Bikes Under Rs 1 lakh: ಪಕ್ಕಾ ದುಡ್ಡಿಗೆ ಮೋಸವಿಲ್ಲ.. 1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ಸಿಗುವ ಅತ್ಯುತ್ತಮ ಬೈಕ್‌ಗಳು
ಪ್ರತಿಯೊಬ್ಬರು ದಿನನಿತ್ಯದ ಬಳಕೆಗೆ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ ಹೊಂದಿರುವ ಬೈಕ್‌ಗಳನ್ನು ಹುಡುಕುತ್ತಿರುತ್ತಾರೆ. ಅಂತಹವರಿಗಾಗಿ ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕರಾದ ಹೀರೋ ಮೊಟೊಕಾರ್ಪ್, ಹೋಂಡಾ, ಟಿವಿಎಸ್ ಹಾಗೂ ಬಜಾಬ್ ವಿವಿಧ ಬೈಕ್‌ಗಳನ್ನು ಮಾರಾಟ ಮಾಡುತ್ತಿದ್ದು, ರೂ.1 ಲಕ್ಷಕ್ಕಿಂತ ಕಡಿಮೆ ಬೆಲೆಗೆ ದೊರೆಯುವ ಉತ್ತಮ ಮೋಟಾರ್ ಸೈಕಲ್‌ಗಳು ಇಲ್ಲಿವೆ.
ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿ 'ಹೀರೋ ಮೊಟೊಕಾರ್ಪ್' ಮಾರಾಟ ಮಾಡುವ ಪ್ರಮುಖ ಬೈಕ್‌ಗಳಲ್ಲಿ 'ಗ್ಲಾಮರ್' ಒಂದಾಗಿದ್ದು, ಸ್ಪ್ಲೆಂಡರ್ ಮೋಟಾರ್ ಸೈಕಲ್‌ನಂತೆಯೇ ಖ್ಯಾತಿಗಳಿಸಿದೆ. ಈ ಹೀರೋ ಗ್ಲಾಮರ್ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದೆ. ಸೆಲ್ಫ್ ಸ್ಟಾರ್ಟ್ ಡ್ರಮ್ ರೂಪಾಂತರ ರೂ.78,768 ಹಾಗೂ ಸೆಲ್ಫ್ ಸ್ಟಾರ್ಟ್ ಡಿಸ್ಕ್ ರೂಪಾಂತರ ರೂ.82,768 (ಎಕ್ಸ್ ಶೋರೂಂ, ದೆಹಲಿ) ಬೆಲೆಯನ್ನು ಹೊಂದಿದೆ.

ಹೀರೋ ಗ್ಲಾಮರ್ ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಮಾತನಾಡುವುದಾದರೆ, ಇದು 124.5 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 10.73 bhp ಗರಿಷ್ಠ ಪವರ್ ಹಾಗೂ 10.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5 ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. ಈ ಬೈಕ್, ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, 55 kmpl ಮೈಲೇಜ್ ನೀಡುತ್ತದೆ.
ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಹೋಂಡಾದ ವಿಶ್ವಾಸಾರ್ಹ ಬೈಕ್‌ಗಳಲ್ಲಿ 'ಶೈನ್' ಪ್ರಮುಖವಾಗಿದ್ದು, ದಿನ ಬಳಕೆಗೆ ಸೂಕ್ತವಾಗಿದೆ. ಇದು ಡ್ರಮ್ ಹಾಗೂ ಡಿಸ್ಕ್ ಎಂಬ ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ಕ್ರಮವಾಗಿ ರೂ.78,687 ದಿಂದ ರೂ.82,697 ಎಕ್ಸ್ ಶೋರೂಂ ಬೆಲೆಯನ್ನು ಹೊಂದಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ಭರಪೂರ ವೈಶಿಷ್ಟ್ಯಗಳನ್ನು ಈ ಬೈಕ್ ಪಡೆದುಕೊಂಡಿದೆ.
ಹೋಂಡಾ ಶೈನ್ ಬೈಕ್‌ನ ಎಂಜಿನ್ ಬಗ್ಗೆ ಹೇಳುವುದಾದರೆ, ಇದು 123.94 ಸಿಸಿ ಸಿಲಿಂಡರ್ ಎಂಜಿನ್ ಹೊಂದಿದ್ದು, 10.59 bhp ಗರಿಷ್ಠ ಪವರ್ ಹಾಗೂ 11 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದ್ದು, 10.5 ಲೀಟರ್ ಸಾಮರ್ಥ್ಯದ ಫ್ಯುಯೆಲ್ ಟ್ಯಾಂಕ್ ಹೊಂದಿದೆ. ಜೊತೆಗೆ 55 kmpl ಮೈಲೇಜ್ ನೀಡುತ್ತದೆ.
ಬಜಾಜ್ ಕಂಪನಿಯ ಬಹುಬೇಡಿಕೆಯ ಪ್ಲಾಟಿನಾ ಬಳಿಕ, 'ಸಿಟಿ100' ಜನಪ್ರಿಯತೆ ಗಳಿಸಿದೆ. ರೂ.72,224 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ದೊರೆಯಲಿದೆ. ಇದು 115.4 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದ್ದು, 8.71 bhp ಗರಿಷ್ಠ ಪವರ್ ಹಾಗೂ 9.81 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಜೊತೆಗೆ 10.5 ಲೀಟರ್ ಫ್ಯುಯೆಲ್ ಟ್ಯಾಂಕ್ ಹೊಂದಿದ್ದು, 75 kmpl ಮೈಲೇಜ್ ನೀಡುತ್ತದೆ.
ಟಿವಿಎಸ್ ಸ್ಪೋರ್ಟ್ ಕೂಡ ಭಾರತದ ಮಾರುಕಟ್ಟೆಯಲ್ಲಿ ಖ್ಯಾತಿಗಳಿಸಿದ್ದು, ಸೆಲ್ಫ್ ಸ್ಟಾರ್ಟ್ ಹಾಗೂ ಕಿಕ್ ಸ್ಟಾರ್ಟ್ ಎಂಬ ಎರಡು ಆಯ್ಕೆಗಳಲ್ಲಿ ಖರೀದಿಗೆ ದೊರೆಯಲಿದೆ. ರೂ.64,050 (ಎಕ್ಸ್ ಶೋರೂಂ) ಬೆಲೆಯನ್ನು ಹೊಂದಿದೆ. ಇದು 109.7 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಪಡೆದಿದ್ದು, 8.1 bhp ಗರಿಷ್ಠ ಪವರ್ ಹಾಗೂ 8.7 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 4 ಸ್ವೀಡ್ ಟ್ರಾಸ್ಮಿಷನ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಟಿವಿಎಸ್ ಕಂಪನಿಯ 'ರೈಡರ್' ಬೈಕ್ ಕೊಂಚ ಐಷಾರಾಮಿಯಿಂದ ಕೂಡಿದ್ದು, ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಫುಲ್ ಡಿಜಿಟಲ್ ಸ್ಕ್ರೀನ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ. ಇದರ 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ 11.22 bhp ಗರಿಷ್ಠ ಪವರ್ ಹಾಗೂ 11.2 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಕೇವಲ 5.9 ಸೆಕೆಂಡುಗಳಲ್ಲಿ 0-60 kmph ವೇಗವನ್ನು ಪಡೆಯಲಿದೆ. ರೂ. 93,719 ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿದೆ.


Click it and Unblock the Notifications