ಈಗ ನಗಿ ನೋಡೋಣ... ಹೀಯಾಲಿಸಿದ್ದವರಿಗೆ ಸರಿಯಾಗಿಯೇ ಉತ್ತರ ಕೊಟ್ಟ ಚೀನಾದ BYD

ವಿಶ್ವದಾದ್ಯಂತ ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚಿಸಿಕೊಂಡ ಮೊದಲ ಇವಿ ಬ್ರಾಂಡ್‌ ಎಂದರೆ ಅಮೆರಿಕಾ ಮೂಲದ ಟೆಸ್ಲಾ ಎಂದೇ ಹೇಳಬಹುದು. ಆದ್ರೆ ಈಗ ಟೆಸ್ಲಾವನ್ನು ಹಿಂದಿಕ್ಕಿ ಚೀನಾದ BYD ಕಂಪನಿಯು ಅಗ್ರಸ್ಥಾನಕ್ಕೇರಿ ತೀವ್ರ ಪೈಪೋಟಿ ನೀಡುತ್ತಿದೆ. ಇದೇ ಕಂಪನಿಯನ್ನು ನೋಡಿ ಈ ಹಿಂದೆ ನಕ್ಕಿದ್ದ ಟೆಸ್ಲಾ ಸಿಇಒ ಈಗ ಏನಂದಿದ್ದಾರೆ ಗೊತ್ತಾ?

ಇತ್ತೀಚೆಗೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಅವರ ಹಳೆಯ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಈ ವಿಡಿಯೊದಲ್ಲಿ ಚೀನಾ ಮೂಲದ ಬಿವೈಡಿ ಕಂಪನಿ ಕುರಿತು ಕೇಳಿದ ಪ್ರಶ್ನೆಯೊಂದಕ್ಕೆ ಎಲಾನ್ ಮಸ್ಕ್ ವ್ಯಂಗವಾಗಿ ನಕ್ಕಿದ್ದರು. ಈಗ ಇದೇ ಕಂಪನಿ ವಿಶ್ವದಾದ್ಯಂತ ಗುರುತಿಸಿಕೊಂಡು ಟೆಸ್ಲಾ ಎಲೆಕ್ಟ್ರಿಕ್ ಕಾರುಗಳಿಗೆ ಪ್ರಮುಖ ಪ್ರತಿಸ್ಪರ್ಧಿಯಾಗಿ ಬೆಳೆದುನಿಂತಿದೆ.

Chinas BYD

ವಿಡಿಯೋದಲ್ಲಿ ಏನಿದೆ: 2011 ರಲ್ಲಿನ ವಿಡಿಯೋ ಇದಾಗಿದ್ದು, ಆಗಿನ ಕಾಲಕ್ಕೆ ಟೆಸ್ಲಾ ಟಾಪ್ ಇವಿ ಬ್ರಾಂಡ್ ಆಗಿತ್ತು. ಈ ನಿಟ್ಟಿನಲ್ಲಿ ಚೀನಾದ ವಾಹನ ತಯಾರಕ ಬಿವೈಡಿಯು ಟೆಸ್ಲಾಗೆ ಸವಾಲೊಡ್ಡುವ ಸಾಮರ್ಥ್ಯದ ಬಗ್ಗೆ ಎಲೋನ್ ಮಸ್ಕ್ ಅವರನ್ನು ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಅವರು ವ್ಯಂಗ್ಯವಾಗಿ ಜೋರಾಗಿ ನಕ್ಕಿದ್ದರು. ಆದ್ರೆ ಪ್ರಸ್ತುತ ಅವರ ಆಲೋಚನೆಯೇ ಬದಲಾಗಿದೆ.

ಈ ವಿಡಿಯೋವನ್ನು ವೈರಲ್ ಮಾಡಿದವರು ಎಲಾನ್ ಮಸ್ಕ್ ಅವರನ್ನು ಕೂಡ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ವಿಡಿಯೋ ಹಲವು ವರ್ಷಗಳ ಹಿಂದಿನದ್ದು, ಈಗ ಅವರ ಕಾರುಗಳು ಹೆಚ್ಚು ಸ್ಪರ್ಧಾತ್ಮಕವಾಗಿವೆ. ಅಂದಿನಿಂದ ಬಹಳಷ್ಟು ವಿಷಯಗಳು ಬದಲಾಗಿವೆ. BYD ಕಾರುಗಳು ಈಗ ಬಹಳ ಪ್ರಭಾವಶಾಲಿಯಾಗಿವೆ ಎಂದು ಮಸ್ಕ್ ಸ್ಪಷ್ಟಪಡಿಸಿದ್ದಾರೆ.

ಚೀನಾದ ಕಾರು ತಯಾರಕರ ಬಗ್ಗೆ ಎಲೋನ್ ಮಸ್ಕ್ ಮೆಚ್ಚುಗೆ ವ್ಯಕ್ತಪಡಿಸಿರುವುದು ಇದೇ ಮೊದಲಲ್ಲ. ಕಳೆದ ಜನವರಿಯಲ್ಲಿ, ಟೆಸ್ಲಾ ಅವರ ಕಠಿಣ ಪ್ರತಿಸ್ಪರ್ಧಿಯನ್ನು ಹೆಸರಿಸಲು ಮಸ್ಕ್ ಅವರನ್ನು ಕೇಳಲಾಗಿತ್ತು. ಕೆಲವು ಚೀನೀ ಕಂಪನಿಗಳನ್ನು ಉಲ್ಲೇಖಿಸಿದ್ದರಾದರೂ ನಿರ್ದಿಷ್ಟ ಹೆಸರನ್ನು ಹೇಳಿರಲಿಲ್ಲ. ಅವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ, ಅವರು ಬುದ್ಧಿವಂತರಾಗಿ ಕೆಲಸ ಮಾಡುತ್ತಾರೆ ಎಂದಿದ್ದರು.

BYD ಕಂಪನಿಯು ಪ್ರಪಂಚದಾದ್ಯಂತ ತನ್ನ ಮಾರುಕಟ್ಟೆ ಅಸ್ತಿತ್ವವನ್ನು ವೇಗವಾಗಿ ವಿಸ್ತರಿಸುತ್ತಿದೆ. ಈ ವಾಹನ ತಯಾರಕರು ಈಗಾಗಲೇ ಭಾರತದಲ್ಲಿ ಎರಡು ಎಲೆಕ್ಟ್ರಿಕ್ ಕಾರುಗಳನ್ನು ಬಿಡುಗಡೆ ಮಾಡಿದ್ದಾರೆ. BYD ಭಾರತದಲ್ಲಿ E6 MPV ಎಲೆಕ್ಟ್ರಿಕ್ ಕಾರ್ ಅನ್ನು ಮೊದಲು ಬಿಡುಗಡೆ ಮಾಡಿತು. ನಂತರ, ಕಂಪನಿಯು Atto 3 EV ಅನ್ನು ಪರಿಚಯಿಸಿತು.

ಸದ್ಯ ಬಿವೈಡಿ ಅವರು ಭಾರತೀಯ ಮಾರುಕಟ್ಟೆಗೆ ಹೊಸ ಕಾರನ್ನು ತರಲು ಸಜ್ಜಾಗಿದ್ದಾರೆ. ಇದೇ ವರ್ಷದ ಆರಂಭದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಹೊಸ ಹಾಗೂ ಅವರ ಮೂರನೇ ಉತ್ಪನ್ನವಾದ ಸೀಲ್ ಎಲೆಕ್ಟ್ರಿಕ್ ಸೆಡಾನ್ ಅನ್ನು ಪ್ರದರ್ಶಿಸಿದ್ದರು. ಈ ಎಲೆಕ್ಟ್ರಿಕ್ ಸೆಡಾನ್ ಅನ್ನು ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಗೆ ತರಲು ನೋಡುತ್ತಿರುವುದಾಗಿ ಮೂಲಗಳು ತಿಳಿಸಿವೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Tuesday, May 30, 2023, 17:30 [IST]
English summary
Elon musk china s byd old laughed video viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+