಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಎಥರ್ ಕಂಪನಿಯು ಕಳೆದ ವರ್ಷಕ್ಕಿಂತ 2021ರಲ್ಲಿ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್‌ಗಳಿಂತಲೂ ಹೆಚ್ಚು ಬಜೆಟ್ ಬೆಲೆಯಲ್ಲಿ ಉತ್ತಮ ಮೈಲೇಜ್ ಹೊಂದಿರುವ ಸ್ಕೂಟರ್‌ಗಳ ಗ್ರಾಹಕರು ಆಸಕ್ತಿ ತೋರುತ್ತಿದ್ದು, ಆರಂಭದಲ್ಲಿ ಪ್ರೀಮಿಯಂ ಇವಿ ಸ್ಕೂಟರ್‌ಗಳನ್ನು ಮಾತ್ರ ಅಭಿವೃದ್ದಿ ಮಾಡಲು ನಿರ್ಧರಿಸಿದ್ದ ಎಥರ್ ಕಂಪನಿಯು ಇದೀಗ ಗ್ರಾಹಕರ ಬೇಡಿಕೆಯೆಂತೆ ಬಜೆಟ್ ಮಾದರಿಗಳನ್ನು ಸಹ ಉತ್ಪಾದನೆ ಮಾಡುವ ಆಸಕ್ತಿ ತೋರಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಎಥರ್ ಮುಂಬರುವ ಸ್ಕೂಟರ್ ಮಾದರಿಯು ರೂ. 1 ಲಕ್ಷ ಬೆಲೆಯೊಳಗೆ ಬಿಡುಗಡೆಯಾಗಲಿದ್ದು, ಪ್ರತಿಸ್ಪರ್ಧಿ ಮಾದರಿಗಳಿಗೆ ಅನುಗುಣವಾಗಿ ಅಧಿಕ ಮೈಲೇಜ್ ಪ್ರೇರಿತ ಬ್ಯಾಟರಿ ಅಳವಡಿಸಲಿದೆ.

ಭಾರತ್ ಎಫ್‌ಐಎಚ್ ಜೊತೆಗೆ ಎಥರ್ ಎನರ್ಜಿ ಹೊಸ ಪಾಲುದಾರಿಕೆ

ಎಥರ್ ಕಂಪನಿಯು ಸದ್ಯ ಮಾರುಕಟ್ಟೆಯಲ್ಲಿ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, 450ಎಕ್ಸ್ ಮಾದರಿಯು 450 ಪ್ಲಸ್ ಮಾದರಿಗಿಂತಲೂ ಹೆಚ್ಚಿನ ಮಟ್ಟದ ಫೀಚರ್ಸ್ ಮತ್ತು ಅಧಿಕ ಮೈಲೇಜ್ ಪಡೆದುಕೊಂಡಿದೆ.

More from DriveSpark

Article Published On: Thursday, March 10, 2022, 15:58 [IST]
English summary
Ather energy partners with bharat fih to cater to the growing demand
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+