Electric Scooters: ಭಾರತದಲ್ಲಿ ಈ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಓಡಿಸಲು ಹೆಲ್ಮೆಟ್ ಬೇಕಿಲ್ಲ.. ರೂ.44,000ದಿಂದ ಆರಂಭ
ಭಾರತದಲ್ಲಿ ಯಾವುದೇ ದ್ವಿಚಕ್ರ ವಾಹನ ಚಲಾಯಿಸುವಾಗ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಧರಿಸುವುದು ಕಡ್ಡಾಯವಾಗಿದೆ. ಕೇಂದ್ರ ಮೋಟಾರು ವಾಹನ ನಿಯಮದ ಪ್ರಕಾರ, 250wಕ್ಕಿಂತ ಕಡಿಮೆ ಪವರ್ ಹಾಗೂ 25 kmph ಟಾಪ್ ಸ್ವೀಡ್ ಒಳಗಿರುವ ಯಾವುದೇ ಎಲೆಕ್ಟ್ರಿಕ್ ದ್ವಿಚಕ್ರ ವಾಹನ (ಇವಿ) ಓಡಿಸುವಾಗ ಹೆಲ್ಮೆಟ್ ಹಾಕುವುದು ಅಗತ್ಯವಿಲ್ಲ.
ಇಲ್ಲಿ ಕಮ್ಮಿ ಬೆಲೆಗೆ ಖರೀದಿಗೆ ದೊರೆಯುವ ಅಂತಹ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ವಿವರಿಸಲಾಗಿದೆ. ಮೊದಲಿಗೆ ಹಾಪ್ ಲಿಯೋ ಸ್ಕೂಟರ್ ಬಗ್ಗೆ ಮಾತನಾಡೋಣ. ಇದು 81,999 ಬೆಲೆಯಲ್ಲಿ ಸಿಗಲಿದ್ದು, ಸಂಪೂರ್ಣ ಚಾರ್ಜಿನಲ್ಲಿ 75 ಕಿಲೋಮೀಟರ್ ರೇಂಜ್ ನೀಡಲಿದೆ. 25 kmph ಟಾಪ್ ಸ್ವೀಡ್ ಹೊಂದಿದ್ದು, ಪಾರ್ಕಿಂಗ್ ಸೇನಾರ್ಸ್, ಜಿಪಿಎಸ್ ಸೇರಿದಂತೆ ಹತ್ತು ಹಲವು ವೈಶಿಷ್ಟ್ಯಗಳನ್ನು ಪಡೆದಿದೆ.

ಹೀರೋ ಎಲೆಕ್ಟ್ರಿಕ್ ಆಪ್ಟಿಮಾ E2 ಸಹ ಭಾರತದ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಯಲ್ಲಿ ದೊರೆಯುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ರೂ.61 ಸಾವಿರ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಫುಲ್ ಚಾರ್ಜಿನಲ್ಲಿ 65 Km ರೇಂಜ್ ನೀಡಲಿದ್ದು, 25 kmph ಟಾಪ್ ಸ್ವೀಡ್ ಪಡೆದಿದೆ. ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಈ ಸ್ಕೂಟರ್ ಓಡಿಸಲು ಹೆಲ್ಮೆಟ್ ಬೇಕಿಲ್ಲ.
ಲೋಹಿಯಾ ಓಮಾ ಸ್ಟಾರ್ ಲಿ ಕೂಡ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಆಗಿದ್ದು, ರೂ.51,750 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಸಂಪೂರ್ಣ ಚಾರ್ಜಿನಲ್ಲಿ 60 km ರೇಂಜ್ ನೀಡಲಿದ್ದು, 25 kmph ಟಾಪ್ ಸ್ವೀಡ್ ಹೊಂದಿದೆ. ಫಿರಿ ರೆಡ್, ಮ್ಯಾಕೋ ಬ್ಲ್ಯಾಕ್, ಸ್ಪಿರಿಟೆಡ್ ಗ್ರೇ & ವೈಟ್ ಬಣ್ಣಗಳ ಆಯ್ಕೆಯಲ್ಲಿ ದೊರೆಯುತ್ತದೆ.
ಹೀರೋ ಎಲೆಕ್ಟ್ರಿಕ್ ಫ್ಲ್ಯಾಶ್ LX ಸ್ಕೂಟರ್ ಕಡಿಮೆ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. ಇದು ರೂ.59,640 ದರವನ್ನು ಹೊಂದಿದೆ. ಸಂಪೂರ್ಣ ಚಾರ್ಜಿನಲ್ಲಿ 85 km ರೇಂಜ್ ಕೊಡಲಿದೆ. ಇದರ ಬ್ಯಾಟರಿ, 4 ರಿಂದ 5 ಗಂಟೆಯಲ್ಲಿ ಚಾರ್ಜ್ ಆಗುತ್ತದೆ. ಜೊತೆಗೆ 25 kmph ಟಾಪ್ ಸ್ವೀಡ್ ಪಡೆದಿದ್ದು, ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಓಕಿನಾವಾ R30 ಸ್ಕೂಟರ್ ಓಡಿಸುವಾಗಲು ಹೆಲ್ಮೆಟ್ ಧರಿಸುವ ಅಗತ್ಯವಿಲ್ಲ. ಇದು ರೂ.69,998 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದರ ಬ್ಯಾಟರಿ ಪ್ಯಾಕ್ 4 ರಿಂದ 5 ಗಂಟೆಯಲ್ಲಿ ಫುಲ್ ಚಾರ್ಜ್ ಆಗಲಿದ್ದು, 60 Km ರೇಂಜ್ ನೀಡಲಿದೆ. 25 Kmph ಟಾಪ್ ಸ್ವೀಡ್ ಹೊಂದಿದೆ. ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಜೆಮೊಪೈ ಮಿಸೊ ತೀರಾ ಕಡಿಮೆ ಬೆಲೆಗೆ ದೊರೆಯುವ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ರೂ.44,000 ದರದಲ್ಲಿ ಖರೀದಿಗೆ ಸಿಗಲಿದೆ. ಇದು ಸಂಪೂರ್ಣ ಚಾರ್ಜಿನಲ್ಲಿ 60 ರಿಂದ 75 ಕಿಲೋಮೀಟರ್ ರೇಂಜ್ ನೀಡಲಿದೆ. ಫುಲ್ ಬ್ಯಾಟರಿ ಪ್ಯಾಕ್ ಚಾರ್ಜ್ ಆಗಲು 3 ರಿಂದ 4 ಗಂಟೆಬೇಕು. ಜೊತೆಗೆ 25 Kmph ಟಾಪ್ ಸ್ವೀಡ್ ಹೊಂದಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಪಡೆದಿದೆ.
ಇನ್ನುಳಿದಂತೆ ಹೀರೋ ಎಲೆಕ್ಟ್ರಿಕ್ ಆಪ್ಟಿಮಾ ಎಲ್ಎಕ್ಸ್, ರೂ.51,440, ಆಂಪಿಯರ್ ರಿಯೊ ಲೈಟ್ ರೂ.60,490, ಕೊಮಾಕಿ XGT ಕೆಎಂ ರೂ.56,890 ಹಾಗೂ ಒಕಿನಾವಾ ಲೈಟ್ ರೂ.64 ಸಾವಿರ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಈ ಸ್ಕೂಟರ್ ಗಳನ್ನು ಓಡಿಸುವ ಹೈಲ್ಮೆಟ್ ಧರಿಸುವ ಅಗತ್ಯವಿಲ್ಲ. ಆದರೂ, ಯಾವುದೇ ರೀತಿಯಲ್ಲಿ ಬೇಕಾದರೂ ಅಪಾಯ ಎದುರಾಗಬಹುದು. ನಿಮ್ಮ ಸುರಕ್ಷತೆಯ ದೃಷ್ಟಿಯಿಂದ ಹೆಲ್ಮೆಟ್ ಹಾಕಿಕೊಳ್ಳಿರಿ.


Click it and Unblock the Notifications