ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ದೇಶದ ಆಟೋ ಉದ್ಯಮದಲ್ಲಿ ತನ್ನದೆ ಆದ ಜನಪ್ರಿಯತೆಯೊಂದಿಗೆ ವಾಹನ ಪ್ರಿಯರ ಹಾಟ್ ಫೇವರಿಟ್ ಬೈಕ್ ಮಾದರಿಯಾಗಿ ಮಿಂಚಿ ಮರೆಯಾಗಿದ್ದ ಯೆಜ್ಡಿ ಇದೀಗ ಮತ್ತೊಮ್ಮೆ ಹೊಸ ತಲೆಮಾರಿನ ಗ್ರಾಹಕರನ್ನು ರಂಜಿಸಲು ಮಾರುಕಟ್ಟೆಗೆ ಪುನಾರಾಗಮಿಸಿದ್ದು, ಟು ಸ್ಟ್ರೋಕ್ ಜಮಾನಾದಿಂದ ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಭಾರತೀಯ ಆಟೋ ಉದ್ಯಮದಲ್ಲಿ ತನ್ನದೆ ಆದ ಹೊಸ ವೈಶಿಷ್ಟ್ಯತೆಯೊಂದಿಗೆ 1969ರಲ್ಲಿ ಮೊದಲ ಬಾರಿಗೆ ಮಾರುಕಟ್ಟೆ ಪ್ರವೇಶಿಸಿದ್ದ ಯೆಜ್ಡಿ ಬ್ರಾಂಡ್ 90ರ ದಶಕದಲ್ಲಿ ಅತಿ ಹೆಚ್ಚು ಮಾರಾಟಗೊಳ್ಳುವ ಮೋಟಾರ್‌ಸೈಕಲ್ ಮಾದರಿಯಾಗಿ ಗುರುತಿಸಿಕೊಂಡಿತ್ತು. ಆದರೆ 90ರ ನಂತರ ಆಟೋ ಮಾರುಕಟ್ಟೆಯಲ್ಲಿ ಆದ ಕ್ರಾಂತಿಕಾರಿ ಬೆಳವಣಿಗಳಿಂದಾಗಿ ಹಲವಾರು ಹೊಸ ಬೈಕ್ ಮಾದರಿಗಳ ಆಗಮನವು ಯೆಜ್ಡಿ ಮತ್ತು ಜಾವಾ ಮಾದರಿಗಳಿಗೆ ತೀವ್ರ ಪೈಪೋಟಿ ನೀಡಿದವು.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಪ್ರತಿಸ್ಪರ್ಧಿ ಮಾದರಿಗಳ ಪೈಪೋಟಿ ಮತ್ತು ವಿದೇಶಿ ಕಂಪನಿಗಳೊಂದಿಗೆ ದೇಶಿಯ ಮಾರುಕಟ್ಟೆಯಲ್ಲಿ ಕಂಪನಿಗಳ ಸಹಭಾಗಿತ್ವ ಯೋಜನೆಗಳು ಯೆಜ್ಡಿ ಮತ್ತು ಜಾವಾ ಬ್ರಾಂಡ್‌ಗಳಿಗೆ ಭಾರೀ ಹೊಡೆತ ನೀಡಿದವು. ಮಾರುಕಟ್ಟೆಯಲ್ಲಿನ ಪೈಪೋಟಿ ಎದುರಿಸಲು ಸಾಧ್ಯವಿಲ್ಲದಾಗ ಯೆಜ್ಡಿ ಸೇರಿದಂತೆ ಪ್ರಮುಖ ಕ್ಲಾಸಿಕ್ ಬ್ರಾಂಡ್‌ಗಳು ಕದಮುಚ್ಚಿದವು. ಆದರೆ ಟು ಸ್ಟ್ರೋಕ್ ಜಾಮನಾದಲ್ಲಿನ ಬೈಕ್ ಮಾದರಿಗಳಿದ್ದ ಕ್ರೇಜ್ ಈಗಲೂ ಕೂಡಾ ಕಡಿಮೆಯಾಗಿಲ್ಲ. ಇದೇ ಕಾರಣಕ್ಕೆ ಮಹೀಂದ್ರಾ ಒಡೆತನ ಕ್ಲಾಸಿಕ್ ಲೆಜೆಂಡ್ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಟು ಸ್ಟ್ರೋಕ್ ಕ್ರೇಜ್‌ಗೆ ಹೊಸ ಕಿಕ್ ನೀಡುತ್ತಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೌದು, ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಬೈಕ್‌ಗಳನ್ನು ಹೊಸ ರೂಪದೊಂದಿಗೆ ಮಾರುಕಟ್ಟೆಗೆ ಪರಿಚಯಿಸಿದ್ದು, ಯೆಜ್ಡಿ ಬ್ರಾಂಡ್ ಅಡಿಯಲ್ಲಿ ಕ್ಲಾಸಿಕ್ ಲೆಜೆಂಡ್ ಕಂಪನಿಯು ಒಂದಲ್ಲಾ ಒಟ್ಟು ಮೂರು ಹೊಸ ಬೈಕ್ ಮಾದರಿಗಳನ್ನು ಆಧುನಿಕ ತಾಂತ್ರಿಕ ವೈಶಿಷ್ಟ್ಯತೆಯೊಂದಿಗೆ ಅಭಿವೃದ್ದಿಗೊಳಿಸಿ ಬಿಡುಗಡೆ ಮಾಡಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಯೆಜ್ಡಿ ಕಂಪನಿಯು ಗ್ರಾಹಕರ ಬೇಡಿಕೆಯಂತೆ ಯೆಜ್ಡಿ ರೋಡ್‌ಸ್ಟರ್, ಯೆಜ್ಡಿ ಸ್ಕ್ರ್ಯಾಂಬ್ಲರ್ ಮತ್ತು ಯೆಜ್ಡಿ ಅಡ್ವೆಂಚರ್ ಮಾದರಿಗಳನ್ನು ಬಿಡುಗಡೆ ಮಾಡಿದ್ದು, ಹೊಸ ಬೈಕ್ ಮಾದರಿಗಳ ಕುರಿತಾಗಿ ಮೊದಲ ನೋಟದ ಕುರಿತಾಗಿ ಕೆಲವು ಪ್ರಮುಖ ಮಾಹಿತಿಗಳನ್ನು ಇಲ್ಲಿ ಹಂಚಿಕೊಂಡಿದ್ದೇವೆ. ಡ್ರೈವ್‌ಸ್ಪಾರ್ಕ್ ತಂಡವು ಹೊಸ ಬೈಕ್‌ಗಳ ಫಸ್ಟ್ ರೈಡ್ ರಿವ್ಯೂನಲ್ಲಿ ಸಂಪೂರ್ಣ ಮಾಹಿತಿಯನ್ನು ಶೀಘ್ರದಲ್ಲಿಯೇ ಪ್ರಕಟಿಸಲಿದ್ದು, ಫಸ್ಟ್ ರೈಡ್ ರಿವ್ಯೂಗೂ ಮುನ್ನ ಹೊಸ ಬೈಕ್‌ಗಳ ತಾಂತ್ರಿಕ ಅಂಶಗಳ ಕುರಿತಾಗಿ ಕೆಲವು ಮುಖ್ಯ ಮಾಹಿತಿಯನ್ನು ಚರ್ಚಿಸಿದ್ದೇವೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಯೆಜ್ಡಿ ರೋಡ್‌ಸ್ಟರ್

ರೋಡ್‌ಸ್ಟರ್ ಮಾದರಿಗಳು ಸಾಮಾನ್ಯವಾಗಿ ದಿನಬಳಕೆಯ ಮೋಟಾರ್‌ಸೈಕಲ್‌ ಮಾದರಿಗಳಾಗಿದ್ದು, ಈ ಹಿಂದೆ ಯೆಜ್ಡಿಯ ನಿರ್ಮಾಣದ ಬಹುತೇಕ ಮೋಟಾರ್‌ಸೈಕಲ್‌ಗಳು ರೋಡ್‌ಸ್ಟರ್‌ಗಳಾಗಿದ್ದವು. ರೋಡ್‌ಸ್ಟರ್ ಮಾದರಿಗಳು ತಮ್ಮದೆ ಆದ ಹೊಸ ವೈಶಿಷ್ಟ್ಯತೆಯೊಂದಿಗೆ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿ ಹೊಂದಿದ್ದು, ಕಂಪನಿಯು ಇದೀಗ ತನ್ನ ಹೆರಿಟೇಜ್ ಬ್ರಾಂಡ್‌ಗೆ ಹೊಸ ಮಾದರಿಯನ್ನು ಸೇರ್ಪೆಡೆಗೊಳಿಸಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಯೆಜ್ಡಿ ಹೊಸ ರೋಡ್‌ಸ್ಟರ್ ಮಾದರಿಯು ಹಲವಾರು ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಹೊಸ ಬೈಕ್ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಪಡೆದುಕೊಂಡಿದೆ. ಆದರೆ ಹೊಸ ಬೈಕಿನಲ್ಲಿರುವ ಇಂಡಿಕೇಟರ್‌ಗಳು ಹ್ಯಾಲೊಜೆನ್ ಬಲ್ಬ್‌ಗಳಿಂದ ಕೂಡಿದ್ದು, ಡಿಜಿಟಲ್ ಸ್ಪೀಡೋಮೀಟರ್ ಅನ್ನು ಮುಂಭಾಗದ ಫೋರ್ಕ್‌ನ ಮೇಲ್ಭಾಗದಲ್ಲಿ ಜೋಡಿಸಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಬೈಕಿನಲ್ಲಿ ಕೀ ಹೋಲ್ ಅನ್ನು ಮೋಟಾರ್‌ಸೈಕಲ್‌ನ ಬಲಭಾಗದಲ್ಲಿ ಇರಿಸಲಾಗಿದ್ದು, ರೋಡ್‌ಸ್ಟರ್ ಮಾದರಿಯು 12.5-ಲೀಟರ್ ಇಂಧನ ಟ್ಯಾಂಕ್ ಪ್ರತಿ ಬದಿಯಲ್ಲಿ ಯೆಜ್ಡಿ ಬ್ಯಾಡ್ಜಿಂಗ್ ಜೊತೆಗೆ ಮೋಟಾರ್‌ಸೈಕಲ್‌ನಲ್ಲಿ ಸಾಕಷ್ಟು ಕ್ರೋಮ್‌ಗಳಿವೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೆಡ್‌ಲೈಟ್ ಗ್ರಿಲ್, ಯುಎಸ್‌ಬಿ ಟೈಪ್-ಸಿ ಚಾರ್ಜಿಂಗ್ ಸಾಕೆಟ್ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಸಿಸ್ಟಮ್‌ನಂತಹ ವೈಶಿಷ್ಟ್ಯತೆಗಳನ್ನು ಶೋರೂಮ್‌ನಿಂದ ಖರೀದಿಸಬಹುದಾದ ಒಂದೆರಡು ಐಚ್ಛಿಕ ಸೌಲಭ್ಯಗಳಿದ್ದು, ಈ ಮೋಟಾರ್‌ಸೈಕಲ್ ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ರೋಡ್‌ಸ್ಟರ್ ಮಾದರಿಯು 175 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಸುಮಾರು 135 ಎಂಎಂ ಟ್ರಾವೆಲ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಪಡೆಯುತ್ತದೆ. ಹಿಂಭಾಗದಲ್ಲಿ, ರೋಡ್‌ಸ್ಟರ್ ಫ್ರೀ ಲೋಡ್ ಹೊಂದಾಣಿಕೆಯೊಂದಿಗೆ 100 ಎಂಎಂ ಗ್ಯಾಸ್-ಚಾರ್ಜ್ಡ್ ಟ್ವಿನ್ ಶಾಕ್ ಅಬ್ಸಾರ್ಬರ್‌ಗಳನ್ನು ಹೊಂದಿದ್ದು, ಮುಂಭಾಗದಲ್ಲಿ ಫ್ಲೋಟಿಂಗ್ ಕ್ಯಾಲಿಪರ್‌ನೊಂದಿಗೆ 320 ಎಂಎಂ ಡಿಸ್ಕ್ ಜೋಡಿಸಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಬೈಕಿನ ಹಿಂಬದಿಯಲ್ಲೂ ಫ್ಲೋಟಿಂಗ್ ಕ್ಯಾಲಿಪರ್‌ಗಳೊಂದಿಗೆ 240 ಎಂಎಂ ಡಿಸ್ಕ್ ಬ್ರೇಕ್ ನಿರ್ವಹಿಸಲಿದ್ದು, ಡ್ಯುಯಲ್-ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿದೆ. ಈ ಮೂಲಕ ರೋಡ್‌ಸ್ಟರ್ ಮಾದರಿಯು 334ಸಿಸಿ ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್ ಲಿಕ್ವಿಡ್-ಕೂಲ್ಡ್ ಎಂಜಿನ್‌ನಿಂದ ಚಾಲಿತವಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ರಿಯಲ್ ವ್ಹೀಲ್ ವೈಶಿಷ್ಟ್ಯತೆಯೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರುವ ಯೆಜ್ಡಿ ರೋಡ್‌ಸ್ಟರ್ ಮಾದರಿಯು 29.3 ಎನ್ಎಂ ಟಾರ್ಕ್ ಮತ್ತು 29 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೈಕಿನಲ್ಲಿರುವ ತಾಂತ್ರಿಕ ವೈಶಿಷ್ಟ್ಯತೆಗಳಿಗೆ ಅನುಗುಣವಾಗಿ ರೂ. 1,98,142 ಬೆಲೆ ಹೊಂದಿದ್ದು, ಸಹೋದರ ಸಂಸ್ಥೆ ಜಾವಾ ಮಾದರಿಯಿಂದಲೂ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆದುಕೊಂಡಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಯೆಜ್ಡಿ ಸ್ಕ್ರ್ಯಾಂಬ್ಲರ್

ಹೊಸ ಸ್ಕ್ರ್ಯಾಂಬ್ಲರ್ ಮಾದರಿಯು ಸಹ ಆಕರ್ಷಕ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್ ಲ್ಯಾಂಪ್ ಮತ್ತು ಎಲ್ಇಡಿ ಟರ್ನ್ ಇಂಡಿಕೇಟರ್‌ಗಳನ್ನು ಹೊಂದಿದೆ. ಈ ಬೈಕಿನ ಮುಂಭಾಗದಲ್ಲಿ ಫೋರ್ಕ್‌ನ ಮೇಲ್ಭಾಗದಲ್ಲಿ ಸ್ಪೀಡೋಮೀಟರ್ ಜೋಡಿಸಲಾಗಿದ್ದು, ಇದು ಸ್ವಲ್ಪ ಬಲಭಾಗಕ್ಕೆ ಸರಿದೂಗಿಸುತ್ತದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಸ್ಕ್ರ್ಯಾಂಬ್ಲರ್ ಮಾದರಿಯು ರೋಡ್‌ಸ್ಟರ್ ಮಾದರಿಯಲ್ಲಿಯೇ ಡಬಲ್ ಕ್ರೇಡಲ್ ಚಾಸಿಸ್ ಅನ್ನು ಸಹ ಹೊಂದಿದ್ದು, ಇದು ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳೊಂದಿಗೆ 150 ಎಂಎಂ ಫ್ರಂಟ್-ವ್ಹೀಲ್ ಪ್ರಯಾಣವನ್ನು ಪಡೆದುಕೊಳ್ಳುತ್ತದೆ. ಹೊಸ ಬೈಕಿನಲ್ಲಿ ಇಂಧನ ಟ್ಯಾಂಕ್ ಸಾಮರ್ಥ್ಯವು 12.5-ಲೀಟರ್ ಗಳಾಗಿದ್ದು, ಇದು ವಿಶೇಷವಾಗಿ ಸಿಂಗಲ್-ಪೀಸ್ ಸೀಟ್ ಅನ್ನು ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಸೀಟ್ ಅನ್ನು ಟ್ಯಾಂಕ್‌ಗೆ ಅಂದವಾಗಿ ವಿಲೀನಗೊಳಿಸಿರುವ ಕ್ಲಾಸಿಕ್ ಕಂಪನಿಯು ಡ್ಯುಯಲ್-ಚಾನೆಲ್ ಎಬಿಎಸ್ ಮತ್ತು ಮೂರು ಎಬಿಎಸ್ ಮೋಡ್‌ಗಳು ರೋಡ್, ರೈನ್ ಮತ್ತು ಆಫ್ ರೋಡ್ ಮೋಡ್‌ಗಳು ಸ್ಪೋಕ್ಡ್ ವೀಲ್ಹ್ ಸವಾರಿಗೆ ಅನುಕೂಲವಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಸ್ಕ್ರ್ಯಾಂಬ್ಲರ್ ಬೈಕ್ 200ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದ್ದು, ಬ್ರೇಕಿಂಗ್ ಸೌಲಭ್ಯಕ್ಕಾಗಿ ಹೊಸ ಮಾದರಿಯಲ್ಲಿ 320 ಎಂಎಂ ಮುಂಭಾಗದ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ಬ್ರೇಕ್ ಜೋಡಿಸಲಾಗಿದೆ. ಸ್ಕ್ರ್ಯಾಂಬ್ಲರ್ ಮಾದರಿಯಲ್ಲಿ 19 ಇಂಚಿನ ಮುಂಭಾಗದ ಚಕ್ರವನ್ನು ಮತ್ತು 17 ಇಂಚಿನ ಹಿಂಬದಿಯ ಚಕ್ರ ನೀಡಲಾಗಿದ್ದು, ಮೋಟಾರ್‌ಸೈಕಲ್ ಯುಎಸ್‌ಬಿ ಟೈಪ್-ಸಿ ಮತ್ತು ಸಾಮಾನ್ಯ ಯುಎಸ್‌ಬಿ ಚಾರ್ಜಿಂಗ್ ಸಾಕೆಟ್ ಅನ್ನು ಸ್ಟ್ಯಾಂಡರ್ಡ್ ಆಗಿ ಪದುಕೊಳ್ಳಲಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಯೆಜ್ಡಿ ಕಂಪನಿಯು ಸ್ಕ್ರ್ಯಾಂಬ್ಲರ್‌ ಮಾದರಿಯಲ್ಲಿ 334ಸಿಸಿ ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಜೋಡಿಸಿದ್ದು, ಇದು 6-ಸ್ಪೀಡ್ ಗೇರ್ ಬಾಕ್ಸ್‌ನೊಂದಿಗೆ ಹಿಂದಿನ ಚಕ್ರದ ಚಾಲನೆಯೊಂದಿಗೆ 28.7 ಬಿಎಚ್‌ಪಿ ಮತ್ತು 28.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಸ್ಕ್ರ್ಯಾಂಬ್ಲರ್ ಬೈಕ್ ಮಾದರಿಯು ದೆಹಲಿ ಎಕ್ಸ್ ಶೋರೂಂ ಪ್ರಕಾರ ರೂ. 2,04,900 ಆರಂಭಿಕ ಬೆಲೆ ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಯೆಜ್ಡಿ ಅಡ್ವೆಂಚರ್

ಹೊಸ ಅಡ್ವೆಂಚರ್ ಹೊಸ ಬೈಕ್ ಮಾದರಿಯು ಎಲ್ಲರ ನೀರಿಕ್ಷೆಯೆಂತೆ ಹಲವು ವೈಶಿಷ್ಟ್ಯತೆಯೊಂದಿಗೆ ಬಿಡುಗಡೆಯಾಗಿದ್ದು, ಡಬಲ್ ಕ್ರೇಡಲ್ ಚಾಸಿಸ್ ಅನ್ನು ಹೊಂದಿರುವ ಈ ಬೈಕ್ ಮಾದರಿಯು ಮೇಲಿನ ಎರಡು ಮಾದರಿಗಳಿಂತಲೂ ಹೆಚ್ಚು ಶಕ್ತಿಯಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಯೆಜ್ಡಿ ಅಡ್ವೆಂಚರ್ ಮಾದರಿಯಲ್ಲಿ ಎಲ್ಇಡಿ ಹೆಡ್‌ಲ್ಯಾಂಪ್, ಟೈಲ್ ಲ್ಯಾಂಪ್ ಮತ್ತು ಇಂಡಿಕೇಟರ್ ಸೆಟಪ್ ನೀಡಲಾಗಿದ್ದು, ದೂರದ ಪ್ರಯಾಣಕ್ಕೆ ಅನುಕೂಲಕರವಾಗಿ ಈ ಬೈಕಿನಲ್ಲಿ ಗೊಡ್ಡ ಗಾತ್ರದ ವಿಂಡ್‌ಸ್ಕ್ರೀನ್‌ನೊಂದಿಗೆ ಫಸ್ಟ್ ಇನ್-ಸೆಗ್ಮೆಂಟ್ ವೈಶಿಷ್ಟ್ಯತೆಯ ಟಿಲ್ಟ್-ಹೊಂದಾಣಿಕೆ ಸೌಲಭ್ಯವನ್ನು ಸಹ ಪಡೆಯುತ್ತದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಬೈಕ್ ಮಾದರಿಯ ಆಸನಗಳು ಉತ್ತಮ ಸ್ಥಳಾವಕಾಶ ಹೊಂದಿದ್ದು, ಎಲ್‌ಸಿಡಿ ಪರದೆಗಳನ್ನು 15-ಡಿಗ್ರಿಗಳಿಗೆ ಸರಿಹೊಂದಿಸಬಹುದಾಗಿದೆ. ಹಾಗೆಯೇ ಹೊಸ ಬೈಕ್‌ಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಟರ್ನ್-ಬೈ-ಟರ್ನ್ ನ್ಯಾವಿಗೇಷನ್ ಅಡ್ವೆಂಚರ್ ಮಾದರಿಯಲ್ಲಿ ಪ್ರಮಾಣಿತ ಸಾಧನಗಳಾಗಿವೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಇದಲ್ಲದೆ ಹೊಸ ಅಂಡ್ವೆಂಚರ್ ಮಾದರಿಯಲ್ಲಿ ಕಂಪನಿಯು 15.1-ಲೀಟರ್ ಇಂಧನ ಟ್ಯಾಂಕ್ ಅನ್ನು ಪಡೆದುಕೊಂಡಿದ್ದು, ಇದು ಅತ್ಯುತ್ತಮ ಮೈಲೇಜ್‌ನೊಂದಿಗೆ ಅಡ್ವೆಂಚರ್ ಮಾದರಿಯಾಗಿದೆ. ಇದರಲ್ಲಿ ಸ್ಟ್ಯಾಂಡರ್ಡ್ ಫೀಚರ್ಸ್‌‌ಗಳೊಂದಿಗೆ ಜೊತೆಗೆ ಹೊಸದಾಗಿ ಹೆಡ್‌ಲೈಟ್ ಗ್ರಿಲ್, ನ್ಯಾಕಲ್ ಗಾರ್ಡ್‌ಗಳು, ಆಕ್ಸಿಲರಿ ಲೈಟಿಂಗ್ ಸೇರಿ ವಿವಿಧ ತಾಂತ್ರಿಕ ಅಂಶಗಳನ್ನು ಆಕ್ಸಿಸರಿಸ್ ಪ್ಯಾಕೇಜ್‌ನಲ್ಲಿ ಸೇರ್ಪಡೆಗೊಳಿಸಲಾಗಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಅಡ್ವೆಂಚರ್ ಮೋಟಾರ್‌ಸೈಕಲ್‌‌ನಲ್ಲಿ ಫ್ರೀ ಲೋಡ್ ಹೊಂದಾಣಿಕೆಯ 180 ಎಂಎಂ ಹಿಂಬದಿಯ ಮೊನೊ-ಶಾಕ್ ಸಸ್ಷೆಷನ್‌ನೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ ಅನ್ನು ಹೊಂದಿದ್ದು, ರೋಡ್, ಆಫ್-ರೋಡ್ ಮತ್ತು ರೈನ್ ರೈಡಿಂಗ್ ಮೋಡ್ ಹೊಂದಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಅಡ್ವೆಂಚರ್ ಮಾದರಿಯಲ್ಲಿ ಯಜ್ಡಿ ಕಂಪನಿಯು 220 ಎಂಎಂ ಗ್ರೌಂಡ್ ಕ್ಲಿಯರೆನ್ಸ್‌ ನೀಡಿದ್ದು,ಇದು ಹೆಚ್ಚಿನ ಮಟ್ಟದ ಆಫ್-ರೋಡ್ ಸಾಮರ್ಥ್ಯದೊಂದಿಗೆ 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್ ಅನ್ನು ಪಡೆದುಕೊಂಡಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಹೊಸ ಅಡ್ವೆಂಚರ್ ಮಾದರಿಯು 334ಸಿಸಿ, ಸಿಂಗಲ್-ಸಿಲಿಂಡರ್, ಲಿಕ್ವಿಡ್-ಕೂಲ್ಡ್ ಎಂಜಿನ್‌ನೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆ ಹೊಂದಿರಲಿದ್ದು, 29.7 ಬಿಎಚ್‌ಪಿ ಮತ್ತು 29.9 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹೊಸ ಬೈಕ್ ಮಾದರಿಯಲ್ಲಿ ಮೇಲಿನ ಎರಡು ಸಾಮಾನ್ಯ ಮಾದರಿಗಳು ಡ್ಯುಯಲ್ ಎಕ್ಸಾಸ್ಟ್ ಹೊಂದಿದ್ದರೆ ಅಡ್ವೆಂಚರ್ ಮಾದರಿಯು ಮಾತ್ರ ಸಿಂಗಲ್ ಸೈಡ್ ಎಕ್ಸಾಸ್ಟ್ ಹೊಂದಿದ್ದು, ಹೊಸ ಬೈಕ್ ಮಾದರಿಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 2,09,900 ಬೆಲೆ ಹೊಂದಿರಲಿದೆ.

ಆಧುನಿಕ ವೈಶಿಷ್ಟ್ಯತೆಯೊಂದಿಗೆ ಮಾರುಕಟ್ಟೆಗೆ ಪುನರಾಗಮಿಸಿದ ಯೆಜ್ಡಿ ಹೊಸ ಮೋಟಾರ್‌ಸೈಕಲ್‌ಗಳು!

ಈ ಮೂಲಕ ಕ್ಲಾಸಿಕ್ ಲೆಜೆಂಡ್ ಕಂಪನಿಯು ಯೆಜ್ಡಿ ಹೊಸ ಮಾದರಿಯ ಮೂಲಕ ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರಮುಖ ಕ್ಲಾಸಿಕ್, ಅಡ್ವೆಂಚರ್ ಬೈಕ್ ಮಾದರಿಗಳಿಗೆ ಉತ್ತಮ ಪೈಪೋಟಿ ನೀಡುವ ತವಕದಲ್ಲಿದ್ದು, ಮುಂಬರುವ ದಿನಗಳಲ್ಲಿ ಹೊಸ ಬೈಕ್ ಮಾದರಿಗಳು ಯಾವ ರೀತಿ ಬೇಡಿಕೆ ಪಡೆದುಕೊಳ್ಳಲಿವೆ ಎನ್ನುವುದನ್ನು ಕಾಯ್ದುನೋಡಬೇಕಿದೆ.

Most Read Articles

Kannada
Read more on ಯೆಜ್ಡಿ yezdi
English summary
Yezdi motorcycles first look review details
Story first published: Thursday, January 13, 2022, 12:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X