ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಆಸ್ಟ್ರಿಯಾದ ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಕೆಟಿಎಂ(KTM) ತನ್ನ ಬಹುನಿರೀಕ್ಷಿತ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ ಆರ್‌ಸಿ 390 (KTM RC 390) ಬೈಕ್ ಹಲವಾರು ಹೊಸ ನವೀಕರಣಗಳನು ಪಡೆದುಕೊಂಡಿವೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಕೆಟಿಎಂ ಇಂಡಿಯಾ ತನ್ನ ವೆಬ್‌ಸೈಟ್‌ನಲ್ಲಿ 2022ರ ಆರ್‌ಸಿ 390 ಬೈಕ್ ಬಿಡುಗಡೆಗೆ ಮುಂಚಿತವಾಗಿ ಪಟ್ಟಿ ಮಾಡಿದೆ. ಇಂಡಿಯಾ-ಸ್ಪೆಕ್ ಮಾಡೆಲ್ ಸ್ವೀಕರಿಸುವ ಎಲ್ಲಾ ವೈಶಿಷ್ಟ್ಯಗಳನ್ನು ಕಂಪನಿಯು ಪಟ್ಟಿ ಮಾಡಿದೆ. ಇನ್ನು ಈ ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಬಹಿರಂಗಪಡಿಸಿದೆ. ಆದರೆ ಅಧಿಕೃತ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿಲ್ಲ, ಆದರೆ ಈ ಹೊಸ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ಈ ತಿಂಗಳಲ್ಲಿ ಅಥವಾ ಮುಂದಿನ ತಿಂಗಳಿನಲ್ಲಿ ಬಿಡುಗಡೆಯಾಗಬಹುದು ಎಂದು ನಿರೀಕ್ಷಿಸುತ್ತೇವೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಹೊಸ ಕೆಟಿಎಂ ಆರ್‌ಸಿ 390 ಬೈಕ್ ಕಳೆದ ವರ್ಷ ಅಂತರರಾಷ್ತ್ರೀಯ ಮಾರುಕಟ್ಟೆಗಳನ್ನು ಪ್ರವೇಶಿಸಿದೆ. ಭಾರತದಲ್ಲಿನ ಅಭಿಮಾನಿಗಳು ಈ ಬೈಕ್ ಬಿಡುಗಡೆಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಹೊಸ ಕೆಟಿಎಂ ಆರ್‌ಸಿ 390 ಸೂಪರ್‌ಸ್ಪೋರ್ಟ್ ಬೈಕ್ ವಿಶೇಷತೆಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ವಿನ್ಯಾಸ

ಹೊಸ ಕೆಟಿಎಂ ಆರ್‌ಸಿ 390 ಬೈಕ್ ಹಿಂದಿನ ಮಾದರಿಗಿಂತ ಹೆಚ್ಚು ತೀಕ್ಷ್ಣವಾದ ವಿನ್ಯಾಸವನ್ನು ಹೊಂದಿದೆ. ಮುಂಭಾಗದಲ್ಲಿ, ನಾವು ಫೇರಿಂಗ್-ಮೌಂಟೆಡ್ ಟರ್ನ್-ಇಂಡಿಕೇಟರ್‌ಗಳ ಜೊತೆಗೆ ಹೊಸ ಹೆಡ್‌ಲ್ಯಾಂಪ್ ವಿನ್ಯಾಸವನ್ನು ನೋಡುತ್ತೇವೆ. ಬೈಕು ಹೊಸ ಮುಂಭಾಗದ ಫೇರಿಂಗ್ ಅನ್ನು ಪಡೆಯುತ್ತದೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಜೊತೆಗೆ ವಿಭಿನ್ನ ಇಂಧನ ಟ್ಯಾಂಕ್ ಅನ್ನು ಹೊಂದಿದೆ. ಮೋಟಾರ್‌ಸೈಕಲ್ ಹೊಸ ಸ್ಪ್ಲಿಟ್-ಸೀಟ್ ಸೆಟಪ್ ಅನ್ನು ಸಹ ಪಡೆಯುತ್ತದೆ, ಆದರೆ 17-ಇಂಚಿನ ಅಲಾಯ್ ವ್ಹೀಲ್ ಗಳು ಹೊಸ ವಿನ್ಯಾಸವನ್ನು ಹೊಂದಿವೆ ಮತ್ತು ಮೊದಲಿಗಿಂತ ಹಗುರವಾಗಿರುತ್ತವೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಎಂಜಿನ್

ಹೊಸ ಕೆಟಿಎಂ ಆರ್‌ಸಿ 390 ಬೈಕ್ ಅದೇ 373.2 ಸಿಸಿ, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್, ಫ್ಯೂಯಲ್-ಇಂಜೆಕ್ಟ್ ಎಂಜಿನ್ ಹೊಂದಿರುತ್ತದೆ. ಈ ಎಂಜಿನ್ 43.5 ಬಿಹೆಚ್‍ಪಿ ಪವರ್ ಮತ್ತು 37 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ. ಇದರೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತದೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಸಸ್ಪೆಂಕ್ಷನ್

ಹೊಸ ಕೆಟಿಎಂ ಆರ್‌ಸಿ 390 ಬೈಕಿನ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದರ ಮುಂಭಾಗದಲ್ಲಿ ಫೋರ್ಕ್‌ಗೆ ಹೊಂದಾಣಿಕೆ ಮಾಡಬಹುದಾದ ಕಂಪ್ರೆಷನ್ ಮತ್ತು ರಿಬೌಂಡ್ ಡ್ಯಾಂಪಿಂಗ್ ಅನ್ನು ಒಳಗೊಂಡಿದೆ.ಇನ್ನು ಹಿಂಭಾಗದಲ್ಲಿ ಪ್ರಿ-ಲೋಡ್ ಹೊಂದಾಣಿಕೆಯ ಸೆಟಪ್ ಅನ್ನು ಹೊಂದಿರುತ್ತದೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಬ್ರೇಕಿಂಗ್ ಸಿಸ್ಟಂ

ಇದರೊಂದಿಗೆ ಪ್ರಮುಖವಾಗಿ ಈ ಕೆಟಿಎಂ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗ 320 ಎಂಎಂ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ. ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಬಾಷ್ ಎಬಿಎಸ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡುತ್ತದೆ. ಇದು ಕಾರ್ನರ್ ಗಳಲ್ಲಿ ಅಥವಾ ಹೆಚ್ಚಿನ ವೇಗದಲ್ಲಿ ಬ್ರೇಕ್ ಮಾಡುವಾಗ ಅತ್ಯುತ್ತಮ ಸುರಕ್ಷತೆಯನ್ನು ಖಚಿತಪಡಿಸುತ್ತದೆ

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಫೀಚರ್ಸ್

ಹೊಸ ಕೆಟಿಎಂ ಆರ್‌ಸಿ 390 ಬೈಕಿನಲ್ಲಿ ಟ್ರಾಕ್ಷನ್ ಕಂಟ್ರೋಲ್, ಕಾರ್ನರ್ ಮಾಡುವ ABS (ಡ್ಯುಯಲ್-ಚಾನೆಲ್, ಹೊಂದಾಣಿಕೆ) ಮತ್ತು ಹೊಂದಾಣಿಕೆ ಮಾಡಬಹುದಾದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳಂತಹ ಕೆಲವು ಹೊಸ ವೈಶಿಷ್ಟ್ಯಗಳನ್ನು ಮೋಟಾರ್‌ಸೈಕಲ್ ಪಡೆದುಕೊಳ್ಳಲು ನಾವು ನಿರೀಕ್ಷಿಸುತ್ತೇವೆ. ಹೆಡ್‌ಲ್ಯಾಂಪ್ ಅನ್ನು ಈಗ ಆಲ್-ಎಲ್‌ಇಡಿ ಯುನಿಟ್ ಆಗಿ ಅಪ್‌ಗ್ರೇಡ್ ಮಾಡಲಾಗುತ್ತದೆ, ಆದರೆ ಟರ್ನ್ ಇಂಡಿಕೇಟರ್‌ಗಳು ಮತ್ತು ಟೈಲ್‌ಲೈಟ್ ಈಗಾಗಲೇ ಎಲ್‌ಇಡಿ ಯುನಿಟ್ ಗಳಾಗಿದೆ,

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

TFT ಇನ್ಸ್ ಟ್ರೂಮೆಂಟ್ ಕ್ಲಸ್ಟರ್ (ಬ್ಲೂಟೂತ್-ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್ ಸಂಪರ್ಕದೊಂದಿಗೆ) ಬದಲಾಗದೆ ಮುಂದುವರಿಯುತ್ತದೆ. ವರದಿಗಳ ಪ್ರಕಾರ, ಇಂಟರ್ನ್ಯಾಷನಲ್ ಆವೃತ್ತಿಯಂತೆಯೇ ಹೊಂದಾಣಿಕೆ ಮಾಡಬಹುದಾದ ಮುಂಭಾಗ ಸಸ್ಪೆಂಕ್ಷನ್ ಕೂಡ ಲಭ್ಯವಿರಬಹುದು.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಇದರೊಂದಿಗೆ ಕೆಟಿಎಂ ತನ್ನ 2022ರ 390 ಅಡ್ವೆಂಚರ್ ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಹೊಸ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಇತ್ತೀಚೆಗೆ ಯುಎಸ್ ಮತ್ತು ಉತ್ತರ ಅಮೆರಿಕಾದ ಮಾರುಕಟ್ಟೆಗಳಲ್ಲಿ ಬಿಡುಗದೆಗೊಳಿಸಲಾಗಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಮೊದಲ ಬ್ಯಾಚ್ ಭಾರತದಾದ್ಯಂತ ಡೀಲರ್ ಶೋರೂಮ್‌ಗಳಿಗೆ ಆಗಮಿಸಲು ಪ್ರಾರಂಭಿಸಿದೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಪ್ರಪಂಚದಾದ್ಯಂತದ ಕೆಟಿಎಂ ಸರಣಿಯಿಂದ 390 ಸರಣಿಯವರೆಗಿನ ಮಾದರಿಗಳನ್ನು ಭಾರತದಲ್ಲಿ ಬಜಾಜ್ ಆಟೋ ತನ್ನ ಚಕನ್-ಆಧಾರಿತ ಘಟಕದಲ್ಲಿ ತಯಾರಿಸುತ್ತದೆ. ಆದ್ದರಿಂದ ಯುಎಸ್ ನಲ್ಲಿ ಬಿಡುಗಡೆ ಮಾಡಲಾದ ಮಾದರಿಯು ಭಾರತದಿಂದ ರಫ್ತು ಮಾಡುವ ಸಾಧ್ಯತೆಯಿದೆ. 2022ರ ಕೆಟಿಎಂ 390 ಅಡ್ವೆಂಚರ್ ಬೈಕ್ ಸೂಕ್ಷ್ಮ ಮತ್ತು ಗಮನಿಸಬಹುದಾದ ನವೀಕರಣಗಳೊಂದಿಗೆ ಬರುತ್ತದೆ. ಈ ಅಡ್ವೆಂಚರ್ ಟೂರರ್‌ನಲ್ಲಿನ ದೃಶ್ಯ ನವೀಕರಣಗಳು ಡಾಕರ್ ವಿಜೇತ KTM ಫ್ಯಾಕ್ಟರಿ ರ್ಯಾಲಿ ಯಂತ್ರಗಳಿಗೆ ಅನುಗುಣವಾಗಿರುತ್ತವೆ. ಇದರ ಒಟ್ಟಾರೆ ವಿನ್ಯಾಸವು ಒಂದೇ ಆಗಿರುತ್ತದೆ, ಇದು ತಿಳಿದಿರುವ ಅದೇ ಒರಟಾದ ಶೈಲಿಯನ್ನು ಹೊಂದಿದೆ.

ಬಿಡುಗಡೆಯಾಗಲಿರುವ ಹೊಸ ಕೆಟಿಎಂ ಆರ್‌ಸಿ 390 ಬೈಕ್ ವಿಶೇಷತೆಗಳು

ಹೊಸ ವಿನ್ಯಾಸದ ನ್ಯೂ ಜನರೇಷನ್ ಆರ್‌ಸಿ ಬೈಕ್‌ಗಳು ಪ್ರಸ್ತುತ ತಲೆಮಾರಿಗೆ ಹೋಲಿಸಿದರೆ ಸಂಪೂರ್ಣವಾಗಿ ವಿಭಿನ್ನ ಶೈಲಿಯನ್ನು ಹೊಂದಿದೆ. ಈ ನ್ಯೂ ಜನರೇಷನ್ ಬೈಕ್‌ಗಳು ಮಾರಾಟದಲ್ಲಿ ಕೆಟಿಎಂ ಕಂಪನಿಗೆ ಹೆಚ್ಚಿನ ಕೊಡುಗೆಯನ್ನು ನೀಡಬಹುದು. ಇದರೊಂದಿಗೆ ನ್ಯೂ ಜನರೇಷನ್ ಕೆಟಿಎಂ ಆರ್‌ಸಿ 390 ಬೈಕ್ ಕೂಡ ಹೊಸ ಬದಲಾವಣೆಗಳೊಂದಿಗೆ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ.

More from DriveSpark

Article Published On: Wednesday, March 9, 2022, 20:14 [IST]
English summary
Find here some top highlights of upcoming ktm rc 390 details
Read more on ಕೆಟಿಎಂ ktm
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+