Auto Expo 2023: ಯುವಕರ ಹಾಟ್ ಫೆವರೇಟ್ 'ಬಜಾಜ್ ಪಲ್ಸರ್ NS160' ಫ್ಲೆಕ್ಸ್ ಫ್ಯುಯೆಲ್ ಅನಾವರಣ

ಬಜಾಜ್ ಆಟೋ, ಯುವಕರ ಫೆವರೇಟ್ ಬೈಕ್ 'ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಅನ್ನು ದೆಹಲಿಯ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶಿಸಿದೆ. ಈ ಬೈಕ್ ಅನಾವರಣದೊಂದಿಗೆ ಕಂಪನಿಯು ಫ್ಲೆಕ್ಸ್ ಫ್ಯುಯೆಲ್ ವಿಭಾಗವನ್ನು ಪ್ರವೇಶಿಸಿದೆ. ಹೊಸ ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಬಗ್ಗೆ ಹೆಚ್ಚಿನ ವಿವರ ತಿಳಿಯೋಣ ಬನ್ನಿ..

ಬಜಾಜ್ ಪಲ್ಸರ್ NS160 ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಮಾರಾಟವಾಗುವ ಬೈಕ್‌ಗಳಲ್ಲಿ ಒಂದಾಗಿದ್ದು, ಇದೀಗ ಈ ಬೈಕ್ ನ ಫ್ಲೆಕ್ಸ್ ಫ್ಯುಯೆಲ್ ಮಾದರಿಯನ್ನು ಅನಾವರಣ ಮಾಡಲಾಗಿದೆ. ಇದು ಅದರ ಸ್ಟ್ಯಾಂಡರ್ಡ್ ಮಾದರಿಗೆ ಬಹುತೇಕ ಹೋಲುತ್ತದೆ ಎಂದು ಹೇಳಬಹುದು. ಈ ಫ್ಲೆಕ್ಸ್ ಫ್ಯುಯೆಲ್ ಮೋಟಾರ್‌ಸೈಕಲ್ ಎಥೆನಾಲ್ ಆಧಾರಿತ ಫ್ಯುಯೆಲ್ (E20 ರಿಂದ E85: ಅಂದರೆ, ಎಥೆನಾಲ್ ಹಾಗೂ ಪೆಟ್ರೋಲ್) ಮೂಲಕ ಚಲಿಸಲಿದ್ದು, ಇದು ಉತ್ತಮ ಕಾರ್ಯಕ್ಷಮತೆ ಹೊಂದಿರಲಿದೆ.

ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಅನಾವರಣ

ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಬೈಕ್, 160.37 ಸಿಸಿ, 4 ಸ್ಟ್ರೋಕ್ ಏರ್ ಕೂಲ್ಡ್ ಎಂಜಿನ್‌ ಹೊಂದಿದ್ದು, ಇದು 7,000 rpm ನಲ್ಲಿ 14.6 bhp ಗರಿಷ್ಠ ಪವರ್ ಮತ್ತು 8,500 rpm ನಲ್ಲಿ 12.5 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಈ ಬೈಕ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಈ ಬೈಕಿನ ಫ್ಯುಯೆಲ್ ಟ್ಯಾಂಕ್ ಸಾಮರ್ಥ್ಯವು 12 ಲೀಟರ್ ವರೆಗೆ ಇರುತ್ತದೆ. ಹಾಗಾಗಿ, ಲಾಂಗ್ ರೈಡ್ ಮಾಡಲು ಬಯಸುವವರಿಗೆ ಇದು ತುಂಬಾ ಸೂಕ್ತವಾಗಿರುವ ಬೈಕ್.

ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಅನಾವರಣ

ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಬೈಕ್ ನ ಸುತ್ತಳತೆಯ ಬಗ್ಗೆ ಹೇಳುವುದಾದರೆ, ಇದು 2017 ಎಂಎಂ ಉದ್ದ, 804 ಎಂಎಂ ಅಗಲ, 1060 ಎಂಎಂ ಎತ್ತರ ಮತ್ತು 1372 ಎಂಎಂ ವ್ಹೀಲ್‌ಬೇಸ್ ಅನ್ನು ಹೊಂದಿದೆ. ಗ್ರೌಂಡ್ ಕ್ಲಿಯರೆನ್ಸ್ ವಿಚಾರಕ್ಕೆ ಬಂದರೆ, ಪಲ್ಸರ್ NS 160 ಫ್ಲೆಕ್ಸ್ ಫ್ಯುಯೆಲ್ ಮೋಟಾರ್ ಸೈಕಲ್ 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಬೈಕ್‌ನ ಒಟ್ಟು ತೂಕ ಬರೋಬ್ಬರಿ 301 ಕೆಜಿ ವರೆಗೆ ಇದೆ.

ಆಕರ್ಷಕ ಲುಕ್ ಹೊಂದಿರುವ ಈ ಬೈಕ್ ಯುವಕರು ಲೈಕ್ ಮಾಡಬಹುದು. ಇದು 12 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಅನ್ನು ಹೊಂದಿದ್ದು, ಡಿಸೈನ್ ವಿಚಾರದಲ್ಲಿ ಈ ನೂತನ ಬೈಕ್, ಸ್ಟ್ಯಾಂಡರ್ಡ್ ಮಾದರಿಯನ್ನು ಹೋಲುತ್ತದೆ ಎಂದು ಹೇಳಬಹುದು. ಇದರ ವೈಶಿಷ್ಟ್ಯಗಳು ಸಹ ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ಸ್ಟ್ಯಾಂಡರ್ಡ್ ಮಾದರಿಯಂತೆಯೇ ಇರುತ್ತದೆ. ಹೆಚ್ಚು ಬದಲಾಗಿರುವಂತೆ ಕಾಣುತ್ತಿಲ್ಲ. ಇದರಿಂದಾಗಿ ನೋಡಲು ಹಿಂದಿನ ಪಲ್ಸರ್ NAS160 ಬೈಕ್ ನಂತೆಯೇ ಕಾಣುತ್ತದೆ.

ಬಜಾಜ್ ಪಲ್ಸರ್ NS160 ಫ್ಲೆಕ್ಸ್ ಫ್ಯುಯೆಲ್ ಅನಾವರಣ

ಬಜಾಜ್ ಪಲ್ಸರ್ ಎನ್‌ಎಸ್160 ಫ್ಲೆಕ್ಸ್ ಫ್ಯುಯೆಲ್ ಬೈಕ್‌ನ ಕಾರ್ಯಕ್ಷಮತೆ ಮತ್ತು ಮೈಲೇಜ್ ಬಗ್ಗೆ ಕಂಪನಿಯು ಈವರೆಗೆ ಯಾವುದೇ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲ್ಲ. ಶೀಘ್ರದಲ್ಲೇ ಬಜಾಜ್ ಈ ಬೈಕಿನ ಕುರಿತಂತೆ ಹೆಚ್ಚಿನ ವಿವರ ನೀಡಬಹುದು. ಸುಜುಕಿ Gixxer 250 ಫ್ಲೆಕ್ಸ್ ಫ್ಯುಯೆಲ್ ಮತ್ತು ಹೋಂಡಾ XRE 300 ಫ್ಲೆಕ್ಸ್ ಫ್ಯುಯೆಲ್ ನಂತಹ ಇತರೆ ಫ್ಲೆಕ್ಸ್ ಫ್ಯೂಯೆಲ್ ಮಾದರಿಗಳನ್ನು ದೆಹಲಿ ಆಟೋ ಎಕ್ಸ್‌ಪೋದಲ್ಲಿ ಅನಾವರಣ ಮಾಡಲಾಗಿದೆ.

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಬಜಾಜ್ ಪಲ್ಸರ್ NS160 ಒಂದು ರೂಪಾಂತರದಲ್ಲಿ ಖರೀದಿಗೆ ಲಭ್ಯವಿದ್ದು, ರೂ.1,25,114 (ಎಕ್ಸ್ ಶೋ ರೂಂ ದೆಹಲಿ) ಬೆಲೆಯನ್ನು ಹೊಂದಿದೆ. ಇದು ಮೆಟಾಲಿಕ್ ಪರ್ಲ್ ವೈಟ್, ಬರ್ನ್ಟ್ ರೆಡ್, ಸ್ಯಾಟಿನ್ ಬ್ಲೂ ಮತ್ತು ಪ್ಯೂಟರ್ ಗ್ರೇ ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿದೆ. ಪಲ್ಸರ್ NS160, 160.3 ಸಿಸಿ ಏರ್-/ಆಯಿಲ್-ಕೂಲ್ಡ್ ಎಂಜಿ ಹೊಂದಿದ್ದು, 9,000 rpmನಲ್ಲಿ 17.2 PS ಗರಿಷ್ಠ ಪವರ್ 7250 rpmನಲ್ಲಿ 14.6 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 5-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ.

ಪಲ್ಸರ್ NS160, ಪೈಲಟ್ ಲ್ಯಾಂಪ್‌ಗಳೊಂದಿಗೆ ಹ್ಯಾಲೊಜೆನ್ ಹೆಡ್‌ಲ್ಯಾಂಪ್, ಸೆಮಿ - ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಪಡೆದಿದೆ. ಎತ್ತರಿಸಿದ ಕ್ಲಿಪ್-ಆನ್ ಹ್ಯಾಂಡಲ್‌ಬಾರ್‌ಗಳು, ಸ್ಪ್ಲಿಟ್ ಸೀಟ್‌ನ್ನು ಹೊಂದಿದ್ದು, ಸಿಂಗಲ್-ಚಾನೆಲ್ ABSನೊಂದಿಗೆ ಖರೀದಿಗೆ ಲಭ್ಯವಿದ್ದು, ದೇಶೀಯ ಮಾರುಕಟ್ಟೆಯಲ್ಲಿ ದೊರೆಯುವ ಟಿವಿಎಸ್ ಅಪಾಚೆ RTR 160 4V, ಸುಜುಕಿ Gixxer, ಯಮಹಾ FZ-S V3, ಮತ್ತು ಹೀರೋ Xtreme 160Rಗೆ ಬಜಾಜ್ ಪಲ್ಸರ್ NS160 ಭಾರೀ ಪೈಪೋಟಿ ನೀಡಲಿದೆ ಎಂದು ಹೇಳಬಹುದು.

Most Read Articles

Kannada
English summary
Auto expo 2023 youth hot favorite bajaj pulsar ns 160 flex fuel unveiled details kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X