ಇಂಧನ ಬೆಲೆ ಏರಿಕೆ ಚಿಂತೆ ಬಿಡಿ: ಇಲ್ಲಿದೆ ಅತಿ ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು

ಜಾಗತಿಕವಾಗಿ ಎಲೆಕ್ಟ್ರಿಕ್ ವಾಹನಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಹೆಚ್ಚಿನ ಜನರು ನಿಧಾನವಾಗಿ ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಹಲವಾರು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿ ಪಡಿಸುತ್ತಿದೆ. ಇದರ ನಡುವೆ ಹೋಂಡಾ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕಡೆ ಗಮನಹರಿಸುತ್ತಿದೆ.

ಭಾರತದಲ್ಲಿ ಇಂಧನ ಬೆಲೆ ದುಬಾರಿಯಾಗಿರುವುದರಿಂದ ಹೆಚ್ಚಿನ ಜನರು ಎಲೆಕ್ಟ್ರಿಕ್ ವಾಹನಗಳ ಕಡೆ ಮುಖ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ, ಹಲವು ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದೆ. ಬಹುತೇಕ ಜನಪ್ರಿಯ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಅಭಿವೃದ್ದಿಪಡಿಸುವಲ್ಲಿ ನಿರತರಾಗಿದ್ದಾರೆ. ಇದರ ನಡುವೆ ಹಲವಾರು ಹೊಸ ಎಲೆಕ್ಟ್ರಿಕ್ ವಾಹನ ತಯಾರಕ ಕಂಪನಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಅತಿ ಹೆಚ್ಚು ಮೈಲೇಜ್ ನೀಡುವ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬಗ್ಗೆ ಮಾಹಿತಿ ಇಲ್ಲಿದೆ.

ಅಲ್ಟ್ರಾವೈಲೆಟ್ ಎಫ್77
ಬೆಂಗಳೂರು ಮೂಲದ ಅಲ್ಟ್ರಾವೈಲೆಟ್ ಆಟೋಮೋಟಿವ್ ತನ್ನ ಹೊಸ ಎಫ್77 ಎಲೆಕ್ಟ್ರಿಕ್ ಬೈಕ್ ಅನ್ನು ಎರಡೂ ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಅಲ್ಟ್ರಾವೈಲೆಟ್ ಇತ್ತೀಚೆಗೆ ಕಳೆದ ತಿಂಗಳು ತನ್ನ ಬ್ಯಾಟರಿ ಪ್ಯಾಕ್ ಅನಾವರಣಗೊಳಿಸಿದ ವೇಳೆ ಈ ಎಫ್77 ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಪ್ಯಾಕ್ ಕುರಿತು ವಿವರಗಳನ್ನು ಬಹಿರಂಗಪಡಿಸಿತು. ಪ್ರೊಡಕ್ಷನ್-ಸ್ಪೆಕ್ ಅಲ್ಟ್ರಾವೈಲೆಟ್ F77 ಒಂದು ದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ, ಇದು ಕೆಲವು ವರ್ಷಗಳ ಹಿಂದೆ ಬಹಿರಂಗಪಡಿಸಿದ ಮೂಲಮಾದರಿಯೊಂದಿಗೆ ಹೋಲಿಸಿದರೆ ದಟ್ಟವಾದ 21,700-ಸೆಲ್ ಸೆಟಪ್ ಅನ್ನು ಹೊಂದಿದೆ.

ಅಲ್ಟ್ರಾವೈಲೆಟ್‌ನ ಈ ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಐಡಿಸಿ ಅಡಿಯಲ್ಲಿ ಪ್ರತಿ ಚಾರ್ಜ್‌ಗೆ 307 ಕಿಮೀ ರೇಂಜ್ ಅನ್ನು ನೀಡುತ್ತದೆ. ಇದು ಇದು ಗರಿಷ್ಠ 147 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಈ ಬೈಕಿನಲ್ಲಿ ಸ್ನಾಜಿ ಅಲಾಯ್ ವ್ಹೀಲ್ ಗಳು ಮತ್ತು ಸ್ಪ್ಲಿಟ್ ಎಲ್ಇಡಿ ಟೈಲ್‌ಲೈಟ್‌ಗಳನ್ನು ಹೊಂದಿವೆ. ಇನ್ನು ಏರ್‌ಸ್ಟ್ರೈಕ್ (ಬಿಳಿ ಮತ್ತು ಕಪ್ಪು), ಶ್ಯಾಡೋ (ಕಪ್ಪು) ಮತ್ತು ಲೇಸರ್ (ಕೆಂಪು ಮತ್ತು ಕಪ್ಪು) ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ.

ಕೊಮಾಕಿ ರೇಂಜರ್
ಕೊಮಾಕಿ ರೇಂಜರ್ 3.6kWh ಬ್ಯಾಟರಿಯೊಂದಿಗೆ ಕ್ರೂಸರ್ ಶೈಲಿಯ ಇ-ಬೈಕ್ ಆಗಿದ್ದು ಅದು IDC ಅಡಿಯಲ್ಲಿ 220 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದು 4kW BLDC ಮೋಟಾರ್ ಮತ್ತು 80 ಕಿ.ಮೀ ಟಾಪ್ ಸ್ಪೀಡ್ ಅನ್ನು ಹೊಂದಿದೆ. ಇದು ರೇಂಜರ್ ಕೃತಕ ಧ್ವನಿಯನ್ನು ಉತ್ಪಾದಿಸುವ ಎಲ್ಇಡಿ ಲ್ಯಾಂಪ್ ಗಳು ಮತ್ತು ಸ್ಪೀಕರ್ ಗಳೊಂದಿಗೆ ಫಾಕ್ಸ್ ಎಕ್ಸಾಸ್ಟ್ ಸಿಸ್ಟಂ ಅನ್ನು ಹೊಂದಿದೆ, ಈ ಕೊಮಾಕಿ ರೇಂಜರ್ ಬೈಕ್ ಬೆಲೆಯು ರೂ.1.85 ಲಕ್ಷವಾಗಿದೆ.

ಒಬೆನ್ ರೋರ್
ಒಬೆನ್ ರೋರ್ ಪರೀಕ್ಷಾ ಪರಿಸ್ಥಿತಿಗಳಲ್ಲಿ 200 ಕಿ.ಮೀ ರೇಂಜ್ ಅನ್ನು ನೀಡುತ್ತದೆ. ಇದು ನೈಜ ವರ್ಲ್ಡ್ ನಲ್ಲಿ ಸುಮಾರು 150 ಕಿಮೀ ಎಂದು ಅನುವಾದಿಸುತ್ತದೆ. ಈ ಒಬೆನ್ ರೋರ್ ಎಲೆಕ್ಟ್ರಿಕ್ ಮಾದರಿಯು 4.4 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಇದು ಪ್ರಸ್ತುತ ಭಾರತದ ಆಯ್ದ ರಾಜ್ಯಗಳಲ್ಲಿ ಲಭ್ಯವಿದೆ. 4kW ಲೀಥಿಯಂ ಅಯಾನ್ ಬ್ಯಾಟರಿ ಪ್ಯಾಕ್ ಪೂರ್ತಿಯಾಗಿ ಚಾರ್ಜ್ ಮಾಡಲು ಗರಿಷ್ಠ 2 ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳಲಿದ್ದು, ಪ್ರತಿ ಗಂಟೆಗೆ ಹೊಸ ಬೈಕ್ 100 ಕಿ.ಮೀ ಟಾಪ್ ಸ್ಪೀಡ್ ಮೂಲಕ ಮೈಲೇಜ್ ಮತ್ತು ಕಾರ್ಯಕ್ಷಮತೆ ಎರಡರಲ್ಲೂ ಗಮನಸೆಳೆಯುತ್ತದೆ.

ಓಲಾ ಎಸ್1 ಪ್ರೊ
ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗಷ್ಟೇ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡಿತ್ತು. ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ಒಎಸ್ 2.0 ನವೀಕಣದ ಸಂದರ್ಭದಲ್ಲಿ ಎಸ್1 ಪ್ರೊ ಮಾದರಿಯಲ್ಲಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳನ್ನು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಗ್ರಾಹಕರ ಬಳಕೆಗೆ ಅನುಮತಿ ನೀಡಿತ್ತು.

ಈ ಓಲಾ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ 4 kWh ಬ್ಯಾಟರಿಯನ್ನು ಹೊಂದಿದೆ ಮತ್ತು IDC ಅಡಿಯಲ್ಲಿ 181 ಕಿಮೀ ರೇಂಜ್ ಅನ್ನು ನೀಡುತ್ತದೆ. ಈ ನೈಜ-ಪ್ರಪಂಚದ ಪರೀಕ್ಷೆಗಳಲ್ಲಿ, ಇದು ಒಂದೇ ಚಾರ್ಜ್‌ನಲ್ಲಿ ಸ್ಪೋರ್ಟ್ ಮೋಡ್‌ನಲ್ಲಿ 102 ಕಿಮೀ ಮತ್ತು ಸಾಮಾನ್ಯ ಮೋಡ್‌ನಲ್ಲಿ 127 ಕಿಮೀ ರೇಂಜ್ ಅನ್ನು ನೀಡುತ್ತದೆ. ಇಕೋ ಮೋಡ್ ಅನ್ನು ಸಹ ತಂದಿದೆ, ಇದು "ಟ್ರೂ ರೇಂಜ್" ಅನ್ನು 170 ಕಿ.ಮೀ.ಗೆ ಹೆಚ್ಚಿಸುತ್ತದೆ.

Most Read Articles

Kannada
English summary
Long range electric two wheelers in inida details
Story first published: Saturday, December 31, 2022, 13:39 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X