ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಹೆಚ್ಚುತ್ತಿರುವ ಇಂಧನ ಬೆಲೆ ಪರಿಣಾಮ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದ್ದು, ಪ್ರೀಮಿಯಂ ಇವಿ ಸ್ಕೂಟರ್ ಮಾರಾಟದಲ್ಲಿ ಮುಂಚೂಣಿ ಸಾಧಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಮಾರ್ಚ್ ಅವಧಿಯಲ್ಲಿನ ಇವಿ ಸ್ಕೂಟರ್ ಮಾರಾಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎಥರ್ ಎನರ್ಜಿ ಕಂಪನಿಯು ಮಾರ್ಚ್ ಅವಧಿಯಲ್ಲಿ ದೇಶಾದ್ಯಂತ 2,591 ಯುನಿಟ್ ಇವಿ ಸ್ಕೂಟರ್‌ಗಳನ್ನು ವಿತರಣೆ ಮಾಡಿದ್ದು, ಇದು ಕಳೆದ ವರ್ಷದ ಮಾರ್ಚ್ ಅವಧಿಯಲ್ಲಿನ ಇವಿ ಸ್ಕೂಟರ್ ಮಾರಾಟ ಪ್ರಮಾಣಕ್ಕಿಂತಲೂ ಶೇ. 120 ರಷ್ಟು ಹೆಚ್ಚುವರಿ ಬೇಡಿಕೆ ಪಡೆದುಕೊಂಡಿದೆ. ಸದ್ಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚುತ್ತಿರುವುದರಿಂದ ಮುಂಬರುವ ದಿನಗಳಲ್ಲಿ ಇವಿ ವಾಹನಗಳಿಗೆ ಮತ್ತಷ್ಟು ಬೇಡಿಕೆ ಹರಿದುಬರುವ ನೀರಿಕ್ಷೆಗಳಿದ್ದು, ಎಥರ್ ಕಂಪನಿಯು ಸಹ ಗ್ರಾಹಕರ ಬೇಡಿಕೆಯೆಂತೆ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಚಾರ್ಜಿಂಗ್ ಸೌಲಭ್ಯವನ್ನು ಆಧರಿಸಿ ದೇಶದ ಪ್ರಮುಖ ನಗರಗಳಿಗೆ ಮಾರಾಟ ಸೌಲಭ್ಯವನ್ನು ವಿಸ್ತರಿಸುತ್ತಿರುವ ಎಥರ್ ಎನರ್ಜಿ ಕಂಪನಿಯು ಇದುವರೆಗೆ ದೇಶಾದ್ಯಂತ 34 ಶೋರೂಂಗಳನ್ನು ಆರಂಭಿಸಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ನಗರಗಳಿಗೆ ಮಾರಾಟ ಮಳಿಗೆಗಳನ್ನು ವಿಸ್ತರಿಸಲು ಸಿದ್ದವಾಗಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎಥರ್ ಕಂಪನಿಯು ಸದ್ಯ 450 ಪ್ಲಸ್ ಮತ್ತು 450ಎಕ್ಸ್ ಇವಿ ಸ್ಕೂಟರ್ ಮಾದರಿಗಳನ್ನು ಮಾರಾಟಗೊಳಿಸುತ್ತಿದ್ದು, ಸಬ್ಸಡಿ ಯೋಜನೆಯೊಂದಿಗೆ ಹೊಸ 450 ಪ್ಲಸ್ ಬೆಲೆಯು ಬೆಂಗಳೂರು ಎಕ್ಸ್‌ಶೋರೂಂ ಪ್ರಕಾರ ರೂ. 1,31,647 ಮತ್ತು 450ಎಕ್ಸ್ ಬೆಲೆಯನ್ನು ರೂ. 1,50,657ಕ್ಕೆ ಬೆಲೆ ಹೊಂದಿವೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

2.9kWh ಬ್ಯಾಟರಿ ಪ್ಯಾಕ್ ಹೊಂದಿರುವ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯು ಗರಿಷ್ಠ 6kW ಬ್ಯಾಟರಿ ಬ್ಯಾಟರಿ ಪ್ಯಾಕ್‌ನೊಂದಿಗೆ 26 ಎನ್ಎಂ ಟಾರ್ಕ್ ಉತ್ಪಾದನೆ ಮಾಡುವ ಮೂಲಕ ಪ್ರತಿ ಚಾರ್ಜ್‌ಗೆ ಗರಿಷ್ಠ 85 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

450 ಪ್ಲಸ್ ಮಾದರಿಯು ಪ್ರತಿ ಚಾರ್ಜ್‌ಗೆ 70 ಕಿ.ಮೀ ಮೈಲೇಜ್ ಹೊಂದಿದ್ದು, ಫಾಸ್ಟ್ ಚಾರ್ಜಿಂಗ್ ಮೂಲಕ 450ಎಕ್ಸ್ ಮಾದರಿಯು ಕೇವಲ 10 ನಿಮಿಷಗಳಲ್ಲಿ ಚಾರ್ಜ್ ಮಾಡಿದಲ್ಲಿ 10 ಕಿ.ಮೀ ಹಿಂದಿರುಗಿಸಿದ್ದಲ್ಲಿ 450 ಪ್ಲಸ್ ಮಾದರಿಯು 15 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎಥರ್ ಎನರ್ಜಿ ಕಂಪನಿಯು ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಕೆಗಾಗಿ ಹೊಸ ಯೋಜನೆಗಳನ್ನು ರೂಪಿಸುತ್ತಿದ್ದು, ಕಂಪನಿಯು ಭವಿಷ್ಯ ಯೋಜನೆಗಳಿಗಾಗಿ ಭಾರೀ ಪ್ರಮಾಣದ ಹೂಡಿಕೆಗೆ ಸಿದ್ದವಾಗುತ್ತಿದೆ. ಬೇಡಿಕೆ ಪೂರೈಕೆಗಾಗಿ ಉತ್ಪಾದನಾ ಸಾಮರ್ಥ್ಯವನ್ನು ಸಹ ಹೆಚ್ಚಿಸಲು ನಿರ್ಧರಿಸಿದ್ದು, ಇದಕ್ಕಾಗಿ ಕಂಪನಿಯು ಎರಡನೇ ಉತ್ಪಾದನಾ ಘಟಕ ತೆರೆಯಲು ಸಿದ್ದವಾಗಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎಥರ್ ಕಂಪನಿಯು ಸದ್ಯ ತಮಿಳುನಾಡಿನ ಹೊಸೂರಿನಲ್ಲಿ ವಾರ್ಷಿಕವಾಗಿ 1.20 ಲಕ್ಷ ಸ್ಕೂಟರ್‌ಗಳ ಉತ್ಪಾದನೆ ಮಾಡಬಹುದಾದ ಸಾಮರ್ಥ್ಯದ ಇವಿ ಘಟಕವನ್ನು ಹೊಂದಿದ್ದು, ಇದೀಗ ಕಂಪನಿಯು ಎರಡನೇ ಘಟಕವನ್ನು ಸಹ ಹೊಸೂರಿನಲ್ಲಿಯೇ ತೆರೆಯಲು ನಿರ್ಧರಿಸಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎರಡನೇ ಘಟಕ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದ್ದು, ಈ ವರ್ಷದ ಕೊನೆಯಲ್ಲಿ ಕಾರ್ಯಾರಂಭ ನಡೆಸಲಿರುವ ಹೊಸ ಘಟಕವು ವಾರ್ಷಿಕವಾಗಿ 2.80 ಲಕ್ಷ ಯುನಿಟ್ ಉತ್ಪಾದನಾ ಸಾಮರ್ಥ್ಯ ಹೊಂದಿರಲಿದೆ ಎನ್ನಲಾಗಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎಥರ್ ಕಂಪನಿಯು ಎರಡು ಘಟಕಗಳ ಮೂಲಕ ವಾರ್ಷಿಕವಾಗಿ 4 ಲಕ್ಷ ಯುನಿಟ್ ಇವಿ ಸ್ಕೂಟರ್ ಉತ್ಪಾದನಾ ಸಾಮಾರ್ಥ್ಯ ಹೊಂದಿರಲಿದ್ದು, 2025ರ ವೇಳೆಗೆ ಮತ್ತಷ್ಟು ಹೂಡಿಕೆಯೊಂದಿಗೆ ವಾರ್ಷಿಕವಾಗಿ ಒಟ್ಟು 10 ಲಕ್ಷ ಯುನಿಟ್ ಉತ್ಪಾದನೆ ಮಾಡಬಹುದಾದ ಸಾಧ್ಯತೆಗಳ ಕುರಿತು ಯೋಜನೆ ರೂಪಿಸುತ್ತಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ವಾರ್ಷಿಕವಾಗಿ 10 ಲಕ್ಷ ಯುನಿಟ್ ಉತ್ಪಾದನೆಗಾಗಿ ಹೂಡಿಕೆ ಕೂಡಾ ಪ್ರಮುಖವಾಗಿದ್ದು, ಈಗಾಗಲೇ ಪ್ರಮುಖ ಕಂಪನಿಗಳಿಂದ ಭಾರೀ ಪ್ರಮಾಣದ ಹೂಡಿಕೆ ಪಡೆದುಕೊಂಡಿರುವ ಎಥರ್ ಕಂಪನಿಯು ಭವಿಷ್ಯದಲ್ಲಿ ಇನ್ನಷ್ಟು ಹೆಚ್ಚಳ ಮಾಡಲು ನಿರ್ಧರಿಸಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

2025ರ ವೇಳೆಗೆ ಇವಿ ವಾಹನ ಬೇಡಿಕೆ ಶೇ.20ಕ್ಕೆ ಏರಿಕೆಯಾಗುವ ಎಲ್ಲಾ ಸಾಧ್ಯತೆ ಕುರಿತು ಮಾರುಕಟ್ಟೆ ಅಧ್ಯಯನ ನಡೆಸಿರುವ ಎಥರ್ ಕಂಪನಿಯು ಇವಿ ವಾಹನ ಹೆಚ್ಚಳಕ್ಕೆ ತಕ್ಕಂತೆ ಚಾರ್ಜಿಂಗ್ ನಿಲ್ದಾಣಗಳ ಸಂಖ್ಯೆಯನ್ನು ಸಹ ಹೆಚ್ಚಿಸುತ್ತಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ದುಬಾರಿ ಬೆಲೆ ನಡುವೆಯೂ ಗ್ರಾಹಕರಿಂದ ಉತ್ತಮ ಪ್ರಕ್ರಿಯೆ ಪಡೆದುಕೊಳ್ಳುತ್ತಿರುವ ಎಥರ್ ಎನರ್ಜಿ ಕಂಪನಿಯು ಮುಂಬರುವ ಕೆಲ ತಿಂಗಳಿನಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದ್ದು, ಕಂಪನಿಯು ಇದುವರೆಗೂ ರೂ. 650 ಕೋಟಿ ಮೌಲ್ಯದ ಇವಿ ಸ್ಕೂಟರ್ ಉದ್ಯಮ ವ್ಯವಹಾರ ಕೈಗೊಂಡಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಎಥರ್ ಸ್ಕೂಟರ್‌ಗಳು ಇತ್ತೀಚೆಗೆ ಬಿಡುಗಡೆಯಾಗಿರುವ ಇವಿ ಸ್ಕೂಟರ್‌ಗಳಿಂತಲೂ ತುಸು ಕಡಿಮೆ ಮೈಲೇಜ್ ಹೊರತುಪಡಿಸಿ ಪ್ರೀಮಿಯಂ ಫೀಚರ್ಸ್ ಮತ್ತು ಅತ್ಯುತ್ತಮ ಎಲೆಕ್ಟ್ರಿಕ್ ಎಂಜಿನ್ ಕಾರ್ಯಕ್ಷಮತೆ ಮತ್ತು ತಾಂತ್ರಿಕ ಸೇವೆಗಳ ವಿಚಾರವಾಗಿ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಹೊಂದಿದೆ.

ಮಾರ್ಚ್ ಅವಧಿಯ ಇವಿ ಸ್ಕೂಟರ್ ಮಾರಾಟದಲ್ಲಿ ಶೇ.120 ರಷ್ಟು ಬೆಳವಣಿಗೆ ಸಾಧಿಸಿದ ಎಥರ್

ಹೀಗಾಗಿ ಅತಿ ಹೆಚ್ಚು ಮೈಲೇಜ್ ನೀಡುವ ಪ್ರತಿಸ್ಪರ್ಧಿ ಮಾದರಿಗಳಿಂತಲೂ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿರುವ ಎಥರ್ ಕಂಪನಿಯು ಕಳೆದ ವರ್ಷಕ್ಕಿಂತ 2022ರಲ್ಲಿ 12 ಪಟ್ಟು ಹೆಚ್ಚು ಬೆಳವಣಿಗೆ ಸಾಧಿಸಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೊಸ ಉತ್ಪನ್ನಗಳೊಂದಿಗೆ ಇನ್ನು ಹೆಚ್ಚಿನ ಮಟ್ಟದ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

More from DriveSpark

Article Published On: Saturday, April 2, 2022, 9:00 [IST]
English summary
Ather energy sales 2591 units in march details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+