Ather 450S EV ಸ್ಕೂಟರ್ LCD ಇನ್ಸ್ಟ್ರುಮೆಂಟ್ ಕ್ಲಸ್ಟರ್ ಬಹಿರಂಗ: ಇದು ಅತ್ಯಂತ ಕೈಗೆಟುಕುವ ಇವಿ
ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳು ಎಂದಾಕ್ಷಣ ಮೊದಲಿಗೆ ನೆನಪಾಗುವ ನಗರ ಬೆಂಗಳೂರು. ಏಕೆಂದರೆ ಎಲೆಕ್ಟ್ರಿಕ್ ವಾಹನ ವಲಯದಲ್ಲಿ ಬಹುತೇಕ ದ್ವಿಚಕ್ರ ವಾಹನಗಳನ್ನು ತಯಾರಿಸುತ್ತಿರುವ ಕಂಪನಿಗಳು ಬೆಂಗಳೂರು ಮೂಲದ್ದಾಗಿವೆ. ಎಥರ್, ಓಲಾ, ಸಿಂಪಲ್ ಎನರ್ಜಿ ಇವೆಲ್ಲವು ಬೆಂಗಳೂರಿನ ಕಂಪನಿಗಳಾಗಿದ್ದು, ಇದೀಗ ಕೈಗೆಟುಕುವ ಇವಿ ಸ್ಕೂಟರ್ ಬರುತ್ತಿದೆ.
ಬೆಂಗಳೂರು ಮೂಲದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಎಥರ್ ಎನರ್ಜಿ ಶೀಘ್ರದಲ್ಲೇ ಅತ್ಯಂತ ಕೈಗೆಟುಕುವ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಲಿದೆ. ಇದಕ್ಕೆ ಸಾಕ್ಷಿಯಾಗಿ ಈಗ ಎಥರ್ EV ತಯಾರಕರು ಮುಂಬರುವ Ather 450S ನ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಬಹಿರಂಗಪಡಿಸಿದ್ದಾರೆ.

ಹೇಳುವುದಾದರೆ, ಎಥರ್ ಎನರ್ಜಿ ಈಗಾಗಲೇ ಹೊಸ ಅಥರ್ 450S ಬೆಲೆಯನ್ನು ಬಹಿರಂಗಪಡಿಸಿದೆ. ಪ್ರಸ್ತುತ, ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್‌ನ ಬೆಲೆ ರೂ 1.30 ಲಕ್ಷ (ಎಕ್ಸ್ ಶೋ ರೂಂ) ಇದ್ದು, ಕಂಪನಿಯು ಈಗಾಗಲೇ ಹೊಸ ಸ್ಕೂಟರ್‌ಗಾಗಿ ಪ್ರೀ-ಬುಕಿಂಗ್ ಅನ್ನು ಪ್ರಾರಂಭಿಸಿದೆ. ಆದರೆ ಸ್ಕೂಟರ್ ಅನ್ನು ಇನ್ನು ಬಿಡುಗಡೆ ಮಾಡಿಲ್ಲ.
ಎಥರ್, ತನ್ನ 450 ಶ್ರೇಣಿಯ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿಯೇ ಹೆಚ್ಚು ಕೈಗೆಟುಕುವ ರೂಪಾಂತರವನ್ನು ಬಿಡುಗಡೆ ಮಾಡುವುದರೊಂದಿಗೆ, ಎಥರ್ ಎನರ್ಜಿಯು ಎಲೆಕ್ಟ್ರಿಕ್ ಸ್ಕೂಟರ್ ವಲಯದಲ್ಲಿ ಹೆಚ್ಚಿನ ಗ್ರಾಹಕರನ್ನು ಆಕರ್ಷಿಸಲು ನೋಡುತ್ತಿದೆ. ಇದು EV ತಯಾರಕರ ಒಟ್ಟಾರೆ ಮಾರಾಟದ ಅಂಕಿಅಂಶಗಳನ್ನು ಸುಧಾರಿಸಲು ಸಹಾಯ ಮಾಡಲಿದೆ ಎಂದು ಹೇಳಬಹುದು.

ಸ್ಕೂಟರ್ ಬಿಡುಗಡೆಗೆ ಕಾಯುತ್ತಿರುವ ಗ್ರಾಹಕರಿಗಾಗಿ ಕಂಪನಿ ಇದೀಗ ಈ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಪೋಸ್ಟರ್ ಬಿಡುಗಡೆ ಮಾಡಿದೆ. ಈ ಹೊಸ ಎಥೆರ್ 450S ಪೋಸ್ಟರ್‌ನಲ್ಲಿನ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ಹೆಚ್ಚು ಸರಳವಾದ ವಿಭಜಿತ LCD ಡಿಸ್ಪ್ಲೇ ಅನ್ನು ಹೊಂದಿದೆ. ಅಂತೆಯೇ ಇದು ನ್ಯಾವಿಗೇಷನ್, ಟಚ್ ಇಂಟರ್ಫೇಸ್ ಸೇರಿದಂತೆ ಕೆಲವು ವೈಶಿಷ್ಟ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.
ಏಕೆಂದರೆ ಕಂಪನಿಯು ಬೆಲೆಗೆ ತಕ್ಕಂತೆ ಬೇಕಾದ ಫೀಚರ್‌ಗಳನ್ನು ಮಾತ್ರ ಇದರಲ್ಲಿ ನೀಡಲಿದ್ದು, ಇದು ಕಂಪನಿಯ ಎಂಟ್ರಿ ಲೆವಲ್ ಮಾದರಿಯಾಗಿರಲಿದೆ. ಎಥರ್ 450S ಕಂಪನಿಯ ಅತ್ಯಂತ ಯಶಸ್ವಿ 450 ಪ್ಲಾಟ್‌ಫಾರ್ಮ್ ಅನ್ನು ಆಧರಿಸಿದ್ದು, 450X ನಲ್ಲಿನ 3.7kW ಬ್ಯಾಟರಿ ಪ್ಯಾಕ್‌ಗೆ ಬದಲಾಗಿ 3kWh ಬ್ಯಾಟರಿ ಪ್ಯಾಕ್‌ನೊಂದಿಗೆ 450S ಬರಲಿದೆ.

ಈ ಚಿಕ್ಕ ಬ್ಯಾಟರಿ ಪ್ಯಾಕ್‌ನ ಪರಿಣಾಮವಾಗಿ, ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಮಾಡಲಾದ ಬ್ಯಾಟರಿ ಪ್ಯಾಕ್‌ನಲ್ಲಿ 115 ಕಿ.ಮೀ ಗಳವರೆಗೆ ಮಾತ್ರ ಹೋಗಬಹುದು. ಈ ಮಾದರಿಯು ಗಂಟೆಗೆ 90 ಕಿ.ಮೀ ವೇಗವನ್ನು ತಲುಪುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಉಳಿದಂತೆ ಹೊಸ ಎಥರ್ 450S ಎಲೆಕ್ಟ್ರಿಕ್ ಸ್ಕೂಟರ್‌ನ ವಿನ್ಯಾಸವು ಎಥರ್ 450 X ಎಲೆಕ್ಟ್ರಿಕ್ ಸ್ಕೂಟರ್‌ನಂತೆಯೇ ಉಳಿಯುವ ಸಾಧ್ಯತೆಯಿದೆ. ಹೊಸ ಮಾದರಿಯು ಕೆಲವು ಪ್ರೀಮಿಯಂ ಬಿಟ್‌ಗಳನ್ನು ಹೆಚ್ಚು ಸಾಂಪ್ರದಾಯಿಕ ಘಟಕಗಳೊಂದಿಗೆ ಬದಲಾಯಿಸುವ ಸಾಧ್ಯತೆಯಿದ್ದು, ಇವನ್ನು ಕಾಸ್ಟ್ ಕಟ್ಟಿಂಗ್ ಮಾಡುವ ಸಾಧ್ಯತೆ ಇದೆ.


Click it and Unblock the Notifications








