ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ದ್ವಿಚಕ್ರ ವಾಹನಗಳ ಅಳವಡಿಕೆ

ದೇಶಾದ್ಯಂತ ಇವಿ ವಾಹನಗಳ ಬಳಕೆಯು ಕಳೆದ ಎರಡು ವರ್ಷಗಳಲ್ಲಿ ಸಾಕಷ್ಟು ಸುಧಾರಿಸಿದ್ದು, ಇವಿ ವಾಹನಗಳ ಅಳವಡಿಕೆಯು 2030ರ ಅಂತ್ಯಕ್ಕೆ ಶೇ. 78 ತಲುಪುವುದಾಗಿ ಅಧ್ಯಯನವೊಂದು ಮಹತ್ವ ಮಾಹಿತಿ ಬಹಿರಂಗಪಡಿಸಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಹೆಚ್ಚುತ್ತಿರುವ ಇಂಧನ ದರಗಳು ಮತ್ತು ಮಾಲಿನ್ಯದ ಕಾರಣಕ್ಕೆ ಹೊಸ ವಾಹನ ಖರೀದಿದಾರರು ಪರಿಸರ ಸ್ನೇಹಿಯಾಗಿರುವ ಮತ್ತು ಕಡಿಮೆ ವೆಚ್ಚದಾಯಕವಾಗಿರುವ ಇವಿ ವಾಹನಗಳ ಬಳಕೆಗೆ ಆದ್ಯತೆ ನೀಡುತ್ತಿದ್ದು, ಚಾರ್ಜಿಂಗ್ ನಿಲ್ದಾಣಗಳು ಹೆಚ್ಚುತ್ತಿರುವಂತೆ ಇವಿ ವಾಹನ ನೋಂದಣಿ ಸಂಖ್ಯೆ ಕೂಡಾ ಸಾಕಷ್ಟು ಸುಧಾರಣೆ ಕಂಡಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಪ್ರಸ್ತುತ ಮಾರುಕಟ್ಟೆಯಲ್ಲಿ ಇಂಧನ ಆಧರಿತ ವಾಹನಗಳ ಮಾರಾಟಕ್ಕೆ ಹೋಲಿಕೆ ಮಾಡಿದರೆ ಇವಿ ವಾಹನಗಳ ಮಾರಾಟವು ಸಾಕಷ್ಟು ಕಡಿಮೆ ಪ್ರಮಾಣದಲ್ಲಿದ್ದರೂ ಇದರ ಪ್ರಮಾಣ ಮುಂಬರುವ ದಿನಗಳಲ್ಲಿ ವೇಗವಾಗಿ ಬದಲಾಗುವ ನೀರಿಕ್ಷೆಗಳಿದ್ದು, ಅದರಲ್ಲೂ ಇವಿ ದ್ವಿಚಕ್ರ ವಾಹನಗಳು ಮುಂಬರುವ ಕೆಲವೇ ವರ್ಷಗಳಲ್ಲಿ ಭಾರೀ ಪ್ರಮಾಣದಲ್ಲಿ ಮಾರಾಟಗೊಳ್ಳಲಿವೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ರೆಡ್ ಸೀರ್ ಎಂಬ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳ ಮಾರಾಟ ಮತ್ತು ಎಲೆಕ್ಟ್ರಿಕ್ ವಾಹನಗಳ ಭವಿಷ್ಯದ ಬಳಕೆಯ ಕುರಿತು ಅಧ್ಯಯೊಂದನ್ನು ನಡೆಸಿದ್ದು, ಭವಿಷ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೇಗಿರುತ್ತದೆ? ಜನರು ಎಲೆಕ್ಟ್ರಿಕ್ ವಾಹನಗಳನ್ನು ಏಕೆ ಖರೀದಿಸುತ್ತಿದ್ದಾರೆ ಎಂಬುದರ ಕುರಿತಾದ ಆಸಕ್ತಿದಾಯಕ ಅಧ್ಯಯದ ಮೂಲಕ ಮಹತ್ವದ ಮಾಹಿತಿ ಹಂಚಿಕೊಂಡಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಪ್ರಸ್ತುತ ಎಲೆಕ್ಟ್ರಿಕ್ ವಾಹನಗಳ ಮಾರಾಟ ದರವು ಹಾಗೆಯೇ ಮುಂದುವರಿದರೆ 2030ರಲ್ಲಿ ಶೇ.100 ರಷ್ಟು ದ್ವಿಚಕ್ರ ವಾಹನಗಳಲ್ಲಿ ಶೇ.78 ರಷ್ಟು ಇವಿ ದ್ವಿಚಕ್ರ ವಾಹನಗಳು ರಸ್ತೆಯಲ್ಲಿ ಸಂಚರಿಸಲಿವೆ ಎನ್ನಲಾಗಿದ್ದು, ಈ ಗುರಿ ಮುಟ್ಟಲು ಕೇವಲ ಗ್ರಾಹಕರಲ್ಲಿ ಉತ್ಸಾಹ ಮಾತುಗಳು ಸಾಕಾಗುವುದಿಲ್ಲ ಎನ್ನುವುದನ್ನು ಸಹ ಸ್ಪಷ್ಟವಾಗಿ ಉಲ್ಲೇಖಿಸಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಇವಿ ವಾಹನಗಳ ಬಳಕೆಯನ್ನು ಉತ್ತೇಜಿಸಲು ಸರ್ಕಾರಗಳು ಹೆಚ್ಚಿನ ಮಟ್ಟದ ಪ್ರೊತ್ಸಾಹ ಯೋಜನೆಗಳ ಜೊತೆ ಹೆಚ್ಚಿನ ಮಟ್ಟದ ಚಾರ್ಜಿಂಗ್ ನಿಲ್ದಾಣಗಳು ಮತ್ತು ಹೆಚ್ಚಿನ ಶ್ರೇಣಿ ಹೊಂದಿರುವ ಇವಿ ಮಾದರಿಗಳು ಮಾರುಕಟ್ಟೆ ಪ್ರವೇಶಿಸುವುದು ಅವಶ್ಯವಿದೆ ಎಂದಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯು ಒಬ್ಬ ಗ್ರಾಹಕನಿಂದ ಮತ್ತೊಬ್ಬ ಗ್ರಾಹಕರಿಗೆ ಸ್ಪೂರ್ತಿಯಾಗಬೇಕಾದರೆ ಇಂಧನ ಚಾಲಿತ ಮಾದರಿಗಿಂತಲೂ ಇವಿ ವಾಹನ ಬಳಕೆಯ ವೆಚ್ಚಗಳು ಕನಿಷ್ಠ ಶೇ. 20ರಿಂದ ಶೇ.30 ರಷ್ಟು ಕಡಿಮೆ ಇದ್ದಾಗ ಮಾತ್ರ ಸಾರ್ವಜನಿಕರಿಗೂ ಇದರತ್ತ ಹೆಚ್ಚಿನ ಗಮನಹರಿಸುತ್ತಾರೆ ಎನ್ನಲಾಗಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಇನ್ನು ಮಾರುಕಟ್ಟೆಯಲ್ಲಿ ಕಳೆದ ಕೆಲ ವರ್ಷಗಳಿಂದ ಖರೀದಿಗೆ ಲಭ್ಯವಿದ್ದರೂ ಕಳೆದ ಎರಡು ವರ್ಷಗಳಿಂದ ಹೆಚ್ಚಿನ ಮಟ್ಟದ ಬೇಡಿಕೆ ಹರಿದುಬರುತ್ತಿದ್ದು, ಗ್ರಾಹಕರ ಬೇಡಿಕೆಯೆಂತೆ ಹಲವಾರು ಸ್ಪಾರ್ಟ್ ಅಪ್ ಕಂಪನಿಗಳು ಸ್ಪರ್ಧಾತ್ಮಕ ಬೆಲೆಗಳಲ್ಲಿ ಇವಿ ದ್ವಿಚಕ್ರಗಳನ್ನು ಬಿಡುಗಡೆ ಮಾಡಿವೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಇದು ಮುಂದಿನ ಎರಡರಿಂದ ಮೂರು ವರ್ಷಗಳಲ್ಲಿ ಇನ್ನು ಉತ್ತಮ ಸ್ಥಿತಿಯತ್ತ ಬದಲಾಗುವ ನೀರಿಕ್ಷೆಯಿದ್ದು, ಇವಿ ವಾಹನಗಳಿಗೆ ಪೂರಕವಾಗಿ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತರಲಾಗಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಎಲೆಕ್ಟ್ರಿಕ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ದೇಶಾದ್ಯಂತ ಕೇಂದ್ರ ಸರ್ಕಾರದೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಹಲವಾರು ಹೊಸ ಯೋಜನೆಗಳನ್ನು ಜಾರಿಗೆ ತಂದಿವೆ. ಇದರಲ್ಲಿ ಕೇಂದ್ರದ ಫೇಮ್ 2 ಸಬ್ಸಡಿ ಯೋಜನೆಯು ಪ್ರಮುಖವಾಗಿದ್ದು, ಫೇಮ್ 2 ಯೋಜನೆಯೊಂದಿಗೆ ವಿವಿಧ ರಾಜ್ಯ ಸರ್ಕಾರಗಳು ಸಹ ಇವಿ ವಾಹನಗಳ ಉತ್ತೇಜನಕ್ಕೆ ವಿವಿಧ ಸಬ್ಸಡಿ ಯೋಜನೆಗಳನ್ನು ಅಳವಡಿಸಿಕೊಂಡಿವೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಪ್ರೋತ್ಸಾಹದಿಂದಾಗಿ ಎಲೆಕ್ಟ್ರಿಕ್ ವಾಹನಗಳ ಅಳವಡಿಕೆ ನಿಧಾನವಾಗಿ ಹೆಚ್ಚಳವಾಗುತ್ತಿದ್ದು, ಸಬ್ಸಡಿ ಯೋಜನೆಗಳಿಂದಾಗಿ ಇವಿ ವಾಹನಗಳ ಬಳಕೆಗೆ ಸಾರ್ವಜನಿಕರು ಆದ್ಯತೆ ನೀಡುತ್ತಿದ್ದಾರೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಕರ್ನಾಟಕದಲ್ಲೂ ಸಹ ಇವಿ ವಾಹನಗಳ ಅಳವಡಿಕೆಗೆ ಹೆಚ್ಚಿನ ಮಟ್ಟದ ಪ್ರೋತ್ಸಾಹ ಯೋಜನೆಗಳನ್ನು ಘೋಷಣೆ ಮಾಡಿದ್ದು, ಕಳೆದ ಮೂರು ವರ್ಷಗಳ ಅವಧಿಯಲ್ಲಿ ಇವಿ ವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ರಸ್ತೆಗಿಳಿದಿವೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ರಾಜ್ಯ ಸರ್ಕಾರದ ಸಬ್ಸಡಿ ಯೋಜನೆ ಜಾರಿ ನಂತರ ಇದುವರೆಗೆ ಕರ್ನಾಟಕದಲ್ಲಿ ಸುಮಾರು 1 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಹೆಚ್ಚಳ ಪರಿಣಾಮ ಇವಿ ವಾಹನಗಳ ಸಂಖ್ಯೆಯು ನಿಧಾನವಾಗಿ ಏರಿಕೆಯಾಗುತ್ತಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಎಲೆಕ್ಟ್ರಿಕ್ ವಾಹನಗಳ ಖರೀದಿದಾರರಿಗೆ ಮಾತ್ರವಲ್ಲದೆ ಹೊಸದಾಗಿ ಇವಿ ವಾಹನ ಉತ್ಪಾದನೆಗೆ ಪೂರಕವಾದ ಸ್ಟಾರ್ಟ್‌ಅಪ್ ಕಂಪನಿಗಳಿಗೂ ರಾಜ್ಯ ಸರ್ಕಾರವು ಹಲವಾರು ಸಬ್ಸಡಿ ಯೋಜನೆಗಳನ್ನು ಜಾರಿಗೆ ತಂದಿದ್ದು, ಹೊಸ ಯೋಜನೆಗಳಿಂದಾಗಿ ಕರ್ನಾಟಕದಲ್ಲಿ ಇದೀಗ 45ಕ್ಕೂ ಹೆಚ್ಚು ಇವಿ ವಾಹನಗಳಿಗೆ ಸಂಬಂಧಿಸಿದ ಸ್ಟಾರ್ಟ್ಅಪ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ರಾಜ್ಯಗಳ ಮಟ್ಟದಲ್ಲಿ ಎಲೆಕ್ಟ್ರಿಕ್ ವಾಹನ ನೀತಿಯನ್ನು ಅಳವಡಿಸಿಕೊಂಡ ಮೊದಲ ರಾಜ್ಯ ಎಂಬ ಹೆಗ್ಗಳಿಕೆ ಹೊಂದಿರುವ ಕರ್ನಾಟಕದಲ್ಲಿ ಪ್ರಮುಖ ಇವಿ ವಾಹನ ತಯಾರಕ ಕಂಪನಿಗಳು ಉತ್ಪಾದನೆಯನ್ನು ಕೈಗೊಳ್ಳುತ್ತಿದ್ದು, ಇವಿ ವಾಹನಗಳ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಬಳಕೆಯ ಚಾರ್ಜಿಂಗ್ ನಿಲ್ದಾಣಗಳನ್ನು ಸಹ ಹೆಚ್ಚಳ ಮಾಡಲಾಗುತ್ತಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಈ ಮೊದಲು ರಾಜಧಾನಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿದ್ದ ಇವಿ ವಾಹನ ಬಳಕೆಯು ಇದೀಗ ಪ್ರಮುಖ ಜಿಲ್ಲಾ ಕೇಂದ್ರಗಳಲ್ಲೂ ಕೂಡಾ ಹೆಚ್ಚುತ್ತಿದ್ದು, ಇವಿ ವಾಹನಗಳಿಗೆ ಪೂರಕವಾಗಿ ರಾಜ್ಯ ಸರ್ಕಾರವು ಹೆಚ್ಚಿನ ಸಂಖ್ಯೆಯಲ್ಲಿ ಚಾರ್ಜಿಂಗ್ ನಿಲ್ದಾಣಗಳ ಆರಂಭಿಸುತ್ತಿದೆ.

ಮಾರುಕಟ್ಟೆ ಅಧ್ಯಯನ: 2030ರ ವೇಳಗೆ ಅಚ್ಚರಿ ಮೂಡಿಸಲಿದೆ ಇವಿ ವಾಹನಗಳ ಅಳವಡಿಕೆ

ಇವಿ ವಾಹನಗಳ ನೋಂದಣಿಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳು ಮೊದಲ ಸ್ಥಾನದಲ್ಲಿದ್ದು, ತದನಂತರ ಎಲೆಕ್ಟ್ರಿಕ್ ಕಾರುಗಳು ಮತ್ತು ತ್ರಿ-ಚಕ್ರ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಬೇಡಿಕೆ ಹೊಂದಿದ್ದು, ಮಾಹಿತಿಗಳ ಪ್ರಕಾರ ದೇಶಾದ್ಯಂತ ಇದುವರೆಗೆ ಸುಮಾರು 13 ಲಕ್ಷಕ್ಕೂ ಹೆಚ್ಚು ಇವಿ ವಾಹನಗಳು ನೋಂದಣಿಯಾಗಿವೆ.

Article Published On: Wednesday, July 27, 2022, 8:45 [IST]
English summary
Electric two wheeler sales in india grow by 78 percent study by redseer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+