ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

ದೇಶದಲ್ಲಿ ದ್ವಿಚಕ್ರ ವಾಹನಗಳ ಮಾರಾಟವು ವಾರ್ಷಿಕವಾಗಿ ಬೆಳವಣಿಗೆ ಕಂಡರೆ, ತಿಂಗಳ ಮಾರಾಟದಲ್ಲಿ ಇಳಿಕೆ ಕಂಡಿವೆ. ಒಟ್ಟಾರೆ ಜೂನ್ 2022 ರಲ್ಲಿ ಭಾರತದಲ್ಲಿ ಒಟ್ಟು 11,19,096 ದ್ವಿಚಕ್ರ ವಾಹನಗಳು ಮಾರಾಟವಾಗಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ20.23 ರಷ್ಟು ವಾರ್ಷಿಕ ಬೆಳವಣಿಗೆ ಕಂಡಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

ಮೇ 2022ಕ್ಕೆ ಹೋಲಿಸಿದರೆ ತಿಂಗಳಿನಿಂದ ತಿಂಗಳ ಮಾರಾಟವು ಶೇಕಡಾ 8.5 ರಷ್ಟು ಕಡಿಮೆಯಾಗಿದೆ. ಮಾರಾಟದ ಮಾಹಿತಿಯ ಪ್ರಕಾರ ಜೂನ್ 2022 ರಲ್ಲಿ ಮಾರಾಟವಾದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

1) ಹೀರೋ

ಹೀರೋ ಮೋಟೋಕಾರ್ಪ್ ಈ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಕಳೆದ ತಿಂಗಳು ಭಾರತದಲ್ಲಿ ಒಟ್ಟು 3,83,165 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಜೂನ್ 2021 ರಲ್ಲಿ ಮಾರಾಟ ಮಾಡಿದ 4,15,395 ಯುನಿಟ್‌ಗಳಿಗೆ ಹೋಲಿಸಿದರೆ ಹೀರೋನ ವಾರ್ಷಿಕ ಮಾರಾಟವು ಶೇ 7.76 ರಷ್ಟು ಕಡಿಮೆಯಾಗಿದೆ. ಮೇ 2022ರಲ್ಲಿ ಮಾರಾಟವಾದ 4,59,245 ಯುನಿಟ್‌ಗಳಿಗೆ ಹೋಲಿಸಿದರೆ ತಿಂಗಳ ಮಾರಾಟವು ಶೇ16.57 ರಷ್ಟು ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

2) ಹೋಂಡಾ

ಜೂನ್ 2022 ರಲ್ಲಿ ಹೋಂಡಾ 2,85,691 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 1,96,785 ಯುನಿಟ್‌ಗಳನ್ನು ಮಾರಾಟ ಮಾಡಿದ್ದು, ಇದು ಶೇಕಡಾ 45.18 ರಷ್ಟು ಬೆಳವಣಿಗೆ ಕಂಡಿದೆ. ಹೋಂಡಾವು ಮೇ 2022ರಲ್ಲಿ ಮಾರಾಟ ಮಾಡಿದ 2,91,535 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 2 ರಷ್ಟು ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

3) TVS

TVS ಜೂನ್ 2022 ರಲ್ಲಿ 1,66,412 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಮೂರನೇ ಅತ್ಯುತ್ತಮ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೊರಹೊಮ್ಮಿದೆ. TVS ವಾರ್ಷಿಕವಾಗಿ 1,19,999 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಜೂನ್ 2021 ಕ್ಕೆ ಹೋಲಿಸಿದರೆ ಶೇಕಡಾ 38.68 ರಷ್ಟು ಹೆಚ್ಚಾಗಿದೆ. ಮೇ 2022 ರಲ್ಲಿ ಮಾರಾಟವಾದ 1,69,621 ಯುನಿಟ್‌ಗಳಿಗೆ ಹೋಲಿಸಿದರೆ ತಿಂಗಳ ಮಾರಾಟವು ಶೇಕಡಾ 1.89 ರಷ್ಟು ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

4) ಬಜಾಜ್

ಬಜಾಜ್ ಕಳೆದ ತಿಂಗಳು ಒಟ್ಟು 1,00,094 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಬಜಾಜ್ ಕಳೆದ ವರ್ಷ ಜೂನ್ 2021 ರಲ್ಲಿ ಮಾರಾಟ ಮಾಡಿದ 1,07,055 ಯುನಿಟ್‌ಗಳಿಗೆ ಹೋಲಿಸಿಕೊಂಡರೆ ಈ ವರ್ಷ ಶೇಕಡಾ 6.5 ರಷ್ಟು ಕುಸಿತವಾಗಿದೆ. ಮೇ 2022ರಲ್ಲಿ ಮಾರಾಟವಾದ 1,23,083 ಯುನಿಟ್‌ಗಳಿಗೆ ಹೋಲಿಸಿದರೆ ಶೇಕಡಾ 18.68ರಷ್ಟು ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

5) ಸುಜುಕಿ

ಜಪಾನಿನ ದ್ವಿಚಕ್ರ ವಾಹನ ತಯಾರಕರು ಕಳೆದ ತಿಂಗಳು ಭಾರತದಲ್ಲಿ 50,099 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದಾರೆ. ಸುಜುಕಿ 25,170 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಜೂನ್ 2021 ಕ್ಕೆ ಹೋಲಿಸಿದರೆ ಶೇಕಡಾ 99.04 ರಷ್ಟು ಹೆಚ್ಚಾಗಿದೆ. ಸುಜುಕಿ 42,300 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ತಿಂಗಳ ಮಾರಾಟವು ಮೇ 2022ಕ್ಕೆ ಹೋಲಿಸಿದರೆ ಶೇಕಡಾ 18.44 ರಷ್ಟು ಹೆಚ್ಚಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

6) ಯಮಹಾ

ಯಮಹಾ ಜೂನ್ 2022 ರಲ್ಲಿ ಒಟ್ಟು 44,475 ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳನ್ನು ಮಾರಾಟ ಮಾಡಿದೆ. ಯಮಹಾ 22,409 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಜೂನ್ 2021ಕ್ಕೆ ಹೋಲಿಸಿದರೆ ವಾರ್ಷಿಕ ಮಾರಾಟವು ಶೇಕಡಾ 98.47 ರಷ್ಟು ಹೆಚ್ಚಾಗಿದೆ. ಮೇ 2022 ರಲ್ಲಿ ಮಾರಾಟವಾದ 46,055 ಯುನಿಟ್‌ಗಳಿಗೆ ಹೋಲಿಸಿದರೆ ಮಾಸಿಕ ಮಾರಾಟವು 3.43 ಯುನಿಟ್‌ಗಳಷ್ಟು ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

7) ರಾಯಲ್ ಎನ್‌ಫೀಲ್ಡ್

ಜೂನ್ 2022 ರಲ್ಲಿ ರಾಯಲ್ ಎನ್‌ಫೀಲ್ಡ್ ಒಟ್ಟು 42,813 ಮೋಟಾರ್‌ಸೈಕಲ್‌ಗಳನ್ನು ಮಾರಾಟ ಮಾಡಿದೆ. ಜೂನ್ 2021ರಲ್ಲಿ ರಾಯಲ್ ಎನ್‌ಫೀಲ್ಡ್‌ನ ವಾರ್ಷಿಕ ಮಾರಾಟವು ಶೇಕಡಾ 18.41 ರಷ್ಟು ಹೆಚ್ಚಾಗಿದೆ. ಮೇ 2022 ರಲ್ಲಿ 45,671 ಯುನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ತಿಂಗಳ ಮಾರಾಟವು 6.26 ಶೇಕಡಾ ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

ಅಂತಿಮ ಮೂರು ಬ್ರಾಂಡ್‌ಗಳು

ಈ ಪಟ್ಟಿಯಲ್ಲಿ ಅಂತಿಮ ಮೂರು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕರಿದ್ದು, ಜೂನ್ 2022 ರಲ್ಲಿ 6,980 ಯುನಿಟ್‌ಗಳನ್ನು ಮಾರಾಟ ಮಾಡುವುದರೊಂದಿಗೆ ಓಕಿನಾವಾ 8 ನೇ ಸ್ಥಾನವನ್ನು ಪಡೆದುಕೊಂಡಿದೆ. ಜೂನ್ 2021ಕ್ಕೆ ಹೋಲಿಸಿದರೆ ಓಕಿನಾವಾದ ವಾರ್ಷಿಕ ಬೆಳವಣಿಗೆಯು ಶೇ 627.84 ರಷ್ಟು ಹೆಚ್ಚಾಗಿದೆ. ಆದರೆ ಅದರ ತಿಂಗಳ ಮಾರಾಟವು ಮೇ 2022ರ ಮಾರಾಟಕ್ಕೆ ಹೋಲಿಸಿದರೆ ಶೇಕಡಾ 24.97 ರಷ್ಟು ಕಡಿಮೆಯಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

ಜೂನ್ 2022 ರಲ್ಲಿ 6,540 ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಆಂಪಿಯರ್ 9 ನೇ ಸ್ಥಾನವನ್ನು ಪಡೆದುಕೊಂಡಿದೆ. ಆಂಪಿಯರ್‌ನ ವಾರ್ಷಿಕ ಮತ್ತು ತಿಂಗಳ ಮಾರಾಟವು ಕ್ರಮವಾಗಿ ಶೇ 2340.30 ಮತ್ತು ಶೇ 12.06 ರಷ್ಟು ಹೆಚ್ಚಾಗಿದೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

ಜೂನ್ 2022 ರಲ್ಲಿ 6,503 ಯೂನಿಟ್‌ಗಳನ್ನು ಮಾರಾಟ ಮಾಡುವ ಮೂಲಕ ಹೀರೋ ಎಲೆಕ್ಟ್ರಿಕ್ ನಮ್ಮ ಪಟ್ಟಿಯಲ್ಲಿ ಅಂತಿಮ ಸ್ಥಾನವನ್ನು ಪಡೆದುಕೊಂಡಿದೆ. ಹೀರೋ ಎಲೆಕ್ಟ್ರಿಕ್‌ನ ವಾರ್ಷಿಕ ಮತ್ತು ತಿಂಗಳ ಮಾರಾಟವು ಕ್ರಮವಾಗಿ ಶೇ. 441.92 ಮತ್ತು ಶೇ 128.18 ರಷ್ಟು ಬ್ಲ್ಯಾಕ್ ಅಪ್‌ನಲ್ಲಿವೆ.

ಕಳೆದ ಜೂನ್‌ನಲ್ಲಿ ಅತಿಹೆಚ್ಚು ಮಾರಾಟ ದಾಖಲಿಸಿದ ಟಾಪ್ 10 ದ್ವಿಚಕ್ರ ವಾಹನ ಬ್ರ್ಯಾಂಡ್‌ಗಳಿವು!

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಜೂನ್ 2022 ಕ್ಕೆ ಹೋಲಿಸಿದರೆ ಭಾರತದ ದ್ವಿಚಕ್ರ ವಾಹನ ಮಾರುಕಟ್ಟೆಯು ಶೇ20.23 ರಷ್ಟು ಹೆಚ್ಚಾಗಿದೆ. ಇದನ್ನು ಗಮನಿಸಿದರೆ ಮುಂದಿನ ತಿಂಗಳುಗಳಲ್ಲಿ ಈ ಮಾರಾಟ ಬೆಳವಣಿಗೆಯು ಇನ್ನಷ್ಟು ಹೆಚ್ಚಾಗಬಹುದು ಎನ್ನಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೊನಾ ಪ್ರಭಾವದಿಂದ ಮಾರಾಟವು ಗಣನೀಯವಾಗಿ ಇಳಿಕೆ ಕಂಡಿತ್ತು. ಆದರೆ ಇದೀಗ ಸುಧಾರಣೆ ಕಾಣುತ್ತಿರುವುದು ಆಟೋ ವಲಯಕ್ಕೆ ಮರುಜೀವ ಬಂದಂತಾಗಿದೆ.

Article Published On: Friday, July 8, 2022, 16:18 [IST]
English summary
Top 10 Best Selling Two Wheeler Brands of June
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+