ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಪ್ರೀಮಿಯಂ ಫೀಚರ್ಸ್ ಹೊಂದಿರುವ ಬೈಕ್‌ಗಳನ್ನು ಪರಿಚಯಿಸಿರುವ ಚೀನಾದ ಝೊಂಟೆಸ್ ಕಂಪನಿಯು ಇತ್ತೀಚೆಗೆ ತನ್ನ 5 ಮಾಡಲ್‌ಗಳನ್ನು ಭಾರತದಲ್ಲಿ ಪರಿಚಯಿಸಿತ್ತು. ಇದೀಗ ತನ್ನ ಐದು ದ್ವಿಚಕ್ರ ವಾಹನಗಳ ಬೆಲೆಗಳನ್ನು ಕೂಡ ಪ್ರಕಟಿಸಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಚೀನಾದ ಪ್ರಸಿದ್ಧ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಝೊಂಟೆಸ್ ಇಗಾಗಲೇ ತನ್ನ ಸ್ವದೇಶಿ ಮಾರುಕಟ್ಟೆಯಲ್ಲಿ ಈ ಬೈಕ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಸದ್ಯ Zontes ಭಾರತೀಯ ಮಾರುಕಟ್ಟೆಯಲ್ಲಿ 350R, 350X, GK350, 350T ಮತ್ತು 350T ADV ಅನ್ನು ಬಿಡುಗಡೆ ಮಾಡಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಬೆಲೆ ವಿವರಗಳನ್ನು ಕೆಳಗೆ ನೋಡಬಹುದು:

ZONTES 350R Price
Blue ₹3,15,000
Black ₹3,25,000
White ₹3,25,000
ZONTES 350X Price
Black and Gold ₹3,35,000
Silver and Orange ₹3,45,000
Black and Green ₹3,45,000
ZONTES GK350 Price
Black and Blue ₹3,37,000
White and Orange ₹3,47,000
Black and Gold ₹3,47,000
ZONTES 350T ADV
Orange ₹3,57,000
Champagne ₹3,67,000
ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಮೇಲಿನ ಬೆಲೆಗಳ ಅಡಿಯಲ್ಲಿ ಭಾರತದಲ್ಲಿ ಝೊಂಟೆಸ್ ಉತ್ಪನ್ನಗಳು ಮಾರಾಟಕ್ಕೆ ಲಭ್ಯವಿದೆ. ಝೊಂಟೆಸ್ ಈ ಎಲ್ಲಾ ದ್ವಿಚಕ್ರ ವಾಹನಗಳನ್ನು ಆದೀಶ್ವರ್ ಆಟೋ ರೈಡ್ ಇಂಡಿಯಾದ ಒಕ್ಕೂಟದ ಅಡಿಯಲ್ಲಿ ನೀಡಲಿದೆ. ಈ ಎಲ್ಲಾ ದ್ವಿಚಕ್ರ ವಾಹನಗಳಲ್ಲಿ 348 ಸಿಸಿ ಡಿಸ್ಪ್ಲೇಸ್ ಮಾಡುವ ಅದೇ ಲಿಕ್ವಿಡ್ ಕೂಲ್ಡ್ ಸಿಂಗಲ್ ಸಿಲಿಂಡರ್ ಮೋಟರ್ ಅನ್ನು ಝೊಂಟೆಸ್ ಬಳಸಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಮೋಟಾರ್ ಗರಿಷ್ಠ 38 HP ಮತ್ತು 32 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಎಂಜಿನ್ ವಿಷಯದಲ್ಲಿ ಮಾತ್ರವಲ್ಲದೆ ಇತರ ಕೆಲವು ಪ್ರಮುಖ ಅಂಶಗಳಲ್ಲಿಯೂ ಅವು ಒಂದೇ ರೀತಿ ಕಾಣುತ್ತವೆ. ಆದರೆ ಆಕಾರ ಮತ್ತು ಡಿಸೈನ್ ವಿಶಿಷ್ಟವಾಗಿ ಕಾಣುತ್ತದೆ. ನಿರ್ದಿಷ್ಟವಾಗಿ ಹೇಳಬೇಕೆಂದರೆ, ಆಯಾ ಬೈಕ್‌ಗಳ ಹೆಸರಿಗೆ ತಕ್ಕಂತೆ ಡಿಸೈನ್ ಮಾಡಲಾಗಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

350R ಬೈಕ್ ಅನ್ನು ನೇಕೆಡ್ ರೂಪದಲ್ಲಿ, 350X ಅನ್ನು ಸ್ಪೋರ್ಟ್ ಬೈಕ್ ರೂಪದಲ್ಲಿ, GK 350 ಅನ್ನು ಕೆಫೆ ರೇಸರ್ ರೂಪದಲ್ಲಿ ಮತ್ತು 350D ಮತ್ತು 350D ಅನ್ನು ADV ಟೂರರ್ ರೂಪದಲ್ಲಿ ಡಿಸೈನ್ ಮಾಡಲಾಗಿದೆ. 350D ADV ಬೈಕ್‌ನ ಹೊರತಾಗಿ, ಎಲ್ಲಾ ಮೋಟಾರ್‌ಸೈಕಲ್‌ಗಳಲ್ಲಿ ಅಲ್ಯೂಮಿನಿಯಂ ಕಾಸ್ಟ್ ಕಟ್ ಅಲಾಯ್ ವೀಲ್‌ಗಳನ್ನು ಬಳಸಲಾಗಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಈ ವೀಲ್‌ಗಳಿಗೆ 120/70-17 ಮತ್ತು 160/60-17 ಟೈರ್‌ಗಳನ್ನು ಅಳವಡಿಸಲಾಗಿದ್ದು, ಇವು ಭಾರತದ ಸವಾಲಿನ ರಸ್ತೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿವೆ. 350T ADV ​​ಒಂದು ಅಡ್ವೆಂಚರ್ ಬೈಕ್ ಆಗಿರುವುದರಿಂದ, ಅದರ ನೋಟವನ್ನು ಹೆಚ್ಚಿಸಲು ಸ್ಪೋಕ್ ವೀಲ್‌ಗಳನ್ನು ಬಳಸಲಾಗಿದೆ. ಈ ಮೂಲಕ ಆಫ್-ರೋಡ್ ಪ್ರಯಾಣಕ್ಕೆ ಸೂಕ್ತವಾದ ಟೈರ್‌ಗಳನ್ನು ಹೊಂದಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಸಸ್ಪೆನ್ಶನ್‌ಗೆ ಸಂಬಂಧಿಸಿದಂತೆ, ಎಲ್ಲಾ ಬೈಕ್‌ಗಳು ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಮೊನೊಶಾಕ್ ಅನ್ನು ಹೊಂದಿವೆ. ಅಂತೆಯೇ, ಉತ್ತಮ ಬ್ರೇಕಿಂಗ್‌ಗಾಗಿ ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 265 ಎಂಎಂ ಡಿಸ್ಕ್ ಅನ್ನು ನೀಡಲಾಗಿದೆ. ಇದರೊಂದಿಗೆ ಎಲ್ಲಾ ಬೈಕ್ ಮಾದರಿಗಳಲ್ಲಿ ಡ್ಯುಯಲ್ ಚಾನೆಲ್ ಎಬಿಎಸ್ ಅನ್ನು ಬಳಸಲಾಗಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಇನ್ನು ಹೆಡ್‌ಲೈಟ್, ಟೈಲ್ ಲ್ಯಾಂಪ್, ಡಿಆರ್‌ಎಲ್, ಇಂಡಿಕೇಟರ್ ಇತ್ಯಾದಿಗಳಲ್ಲಿ ಎಲ್‌ಇಡಿ ಗುಣಮಟ್ಟದ ಲೈಟ್‌ಗಳನ್ನು ಬಳಸಲಾಗಿದೆ. ಈ ಬೈಕ್‌ಗಳು ಫುಲ್ ಕಲರ್ LCD TFT ಸ್ಕ್ರೀನ್, ಫುಲ್ ಕೀಲೆಸ್ ಕಂಟ್ರೋಲ್ ಸಿಸ್ಟಮ್, ನಾಲ್ಕು ವಿಭಿನ್ನ ರೈಡಿಂಗ್ ಮೋಡ್‌ಗಳು, ಡ್ಯುಯಲ್ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳಂತಹ ವೈಶಿಷ್ಟ್ಯಗಳನ್ನು ಹೊಂದಿವೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಈ ಬೈಕ್‌ಗಳಲ್ಲಿ ಒದಗಿಸಲಾದ TFT ಸ್ಕ್ರೀನ್ ಸ್ಪೀಡೋಮೀಟರ್, ನ್ಯಾವಿಗೇಶನ್, ಬ್ಲೂಟೂತ್ ಸಂಪರ್ಕ, ಮ್ಯೂಸಿಕ್, ಇನ್‌ಕಮಿಂಗ್ ಕಾಲ್ಸ್‌ಗೆ ಉತ್ತರಿಸುವುದು, ಟೆಕ್ಸ್ಟ್ ಮೆಸೇಜ್‌ಗಳನ್ನು ಓದುವುದು ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಪ್ರದರ್ಶಿಸುತ್ತದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಈ ಬೈಕ್‌ಗಳು ಒಟ್ಟಾರೆಯಾಗಿ ಎಲ್ಲಾ ವಿಭಾಗಗಳಲ್ಲಿಯೂ ಭಾರತೀಯ ಬೈಕ್‌ಗಳಿಗೆ ಪೈಪೋಟಿ ನೀಡಲಿವೆ. ಸದ್ಯ ಭಾರತದಲ್ಲಿ ಆಫ್‌ ರೋಡ್‌ ಫರ್ಫಾಮೆನ್ಸ್ ವಿಭಾಗದಲ್ಲಿ ಹಿಮಾಲಯನ್ ಬೈಕ್ ಅಗ್ರ ಸ್ಥಾನದಲ್ಲಿದೆ ಇದೀಗ ಝೊಂಟೆಸ್‌ನ 350D ADV ಬೈಕ್ ಹಿಮಾಲಯನ್‌ಗೆ ಯಾವ ಮಟ್ಟಿಗೆ ಪೈಪೋಟಿ ನೀಡಲಿದೆ ಕಾದು ನೋಡಬೇಕಿದೆ.

ಭಾರತದಲ್ಲಿ ತನ್ನ ಐದು ಹೊಸ 350 ರೇಂಜ್ ಬೈಕ್‌ಗಳ ಬೆಲೆಗಳನ್ನು ಬಹಿರಂಗಪಡಿಸಿದ ಝೊಂಟೆಸ್

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸಾಮಾನ್ಯವಾಗಿ ಚೀನಾ ಕಂಪನಿಗಳು ಕಡಿಮೆ ವೆಚ್ಚದಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುತ್ತವೆ. ಅದರಂತೆ ಬಹುಮುಖ ವೈಶಿಷ್ಟ್ಯಗಳನ್ನು ಹೊಂದಿರುವ ಪ್ರೀಮಿಯಂ ಗುಣಮಟ್ಟದ ಬೈಕ್‌ಗಳನ್ನು ಇದೀಗ ಝೋಂಟೆಸ್ ಕಂಪನಿ ತಂದಿದೆ. ಈ ಬೈಕ್‌ಗಳ ಬೆಲೆಯನ್ನು ಘೋಷಿಸುವ ಮೂಲಕ ಝೋಂಟೆಸ್ ಇದನ್ನು ಖಚಿತಪಡಿಸಿದೆ.

Most Read Articles

Kannada
English summary
Zontes has revealed the prices of its five new bikes in India
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X