Just In
Don't Miss!
- News
ಪಲ್ಲವಿ ಡೇ ಬಳಿಕ ಮತ್ತೊಬ್ಬ ಯುವ ರೂಪದರ್ಶಿ ಆತ್ಮಹತ್ಯೆ
- Sports
ಮಹಿಳಾ ಟಿ20 ಚಾಲೆಂಜ್: ವೆಲಾಸಿಟಿ ವಿರುದ್ಧ ಗೆದ್ದ ಟ್ರೈಲ್ಬ್ಲೇಜರ್ಸ್, ಆದ್ರೂ ಫೈನಲ್ ಮಿಸ್
- Finance
ಮೇ 26ರಂದು ವಾಣಿಜ್ಯ ಬೆಳೆ ಅಡಿಕೆ, ಕಾಫಿ, ಮೆಣಸು, ಏಲಕ್ಕಿ ಪೇಟೆ ಧಾರಣೆ
- Movies
ಬಾಲಕೃಷ್ಣ 107ನೇ ಸಿನಿಮಾದ ಟೈಟಲ್ 'ಜೈ ಬಾಲಯ್ಯ'
- Technology
ಸ್ಯಾಮ್ಸಂಗ್ ಗ್ಯಾಲಕ್ಸಿ M13 ಸ್ಮಾರ್ಟ್ಫೋನ್ ಬಿಡುಗಡೆ! ವಿಶೇಷತೆ ಏನು?
- Lifestyle
ಕಿಚನ್ ಟಿಪ್ಸ್: ಫ್ರಿಡ್ಜ್ನಲ್ಲಿ ಆಹಾರಗಳನ್ನು ಹೀಗೆ ಇಟ್ಟರೆ ಆರೋಗ್ಯಕ್ಕೆ ಕುತ್ತು ಎಚ್ಚರ..!
- Education
Karnataka SSLC Revaluation 2022 : ಮರುಮೌಲ್ಯಮಾಪನ ಮತ್ತು ಮರುಎಣಿಕೆಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಬಣ್ಣದ ಆಯ್ಕೆಯಲ್ಲಿ 2022ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಅನಾವರಣ
ಪ್ರೀಮಿಯಂ ಹಾಗೂ ಪರ್ಫಾಮೆನ್ಸ್ ಬೈಕ್ ತಯಾರಕ ಕಂಪನಿಯಾದ ಟ್ರಯಂಫ್ ಮೋಟಾರ್‌ಸೈಕಲ್ ತನ್ನ 2022ರ ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಅನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೆ ಅನಾವರಣಗೊಳಿಸಿದೆ. ಮತ್ತು ಮುಂಬರುವ ತಿಂಗಳುಗಳಲ್ಲಿ 2022ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ಟಾಟಾ ಟ್ರೈಡೆಂಟ್ 660 ರೋಡ್‌ಸ್ಟರ್ ಪಡೆಯುವ ಏಕೈಕ ನವೀಕರಣವೆಂದರೆ ಹೊಸ ಮಾದರಿಯ ವರ್ಷದ ಭಾಗವಾಗಿ ಹೊಸ ಬಣ್ಣದ ಯೋಜನೆಯಾಗಿದೆ. ಟಾಟಾ ಟ್ರೈಡೆಂಟ್ 660 ಬೈಕ್ ಮ್ಯಾಟ್ ಬಾಜಾ ಆರೆಂಜ್/ಮ್ಯಾಟ್ ಸ್ಟಾರ್ಮ್ ಗ್ರೇ ಎಂಬ ಹೊಸ ಬಣ್ಣದ ಆಯ್ಕೆಯನ್ನು ಪಡೆದುಕೊಂಡಿದೆ. ಹಿಂದಿನ ಆಯ್ಕೆಗಳಾದ ಸಿಲ್ವರ್ ಐಸ್/ಡಯಾಬ್ಲೊ ರೆಡ್, ಮ್ಯಾಟ್ ಜೆಟ್ ಬ್ಲ್ಯಾಕ್/ಸಿಲ್ವರ್ ಐಸ್ ಮತ್ತು ಸಫೈರ್ ಬ್ಲ್ಯಾಕ್ ಜೊತೆಗೆ ಮಾರಾಟ ಮಾಡಲಾಗುತ್ತಿದೆ. ಹೊಸ ಬಣ್ಣದ ಆಯ್ಕೆಯನ್ನು ಹೊರತುಪಡಿಸಿ ಉಳಿದಂತೆ ಈ ಹೊಸ ಬೈಕಿನಲ್ಲಿ ಯಾವುದೇ ಬದಲಾವಣೆಗಳನ್ನು ಪಡೆದುಕೊಂಡಿದೆ.

ಈ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಲೈನ್-ಅಪ್‌ನಲ್ಲಿ ಎಂಟ್ರಿ ಲೆವೆಲ್ ಮಾದರಿಯಾಗಿದೆ, ಜೊತೆಗೆ ಟ್ರಯಂಫ್ ಟ್ರಿಪಲ್ ಎಂಜಿನ್ ರೋಡ್‌ಸ್ಟರ್ ಲೈನ್-ಅಪ್ ಆಗಿದೆ. 1968 ರಿಂದ 1975 ರವರೆಗೆ ಟ್ರೈಡೆಂಟ್ ಎಂಬ ಹಳೆಯ ಐಕಾನಿಕ್ ಬೈಕಿನ ಉತ್ಪಾದನೆಯಲ್ಲಿತ್ತು. ಅದೇ ಐಕಾನಿಕ್ ಬೈಕಿನ ಹೆಸರಿನಲ್ಲಿ ಟ್ರಯಂಫ್ ಕಂಪನಿಯು ಹೊಸ ಮಾದರಿಯನ್ನು ಬಿಡುಗಡೆಗೊಳಿಸಲಾಗಿದೆ.

ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹಲವಾರು ಅತ್ಯಾಧುನಿಕ ಫೀಚರ್ಸ್ ಮತ್ತು ತಂತ್ರಜ್ಙಾನಗಳನ್ನು ಒಳಗೊಂಡಿವೆ. ಇನ್ನು ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯು ಈ ಬೈಕ್ ಅನ್ನು ಚೀನಾ ಮಾರುಕಟ್ಟೆಯಲ್ಲಿಯು ಕೂಡ ಬಿಡುಗಡೆಗೊಳಿಸಲಾಗಿದೆ.

ಈ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಅತ್ಯಂತ ಸೊಗಸಾದ ವಿನ್ಯಾಸ ಮತ್ತು ನವೀಕರಿಸಿದ ಎಂಜಿನ್ ಅನ್ನು ಹೊಂದಿದೆ. ಇದು ಹೊಸ ವಿನ್ಯಾಸ ಶೈಲಿಯನ್ನು ಹೊಂದಿದೆ. ಅಲ್ಲದೇ ಪವರ್ ಫುಲ್ ಎಂಜಿನ್ ಅನ್ನು ಒಳಗೊಂಡಿದೆ. ಈ ಹೊಸ ಬೈಕ್ ಸ್ಕಪಲ್ಟಡ್ ಫ್ಯೂಯಲ್ ಟ್ಯಾಂಕ್ ನೊಂದಿಗೆ ಮಸ್ಕಲರ್ ಲುಕ್ ಅನ್ನು ಹೊಂದಿದೆ.

ಈ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಸಿಂಗಲ್-ಪೀಸ್ ಸೀಟ್, ಎಕ್ಸ್‌ಪೋಸ್ಡ್ ಫ್ರೇಮ್ ಮತ್ತು ಎಂಜಿನ್ ಜೊತೆ ವೃತ್ತಾಕಾರದ ಅಂಶಗಳೊಂದಿಗೆ ಸಣ್ಣದಾಗಿ ರೆಟ್ರೋ ಶೈಲಿಯಯಲ್ಲಿ ಕಾಣುತ್ತದೆ. ಈ ಟ್ರಯಂಫ್ ಬೈಕಿನಲ್ಲಿ ರೈಡರ್ ಏಡ್ಸ್ ಮತ್ತು ಎಲೆಕ್ಟ್ರಾನಿಕ್ಸ್ ಅನ್ನು ಸಹ ನೀಡುತ್ತದೆ, ಉದಾಹರಣೆಗೆ ರೈಡ್-ಬೈ-ವೈರ್, ಟ್ರ್ಯಾಕ್ಷನ್ ಕಂಟ್ರೋಲ್, ರೈನ್ ಮತ್ತು ರೋಡ್ ರೈಡರ್ ಮೋಡ್ ಗಳು ಸೇರಿದಂತೆ ಇತರ ಹಲವಾರು ಅತ್ಯಾಧುನಿಕ ಫೀಚರ್ಸ್ ಗಳನ್ನು ಒಳಗೊಂಡಿವೆ.

ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಬೈಕಿನಲ್ಲಿ ಇನ್-ಲೈನ್ ಮೂರು-ಸಿಲಿಂಡರ್ 660 ಸಿಸಿ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10,250 ಆರ್‌ಪಿಎಂನಲ್ಲಿ 80 ಬಿಹೆಚ್‌ಪಿ ಪವರ್ ಮತ್ತು 6,250 ಆರ್‌ಪಿಎಂನಲ್ಲಿ 64 ಎನ್ಎಂ ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ನೊಂದಿಗೆ ಸ್ಲಿಪ್/ಅಸಿಸ್ಟ್ ಕ್ಲಚ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಟ್ರೈಡೆಂಟ್ 660 ರೋಡ್‌ಸ್ಟರ್ ಬೈಕ್ ಎಲ್ಇಡಿ ಲೈಟಿಂಗ್ ಮತ್ತು ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಗಾಗಿ ಟಿಎಫ್ಟಿ ಡಿಸ್ ಪ್ಲೇಯನ್ನು ಸಹ ಒಳಗೊಂಡಿದೆ. 'ಮೈ ಟ್ರಯಂಫ್' ಆ್ಯಪ್ ಬಳಸಿ ಈ ಬೈಕಿನಲ್ಲಿರುವ ಡಿಜಿಟಲ್ ಡಿಸ್ಪ್ಲೇಯನ್ನು ರೈಡರ್ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾಗಿದೆ.

ಈ ಹೊಸ ಟ್ರಯಂಫ್ ಟ್ರೈಡೆಂಟ್ 660 ಮಾದರಿಯು ಟೂಬುಲರ್ ಸ್ಟೀಲ್ ಚಾಸಿಸ್ ಅನ್ನು ಹೊಂದಿದೆ. ಈ ಟ್ರೈಡೆಂಟ್ 660 ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 41 ಎಂಎಂ ಶೋವಾ ಯುಎಸ್‌ಡಿ ಫೋರ್ಕ್‌ಗಳು ಮತ್ತು ಹಿಂಭಾಗದಲ್ಲಿ ಶೋವಾ ಮೊನೊ-ಶಾಕ್ ಸೆಟಪ್ ಅನ್ನು ಒಳಗೊಂಡಿದೆ, ಇನ್ನು ಇದರ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 310 ಎಂಎಂ ಟ್ವಿನ್ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಸಿಂಗಲ್ ಡಿಸ್ಕ್ ಬ್ರೇಕ್ ಅನ್ನು ಹೊಂದಿದೆ, ಇದರೊಂದಿಗೆ ಹೆಚ್ಚಿನ ಸುರಕ್ಷತೆಗಾಗಿ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ನೀಡಲಾಗಿದೆ.

ಇನ್ನು ಟ್ರಯಂಫ್ ಕಂಪನಿಯು ತನ್ನ ಹೊಸ ಟೈಗರ್ ಸ್ಪೋರ್ಟ್ 660 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. ಈ ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.8.95 ಲಕ್ಷವಾಗಿದೆ. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬೈಕಿನ ಬೆಲೆಯನ್ನು ಟ್ರೈಡೆಂಟ್ 660 ಮಾದರಿಯ ಬೆಲೆಗೆ ಹೋಲಿಸಿದರೆ ರೂ.1.50 ಲಕ್ಷ ದುಬಾರಿಯಾಗಿದೆ. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಬ್ರ್ಯಾಂಡ್‌ನ ಇತ್ತೀಚಿನ ನೇಕೆಡ್ ಸ್ಟ್ರೀಟ್‌ಫೈಟರ್-ಟ್ರಿಡೆಂಟ್ 660 ನ ಅದೇ ಫ್ರೇಮ್ ಅನ್ನು ಆಧರಿಸಿದೆ.

ಟ್ರಯಂಫ್ ಇಂಡಿಯಾ ಕಂಪನಿಯು ಈ ಟೈಗರ್ ಸ್ಪೋರ್ಟ್ 660 ಬೈಕ್ ಖರೀದಿಗಾಗಿ ಬುಕ್ಕಿಂಗ್‌ಗಳನ್ನು ಈಗಾಗಲೇ ಸ್ವೀಕರಿಸಲು ಪ್ರಾರಂಭಿಸಲಾಗಿದೆ. ಈ ಹೊಸ ಟೈಗರ್ ಸ್ಪೋರ್ಟ್ 660 ಅಡ್ವೆಂಚರ್ ಬೈಕ್ ಅನ್ನು ಖರೀದಿಸಲು ಬಯಸುವ ಗ್ರಾಹಕರು ಟೋಕನ್ ಮೊತ್ತ ರೂ.50,000 ಪಾವತಿಸಿ ಬುಕ್ಕಿಂಗ್ ಮಾಡಿಕೊಳ್ಳಬಹುದು. ಹೊಸ ಟ್ರಯಂಫ್ ಟೈಗರ್ ಸ್ಪೋರ್ಟ್ 660 ಆಫ್-ರೋಡ್ ಅಧಾರಿತ ಅಡ್ವೆಂಚರ್ ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ. ಇದು ಟ್ರೈಡೆಂಟ್ 660 ಮಾದರಿಯನ್ನು ಆಧರಿಸಿದ್ದರೂ, ಇದು ಸ್ಪೋರ್ಟ್ಸ್ ಟೂರಿಂಗ್ ಬೈಕ್ ಆಗಿದೆ. ಇದರಿಂದ ಈ ಬೈಕಿನಲ್ಲಿ ಕೆಲವು ವ್ಯತ್ಯಾಸಗಳನ್ನು ಪಡೆದುಕೊಂಡಿದೆ.

ಮುಂಬರುವ ತಿಂಗಳುಗಳಲ್ಲಿ 2022ರ ಟ್ರಯಂಫ್ ಟ್ರೈಡೆಂಟ್ 660 ಬೈಕ್ ಹೊಸ ಬಣ್ಣದ ಆಯ್ಕೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಈ ಟ್ರಯಂಫ್ ಟ್ರೈಡೆಂಟ್ 660 ಭಾರತೀಯ ಮಾರುಕಟ್ಟೆಯಲ್ಲಿ ಕವಾಸಕಿ ಝಡ್650 ಬೈಕಿಗೆ ಪೈಪೋಟಿ ನೀಡುತ್ತಿದೆ.