Hero - Ather: ಹೀರೋ, ಎಥರ್‌ನಿಂದ ಹೊಸ ಕ್ರಾಂತಿ, 1900 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಪ್ರತಿಸ್ಪರ್ಧಿಗಳಿಗೆ ಪ್ರಬಲ ಪೈಪೋಟಿ ನೀಡಲು ಎಥರ್‌ (Ather) ಹಾಗೂ ಹೀರೋ (Hero) ಪಾಲುದಾರಿಕೆ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಎರಡು ಕಂಪನಿಗಳು, ದೇಶಾದ್ಯಂತ ಇಂಟರ್‌ಆಪರೇಬಲ್ ಇವಿ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್‌ ಸ್ಥಾಪನೆಗೆ ಮುಂದಾಗಿವೆ.

ಎಥರ್ ಅಥವಾ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು, ಇದರ ಸದುಪಯೋಗಪಡಿಸಿಕೊಳ್ಳಬಹುದು. ದೇಶದ ಪ್ರಮುಖ 100 ನಗರಗಳಲ್ಲಿ 1900ಕ್ಕೂ ಹೆಚ್ಚಿನ ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಆರಂಭಿಸಲು ತೀರ್ಮಾನಿಸಲಾಗಿದೆ. ಇಲ್ಲಿ ಬಿಐಎಸ್ ಅನುಮೋದಿತ ಲೈಟ್ ಎಲೆಕ್ಟ್ರಿಕ್ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್ (LECCS) ಟೆಕ್ನಲಾಜಿಯಲ್ಲಿ ಬಳಕೆ ಮಾಡಲಾಗುತ್ತಿದ್ದು, ಇದೊಂದು ಎಸಿ ಮತ್ತು ಡಿಸಿ ಸಂಯೋಜಿತ ಚಾರ್ಜಿಂಗ್ ಕನೆಕ್ಟರ್ ಆಗಿದೆ.

Hero - Ather: ಹೀರೋ, ಎಥರ್‌ನಿಂದ ಹೊಸ ಕ್ರಾಂತಿ, 1900 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ

ಗ್ರಾಹಕರು ಮೈ ವಿಡಾ (My VIDA) ಅಥವಾ ಎಥರ್‌ (Ather) ಅಪ್ಲಿಕೇಶನ್ ಸಹಾಯದಿಂದ ತಮ್ಮ ಹತ್ತಿರದ ಫಾಸ್ಟ್ ಚಾರ್ಜಿಂಗ್ ಸ್ಟೇಷನ್‌ಗಳನ್ನು ಹುಡುಕಾಟ ನಡೆಸಬಹುದು. ಅದಕ್ಕೆ ತಕ್ಕಂತೆಯೇ ಈ ಆಪ್ ಗಳನ್ನು ಅಪ್ಡೇಟ್ ಮಾಡಲಾಗುತ್ತದೆ ಎಂದು ವರದಿಯಾಗಿದೆ. ಈ ರೀತಿಯ ಚಾರ್ಜಿಂಗ್ ಪಾಯಿಂಟ್‌ಗಳ ಸ್ಥಾಪನೆಯಿಂದ ಹೊಸ ಖರೀದಿದಾರರಿಗೂ ಎಥರ್ ಅಥವಾ ಹೀರೋ ಎಲೆಕ್ಟ್ರಿಕ್ ಸ್ಕೂಟರ್ ಕೊಂಡುಕೊಳ್ಳುವಂತೆ ಉತ್ತೇಜನ ದೊರೆಯಬಹುದು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹೀರೋ ಮೋಟೊಕಾರ್ಪ್ ಅಧಿಕಾರಿ ಸ್ವದೇಶ್ ಶ್ರೀವಾಸ್ತವ ಅವರು, 'ಈ ಇಂಟರ್‌ಆಪರೇಬಲ್ ಫಾಸ್ಟ್ ಚಾರ್ಜಿಂಗ್ ನೆಟ್‌ವರ್ಕ್ ಮೂಲಕ ಎಥರ್ ಎನರ್ಜಿಯೊಂದಿಗೆ ನಮ್ಮ ಸಂಬಂಧ ಗಟ್ಟಿಗೊಳಿಸುತ್ತಿರುವುದು ಸಂತೋಷ ತಂದಿದೆ. ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳಿಗೆ ಸರ್ಕಾರದ ಅನುಮೋದಿತ ಕನೆಕ್ಟರ್ ಬಳಕೆ ಮಾಡಲಾಗುತ್ತಿದ್ದು, ನಮ್ಮ ಗ್ರಾಹಕರು ಯಾವುದೇ ರೀತಿಯಲ್ಲಿ ತೊಂದರೆ ಇಲ್ಲದೆ ವಾಹನಗಳನ್ನು ಚಾರ್ಜಿಂಗ್ ಮಾಡಬಹುದು' ಎಂದು ಹೇಳಿದ್ದಾರೆ.

Hero - Ather: ಹೀರೋ, ಎಥರ್‌ನಿಂದ ಹೊಸ ಕ್ರಾಂತಿ, 1900 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ ಸ್ಥಾಪನೆ

ಎಥರ್ ಎನರ್ಜಿ ಸಹ - ಸಂಸ್ಥಾಪಕ ಮತ್ತು ಸಿಟಿಒ ಸ್ವಪ್ನಿಲ್ ಜೈನ್ ಅವರು, 'ಈ ಒಡಂಬಡಿಕೆಯಿಂದ ದೇಶಾದ್ಯಂತ ಗ್ರಾಹಕರಿಗೆ ದೊಡ್ಡಮಟ್ಟದಲ್ಲಿ ಅನುಕೂಲವಾಗಲಿದೆ. ಲೈಟ್ ಎಲೆಕ್ಟ್ರಿಕ್ ಕಂಬೈನ್ಡ್ ಚಾರ್ಜಿಂಗ್ ಸಿಸ್ಟಮ್ (LECCS) ಟೆಕ್ನಲಾಜಿಯನ್ನು ಭಾರತದಲ್ಲಿಯೇ ಅಭಿವೃದ್ಧಿಪಡಿಸಿದ್ದು, ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ಸಹಾಯಕವಾಗಲಿದೆ' ಎಂದು ತಿಳಿಸಿದ್ದಾರೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಸಿಗುವ ವಿಡಾ ವಿ1 ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ಮಾತನಾಡುವುದಾದರೆ, ಇದು, ರೂ.1.26 ಲಕ್ಷ ಬೆಲೆಯಲ್ಲಿ ಖರೀದಿಗೆ ಸಿಗುತ್ತದೆ. 3.94 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಹೊಂದಿರುವ ಈ ಸ್ಕೂಟರ್, ಸಂಪೂರ್ಣ ಚಾರ್ಜ್ ನಲ್ಲಿ 165 KM ರೇಂಜ್ ನೀಡಲಿದೆ. ಕೇವಲ 3.2 ಸೆಕೆಂಡುಗಳಲ್ಲಿ 0-40 kmph ವೇಗವನ್ನು ಪಡೆಯಲಿದ್ದು, 80 kmph ಟಾಪ್ ಸ್ವೀಡ್ ಹೊಂದಿದೆ.

ಎಥರ್‌ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾತನಾಡುವದಾದರೆ, ಇದರ '450ಎಸ್' ಇ-ಸ್ಕೂಟರ್ ರೂ.1,29,999 ಎಕ್ಸ್ ಶೋರೂಂ ದರದಲ್ಲಿ ಬಿಡುಗಡೆಯಾಗಿತ್ತು. 2.9 kWh ಸಾಮರ್ಥ್ಯದ ಬ್ಯಾಟರಿ ಪ್ಯಾಕ್ ಪಡೆದಿದ್ದು, ಸಂಪೂರ್ಣ ಚಾರ್ಜ್ ನಲ್ಲಿ 115 km ವರೆಗೆ ರೇಂಜ್ ನೀಡಲಿದೆ. 3.9 ಸೆಕೆಂಡುಗಳಲ್ಲಿ 0 ರಿಂದ 40 kmph ವೇಗವನ್ನು ಪಡೆಯಲಿದ್ದು, 90 kmph ಟಾಪ್ ಸ್ವೀಡ್ ಹೊಂದಿದೆ.

ಮತ್ತೊಂದು ಎಥರ್ 450ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್, 2.9 kWh ಮತ್ತು 3.7 kWh ಬ್ಯಾಟರಿ ಪ್ಯಾಕ್ ಆಯ್ಕೆ ಪಡೆದಿದ್ದು, ಇದಕ್ಕೆ ಅನುಗುಣವಾಗಿ ರೂ.1,38,000 ಮತ್ತು ರೂ.1,44,921 ಬೆಲೆಯಲ್ಲಿ ಗ್ರಾಹಕರಿಗೆ ಲಭ್ಯವಿದೆ. ಈ ಸ್ಕೂಟರ್‌ನ್ನು ಪೂರ್ತಿ ಚಾರ್ಜ್ ಮಾಡಿದಾಗ 115 km - 145 km ರೇಂಜ್ ಕೊಡುತ್ತದೆ. ಫ್ರಂಟ್ & ರೇರ್ ಡಿಸ್ಕ್ ಬ್ರೇಕ್ ಆಯ್ಕೆ ಮತ್ತು 12 - ಇಂಚಿನ ಅಲಾಯ್ ವೀಲ್ಸ್ ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Thursday, December 7, 2023, 10:40 [IST]
English summary
Hero ather installation 1900 ev fast charging network in india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+