ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಹೊಸ ಎಸ್‍1 ಪ್ರೊ ಇವಿ ಸ್ಕೂಟರ್ ಮೇಲೆ ದಸರಾ ಮತ್ತು ದೀಪಾವಳಿ ಆಫರ್ ಘೋಷಣೆ ಮಾಡಿದ್ದು, ನಿಗದಿತ ಅವಧಿಯಲ್ಲಿ ಹೊಸ ಇವಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡುತ್ತಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಹಬ್ಬದ ಋತುಗಳಲ್ಲಿ ಹೊಸ ವಾಹನಗಳ ಖರೀದಿ ಪ್ರಕ್ರಿಯೆ ಹೆಚ್ಚುತ್ತಿರುವುದರಿಂದ ವಾಹನ ಉತ್ಪಾದನಾ ಕಂಪನಿಗಳು ವಿವಿಧ ಆಫರ್‌ಗಳೊಂದಿಗೆ ಗ್ರಾಹಕರನ್ನು ಸೆಳೆಯುತ್ತಿದ್ದು, ಓಲಾ ಎಲೆಕ್ಟ್ರಿಕ್ ಕಂಪನಿಯು ಕೂಡಾ ತನ್ನ ಹೊಸ ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯ ಮೇಲೆ ಹೆಚ್ಚಿನ ಮಟ್ಟದ ಆಫರ್ ಘೋಷಣೆಯೊಂದಿಗೆ ಭಾರೀ ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ದಸರಾ ಮತ್ತು ದೀಪಾವಳಿ ವಿಶೇಷವಾಗಿ ಓಲಾ ಎಲೆಕ್ಟ್ರಿಕ್ ಕಂಪನಿಯು ಅಕ್ಟೋಬರ್ 5ರ ಒಳಗಾಗಿ ಎಸ್‍1 ಪ್ರೊ ಖರೀದಿಗಾಗಿ ಬುಕಿಂಗ್ ಸಲ್ಲಿಸುವ ಗ್ರಾಹಕರಿಗಾಗಿ ರೂ. 10 ಸಾವಿರ ತನಕ ಕ್ಯಾಶ್‌ಬ್ಯಾಕ್ ಆಫರ್ ನೀಡಿದ್ದು, ನಿಗದಿತ ಅವಧಿಯ ಬುಕಿಂಗ್ ಮಾಡುವ ಗ್ರಾಹಕರಿಗೆ ಮಾತ್ರ ಹೊಸ ಆಫರ್ ಅನ್ವಯಿಸಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಇವಿ ಸ್ಕೂಟರ್ ಮಾದರಿಯು ಸದ್ಯ ಎಕ್ಸ್‌ಶೋರೂಂ ಪ್ರಕಾರ ರೂ. 1.40 ಲಕ್ಷ ಬೆಲೆ ಹೊಂದಿದ್ದು, ಅಕ್ಟೋಬರ್ 5ರ ಒಳಗಾಗಿ ಹೊಸ ಇವಿ ಸ್ಕೂಟರ್‌ಗೆ ಬುಕಿಂಗ್ ಸಲ್ಲಿಸುವ ಗ್ರಾಹಕರಿಗೆ ರೂ. 1.30 ಲಕ್ಷ ಬೆಲೆಯಲ್ಲಿ ಖರೀದಿಗೆ ಲಭ್ಯವಿರುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಇವಿ ಸ್ಕೂಟರ್‌ ಮೇಲೆ ಕೇವಲ ರಿಯಾಯಿತಿ ಮಾತ್ರವಲ್ಲದೆ ವಿಸ್ತೃತ ವಾರಂಟಿಯನ್ನೂ ಸಹ ನೀಡುತ್ತಿದ್ದು, 5 ವರ್ಷಗಳ ವಿಸ್ತೃತ ವಾರಂಟಿ ಪ್ಯಾಕ್‌ ಖರೀದಿಸುವ ಗ್ರಾಹಕರಿಗೆ ರೂ. 1,500 ರಿಯಾಯಿತಿ ನೀಡಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ವಿಸ್ತೃತ ವಾರಂಟಿಗಳು ಎಸ್1 ಮತ್ತು ಎಸ್1 ಪ್ರೊ ಎರಡೂ ಸ್ಕೂಟರ್‌ಗಳ ಮೇಲೂ ಅನ್ವಯಿಸಲಿದ್ದು, ಎಸ್1 ಪ್ರೊ ಮಾದರಿಗಾಗಿ ಮಾತ್ರ ಕ್ಯಾಶ್‌ಬ್ಯಾಕ್ ಆಫರ್ ನೀಡಲಾಗಿದೆ. ಇನ್ನುಳಿದಂತೆ ಹೊಸ ಇವಿ ಸ್ಕೂಟರ್‌ಗಳು ಎಂದಿನಂತೆ ಮಾರಾಟಗೊಳ್ಳಲಿದ್ದು, ಇವಿ ಸ್ಕೂಟರ್ ಖರೀದಿಗಾಗಿ ಅತಿ ಕಡಿಮೆ ಬಡ್ಡಿದರಗಳಲ್ಲಿ ಸಾಲಸೌಲಭ್ಯ ಒದಗಿಸುತ್ತಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಇನ್ನು ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಮೂಲಕ ಗ್ರಾಹಕರ ಆಯ್ಕೆಯಲ್ಲಿ ಅಗ್ರಸ್ಥಾನಕ್ಕೇರಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇತ್ತೀಚೆಗಷ್ಟೇ ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ನೀಡಿತ್ತು. ಇದೀಗ ಕಂಪನಿಯು ಮುಂಬರುವ ದೀಪಾವಳಿ ಹೊತ್ತಿಗೆ ಮೂವ್‌ ಒಎಸ್ 3.0(MoveOS 3) ಅಪ್‌ಡೇಟ್ ನೀಡುವುದಾಗಿ ಘೋಷಣೆ ಮಾಡಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಎಸ್1 ಪ್ರೊ ಮಾದರಿಯಲ್ಲಿ ಸದ್ಯ ಮೂವ್‌ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ತನ್ನ ಗ್ರಾಹಕರಿಗೆ ಗರಿಷ್ಠ ಫೀಚರ್ಸ್ ನೀಡುತ್ತಿದ್ದು, ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಮತ್ತಷ್ಟು ಹೊಸ ಫೀಚರ್ಸ್ ನೀಡಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಎಸ್1 ಪ್ರೊ ಸ್ಕೂಟರ್ ಬಿಡುಗಡೆ ಆರಂಭದಲ್ಲಿ ಕೆಲವೇ ಕೆಲವು ಫೀಚರ್ಸ್‌ಗಳನ್ನು ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್‌ ಒಎಸ್ 2.0 ಅಪ್‌ಡೇಟ್ ಮೂಲಕ ಕೆಲವು ಹೊಸ ಫೀಚರ್ಸ್‌ಗಳನ್ನು ಸೇರ್ಪಡೆ ಮಾಡಿತ್ತು. ಇದೀಗ ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಸ್ಕೂಟರ್ ಆರಂಭದಲ್ಲಿ ಘೋಷಣೆ ಮಾಡಲಾಗಿದ್ದ ಎಲ್ಲಾ ಫೀಚರ್ಸ್‌ಗಳನ್ನು ಒದಗಿಸುವ ಭರವಸೆ ನೀಡಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಓಲಾ ಎಲೆಕ್ಟ್ರಿಕ್ ಕಂಪನಿಯು ಮೂವ್ಒಎಸ್ 2.0 ನವೀಕಣದ ಸಂದರ್ಭದಲ್ಲಿ ಎಸ್1 ಪ್ರೊ ಮಾದರಿಯಲ್ಲಿ ಇಕೋ ಮೋಡ್, ಡಿಜಿಟಲ್ ಲಾಕ್ ಮತ್ತು ಅನ್‌ಲಾಕ್, ಮ್ಯೂಸಿಕ್ ಮತ್ತು ಕ್ರೂಸ್ ಕಂಟ್ರೊಲ್ ಆಯ್ಕೆಗಳನ್ನು ಸಾಫ್ಟ್‌ವೇರ್ ಅಪ್‌ಡೇಟ್ ಮೂಲಕ ಗ್ರಾಹಕರ ಬಳಕೆಗೆ ಅನುಮತಿ ನೀಡಿತ್ತು.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಇದೀಗ ಕಂಪನಿಯು ಮೂವ್‌ ಒಎಸ್ 3.0 ಅಪ್‌ಡೇಟ್ ಮೂಲಕ ಹಿಲ್ ಹೋಲ್ಡ್, ಪ್ರಾಕ್ಸಿಮಿಟಿ ಅನ್‌ಲಾಕ್, ಮೂಡ್ಸ್, ರೀಜೆನ್ ವಿ2, ಹೈಪರ್ ಚಾರ್ಜಿಂಗ್, ಕಾಲಿಂಗ್, ಕೀ ಶೇರಿಂಗ್ ಸೇರಿದಂತೆ ಹಲವು ಫೀಚರ್ಸ್ ಬಳಕೆಗೆ ಅವಕಾಶ ಸಿಗಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಮೂವ್ ಒಎಸ್ 2.0 ಸಾಫ್ಟ್‌ವೇರ್ ಅಪ್‌ಡೇಟ್ ಮುಖ್ಯವಾಗಿ ಬ್ಯಾಟರಿ ಡ್ರಾಪ್ ಅನ್ನು ಪರಿಹರಿಸಲಿದ್ದು, ಇದು ಹೊಸ ಇಕೋ ಮೋಡ್‌ನೊಂದಿಗೆ ಸಂಪೂರ್ಣವಾಗಿ ಬ್ಯಾಟರಿ ಡೌನ್ ಆತಂಕವನ್ನು ದೂರ ಮಾಡುತ್ತದೆ. ಕಂಪನಿಯ ಪರೀಕ್ಷೆಯ ಪ್ರಕಾರ ಇಕೋ-ಮೋಡ್ ಪ್ರತಿ ಚಾರ್ಜ್‌ಗೆ ಕನಿಷ್ಠ 170 ಕಿ.ಮೀ ವ್ಯಾಪ್ತಿಯನ್ನು ನೀಡುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಅಪ್‌ಡೇಟ್ ನಂತರ ಈಗಾಗಲೇ ಹಲವಾರು ಗ್ರಾಹಕರು ಪ್ರತಿ ಚಾರ್ಜ್‌ನಲ್ಲಿಯೇ ಗರಿಷ್ಠ 200 ಕಿಲೋ ಮೀಟರ್‌ಗಿಂತಲೂ ಹೆಚ್ಚಿನ ವ್ಯಾಪ್ತಿಯನ್ನು ಸಾಧಿಸಿದ್ದು, ಇನ್ನುಳಿದ ರೈಡ್ ಮೋಡ್‌ಗಳಲ್ಲೂ ಉತ್ತಮ ಮೈಲೇಜ್ ಜೊತೆಗೆ ಉತ್ತಮ ಪರ್ಫಾಮೆನ್ಸ್ ಕೂಡಾ ಒದಗಿಸಲಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಇದರ ಜೊತಗೆ ಹೊಸ ಅಪ್‌ಡೇಟ್ ನಂತರ ಡಿಜಿಟಲ್ ಲಾಕ್‌ನೊಂದಿಗೆ ಬರಲಿದ್ದು, ಇದಕ್ಕಾಗಿ ಕಂಪನಿಯು ಓಲಾ ಎಲೆಕ್ಟ್ರಿಕ್ ಕಂಪ್ಯಾನಿಯನ್ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಇದು ಸ್ಕೂಟರ್ ಅನ್ನು ಲಾಕ್, ಅನ್‌ಲಾಕ್ ಮಾಡಲು ಸಹಾಯ ಮಾಡುವುದಲ್ಲದೆ ಇದು ಪ್ರಮುಖ ವಾಹನ ಮೆಟ್ರಿಕ್‌ಗಳನ್ನು ಲಾಗಿನ್‌ ಆಗಲು ಸಹಾಯ ಮಾಡುತ್ತದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಇದರೊಂದಿಗೆ ಹೊಸ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಮೊದಲ ಬಾರಿಗೆ ಮ್ಯೂಜಿಕ್ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ನೀಡಲಾಗಿದ್ದು, ಸವಾರರು ಈಗ ಬ್ಲೂಟೂತ್ ಮೂಲಕ ಅವರ ಫೋನ್‌ಗಳನ್ನು ಕನೆಕ್ಟ್ ಮಾಡಿಕೊಂಡು ಪ್ರಯಾಣದಲ್ಲಿರುವಾಗ ಜಿಯೋಸಾವನ್ ಮತ್ತು ಸ್ಪೋರ್ಟಿಫೈಅಪ್ಲಿಕೇಶನ್‌ಗಳ ಮೂಲಕ ಅವರ ನೆಚ್ಚಿನ ಟ್ಯೂನ್‌ಗಳನ್ನು ಆನಂದಿಸಬಹುದಾಗಿದೆ.

ಎಸ್1 ಪ್ರೊ ಇವಿ ಸ್ಕೂಟರ್ ಖರೀದಿದಾರರಿಗೆ ಹೊಸ ಆಫರ್ ಘೋಷಣೆ ಮಾಡಿದ ಓಲಾ ಎಲೆಕ್ಟ್ರಿಕ್

ಹೊಸ ಅಪ್‌ಡೇಟ್‌ನಲ್ಲಿ ಮುಖ್ಯವಾಗಿ ಕ್ರೂಸ್ ಕಂಟ್ರೋಲ್ ಸೇರ್ಪಡೆ ಮಾಡಲಾಗಿದ್ದು, ಇದನ್ನು ನಾರ್ಮಲ್, ಸ್ಪೋರ್ಟ್ ಮತ್ತು ಹೈಪರ್ ಮೋಡ್‌ಗಳಲ್ಲಿ ಮಾತ್ರ ಸಕ್ರಿಯವಾಗಿರುತ್ತದೆ.

Most Read Articles

Kannada
English summary
Ola s1 pro festive season discount up to rs 10 000 details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X