1 ಲಕ್ಷದೊಳಗೆ ಸಿಗುವ ಬೆಸ್ಟ್ ಎಲೆಕ್ಟ್ರಿಕ್ ಸ್ಕೂಟರ್‌ಗಳು: ಆಧುನಿಕ ಡಿಸೈನ್, ಅತ್ಯಾಧುನಿಕ ತಂತ್ರಜ್ಞಾನ
ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉದ್ಯಮವು ತ್ವರಿತ ವಿಸ್ತರಣೆಗೆ ಒಳಗಾಗಿದೆ. ವರ್ಷದುದ್ದಕ್ಕೂ ಪ್ರಮುಖ ತಯಾರಕರು ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಬಿಡುಗಡೆ ಮಾಡಿದ್ದಾರೆ. ಇವೆಲ್ಲವು ಸುಧಾರಿತ ತಂತ್ರಜ್ಞಾನದೊಂದಿಗೆ ವೆಚ್ಚ ಪರಿಣಾಮಕಾರಿಯಾಗಿವೆ. ಸದ್ಯ ಭಾರತದಲ್ಲಿ ರೂ. 1 ಲಕ್ಷದೊಳಗೆ ಖರೀದಿಸಬಹುದಾದ ಇವಿ ಸ್ಕೂಟರ್‌ಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.
ಒಕಿನಾವಾ ಪ್ರೈಸ್ಪ್ರೊ: ಪ್ರಮುಖ ಇವಿ ತಯಾರಕರಾದ ಓಕಿನಾವಾ ತನ್ನ ಒಕಿನಾವಾ ಪ್ರೈಸ್‌ಪ್ರೊ ಎಲೆಕ್ಟ್ರಿಕ್ ಸ್ಕೂಟರ್‌ನೊಂದಿಗೆ ಒಂದೇ ಚಾರ್ಜ್‌ನಲ್ಲಿ 81 ಕಿ.ಮೀ ರೇಂಜ್ ಹೊಂದಿದ್ದು, ಗಂಟೆಗೆ 56 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಇದು ಡಿಟ್ಯಾಚೇಬಲ್ 2.08 kWh ಬ್ಯಾಟರಿ ಪ್ಯಾಕ್‌ನಿಂದ ಚಾಲಿತವಾಗಿದೆ. 2 ರಿಂದ 3 ಗಂಟೆಗಳ ಒಳಗೆ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು. ಇದರ ಬೆಲೆ ರೂ. 99,645 (ಎಕ್ಸ್ ಶೋ ರೂಂ) ಇದೆ.

ಎಸರ್ ಮುವಿ 125 4ಜಿ: Acer Muvi 125 4G ನಗರ ಪ್ರಯಾಣಕ್ಕೆ ಅತ್ಯುತ್ತಮ ಆಯ್ಕೆಯಾಗಿದೆ. 75 ಕಿ.ಮೀ/ಗಂಟೆಯ ಗರಿಷ್ಠ ವೇಗ ಮತ್ತು 80 ಕಿ.ಮೀ ರೇಂಜ್‌ನೊಂದಿಗೆ, ಇದು ದಕ್ಷತೆ, ಶೈಲಿ ಮತ್ತು ಕಾರ್ಯಕ್ಷಮತೆಯ ಬೆಸ್ಟ್ ಸ್ಕೂಟರ್ ಆಗಿದೆ. ಇದು ಕಚೇರಿಗೆ ಹೋಗುವವರು, ಕಾಲೇಜು ವಿದ್ಯಾರ್ಥಿಗಳು, ದಿನನಿತ್ಯದ ಪ್ರಯಾಣಿಕರಿಗೆ ಸೂಕ್ತವಾಗಿದೆ. ಇದರ ಬೆಲೆಯು ರೂ. 99,999 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ.
ಓಲಾ ಎಸ್1 ಎಕ್ಸ್: OLA S1 X, 2kWh ಮತ್ತು 3kWh ಎಂಬ 2 ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಇದು ಒಂದೇ ಚಾರ್ಜ್‌ನಲ್ಲಿ 151 ಕಿ.ಮೀ ಓಡುವ ಸಾಮರ್ಥ್ಯವನ್ನು ಹೊಂದಿದೆ. ಗಂಟೆಗೆ 90 ಕಿ.ಮೀ ವೇಗದಲ್ಲಿ ಚಲಿಸುತ್ತದೆ. ಇದರ ಬೆಲೆ ರೂ. 89,999 (ಎಕ್ಸ್ ಶೋರೂಂ) ಇದೆ. ಸದ್ಯ ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಅಗ್ರಸ್ಥಾನದಲ್ಲಿ ಮುಂದುವರಿಯುತ್ತಿದೆ.

ಕೈನೆಟಿಕ್ ಗ್ರೀನ್ ಜುಲು: ಕೈನೆಟಿಕ್ ಗ್ರೀನ್ ಇತ್ತೀಚೆಗೆ ಜುಲು ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ರೂ. 94,990 (ಎಕ್ಸ್ ಶೋ ರೂಂ) ಬೆಲೆಗೆ ಬಿಡುಗಡೆ ಮಾಡಿದೆ. ಇದು 2.27 kWh ಲಿಥಿಯಂ-ಐಯಾನ್ ಬ್ಯಾಟರಿ ಹೊಂದಿದ್ದು, ಪ್ರತಿ ಚಾರ್ಜ್‌ಗೆ 104 ಕಿ.ಮೀ ರೇಂಜ್ ನೀಡುತ್ತದೆ. 60 ಕಿ.ಮೀ ಗರಿಷ್ಠ ವೇಗವನ್ನು ಹೊಂದಿದೆ.
15 ಆಂಪ್ ಸಾಕೆಟ್ ಬಳಸಿ ಕೇವಲ ಅರ್ಧ ಗಂಟೆಯಲ್ಲಿ ಬ್ಯಾಟರಿಯನ್ನು ಶೇ80 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿದೆ. ಅದರ ಸುಧಾರಿತ ವೈಶಿಷ್ಟ್ಯಗಳಾದ ಏಪ್ರನ್ ಮೌಂಟೆಡ್ ಹೆಡ್‌ಲ್ಯಾಂಪ್, ಎಲ್‌ಇಡಿ ಡಿಆರ್‌ಎಲ್‌ಗಳು, ಡಿಜಿಟಲ್ ಸ್ಪೀಡೋಮೀಟರ್ ಇತ್ಯಾದಿಗಳು ಮಾರುಕಟ್ಟೆಯಲ್ಲಿನ ಇತರ ಸ್ಕೂಟರ್‌ಗಳಿಗೆ ಸರಿಯಾದ ಸ್ಪರ್ಧೆಯನ್ನು ನೀಡುತ್ತದೆ.

ಹೀರೋ ಎಲೆಕ್ಟ್ರಿಕ್ NYX: ಹೀರೋ ಎಲೆಕ್ಟ್ರಿಕ್ NYX ಭಾರತದಲ್ಲಿ ರೂ. 73,590 ರಿಂದ 86,540 ನಡುವೆ ಬೆಲೆಯಿದೆ. NYX ಪೂರ್ಣ ಚಾರ್ಜ್‌ನಲ್ಲಿ 100 ಕಿ.ಮೀ ಹೋಗುತ್ತದೆ. ಸಂಪೂರ್ಣವಾಗಿ ಚಾರ್ಜ್ ಆಗಲು ಸುಮಾರು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಇದು ಎರಡು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. 42 kmph ವರೆಗಿನ ಗರಿಷ್ಠ ವೇಗವನ್ನು ತಲುಪುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








