Ather: ಬೆಂಗಳೂರಿನ ಎಥರ್ ಕಂಪನಿಯಿಂದ ಪಕ್ಕದ ದೇಶದಲ್ಲಿ ಶೋರೂಂ ಪ್ರಾರಂಭ, ಸ್ಕೂಟರ್ ಬೆಲೆ ಎಷ್ಟಿದೆ?

ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಬೆಂಗಳೂರು (Bengaluru) ಮೂಲದ ಕಂಪನಿಗಳು ತಯಾರಿಸುವ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಬೈಕ್‌ಗಳು ಪ್ರತ್ಯೇಕ ಸ್ಥಾನ ಸಂಪಾದಿಸಿಕೊಂಡಿವೆ. ಎಥರ್ ಎನರ್ಜಿ (Ather Energy) ಕೂಡ ಅದಕ್ಕೆ ಹೊರತಾಗಿಲ್ಲ. ಕಂಪನಿ ಇ-ಸ್ಕೂಟರ್‌ಗಳು ಆಕರ್ಷಕ ವೈಶಿಷ್ಟ್ಯ, ವಿನ್ಯಾಸ ಹೊಂದಿರುವುದರಿಂದ ಹೆಚ್ಚಿನ ಮಂದಿ ಇಷ್ಟಪಟ್ಟು ಖರೀದಿಯುತ್ತಾರೆ.

ಇದೀಗ, ಎಥರ್ ಎನರ್ಜಿ ತನ್ನ ಮೊದಲ ಅಂತರರಾಷ್ಟ್ರೀಯ ಡೀಲರ್‌ಶಿಪ್ (International Dealership) ಅನ್ನು ನೇಪಾಳದ ಕಠ್ಮಂಡುನಲ್ಲಿ (Kathmandu, Nepal) ವೈದ್ಯ ಎನರ್ಜಿ (Vaidya Energy) ಸಹಭಾಗಿತ್ವದಲ್ಲಿ ಆರಂಭಿಸಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಎಥರ್ ಎನರ್ಜಿ ಸಿಇಒ ತರುಣ್ ಮೆಹ್ತಾ (Tarun Mehta) ಅವರು, 'ನೇಪಾಳದಲ್ಲಿ ಶೋರೂಂ ತೆರೆಯಲಾಗಿದ್ದು, ಮೊದಲ ಸೆಟ್‌ ಸ್ಕೂಟರ್‌ಗಳನ್ನು ವಿತರಿಸಲಾಯಿತು. ಅಲ್ಲಿನ ಜನರ ಪ್ರತಿಕ್ರಿಯೆ ಅದ್ಬುತವಾಗಿದೆ' ಎಂದು ಹೇಳಿದ್ದಾರೆ.

Ather: ಬೆಂಗಳೂರಿನ ಎಥರ್ ಕಂಪನಿಯಿಂದ ಪಕ್ಕದ ದೇಶದಲ್ಲಿ ಶೋರೂಂ ಪ್ರಾರಂಭ, ಸ್ಕೂಟರ್ ಬೆಲೆ ಎಷ್ಟಿದೆ?

ನೇಪಾಳದಲ್ಲಿ ವೈದ್ಯ ಎನರ್ಜಿ, ಎಥರ್ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮಾಡಲಿದ್ದು, ಆ ಬಳಿಕ ಸರ್ವಿಸ್ ಸೌಲಭ್ಯವನ್ನು ಒದಗಿಸುತ್ತದೆ. ಜೊತೆಗೆ ಗ್ರಾಹಕರ ಅನುಕೂಲಕ್ಕಾಗಿ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ ಸ್ಥಾಪನೆ ಮಾಡುವ ಜವಾಬ್ದಾರಿಯನ್ನು ಹೊತ್ತಿದೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಥರ್ 450ಎಕ್ಸ್ (Ather 450X) ಎಲೆಕ್ಟ್ರಿಕ್ ಸ್ಕೂಟರ್ ಮಾದರಿಯನ್ನು ನೇಪಾಳದಲ್ಲಿಯೂ ಸೇಲ್ ಮಾಡಲಾಗುತ್ತದೆ. ಇದು, ರೂ.4 ಲಕ್ಷ (ನೇಪಾಳಿ ರೂಪಾಯಿ) ಬೆಲೆಗೆ ಸಿಗಬಹುದು ಎಂದು ಅಂದಾಜಿಸಲಾಗಿದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ಎಥರ್ 450ಎಕ್ಸ್ ಬಗ್ಗೆ ಮಾತನಾಡುವುದಾದರೆ, ಇದು ಎರಡು ರೂಪಾಂತರದ ಆಯ್ಕೆಯಲ್ಲಿ ಗ್ರಾಹಕರಿಗೆ ದೊರೆಯುತ್ತದೆ. ಅವುಗಳೆಂದರೆ, 2.9kWh ಬ್ಯಾಟರಿ ಪ್ಯಾಕ್, 3.7kWh ಬ್ಯಾಟರಿ ಪ್ಯಾಕ್. ಕಳೆದ ಆಗಸ್ಟ್ ತಿಂಗಳಲ್ಲಿ ಬಿಡುಗಡೆಯಾದಾಗ ರೂ.1,38,000 ಹಾಗೂ ರೂ.1,44,921 ಎಕ್ಸ್ ಶೋರೂಂ ದರವನ್ನು ಹೊಂದಿದ್ದವು.

Ather: ಬೆಂಗಳೂರಿನ ಎಥರ್ ಕಂಪನಿಯಿಂದ ಪಕ್ಕದ ದೇಶದಲ್ಲಿ ಶೋರೂಂ ಪ್ರಾರಂಭ, ಸ್ಕೂಟರ್ ಬೆಲೆ ಎಷ್ಟಿದೆ?

ಈ ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ ಸ್ಮಾರ್ಟ್‌ಇಕೋ, ಇಕೋ, ರೈಡ್, ಸ್ಪೋರ್ಟ್ ಹಾಗೂ ವಾರ್ಪ್ ಎಂಬ ರೈಡಿಂಗ್ ಮೋಡ್‌ ಆಯ್ಕೆಗಳನ್ನು ಒಳಗೊಂಡಿದೆ. 7-ಇಂಚಿನ TFT ಟಚ್‌ಸ್ಕ್ರೀನ್ ಅನ್ನು ಹೊಂದಿದೆ. ಗೈಡ್ -ಮಿ-ಹೋಮ್ ಲೈಟ್ಸ್, ಕೋಸ್ಟಿಂಗ್ ರೆಜೆನ್, ನ್ಯಾವಿಗೇಷನ್, ಟೋ/ ಥೆಫ್ಟ್ ನೋಟಿಫಿಕೇಶನ್, ರೈಡ್ ಸ್ಟೇಟಸ್, ಇಂಟರ್-ಸಿಟಿ ಪಾರ್ಕಿಂಗ್ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, ಸಂಪೂರ್ಣ ಚಾರ್ಜ್ ನಲ್ಲಿ 115 km ರಿಂದ 145 km ರೇಂಜ್ ಕೊಡುತ್ತದೆ. ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್, ಮೊನೊಶಾಕ್ ಸೆಟಪ್ ಹೊಂದಿದೆ. ಎರಡು ತುದಿಯಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 12-ಇಂಚಿನ ಅಲಾಯ್ ವೀಲ್ಸ್ ಹಾಗೂ ಟ್ಯೂಬ್‌ಲೆಸ್ ಟೈರ್‌ನ್ನು ಒಳಗೊಂಡಿದೆ.

Ather: ಬೆಂಗಳೂರಿನ ಎಥರ್ ಕಂಪನಿಯಿಂದ ಪಕ್ಕದ ದೇಶದಲ್ಲಿ ಶೋರೂಂ ಪ್ರಾರಂಭ, ಸ್ಕೂಟರ್ ಬೆಲೆ ಎಷ್ಟಿದೆ?

ಈಗ ಎಥರ್ ಎನರ್ಜಿಯ ಎಂಟ್ರಿ ಲೆವೆಲ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಕುರಿತು ತಿಳಿಯೋಣ. ಇದು ರೂ.1,29,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿದಾರರಿಗೆ ಸಿಗುತ್ತದೆ. 2.9 kWh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 km ರೇಂಜ್ ಕೊಡುತ್ತದೆ. 90 kmph ಟಾಪ್ ಸ್ವೀಡ್ ಹೊಂದಿದ್ದು, 3.9 ಸೆಕೆಂಡುಗಳಲ್ಲಿ 0 - 40 kmph ವೇಗವನ್ನು ಪಡೆಯಲಿದೆ.

ಇದರಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 5.4 kW (7.2 hp) ಪವರ್ ಉತ್ಪಾದಿಸುತ್ತದೆ. ಸ್ಮಾರ್ಟ್ಇಕೋ, ಇಕೋ, ರೈಡ್, ಸ್ಪೋರ್ಟ್ ಎಂಬ ರೈಡಿಂಗ್ ಮೋಡ್ ಆಯ್ಕೆಯನ್ನು ಒಳಗೊಂಡಿದ್ದು, ಮನೆಯ ವಿದ್ಯುತ್ ಬಳಕೆಯಲ್ಲಿ ಈ ಸ್ಕೂಟರ್ ಬ್ಯಾಟರಿ ಪ್ಯಾಕ್ ಸಂಪೂರ್ಣ ಚಾರ್ಜ್ ಆಗಲು 8 ಗಂಟೆ 36 ನಿಮಿಷ ಬೇಕಾಗುತ್ತದೆ. ಇದು ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Tuesday, November 7, 2023, 10:29 [IST]
English summary
Bengaluru ather energy first international dealership ingreted in nepal kathmandu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+