ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಕಳೆದ ತಿಂಗಳಷ್ಟೇ ಇಟಾಲಿಯನ್ ಬ್ರಾಂಡ್ ಮೋಟೋ ಮೊರಿನಿ, ಆದಿಶ್ವರ್ ಆಟೋ ರೈಡ್ ಇಂಡಿಯಾ (AARI) ಸಹಭಾಗಿತ್ವದಲ್ಲಿ ಈ ವರ್ಷ ತನ್ನ ಭಾರತ ಬಿಡುಗಡೆಯನ್ನು ಘೋಷಿಸಿತ್ತು. ಇದೀಗ ಕಂಪನಿಯು ಭಾರತದಲ್ಲಿ ನಾಲ್ಕು 650cc ಮೋಟಾರ್‌ಸೈಕಲ್‌ಗಳನ್ನು ಬಿಡುಗಡೆ ಮಾಡುವುದಾಗಿ ದೃಢಪಡಿಸಿದೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಇದರಲ್ಲಿ X-ಕೇಪ್ 650, X-ಕೇಪ್ 650X, Seiemmezzo 6½ ರೆಟ್ರೋ ಸ್ಟ್ರೀಟ್ ಮತ್ತು ಸ್ಕ್ರ್ಯಾಂಬ್ಲರ್ ಬೈಕ್‌ಗಳು ಸೇರಿವೆ. ಈ ಮಾದರಿಗಳನ್ನು ಪಾಲುದಾರಿಕೆಯ ಅಡಿಯಲ್ಲಿ ಆದೀಶ್ವರ್ ಆಟೋ ದೇಶದಲ್ಲಿ ಮೋಟೋ ಮೊರಿನಿಯ ಪ್ರೀಮಿಯಂ ಶ್ರೇಣಿಯ ಮೋಟಾರ್‌ಸೈಕಲ್‌ಗಳನ್ನು ತಯಾರಿಸಿ ವಿತರಿಸಲಿದೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಎಕ್ಸ್-ಕೇಪ್ ಲೈನ್-ಅಪ್ ಮೋಟೋ ಮೊರಿನಿಯ ಅಡ್ವೆಂಚರ್ ಮೋಟಾರ್‌ಸೈಕಲ್‌ಗಳನ್ನು ಸಹ ಒಳಗೊಂಡಿದೆ. X-ಕೇಪ್ 650 ಮತ್ತು 650X ಎರಡೂ ಒಂದೇ 649cc, ಲಿಕ್ವಿಡ್-ಕೂಲ್ಡ್, ಇನ್‌ಲೈನ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿವೆ. ಇದು 6-ಸ್ಪೀಡ್ ಗೇರ್‌ಬಾಕ್ಸ್ ಮೂಲಕ 8,250rpm ನಲ್ಲಿ 60hp ಮತ್ತು 7,000rpm ನಲ್ಲಿ 54Nm ಟಾರ್ಕ್ ಅನ್ನು ಹೊರಹಾಕುತ್ತವೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಈ ಎರಡೂ ಅಡ್ವೆಂಚರ್ ಬೈಕ್‌ಗಳು ಮುಂಭಾಗದಲ್ಲಿ ಸಂಪೂರ್ಣವಾಗಿ ಹೊಂದಾಣಿಕೆ ಮಾಡಬಹುದಾದ 50mm Marzocchi USD ಫೋರ್ಕ್‌ಗಳನ್ನು ಮತ್ತು ಹಿಂಬದಿಯಲ್ಲಿ ಪೂರ್ವ ಲೋಡ್ ಮತ್ತು ಡ್ಯಾಂಪಿಂಗ್ ಹೊಂದಾಣಿಕೆ ಮಾಡಬಹುದಾದ KYB ಮೊನೊಶಾಕ್ ಅನ್ನು ಪಡೆದುಕೊಂಡಿವೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಎರಡೂ 7-ಇಂಚಿನ TFT ಡಿಸ್ಪ್ಲೇ, ಎಲ್ಇಡಿ ಹೆಡ್ಲೈಟ್, ಪಿರೆಲ್ಲಿ ಸ್ಕಾರ್ಪಿಯನ್ ರ್ಯಾಲಿ STR ಟೈರ್‌ಗಳು, ಡ್ಯುಯಲ್ ಚಾನೆಲ್ ABS ನೊಂದಿಗೆ ಬ್ರೆಂಬೋ ಬ್ರೇಕ್‌ಗಳು, ದೊಡ್ಡ 18-ಲೀಟರ್ ಇಂಧನ ಟ್ಯಾಂಕ್ ಮತ್ತು 175 mm ಗ್ರೌಂಡ್ ಕ್ಲಿಯರೆನ್ಸ್ ಅನ್ನು ಸಹ ಪಡೆಯುತ್ತವೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಈ ಬೈಕ್‌ಗಳ ಮುಂಭಾಗದಲ್ಲಿ 110/80 - 19 ಮತ್ತು ಹಿಂಭಾಗದಲ್ಲಿ 150/70 - 17 ಟೈರ್‌ಗಳನ್ನು ಅಳವಡಿಸಲಾಗಿದೆ. ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ ಡ್ಯುಯಲ್ 298 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ 255 ಎಂಎಂ ಡಿಸ್ಕ್ ಬ್ರೇಕ್ ನೀಡಲಾಗಿದೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಎಕ್ಸ್-ಕೇಪ್ 650 ಮತ್ತು ಎಕ್ಸ್-ಕೇಪ್ 650 ಎಕ್ಸ್ ನಡುವಿನ ಪ್ರಮುಖ ವ್ಯತ್ಯಾಸವೆಂದರೆ ಎಕ್ಸ್-ಕೇಪ್ 650-810 ಎಂಎಂ ಸೀಟ್ ಎತ್ತರದೊಂದಿಗೆ ಅಲಾಯ್ ವೀಲ್‌ಗಳನ್ನು ಪಡೆಯುತ್ತದೆ. ಎಕ್ಸ್-ಕೇಪ್ 650 ಎಕ್ಸ್ ವೈರ್-ಸ್ಪೋಕ್ಡ್ ವೀಲ್‌ಗಳನ್ನು 835 ಎಂಎಂ ಸೀಟ್ ಎತ್ತರದೊಂದಿಗೆ ಪಡೆಯುತ್ತದೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಭಾರತದಲ್ಲಿ ಬಿಡುಗಡೆಯಾದ ನಂತರ ಎಕ್ಸ್-ಕೇಪ್ ಹೊಸ ಕವಾಸಕಿ ವರ್ಸಿಸ್ 650, ಟ್ರಯಂಫ್ ಟೈಗರ್ ಸ್ಪೋರ್ಟ್ 660 ಮತ್ತು ಸುಜುಕಿ ವಿ-ಸ್ಟ್ರೋಮ್ 650 ಎಕ್ಸ್‌ಟಿಯನ್ನು ಎದುರಿಸಲಿದೆ. Moto Morini's Seiemmezzo 6½ ಶ್ರೇಣಿಯು ರೆಟ್ರೊ ಸ್ಟ್ರೀಟ್ ಮತ್ತು ಸ್ಕ್ರಾಂಬ್ಲರ್ ಮಾದರಿಗಳನ್ನು ಒಳಗೊಂಡಿದೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

X-ಕೇಪ್‌ಗಳಂತೆ, ಈ ಮಾದರಿಗಳು 649cc, ಲಿಕ್ವಿಡ್-ಕೂಲ್ಡ್, ಇನ್‌ಲೈನ್ ಟ್ವಿನ್ ಎಂಜಿನ್‌ನಿಂದ ಚಾಲಿತವಾಗಿವೆ. ಆದರೆ ಇದು 55 bhp ಮತ್ತು 54 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಇದು X-ಕೇಪ್ ಮಾದರಿಗಳಿಗಿಂತ ಕಡಿಮೆಯಾಗಿದೆ. ಎರಡೂ Seiemmezzo ಮಾದರಿಗಳು ಸುತ್ತಿನ LED ಹೆಡ್‌ಲೈಟ್, 5-ಇಂಚಿನ TFT ಸ್ಕ್ರೀನ್, 43mm USD ಫೋರ್ಕ್‌ಗಳು, ಹಿಂಭಾಗದಲ್ಲಿ ಮೊನೊಶಾಕ್, 170mm ಗ್ರೌಂಡ್ ಕ್ಲಿಯರೆನ್ಸ್, 15.5L ಇಂಧನ ಟ್ಯಾಂಕ್, ಡ್ಯುಯಲ್-ಚಾನೆಲ್ ABS ಮತ್ತು 795mm ಸೀಟ್ ಎತ್ತರವನ್ನು ಪಡೆಯುತ್ತವೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಇವೆರಡರ ನಡುವಿನ ಒಂದೇ ವ್ಯತ್ಯಾಸವೆಂದರೆ ರೆಟ್ರೊ ಸ್ಟ್ರೀಟ್ ಮಾದರಿಯು ಮಿಶ್ರಲೋಹದ ವೀಲ್‌ಗಳ ಬದಲಿಗೆ ವೈರ್-ಸ್ಪೋಕ್ಡ್ ಚಕ್ರಗಳನ್ನು ಪಡೆಯುತ್ತದೆ. ಮೋಟೋ ಮೊರಿನಿ ಮಾದರಿಗಳನ್ನು ದೃಢಪಡಿಸಿದೆ, ಆದರೆ ಬಿಡುಗಡೆಯ ದಿನಾಂಕದ ಬಗ್ಗೆ ಇನ್ನೂ ಘೋಷಿಸಲಾಗಿಲ್ಲ. ಮುಂಬರುವ ವಾರಗಳಲ್ಲಿ ಕಂಪನಿಯು ಬಿಡುಗಡೆಯ ದಿನಾಂಕವನ್ನು ಪ್ರಕಟಿಸಬಹುದು.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

Moto Morini ಹೇಳುವಂತೆ ಅದರ ಮೋಟಾರ್‌ಸೈಕಲ್‌ಗಳನ್ನು ಇಟಲಿಯಲ್ಲಿ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಲಾಗಿದೆ. ಉತ್ತಮ ವಾಹನ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ಯುರೋಪಿಯನ್ ಉತ್ಪಾದನಾ ಮಾನದಂಡಗಳನ್ನು ಅನುಸರಿಸುತ್ತದೆ. 1937 ರಲ್ಲಿ ಅಲ್ಫೊನ್ಸೊ ಮೊರಿನಿ ಸ್ಥಾಪಿಸಿದ ಮೋಟೋ ಮೊರಿನಿ ಇಟಾಲಿಯನ್ ಮೋಟಾರ್‌ಸೈಕಲ್ ತಯಾರಕರಾಗಿದ್ದು, ವಿಶ್ವಾಸಾರ್ಹ, ನಾವೀನ್ಯತೆ ಮತ್ತು ಕಾರ್ಯಕ್ಷಮತೆ-ಆಧಾರಿತ ವಾಹನಗಳಿಗೆ ಹೆಸರುವಾಸಿಯಾಗಿದೆ ಎಂದು ಕಂಪನಿಯು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

ಮರು ಪ್ರವೇಶ ಘೋಶಿಸಿದ್ದ ಮೊರಿನಿ

ಹೈದರಾಬಾದ್ ಮೂಲದ ಆದಿಶ್ವರ್ ಆಟೋ ರೈಡ್ ಇಂಡಿಯಾ ಸಹಯೋಗದಲ್ಲಿ ನಾಲ್ಕು ವಾಹನಗಳನ್ನು ಬಿಡುಗಡೆ ಮಾಡುವ ಯೋಜನೆಯೊಂದಿಗೆ ಇಟಾಲಿಯನ್ ಸ್ಥಾಪಿತ ಮೋಟಾರ್‌ಸೈಕಲ್ ಬ್ರಾಂಡ್ ಮೋಟೋ ಮೊರಿನಿ ದೇಶೀಯ ಮಾರುಕಟ್ಟೆಯಲ್ಲಿ ತನ್ನ ಮರುಪ್ರವೇಶವನ್ನು ಘೋಷಿಸಿತ್ತು.

ಭಾರತದಲ್ಲಿ ನಾಲ್ಕು 650cc ಬೈಕ್‌ಗಳ ಬಿಡುಗಡೆಯನ್ನು ದೃಢಪಡಿಸಿದ ಮೋಟೋ ಮೊರಿನಿ

2013 ರಲ್ಲಿ ಈ ಐಕಾನಿಕ್ ಬೈಕ್ ಬ್ರ್ಯಾಂಡ್ ದೇಶದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸಲು ನಗರ ಮೂಲದ ವರ್ಡೆಂಚಿ ಮೋಟಾರ್‌ಸೈಕಲ್‌ಗಳೊಂದಿಗೆ ಪಾಲುದಾರಿಕೆ ಹೊಂದಿತ್ತು. Moto Morini, ಆದೀಶ್ವರ್ ಆಟೋ ರೈಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (AARI) ಕಳೆದ ನಾಲ್ಕು ವರ್ಷಗಳಲ್ಲಿ ಸಹಯೋಗ ಹೊಂದಿದೆ. AARI ಈಗಾಗಲೇ 2018 ರಿಂದ ಪ್ರೀಮಿಯಂ ಇಟಾಲಿಯನ್ ಮೋಟಾರ್‌ಸೈಕಲ್ ಬ್ರಾಂಡ್ ಬೆನೆಲ್ಲಿ ಹಾಗೂ ಹಂಗೇರಿಯನ್ ಟು ಸಹಯೋಗವನ್ನು ಘೋಷಿಸಿದೆ.

Most Read Articles

Kannada
English summary
Moto Morini has confirmed the launch of four 650cc bikes in India
Story first published: Friday, July 8, 2022, 13:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X