Best mileage scooters: ರೂ.1 ಲಕ್ಷದೊಳಗೆ 60 ಕಿ.ಮೀ ಮೈಲೇಜ್ ನೀಡುವ 5 ಬೆಸ್ಟ್ ಸ್ಕೂಟರ್‌ಗಳು
ಸ್ಕೂಟರ್‌ಗಳು ನಿತ್ಯ ಸ್ಥಳೀಯ ಪ್ರಯಾಣಕ್ಕೆ ಪ್ರಮುಖ ಅವಶ್ಯಕತೆಗಳಲ್ಲಿ ಒಂದಾಗಿವೆ. ಮುಖ್ಯವಾಗಿ ನಗರ ಪ್ರಯಾಣಕ್ಕಾಗಿ ಇವನ್ನು ವಿನ್ಯಾಸಗೊಳಿಸಲಾಗಿದೆ, ಹೆಚ್ಚಾಗಿ ಮೈಲೇಜ್ ನೀಡುವ ಸ್ಕೂಟರ್‌ಗಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇದೆ. ಆದ್ದರಿಂದ, ನೀವು ಕೂಡ ಇಂಧನ-ಸಮರ್ಥ ಸ್ಕೂಟರ್‌ಗಾಗಿ ಹುಡುಕುತ್ತಿದ್ದರೆ, 1 ಲಕ್ಷಕ್ಕಿಂತ ಕಡಿಮೆ ಬೆಲೆಯ ಸ್ಕೂಟರ್‌ಗಳನ್ನು ಇಲ್ಲಿ ನೋಡೋಣ.
ಹೋಂಡಾ ಆಕ್ಟಿವಾ 6G: ಹೋಂಡಾ ಆಕ್ಟಿವಾ (Honda Activa)6G ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡು ಬರುತ್ತದೆ. ಎಲ್ಇಡಿ ಲೈಟ್‌ಗಳಿಂದ ಹಿಡಿದು ಇಂಧನ ಇಂಜೆಕ್ಷನ್ (Fuel injection), ಎಂಜಿನ್ ಸ್ಟಾರ್ಟ್/ಸ್ಟಾಪ್ ಬಟನ್‌ಗಳವರೆಗೆ ವೈಶಿಷ್ಟ್ಯಗಳನ್ನು ಪ್ಯಾಕ್ ಮಾಡಲಾಗಿದೆ. ಇದರ ಬೆಲೆಯು ರೂ. 73,086 (ಎಕ್ಸ್ ಶೋರೂಂ, ದೆಹಲಿ) ನಿಂದ ಪ್ರಾರಂಭವಾಗಲಿದ್ದು, 60 ಕಿಮೀ/ಲೀ ಮೈಲೇಜ್ ನೀಡುತ್ತದೆ.

ಸುಜುಕಿ ಅಕ್ಸಿಸ್ 125: ಸುಜುಕಿ ಆಕ್ಸೆಸ್ 125 (Suzuki Access 125) ಪ್ರೀಮಿಯಂ ಉತ್ಪನ್ನವನ್ನು ಹುಡುಕುತ್ತಿರುವ ಸ್ಕೂಟರ್ ವಿಭಾಗದಲ್ಲಿ ಮತ್ತೊಂದು ಘನ ಪರ್ಯಾಯವಾಗಿದೆ, ಇದು ಕೈಗೆಟುಕುವ ಬೆಲೆಗೆ ಲಭ್ಯವಿದೆ. ಎಲ್‌ಇಡಿ ಹೆಡ್‌ಲೈಟ್, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಮೊಬೈಲ್ ಚಾರ್ಜಿಂಗ್‌ಗಾಗಿ ಯುಎಸ್‌ಬಿ ಪೋರ್ಟ್, ಉದ್ದವಾದ ಫುಟ್‌ಬೋರ್ಡ್ ಹೊಂದಿದೆ. ಬೆಲೆಗಳು ರೂ. 77,600 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗಲಿದ್ದು, 64 ಕಿಮೀ/ಲೀ ಮೈಲೇಜ್ ನೀಡುತ್ತದೆ.
ಹೀರೋ ಮೆಸ್ಟ್ರೋ ಎಡ್ಜ್ 125: Hero Maestro Edge 125 ನಾಲ್ಕು ವಿಭಿನ್ನ ರೂಪಾಂತರಗಳಲ್ಲಿ ಲಭ್ಯವಿದೆ. ಫುಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, LED ಪ್ರೊಜೆಕ್ಟರ್ ಹೆಡ್‌ಲ್ಯಾಂಪ್, LED ಟೈಲ್ ಲ್ಯಾಂಪ್, ಮೊಬೈಲ್ ಚಾರ್ಜರ್ ಮತ್ತು ಬೂಟ್ ಲೈಟ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳು ಸ್ಕೂಟರ್‌ನೊಂದಿಗೆ ಲಭ್ಯವಿರುವ ಕೆಲವು ಅಸಾಧಾರಣ ವೈಶಿಷ್ಟ್ಯಗಳು.

Hero Maestri Edge 125 ನ ಎಕ್ಸ್ ಶೋ ರೂಂ ಬೆಲೆಯು ಪ್ರವೇಶ ಮಟ್ಟದ ಡ್ರಮ್ ಬ್ರೇಕ್ ರೂಪಾಂತರದೊಂದಿಗೆ ರೂ. 86,256 ರಿಂದ ಪ್ರಾರಂಭವಾಗುತ್ತದೆ. Maestro Edge 125 ಕನೆಕ್ಟೆಡ್ ರೂಪಾಂತರ ಬೇಕೆಂದರೆ ರೂ. 96, 586 ಕ್ಕೆ ಏರುತ್ತದೆ. ಇವೆರಡು ಎಕ್ಸ್ ಶೋರೂಂ ಬೆಲೆಗಳಾಗಿವೆ. ಮೈಲೇಜ್ ವಿಷಯಕ್ಕೆ ಬಂದರೆ ಲೀ.ಗೆ 60 ಕಿ.ಮೀ ಓಡಿಸಬಹುದು.
ಟಿವಿಎಸ್ ಜುಪಿಟರ್ 125: ಹೋಂಡಾ ಆಕ್ಟಿವಾಗೆ ಸವಾಲು ಹಾಕಲು ಟಿವಿಎಸ್' ಜುಪಿಟರ್ (TVS Jupiter 125) ಅನ್ನು ಬಿಡುಗಡೆ ಮಾಡಿತು. ಈ ಸ್ಕೂಟರ್ ಡಿಜಿಟಲ್ ಅನಲಾಗ್ ಕ್ಲಸ್ಟರ್, LED ಹೆಡ್‌ಲೈಟ್ ಮತ್ತು ಡೈಮಂಡ್-ಕಟ್ ಅಲಾಯ್ ವೀಲ್‌ಗಳನ್ನು ಒಳಗೊಂಡಿದೆ. ಆಕ್ಟಿವಾಗೆ ಹೋಲಿಸಿದರೆ, ಜುಪಿಟರ್ ಸಾಕಷ್ಟು ಪ್ರೀಮಿಯಂ ಆರುತ್ತದೆ. TVS ಜುಪಿಟರ್ ಬೆಲೆಯು ರೂ. 82,825 (ಎಕ್ಸ್ ಶೋ ರೂಂ) ನಿಂದ ಪ್ರಾರಂಭವಾಗುತ್ತದೆ. ಲೀಗೆ 50km ಮೈಲೇಜ್ ನೀಡುತ್ತದೆ.

ಯಮಹಾ ರೇ ZR: Yamaha RayZR ಮೇಲೆ ತಿಳಿಸಿದ ಇತರ ನಾಲ್ಕು ಸ್ಕೂಟರ್‌ಗಳಿಗಿಂತ 98 ಕೆ.ಜಿ ಹಗುರವಾಗಿರುತ್ತದೆ. ಇದರ ಹೈಬ್ರಿಡ್ ಎಂಜಿನ್ ಅನ್ನು ಸ್ಮಾರ್ಟ್ ಮೋಟಾರ್ ಜನರೇಟರ್‌ಗೆ ಕನೆಕ್ಟ್ ಮಾಡಲಾಗಿದೆ. ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, LED ಹೆಡ್‌ಲೈಟ್ ಮತ್ತು ಬ್ಲೂಟೂತ್ ಸಂಪರ್ಕವನ್ನು ಒಳಗೊಂಡಿವೆ. ಎರಡು ರೂಪಾಂತರಗಳಲ್ಲಿ ಲಭ್ಯವಿದ್ದು, ಮೊದಲನೆಯದು ರೂ. 84,730 ಮತ್ತು ಎರಡನೆಯದು ರೂ. 90,830 (ಎಕ್ಸ್ ಶೋ ರೂಂ, ದೆಹಲಿ) ಆಗಿದೆ. ಬರೋಬ್ಬರಿ 68km/l ಮೈಲೇಜ್ ನೀಡುತ್ತದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








