ಅದ್ಭುತ ಫೀಚರ್ಸ್, ಆಕರ್ಷಕ ವಿನ್ಯಾಸ ಹೊಂದಿರುವ 2023ರ ಹೋಂಡಾ SP125 ಬೈಕ್ ವಿಶೇಷತೆಗಳು
ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI)ಇತ್ತೀಚೆಗೆ ಹೊಸ ಫಿಚರ್ಸ್ ಮತು ನವೀಕರಿಸಿದ ಪವರ್‌ಟ್ರೇನ್‌ನೊಂದಿಗೆ 2023ರ ಹೋಂಡಾ SP125 ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಈ 2023ರ ಹೋಂಡಾ SP125 ಬೈಕಿನ ಬಗ್ಗೆ ಹೆಚ್ಚಿನ ಮಾಹಿತಿಗಳು ಇಲ್ಲಿದೆ.
ಬೆಲೆ ಮತ್ತು ರೂಪಾಂತರಗಳು: 2023ರ ಹೋಂಡಾ SP125 ಬೈಕ್ ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದು ಡ್ರಮ್ ಮತ್ತು ಡಿಸ್ಕ್ ರೂಪಾಂತರಗಳಾಗಿವೆ. ಈ ಹೋಂಡಾ ಬೈಕಿನ ಡ್ರಮ್ ರೂಪಾಂತರದ ಬೆಲೆಯು ರೂ.85,121 ಗಳಾದರೆ, ಈ ಬೈಕಿನ ಟಾಪ್ ರೂಪಾಂತರವಾದ ಡಿಸ್ಕ್ ರೂಪಾಂತರ ಬೆಲೆಯು ರೂ,89,131 ಆಗಿದೆ. ಈ ಎಲ್ಲಾ ಬೆಲೆಗಳು ಎಕ್ಸ್ ಶೋರೂಂ ಪ್ರಕಾರವಾಗಿದೆ.

ಬಣ್ಣಗಳ ಆಯ್ಕೆ: 2023ರ ಹೋಂಡಾ SP125 ಬೈಕ್ ಬ್ಯಾಕ್, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಇಂಪೀರಿಯಲ್ ರೆಡ್ ಮೆಟಾಲಿಕ್, ಪರ್ಲ್ ಸೈರನ್ ಬ್ಲೂ ಮತ್ತು ನ್ಯೂ ಮ್ಯಾಟ್ ಮಾರ್ವೆಲ್ ಬ್ಲೂ ಮೆಟಾಲಿಕ್ ಸೇರಿದಂತೆ 5 ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ. ಗ್ರಾಹಕರು ಇದರಲ್ಲಿ ತಮ್ಮ ಮೆಚ್ಚಿನ ಬಣ್ಣದ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು.
ಎಂಜಿನ್ ಮತ್ತು ಗೇರ್‌ಬಾಕ್ಸ್: 2023ರ ಹೋಂಡಾ SP125 ಬೈಕಿನಲ್ಲಿ 125cc, ಸಿಂಗಲ್-ಸಿಲಿಂಡರ್, ಫ್ಯೂಯಲ್ ಇಂಜೆಕ್ಟೆಡ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 10.7 bhp ಪವರ್ ಮತ್ತು 10.9 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ACG ಸ್ಟಾರ್ಟರ್ ಮೋಟಾರ್ ಮತ್ತು 5-ಸ್ಪೀಡ್ ಗೇರ್‌ಬಾಕ್ಸ್‌ನೊಂದಿಗೆ ಜೋಡಿಸಲಾಗಿದೆ.

ಎಂಜಿನ್ ಬದಲಾವಣೆಗಳು: 2023ರ ಹೋಂಡಾ SP125 ಬೈಕಿನಲ್ಲಿನ ಎಂಜಿನ್ ಅನ್ನು ಇತ್ತೀಚಿನ RDE ಮತ್ತು BS6 ಹಂತ 2 ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ನವೀಕರಿಸಲಾಗಿದೆ. ಇದಲ್ಲದೆ, ಈ ಬೈಕ್ ನೈಜ-ಸಮಯದ ಹೊರಸೂಸುವಿಕೆಯನ್ನು ಮೇಲ್ವಿಚಾರಣೆ ಮಾಡಲು OBD2 ಪೋರ್ಟ್ ಅನ್ನು ಸಹ ಹೊಂದಿದೆ. ಈ ಬೈಕ್ ಹೊಸ ನವೀಕರಣಗಳೊಂದಿಗೆ ಉತ್ತಮ ಮೈಲೇಜ್ ಅನ್ನು ಒದಗಿಸುತ್ತದೆ.
ಫೀಚರ್ಸ್; ಹೊಸ ಹೋಂಡಾ SP125 ಬೈಕ್ ಫುಲ್ ಡಿಜಿಟಲ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್, 100mm ಅಗಲದ ಹಿಂಭಾಗದ ಟೈರ್‌ಗಳು, LED ಹೆಡ್‌ಲ್ಯಾಂಪ್, ಕಾಂಬಿ-ಬ್ರೇಕ್ ಸಿಸ್ಟಮ್, ಇಂಟಿಗ್ರೇಟೆಡ್ ಪಾಸ್ ಲೈಟ್ ಸ್ವಿಚ್, ಅಲಾಯ್ ವ್ಹೀಲ್ ಗಳು ಮತ್ತು ಹೆಚ್ಚಿನವುಗಳೊಂದಿಗೆ ಬರುತ್ತದೆ. ಇದರ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಸರಾಸರಿ ಫ್ಯೂಯಲ್ ದಕ್ಷತೆ, ನೈಜ-ಸಮಯದ ಇಂಧನ ದಕ್ಷತೆ, ECO ಸೂಚಕ, ಗೇರ್ ಪೊಸಿಷನ್ ಸೂಚಕ, ಸರ್ವಿಸ್ ಮತ್ತು ಇತರ ಮಾಹಿತಿಗಳನ್ನು ಪ್ರದರ್ಶಿಸುತ್ತದೆ.

2023ರ ಹೋಂಡಾ SP125 ಬೈಕ್ ಬಿಡುಗಡೆಯೊಂದಿಗೆ 125cc ಬೈಕ್ ವಿಭಾಗದಲ್ಲಿ ತನ್ನ ಪ್ರಾಬಲ್ಯವನ್ನು ಮತ್ತಷ್ಟು ವಿಸ್ತರಿಸಲು ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಕಂಪನಿಯು ಎದುರುನೋಡುತ್ತಿದೆ. ಅಲ್ಲದೇ, ನವೀಕರಿಸಿದ ಈ ಬೈಕ್ ಮಾರಾಟದ ಅಂಕಿಅಂಶಗಳ ವಿಷಯದಲ್ಲಿ ತಯಾರಕರ ನಿರೀಕ್ಷೆಗಳನ್ನು ಪೂರೈಸುತ್ತದೆ ಎಂದು ನಿರೀಕ್ಷಿಸುತ್ತೇವೆ. ಅತ್ಯುತ್ತಮ ಫೀಚರ್ಸ್ ಗಳೊಂದಿಗೆ ಈ ಬೈಕ್ ಹೆಚ್ಚಿನ ಗ್ತಾಹರನ್ನು ಸೆಳೆಯುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸೋಷಿಯಲ್ ಮೀಡಿಯಾ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ವೀಕ್ಷಿಸಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳನ್ನು ಫಾಲೋ ಮಾಡಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications