ಹಾರ್ಲೆ-ಡೇವಿಡ್ಸನ್ X440 Vs ರಾಯಲ್ ಎನ್‌ಫೀಲ್ಡ್ ಹಂಟರ್ 350: ಯಾವುದು ಬೆಸ್ಟ್?
ಅಮೆರಿಕ ಮೂಲದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಹಾರ್ಲೆ-ಡೇವಿಡ್ಸನ್ ತನ್ನ ಬಹುನಿರೀಕ್ಷಿತ ಹೊಸ ಹಾರ್ಲೆ-ಡೇವಿಡ್ಸನ್ X440 (Harley-Davidson X440) ಬೈಕ್ ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಕೊನೆಗೂ ಬಿಡುಗಡೆಗೊಳಿಸಿದೆ. ಇನ್ನು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಜನಪ್ರಿಯ ರಾಯಲ್ ಎನ್‌ಫೀಲ್ಡ್ ಹಂಟರ್ 350 ಮತ್ತು ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್‌ಗಳ ನಡುವಿನ ವ್ಯತ್ಯಾಸಗಳು ಇಲ್ಲಿದೆ.
ವಿನ್ಯಾಸ: ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕ್ ದೊಡ್ಡ ಮಸ್ಕಲರ್ ಇಂಧನ ಟ್ಯಾಂಕ್ ಮತ್ತು ನಯವಾದ ಟೇಲ್ ವಿಭಾಗದೊಂದಿಗೆ ಸುಂದರವಾಗಿ ಕಾಣುತ್ತದೆ. ಹೆಚ್ಚುವರಿಯಾಗಿ, ಈ ಬೈಕ್ ನ್ಯೂ-ರೆಟ್ರೊ ಲುಕ್ ನೀಡಲು ವೃತ್ತಾಕಾರದ ವಿನ್ಯಾಸದ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಹಾರ್ಲೆ-ಡೇವಿಡ್ಸನ್ X440ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಮತ್ತು ಎಲ್‌ಇಡಿ ಟೈಲ್‌ಲ್ಯಾಂಪ್‌ಗಳನ್ನು ಹೊಂದಿವೆ.

ಇನ್ನು ಜನಪ್ರಿಯ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನ ವಿನ್ಯಾಸವು ಸ್ವಲ್ಪ ಸರಳವಾಗಿದೆ. ಈ ಬೈಕ್ ಅನ್ನು ತಕ್ಷಣವೇ ರಾಯಲ್ ಎನ್‌ಫೀಲ್ಡ್ ಎಂದು ಗುರುತಿಸಬಹುದು. ಅಲ್ಲದೆ, ಅದರ ಸರಳತೆಯು ಆಕರ್ಷಕವಾಗಿದೆ. ರಾಯಲ್ ಎನ್‌ಫೀಲ್ಡ್ ಹಂಟರ್ 350 ಕಸ್ಟಮೈಸ್ ಮಾಡಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿದೆ.
ಫೀಚರ್ಸ್: ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ LED ಲೈಟಿಂಗ್, ಆಂಬಿಯೆಂಟ್ ಲೈಟ್ ಸೆನ್ಸರ್‌ನೊಂದಿಗೆ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಬ್ಲೂಟೂತ್ ಕನೆಕ್ಟಿವಿಟಿ ಮತ್ತು ಹೆಚ್ಚಿನ ಫೀಚರ್ಸ್ ಗಳನ್ನು ಹೊಂದಿವೆ. ಇತರ ಗಮನಾರ್ಹ ಫೀಚರ್ಸ್ ಗಳು ಟರ್ನ್-ಬೈ-ಟರ್ನ್ ನ್ಯಾವಿಗೇಷನ್, ಕಾಲ್, ಮ್ಯೂಸಿಕ್ ಕಂಟ್ರೋಲ್ ಮತ್ತು ಗೇರ್ ಸ್ಥಾನವನ್ನು ಒಳಗೊಂಡಿವೆ.
ಇನ್ನು ಮೊದಲೇ ಹೇಳಿದಂತೆ, ರಾಯಲ್ ಎನ್‌ಫೀಲ್ಡ್ ಹಂಟರ್ 350 ತುಂಬಾ ಸರಳವಾದ ಮೋಟಾರ್‌ಸೈಕಲ್ ಆಗಿದೆ ಮತ್ತು ಇದು ಎಲ್‌ಇಡಿ ಹೆಡ್‌ಲೈಟ್‌ಗಳೊಂದಿಗೆ ಸಹ ಬರುತ್ತದೆ. ಇನ್ನು ಈ ಬೈಕಿನಲ್ಲಿ ಡಿಜಿಟಲ್-ಅನಾಲಾಗ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್‌ಇಡಿ ಟೈಲ್ ಲ್ಯಾಂಪ್‌ಗಳು, ಡ್ಯುಯಲ್-ಚಾನೆಲ್ ಎಬಿಎಸ್, ಟ್ರಿಪ್ಪರ್ ನ್ಯಾವಿಗೇಷನ್ ಮಾಡ್ಯೂಲ್, ಅಲಾಯ್ ವೀಲ್‌ಗಳು ಮತ್ತು ಡಿಸ್ಕ್ ಬ್ರೇಕ್‌ಗಳಂತಹ ವೈಶಿಷ್ಟ್ಯಗಳೊಂದಿಗೆ ಯೋಗ್ಯವಾಗಿ ಸಜ್ಜುಗೊಂಡಿದೆ.
ಎಂಜಿನ್: ಈ ಹೊಸ ಹಾರ್ಲೆ-ಡೇವಿಡ್ಸನ್ X440 ಬೈಕಿನಲ್ಲಿ ಸಿಂಗಲ್-ಸಿಲಿಂಡರ್, ಆಯಿಲ್-ಕೂಲ್ಡ್, 440cc ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ ಸರಿಸುಮಾರು 27 bhp ಪವರ್ ಮತ್ತು 38 Nm ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು 6-ಸ್ಪೀಡ್ ಗೇರ್ ಬಾಕ್ಸ್ ಅನ್ನ್ನು ಜೋಡಿಸಲಾಗಿದೆ.
ಇನ್ನು ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕಿನಲಿ 349 ಸಿಸಿ ಸಿಂಗಲ್ ಸಿಲಿಂಡರ್ ಫ್ಯೂಲ್ ಇಂಜೆಕ್ಷೆಡ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 20.2 ಬಿಹೆಚ್‌ಪಿ ಪವರ್ ಮತ್ತು 27 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ ಅನ್ನು ಈ 5-ಸ್ಪೀಡ್ ಗೇರ್‌ಬಾಕ್ಸ್ ಮೂಲಕ ಜೋಡಿಸಲಾಗಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತೇವೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications