Ather 450X ಕಾರ್ಪೊರೇಟ್ ರಿಯಾಯಿತಿ... ಉದ್ಯೋಗಿಗಳಿಗೆ ರೂ. 16,259 ವರೆಗೆ ಪ್ರಯೋಜನಗಳು

ದೇಶದಲ್ಲಿ ಹೆಚ್ಚಾಗುತ್ತಿರುವ ಇಂಧನ ಬೆಲೆಗಳ ನಡುವೆ ಹುಟ್ಟಿಕೊಂಡಿರುವ ಭಾರತದ ಪ್ರಮುಖ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ತಯಾರಕ ಕಂಪನಿ ಎಥರ್ ಎನರ್ಜಿ, ಇ-ಮೊಬಿಲಿಟಿಯನ್ನು ಉತ್ತೇಜಿಸಲು ತನ್ನ ಹೊಸ ಕಾರ್ಪೊರೇಟ್ ಔಟ್‌ರೀಚ್ ಪ್ರೋಗ್ರಾಂ ಅನ್ನು ಹೊರತಂದಿದೆ. ಕಂಪನಿಯ ತಿಂಗಳ ಅವಧಿಯ ಕಾರ್ಯಕ್ರಮವು ಫೆಬ್ರವರಿ 28 ರವರೆಗೆ ಮಾನ್ಯವಾಗಿರುತ್ತದೆ.

ಸದ್ಯ ಮಾಲಿನ್ಯ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಇವಿ ಕಂಪನಿಗಳು ಕೂಡ ಸಾಕಷ್ಟು ಸಹಕರಿಸುತ್ತಿವೆ. ಅದರಲ್ಲೂ ದ್ವಿಚಕ್ರ ಇವಿ ವಲಯದ ಕೊಡುಗೆ ತುಂಬಾನೆ ಇದೆ. ಇದೀಗ ಇವಿಗಳ ಬಳಕೆಯನ್ನು ಹೆಚ್ಚಿಸುವ ಸಲುವಾಗಿ ಎಥರ್ 2,500 ಕ್ಕೂ ಹೆಚ್ಚು ಸಂಸ್ಥೆಗಳ ಉದ್ಯೋಗಿಗಳನ್ನು ಗುರಿಯಾಗಿಸಿಕೊಂಡು ಕಾರ್ಪೊರೇಟ್ ಔಟ್‌ರೀಚ್ ಪ್ರೋಗ್ರಾಂ ಪರಿಚಯಿಸಲಾಗಿದೆ. ಇದರಲ್ಲಿ ಕಾರ್ಪೊರೇಟ್ ಉದ್ಯೋಗಿಗಳಿಗೆ ಒಟ್ಟು ರೂ. 16,259 ವರೆಗಿನ ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ.

Ather 450X ಕಾರ್ಪೊರೇಟ್ ರಿಯಾಯಿತಿ... ಉದ್ಯೋಗಿಗಳಿಗೆ ರೂ. 16,259 ವರೆಗೆ ಪ್ರಯೋಜನಗಳು

ಎಥರ್ ಎನರ್ಜಿ ಕಾರ್ಪೊರೇಟ್ ರಿಯಾಯಿತಿಗಳು
ಎಥರ್ ತನ್ನ ಇ-ಸ್ಕೂಟರ್‌ಗಳನ್ನು ಖರೀದಿಸಲು ರೂ. 4,000 ಮೌಲ್ಯದ ಕಾರ್ಪೊರೇಟ್ ರಿಯಾಯಿತಿ, ರೂ. 4,000 ಮೌಲ್ಯದ ವಿನಿಮಯ ಬೋನಸ್ ಮತ್ತು ಸಾಲದ ಮೇಲಿನ ತೆರಿಗೆ ಉಳಿತಾಯವನ್ನು ನೀಡುತ್ತಿದೆ. ಉತ್ಪನ್ನ ಮುಂಭಾಗದಲ್ಲಿ 3 ವರ್ಷಗಳ EV ತಯಾರಕರ ವಾರಂಟಿ ಜೊತೆಗೆ 8,259 ರೂ. ಮೌಲ್ಯದ ಪೂರಕ 2 ವರ್ಷಗಳ ವಿಸ್ತೃತ ಬ್ಯಾಟರಿ ಖಾತರಿಯನ್ನು ನೀಡುತ್ತಿದೆ. ಈ ಕೊಡುಗೆಗಳು ಫೆಬ್ರವರಿ 28, 2023 ರವರೆಗೆ ಮಾನ್ಯವಾಗಿರುತ್ತವೆ.

ಎಥರ್ ಎನರ್ಜಿ ಪ್ರಕಾರ, ರಿಲಯನ್ಸ್ ಜಿಯೋ ಇನ್ಫೋಕಾಮ್, ವಿಪ್ರೋ ಟೆಕ್ನಾಲಜೀಸ್, ಸ್ಯಾಮ್‌ಸಂಗ್ ಇಂಡಿಯಾ, ಮಿಂತ್ರಾ, ಟಾಟಾ ಟೆಕ್ನಾಲಜೀಸ್, ಐಆರ್‌ಸಿಟಿಸಿ, ಭಾರ್ತಿ ಏರ್‌ಟೆಲ್ ಮುಂತಾದ ಪ್ರಮುಖ ಸಂಸ್ಥೆಗಳ ಉದ್ಯೋಗಿಗಳಿಗೆ ಅದರ ಕಾರ್ಪೊರೇಟ್ ಕೊಡುಗೆಗಳು ಲಭ್ಯವಿವೆ. ಈ ಬೆಂಗಳೂರು ಮೂಲದ EV ಸ್ಟಾರ್ಟ್‌ಅಪ್ ಉದ್ಯೋಗಿಗಳ ಕೆಲಸದ ಸ್ಥಳಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲು ಯೋಜನೆಗಳನ್ನು ರೂಪಿಸಿಕೊಂಡಿದೆ. ಹಾಗಾಗಿ ವಾಹನ ಖರೀದಿಸುವ ಉದ್ಯೋಗಿಗಳು ಯಾವುದೇ ಚಾರ್ಜಿಂಗ್ ಕುರಿತ ಭಯಪಡುವ ಅಗತ್ಯವಿಲ್ಲ.

ಎಥರ್ ಎನರ್ಜಿ ಇದೇ ಮಾರ್ಚ್ ವೇಳೆಗೆ 100 ನಗರಗಳಲ್ಲಿ 150 ಕೇಂದ್ರಗಳಿಗೆ ತನ್ನ ಜಾಲವನ್ನು ವಿಸ್ತರಿಸಲು ಯೋಜಿಸಿದೆ. ಬ್ರ್ಯಾಂಡ್ ದೇಶಾದ್ಯಂತ 900 ಸ್ಟೇಷನ್‌ಗಳ ವೇಗದ ಚಾರ್ಜಿಂಗ್ ನೆಟ್‌ವರ್ಕ್ ಅನ್ನು ಸಹ ಹೊಂದಿದೆ. ದೇಶದ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಕಂಪನಿಯನ್ನು ತೆಗೆದುಕೊಂಡರೂ ಬೇರೆ ಯಾವುದೇ ಬ್ರಾಂಡ್‌ನಲ್ಲಿ ಇಷ್ಟು ದೊಡ್ಡ ಶ್ರೇಣಿಯ ವೇಗದ ಚಾರ್ಜಿಂಗ್ ಆಯ್ಕೆಗಳಿಲ್ಲ ಎಂದು ಹೇಳಬಹುದು. ಕಂಪನಿಯು ಇತ್ತೀಚೆಗೆ Atherstack OTA ಅಪ್‌ಡೇಟ್‌ನೊಂದಿಗೆ 450X ಅನ್ನು ನವೀಕರಿಸಿದೆ.

ಎಥರ್ Aetherstack 5.0 ಆವೃತ್ತಿಯು ಆಟೋ ಹೋಲ್ಡ್ ಫೀಚರ್, ಹೊಸ ರೈಡ್ ಇಂಟರ್ಫೇಸ್, ಬ್ಲೂಟೂತ್ ಕನೆಕ್ಟಿವಿಟಿ, ಟ್ರಿಪ್ ಮಾಹಿತಿ ಮತ್ತು ಹೊಸ ಮ್ಯಾಪ್ಸ್ ಸಹ ಸುಧಾರಿಸಲಾಗಿದೆ. ಎಥರ್ ಮಾದರಿಯಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳು ಮತ್ತು ಹೊಸ ಬಣ್ಣದ ಆಯ್ಕೆಗಳನ್ನು ಪರಿಚಯಿಸುವ ಮೂಲಕ ಗಮನ ಸೆಳೆದಿದೆ. ಪ್ರಮುಖ ಅಂಶವೆಂದರೆ ಓಲಾ ಎಲೆಕ್ಟ್ರಿಕ್‌ನಂತಹ ಪ್ರತಿಸ್ಪರ್ಧಿಗಳು ತಮ್ಮ ಕೊಡುಗೆಗಳನ್ನು ಹೆಚ್ಚಿಸಿರುವ ಸಮಯದಲ್ಲಿ ಹೊಸ ಕಾರ್ಪೊರೇಟ್ ಪ್ರೋಗ್ರಾಂ ಬಂದಿರುವುದು ಇತರ ಸ್ಕೂಟರ್‌ಗಳ ನಡುವೆ ಪೈಪೋಟಿ ಹೆಚ್ಚಾಗುವಂತೆ ಮಾಡಿದೆ.

2023 ಅಥರ್ 450X: ಬೆಲೆ ಮತ್ತು ವಿಶೇಷಣಗಳು
2023 Ather 450X ಅನ್ನು ಇತ್ತೀಚೆಗೆ ಭಾರತದಲ್ಲಿ 1.42 ಲಕ್ಷ ರೂ. (ದೆಹಲಿಯ ಎಕ್ಸ್ ಶೋ ರೂಂ) ಗೆ ಬಿಡುಗಡೆ ಮಾಡಲಾಗಿದೆ. ಇದು 3.7 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು 6 kW ಎಲೆಕ್ಟ್ರಿಕ್ ಮೋಟಾರ್‌ನೊಂದಿಗೆ ಜೋಡಿಸಿದ್ದು, ಇದು 26 Nm ಪೀಕ್ ಟಾರ್ಕ್ ಅನ್ನು ಅಭಿವೃದ್ಧಿಪಡಿಸುತ್ತದೆ. ಈ ಇ-ಸ್ಕೂಟರ್ ಪ್ರತಿ ಚಾರ್ಜ್‌ಗೆ 146 ಕಿ.ಮೀ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಇದು 7.0-ಇಂಚಿನ ಟಚ್‌ಸ್ಕ್ರೀನ್ ಡ್ಯಾಶ್ ಬೋರ್ಡ್ ಹೊಂದಿದ್ದು, ವಾಹನ ಕುರಿತ ಎಲ್ಲಾ ಮಾಹಿತಿಯನ್ನು ಅದರಲ್ಲಿ ನೋಡಬಹುದು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

More from DriveSpark

Article Published On: Wednesday, February 8, 2023, 19:45 [IST]
English summary
Ather 450x corporate discount benefits up to rs 16 259
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+