ದೇಶದ ಇತಿಹಾಸದಲ್ಲಿ ಫ್ಲಾಪ್ ಕಂಡ ದೊಡ್ಡ ಕಂಪನಿಯ ದ್ವಿಚಕ್ರ ವಾಹನಗಳಿವು: ಬಂದಷ್ಟೇ ವೇಗದಲ್ಲಿ ಮಾಯ..!

ವಿಶ್ವದಲ್ಲೇ ಅತ್ಯಂತ ದೊಡ್ಡ ದ್ವಿಚಕ್ರ ವಾಹನ ಮಾರುಕಟ್ಟೆಯನ್ನು ಭಾರತ ಹೊಂದಿದೆ. ಪ್ರತಿ ತಿಂಗಳು ಒಂದಿಲ್ಲೊಂದು ಸ್ಕೂಟರ್ ಹಾಗೂ ಬೈಕ್‌ಗಳು ಬಿಡುಗಡೆಯಾಗುತ್ತಿರುತ್ತವೆ. ಅದರಲ್ಲಿ ಹಲವು ದೊಡ್ಡ ಪ್ರಮಾಣದಲ್ಲಿ ಬೇಡಿಕೆಯನ್ನು ಪಡೆದು, ದಶಕಗಳ ಕಾಲ ಮಾರಾಟವಾಗುತ್ತವೆ. ಆದರೆ, ಏನೇ ಮಾಡಿದರೂ ಕೆಲವು ಗ್ರಾಹಕರನ್ನು ಸೆಳೆಯಲು ವಿಫಲವಾಗುತ್ತವೆ.

ದೇಶೀಯ ಮಾರುಕಟ್ಟೆಯಲ್ಲೂ ಪ್ರಮುಖ ಕಂಪನಿಯ ದ್ವಿಚಕ್ರ ವಾಹನಗಳೇ ಮಕಾಡೆ ಮಲಗಿವೆ. ಅದಕ್ಕೆ ನಾನಾ ಕಾರಣವಿರಬಹುದು. ಆ ಕಾಲಘಟ್ಟದ ಯುವ ಜನರಿಗೆ ಆ ಬೈಕ್ ಅಥವಾ ಸ್ಕೂಟರ್ ಇಷ್ಟವಾಗದೇ ಇರಬಹುದು ಅಥವಾ ಬೆಲೆ ಹೆಚ್ಚಿರಬಹುದು. ಇಲ್ಲವೇ, ವಿನ್ಯಾಸ ಹಾಗೂ ವೈಶಿಷ್ಟ್ಯಗಳನ್ನು ಗ್ರಾಹಕರು ಲೈಕ್ ಮಾಡದಿರಬಹುದು. ಇಲ್ಲಿ ಭಾರತದ ಇತಿಹಾಸದಲ್ಲಿ ಫ್ಲಾಪ್ ಆದ 12 ಪ್ರಮುಖ ಬೈಕ್‌ ಹಾಗೂ ಸ್ಕೂಟರ್ ಬಗ್ಗೆ ವಿವರಿಸಲಾಗಿದೆ.

ದೇಶದ ಇತಿಹಾಸದಲ್ಲಿ ಫ್ಲಾಪ್ ಕಂಡ ದೊಡ್ಡ ಕಂಪನಿಯ ದ್ವಿಚಕ್ರ ವಾಹನಗಳಿವು: ಬಂದಷ್ಟೇ ವೇಗದಲ್ಲಿ ಮಾಯ..!

ಮೊದಲಿಗೆ ಸುಜುಕಿ ಬೈಕ್‌ಗಳ ಕುರಿತು ಮಾತನಾಡೋಣ. ಕಂಪನಿಯು ಭಾರೀ ನೀರಿಕ್ಷೆ ಇಟ್ಟುಕೊಂಡು ಆಕರ್ಷಕ ವಿನ್ಯಾಸದೊಂದಿಗೆ ಇಂಟ್ರುಡೆರ್ 150 (Suzuki Intruder 150) ಮೋಟಾರ್ ಸೈಕಲ್ ಅನ್ನು ಭಾರತದ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಲಾಂಚ್ ಮಾಡಿತ್ತು. ಅದೇಕೋ ಯಶಸ್ಸು ಕಾಣಲು ವಿಫಲವಾದ ಕಾರಣ, 2017 ರಲ್ಲಿ ಇದರ ಮಾರಾಟವನ್ನು ಅಧಿಕೃತವಾಗಿ ನಿಲ್ಲಿಸಿತು.

ಸರಿ ಸುಮಾರು ಒಂದು ದಶಕದ ಹಿಂದೆ, ಸುಜುಕಿ ಇನಾಜುಮಾ 250 ಭಾರತದಲ್ಲಿ ಬಿಡುಗಡೆಯಾಗಿತ್ತು. ತುಂಬಾ ಅತ್ಯಾಧುನಿಕವಾಗಿದ್ದ ಈ ಬೈಕ್, ಪವರ್ ಫುಲ್ 248 ಸಿಸಿ ಟ್ವಿನ್ ಸಿಲಿಂಡರ್ ಎಂಜಿನ್ ಹೊಂದಿತ್ತು. ಜೊತೆಗೆ 6 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯಲ್ಲಿ ರೂ.2.10 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಖರೀದಿಗೆ ಲಭ್ಯವಿತ್ತು. ಆದರೆ, ಆಗಿನ ಕಾಲಘಟ್ಟದಲ್ಲಿ ಇದು ವಿನ್ಯಾಸ ಅಥವಾ ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ವಿಫಲವಾಯಿತು.

ಸದ್ಯ, ಭಾರತದ ಫೇಮಸ್ ಕಾರು ತಯಾರಕ ಕಂಪನಿಯಾಗಿರುವ ಮಹೀಂದ್ರಾ, ಕೆಲವೇ ವರ್ಷಗಳ ಹಿಂದೆ, ದೇಶದಲ್ಲಿ ಮೊಜೊ ಮಾರಾಟ ಆರಂಭಿಸಿತ್ತು. ತಜ್ಞರು, ಇದರ ಬೆಲೆ ಎರಡು ಲಕ್ಷ ಆಸುಪಾಸಿನಲ್ಲಿದ್ದ ಕಾರಣ, ಗ್ರಾಹಕರನ್ನು ಸೆಳೆಯಲು ಸೋತಿತು ಎಂದು ಹೇಳುತ್ತಾರೆ. 2020ರಲ್ಲಿ ಮಹೀಂದ್ರಾ ಇದರ ಎಂಜಿನ್ ಅನ್ನು BS6 ಮಾನದಂಡಗಳ ಅನ್ವಯ ನವೀಕರಿಸಿ, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ವೈಶಿಷ್ಟ್ಯದೊಂದಿಗೆ ಬಿಡುಗಡೆಗೊಂಡರೂ ವಿಫಲವಾಯಿತು.

ದೇಶದ ನಂಬರ್ ದ್ವಿಚಕ್ರ ವಾಹನ ಹೀರೋದ ಒಂದು ಬೈಕ್ ಕೂಡ ಗ್ರಾಹಕರನ್ನು ತನ್ನತ್ತ ಆಕರ್ಷಿಸಲು ಸೋತು, ಫ್ಲಾಪ್ ಬೈಕ್ ಎನಿಸಿಕೊಂಡಿತು ಎಂದು ಹೇಳಿದರೆ ಯಾರು ನಂಬುವುದಿಲ್ಲ. ಹೀರೋ ತನ್ನ 'ಇಂಪಲ್ಸ್' ಬೈಕ್ ಅನ್ನು 2008ರ ಮೊದಲು ಭಾರತದಲ್ಲಿ ಬಿಡುಗಡೆಗೊಳಿಸಿತ್ತು. ಆಗಿನ ಜನರು ಸೂಕ್ತ ಪ್ರಯಾಣಿಕ ಬೈಕ್ ಹುಡುಕುತ್ತಿದ್ದರು. ಅವರಿಗೆ ಈ ಮೋಟರ್ ಸೈಕಲ್ ಇಷ್ಟವಾಗಲ್ಲ. ತೀವ್ರ ಮಾರಾಟದ ಕುಸಿತದಿಂದ 2016ರಲ್ಲಿ ಸ್ಥಗಿತಗೊಳಿಸಲಾಯಿತು.

ಹೋಂಡಾದ ಪ್ರಮುಖ ಬೈಕ್ 'ನವಿ' ಅಂತರರಾಷ್ಟ್ರಿಯ ಮಾರುಕಟ್ಟೆಯಲ್ಲಿ ಸಕ್ಸಸ್ ಆಯಿತು. ಆದರೆ, ದೇಶದಲ್ಲಿ ವಿಫಲಗೊಂಡ ಹಿನ್ನೆಲೆ, 2020ರಲ್ಲಿ ಮಾರಾಟವನ್ನು ನಿಲ್ಲಿಸಲಾಯಿತು. ಭಾರತದ ಆಟೋಮೊಬೈಲ್ ಇತಿಹಾಸದಲ್ಲಿ ಗ್ರಾಹಕರನ್ನು ಸೆಳೆಯಲು ವಿಫಲವಾದ ಏಕೈಕ ಸ್ಕೂಟರ್ ಅಂದರೇ ಹೋಂಡಾ CLIQ. ಇದರ ಉತ್ಪಾದನೆಯನ್ನು 2020ರಲ್ಲಿ ಸ್ಥಗಿತಗೊಳಿಸಲಾಯಿತು. ಎಲ್ಎಂಎಲ್ ಫ್ರೀಡಂ ಕೂಡ ಖರೀದಿದಾರನ್ನು ಆಕರ್ಷಿಸಲು ವಿಫಲವಾದ ಕಾರಣ, 2018ರಲ್ಲಿ ಮಾರುಕಟ್ಟೆಯಿಂದ ದೂರವಾಯಿತು.

ಹೋಂಡಾ ಕಂಪನಿ ಸಾಕಷ್ಟು ನೀರಿಕ್ಷೆಯಲ್ಲಿ ಬಿಡುಗಡೆ ಮಾಡಿದ್ದ 125 ಸಿಸಿ ಸೆಗ್ಮೆಂಟ್ ಬೈಕ್ 'CBF ಸ್ಟನ್ನರ್' ಕೂಡ ಗ್ರಾಹಕರನ್ನು ತನ್ನತ್ತ ಸೆಳೆಯಲು ಸೋತ ಕಾರಣ, 2014ರಲ್ಲಿ ಮಾರಾಟದಿಂದ ಸ್ಥಗಿತಗೊಳಿಸಲಾಯಿತು. ಬಜಾಜ್ ಪಲ್ಸರ್ 135LS ಕೂಡ ಕಡಿಮೆ ಮಾರಾಟದ ಕಾರಣ, 2018ರಲ್ಲಿ ಉತ್ಪಾದನೆಯನ್ನು ನಿಲ್ಲಿಸಲಾಯಿತು. ಇನ್ನುಳಿದಂತೆ ಎಲ್ಎಂಎಲ್ ಅಡ್ರೆನೋ ಹಾಗೂ ರಾಯಲ್ ಎನ್ ಫೀಲ್ಡ್ ಮಾಚಿಸ್ಮೋ ಸಹ ಯಶಸ್ಸು ಸಾಧಿಸಲಿಲ್ಲ.

Article Published On: Friday, June 16, 2023, 18:00 [IST]
English summary
Flop motorcycles scooters rejected buyers india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+