ಆಕರ್ಷಕ ವಿನ್ಯಾಸದಲ್ಲಿ 2023ರ ಹೋಂಡಾ CB200X ಬೈಕ್ ಬಿಡುಗಡೆ

ಜನಪ್ರಿಯ ದ್ವಿಚ್ಕಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಹಬ್ಬದ ಸೀಸನ್ ನಲ್ಲಿ ಹೆಚ್ಚಿನ ಗ್ರಾಹಕರು ಸೆಳೆಯಲು ತನ್ನ 2023ರ ಹೋಂಡಾ CB200X ( Honda CB200X) ಬೈಕ್ ಅನ್ನು ಬಿಡುಗಡೆಗೊಳಿಸಿದೆ. ಈ ಹೊಸ ಹೋಂಡಾ CB200X ಬೈಕ್ ಬೆಲೆಯು ಎಕ್ಸ್ ಶೋರೂಂ ಪ್ರಕಾರ ರೂ.1.47 ಲಕ್ಷವಾಗಿದೆ.

ಹೊಸದಾಗಿ ಬಿಡುಗಡೆಯಾದ 2023ರ ಹೋಂಡಾ CB200X ಬೈಕ್ ಈಗ ಇತ್ತೀಚಿನ BS6 ಹಂತ 2 ಎಮಿಷನ್ ಮಾನದಂಡಗಳನ್ನು ಅನುಸರಿಸುತ್ತದೆ. ಈ ಬೈಕಿನಲ್ಲಿ ನವೀಕರಿಸಿದ ಪವರ್‌ಟ್ರೇನ್ ಜೊತೆಗೆ ವಿನ್ಯಾಸದಲ್ಲಿ ಕೆಲವು ಬದಲಾವಣೆಗಳನ್ನು ಪಡೆಯಲಾಗಿದೆ. ಹೊಸ ಹೋಂಡಾ CB200X ಬೈಕ್ ಡೀಸೆಂಟ್ ಬ್ಲೂ ಮೆಟಾಲಿಕ್, ಪರ್ಲ್ ನೈಟ್‌ಸ್ಟಾರ್ ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್ ಎಂಬ ಬಣ್ಣಗಳ ಆಯ್ಕೆಗಳಲ್ಲಿ ಲಭ್ಯವಿದೆ. ಈ ಮೂರು ಬಣ್ಣಗಳ ಆಯ್ಕೆಗಳಲ್ಲಿ ಸೆಂಟ್ ಬ್ಲೂ ಮೆಟಾಲಿಕ್ ಹೊಸದಾಗಿ ಸೇರಿಸಲಾಗಿದೆ.

2023 Honda CB200X

ಹೊಸ 2023ರ ಹೋಂಡಾ CB200X ಬೈಕ್ 10-ವರ್ಷದ ವಾರಂಟಿಯೊಂದಿಗೆ (7-ವರ್ಷದ ಆಯ್ಕೆಯ ವಾರಂಟಿ) ನೀಡಿದೆ. ಈ ಹೊಸ ಹೋಂಡಾ CB200X ಬೈಕಿನಲ್ಲಿ 184.04cc, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್, ಫ್ಯೂಯಲ್-ಇಂಜೆಕ್ಟೆಡ್ ಎಂಜಿನ್‌ ಅನ್ನು ಹೊಂದಿದೆ. ಈ ಎಂಜಿ 8,500rpm ನಲ್ಲಿ 17.03bhp ಮತ್ತು 6,000rpm ನಲ್ಲಿ 15.9Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಹೊಸದಾಗಿ ಬಿಡುಗಡೆಯಾದ 2023ರ ಹೋಂಡಾ CB200X ಬೈಕಿನಲ್ಲಿ 5-ಸ್ಪೀಡ್ ಗೇರ್ ಬಾಕ್ಸ್ ಅನ್ನು ಜೋಡಿಸಲಾಗಿದೆ. ಇದು ಈಗ ಗೇರ್‌ಗಳನ್ನು ಆಕ್ರಮಣಕಾರಿಯಾಗಿ ಬದಲಾಯಿಸುವಾಗ ಚಕ್ರ ಲಾಕ್ ಆಗುವುದನ್ನು ತಡೆಯಲು ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡಿದೆ.ಹೊಸ ಹೋಂಡಾ CB200X ಬೈಕ್ ಸಸ್ಪೆಕ್ಷನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಮುಂಭಾಗದಲ್ಲಿ USD ಫೋರ್ಕ್‌ಗಳನ್ನು ಮತ್ತು ಹಿಂಭಾಗದಲ್ಲಿ ಮೊನೊ-ಶಾಕ್ ಅಬ್ಸಾರ್ಬರ್ ಅನ್ನು ಒಳಗೊಂಡಿದೆ.

2023 Honda CB200X

ಇನ್ನು ಸುರಕ್ಷತೆಯ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುವ ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, ಈ ಹೊಸ ಹೋಂಡಾ ಬೈಕಿನಲ್ಲಿ ಮುಂಭಾಗ ಮತ್ತು ಹಿಂಭಾಗದಲ್ಲಿ ಕ್ರಮವಾಗಿ 276 mm ಮತ್ತು 220 mm ಪೆಟಲ್ ಡಿಸ್ಕ್ ಬ್ರೇಕ್ ಗಳನ್ನು ಹೊಂದಿದೆ. ಇನ್ನು ಈ ಬೈಕಿನಲ್ಲಿ ಹೆಚ್ಚಿನ ಸುರಕ್ಷತೆಗಾಗಿ ಸಿಂಗಲ್-ಚಾನೆಲ್ ABS ಅನ್ನು ಜೋಡಿಸಲಾಗಿದೆ.

ಈ ಹೊಸ 2023ರ ಹೋಂಡಾ CB200X ಬೈಕಿನಲ್ಲಿ ಕೆಲವು ಗಮನಾರ್ಹ ಫೀಚರ್ಸ್ ಗಳನ್ನು ಹೊಂದಿವೆ. ಈ ಬೈಕಿನಲ್ಲಿ LED ಲೈಟ್ ತಂತ್ರಜ್ಞಾನ, ಅಲಾಯ್ ವ್ಹ್ಹೀಲ್ ಗಳು, ಟ್ವಿನ್ ಟ್ರಿಪ್ ಮೀಟರ್‌ಗಳು, ಬ್ಯಾಟರಿ ವೋಲ್ಟ್‌ಮೀಟರ್, ಗೇರ್ ಪೊಸಿಷನ್ ಇಂಡಿಕೇಟರ್ ಮತ್ತು ಒಂದು ಸಂಪೂರ್ಣ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ.

ಹೊಸ ಹೋಂಡಾ CB200X ಬೈಕ್ ಬಿಡುಗಡೆಯ ಬಗ್ಗೆ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಕಂಪನಿಯ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ Tsutsumu Otani ಅವರು ಮಾತನಾಡಿ, ಇಂದು ನಾವು ಹೋಂಡಾದ ಪೌರಾಣಿಕ CB ಪರಂಪರೆಯಿಂದ ಪ್ರೇರಿತವಾದ 2023ರ CB200X ಅನ್ನು ಬಿಡುಗಡೆ ಮಾಡುತ್ತಿರುವಾಗ ಮಹತ್ವದ ಮೈಲಿಗಲ್ಲನ್ನು ಗುರುತಿಸುತ್ತದೆ.

2021 ರಲ್ಲಿ ಬಿಡುಗಡೆಯಾದಾಗಿನಿಂದ, ಹೋಂಡಾ CB200X ಬೈಕ್ ಮಾರುಕಟ್ಟೆಯಲ್ಲಿ ಪ್ರಚಂಡ ಪ್ರತಿಕ್ರಿಯೆ ಮತ್ತು ಗ್ರಾಹಕರ ದಿನನಿತ್ಯದ ಪ್ರಯಾಣಗಳಿಗೆ ಮತ್ತು ನಗರದಲ್ಲಿ ವಿಕೇಂಡ್ ಗಳಲ್ಲಿ ಸಣ್ಣ ಟ್ರೀಪ್ ಎಲ್ಲಾ ಹೋಗಲು ಇದು ಉತ್ತಮ ಆಯ್ಕೆಯಾಗಿದೆ. ಈ ಹೊಸ ಹೋಂಡಾ CB200X ಹೊಸ ನವೀಕರಣಗಳೊಂದಿಗೆ ಉತ್ತಮ ಸವಾತಿ ಅನುಭವನ್ನು ನೀಡುತ್ತದೆ ಎಂದು ಹೇಳಿದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Saturday, September 16, 2023, 10:38 [IST]
English summary
2023 honda cb200x price specs features details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+