Ather: ಬೆಂಗಳೂರಿನ ಎಥರ್‌ನಿಂದ 2 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ.. ಟಿವಿಎಸ್, ಓಲಾಗೆ ಇದೇ ಎದುರಾಳಿ!

ಬೆಂಗಳೂರು (Bengaluru) ಮೂಲದ ಇವಿ ಸ್ಟಾರ್ಟ್-ಅಪ್ ಎಥರ್‌ ಎನರ್ಜಿ (Ather Energy), '450' ಸರಣಿ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟಗೊಳಿಸುವ ಮೂಲಕ ದೇಶಾದ್ಯಂತ ದೊಡ್ಡಮಟ್ಟದಲ್ಲಿ ಖ್ಯಾತಿಗಳಿಸಿದೆ. ಸದ್ಯ, ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದು, ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.

ಎಥರ್ ಎನರ್ಜಿ, 2 ಲಕ್ಷ ಇ-ಸ್ಕೂಟರ್‌ಗಳನ್ನು ಉತ್ಪಾದಿಸುವ ಮೂಲಕ ಭಾರೀ ಮೈಲಿಗಲ್ಲನ್ನು ದಾಖಲಿಸಿದೆ. ಕಂಪನಿಯು 2018ರಿಂದ ಈ ವರ್ಷಾರಂಭದಲ್ಲಿ 1 ಲಕ್ಷ ಯುನಿಟ್ ಸ್ಕೂಟರ್‌ ತಯಾರಿಸಿ, ಹೊಸ ದಾಖಲೆಯನ್ನು ಬರೆದಿತ್ತು. ಈ ಬಗ್ಗೆ ಎಥರ್ ಎನರ್ಜಿ ಸಿಇಒ ತರುಣ್ ಮೆಹ್ತಾ (Tarun Mehta) ತಮ್ಮ 'ಎಕ್ಸ್' ಖಾತೆಯಲ್ಲಿ ಖುಷಿಯನ್ನು ಹಂಚಿಕೊಂಡಿದ್ದು, '2 ಲಕ್ಷ ಯುನಿಟ್ ಉತ್ಪಾದನಾ ಯುನಿಟ್ ಮುಟ್ಟಿರುವುದು ತುಂಬಾ ಸಂತೋಷ ತಂದಿದೆ' ಎಂದು ಬರೆದುಕೊಂಡಿದ್ದಾರೆ.

Ather: ಬೆಂಗಳೂರಿನ ಎಥರ್‌ನಿಂದ 2 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ.. ಟಿವಿಎಸ್, ಓಲಾಗೆ ಇದೇ ಎದುರಾಳಿ!

ಪ್ರಸ್ತುತ, ಭಾರತದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟಗೊಳಿಸುವ 3ನೇ ಅತಿದೊಡ್ಡ ಕಂಪನಿಯಾಗಿ ಎಥರ್‌ ಎನರ್ಜಿ ಇದ್ದು, ಮೊದಲ ಸ್ಥಾನವನ್ನು ಓಲಾ, ಎರಡನೇ ಸ್ಥಾನವನ್ನು ಟಿವಿಎಸ್ ಸ್ವಾಧೀನಪಡಿಸಿಕೊಂಡಿವೆ. ಎಥರ್ ತಮಿಳುನಾಡಿನ ಹೊಸೂರಿನಲ್ಲಿ ಬೃಹತ್ ಉತ್ಪಾದನಾ ಘಟಕವನ್ನು ಹೊಂದಿದ್ದು, ಇಲ್ಲಿ ವಾರ್ಷಿಕ 1 ಲಕ್ಷ ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಉತ್ಪಾದಿಸಬಹುದು.

ದೇಶದಲ್ಲಿ ಎಥರ್‌ ಮಾರಾಟಗೊಳಿಸಲುವ '450ಎಸ್' ಎಲೆಕ್ಟ್ರಿಕ್ ಸ್ಕೂಟರ್, ರೂ.1,29,999 ದರದಲ್ಲಿ ಗ್ರಾಹಕರಿಗೆ ಸಿಗುತ್ತದೆ. ಇದರಲ್ಲಿ 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 ಕಿಲೋಮೀಟರ್ ಕ್ರಮಿಸುತ್ತದೆ. 90 kmph ಟಾಪ್ ಸ್ವೀಡ್ ಹೊಂದಿದ್ದು, ಕೇವಲ 3.9 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯಲಿದೆ.

Ather: ಬೆಂಗಳೂರಿನ ಎಥರ್‌ನಿಂದ 2 ಲಕ್ಷ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನೆ.. ಟಿವಿಎಸ್, ಓಲಾಗೆ ಇದೇ ಎದುರಾಳಿ!

ಎಥರ್‌ 450ಎಸ್ ಇ-ಸ್ಕೂಟರ್‌ನಲ್ಲಿ ಬಳಕೆ ಮಾಡಿರುವ ಎಲೆಕ್ಟ್ರಿಕ್ ಮೋಟಾರ್, 5.4 kW (7.2 hp) ಪವರ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಮನೆಯ ವಿದ್ಯುತ್ ಬಳಕೆಯಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ ಬ್ಯಾಟರಿ ಪ್ಯಾಕ್, ಪೂರ್ತಿ ಚಾರ್ಜ್ ಆಗಲು 8 ಗಂಟೆ 36 ನಿಮಿಷ ಬೇಕು. ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ಸ್, ರೇರ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಪಡೆದಿದ್ದು, ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಒಳಗೊಂಡಿದೆ.

ಎಥರ್ ಟಾಪ್ ಎಂಡ್ ಮಾದರಿಯಾಗಿರುವ 450ಎಕ್ಸ್, 2.9kWh ಬ್ಯಾಟರಿ ಹಾಗೂ 3.7kWh ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ರೂ.1,38,000 ದಿಂದ ರೂ.1,44,921 ಬೆಲೆಯಲ್ಲಿ ಖರೀದಿದಾರರಿಗೆ ಲಭ್ಯವಿದೆ. ಬ್ಯಾಟರಿ ಪ್ಯಾಕ್ ಅನುಗುಣವಾಗಿ 115 km ರಿಂದ 145 km ರೇಂಜ್ ನೀಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್, ಬ್ಯಾಟರಿ ಪೂರ್ತಿ ಚಾರ್ಜ್ ಆಗಲು 5 ಗಂಟೆ ಸಮಯಾವಕಾಶ ಹಿಡಿಯುತ್ತದೆ.

ಭಾರತದಲ್ಲಿ ಎಥರ್‌ ಹಾಗೂ ಹೀರೋ ಕಂಪನಿಗಳು ಪಾಲುದಾರಿಕೆ ಹೊಂದಿದ್ದು, ಎರಡು ಕಂಪನಿಗಳು, ದೇಶಾದ್ಯಂತ ಇಂಟರ್‌ಆಪರೇಬಲ್ ಇವಿ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್‌ ಸ್ಥಾಪನೆಗೆ ಮುಂದಾಗಿವೆ ಎಂದು ಕೆಲವೇ ದಿನಗಳ ಹಿಂದೆ ವರದಿಯಾಗಿತ್ತು. ಭಾರತದ ಪ್ರಮುಖ 100 ನಗರಗಳಲ್ಲಿ 1900ಕ್ಕೂ ಹೆಚ್ಚಿನ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಲು ಇವೆರೆಡು ಕಂಪನಿಗಳು ತೀರ್ಮಾನಿಸಿದ್ದು, ಎಥರ್ ಅಥವಾ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಇದರ ಸದುಪಯೋಗಪಡಿಕೊಳ್ಳಬಹುದು.

ಎಥರ್ ಎನರ್ಜಿ ವಿದೇಶಿ ಮಾರುಕಟ್ಟೆಗೂ ಲಗ್ಗೆ ಇಟ್ಟಿದ್ದು, ತನ್ನ ಮೊದಲ ಅಂತರರಾಷ್ಟ್ರೀಯ ಡೀಲರ್‌ಶಿಪ್ ಅನ್ನು ನೇಪಾಳದ ಕಠ್ಮಂಡುನಲ್ಲಿ ವೈದ್ಯ ಎನರ್ಜಿ ಸಹಭಾಗಿತ್ವದಲ್ಲಿ ಶುರು ಮಾಡಿದೆ. ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಎಥರ್ 450ಎಕ್ಸ್ (Ather 450X) ಎಲೆಕ್ಟ್ರಿಕ್ ಸ್ಕೂಟರ್‌ನ್ನು ನೇಪಾಳದಲ್ಲಿಯೂ ಮಾರಾಟ ಮಾಡಲಾಗುತ್ತಿದ್ದು, ಅದು ರೂ.4 ಲಕ್ಷ (ನೇಪಾಳಿ ರೂಪಾಯಿ) ಬೆಲೆಯನ್ನು ಹೊಂದಿದೆ ಎಂದು ತಿಳಿದುಬಂದಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 28, 2023, 12:57 [IST]
English summary
Bengaluru based ather energy achieve 2 lakh electric scooter production milestone
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+