Hero: ಬುಕ್ಕಿಂಗ್‌ನಲ್ಲಿ ಸುನಾಮಿ ಎಬ್ಬಿಸಿದ ಹೀರೋ ಕರಿಜ್ಮಾ, ಘೋಷಣೆ
ದೇಶದ ಪ್ರಖ್ಯಾತ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಹೀರೋ (Hero) ಜನಪ್ರಿಯತೆ ಗಳಿಸಿದೆ. ಇತ್ತೀಚೆಗೆ ತನ್ನ ಮಾರಾಟವನ್ನು ದ್ವಿಗುಣಗೊಳಿಸಲು ಕರಿಜ್ಮಾ ಎಕ್ಸ್ಎಂಆರ್ (Karizma XMR) ಬೈಕ್‌ನ್ನು ರೀ-ಲಾಂಚ್ ಮಾಡಿತ್ತು. ಸದ್ಯ, ಇದೇ ಬುಕ್ಕಿಂಗ್‌ನಲ್ಲಿ ಅಬ್ಬರಿಸುತ್ತಿದ್ದು, ಹೊಸ ದಾಖಲೆ ನಿರ್ಮಾಣ ಮಾಡಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.
ನೂತನ ಕರಿಜ್ಮಾ ಎಕ್ಸ್‌ಎಂಆರ್ ಬೈಕ್‌ಗಾಗಿ 13,688 ಆರ್ಡರ್ ಸ್ವೀಕರಿಸಲಾಗಿದೆ ಎಂದು ಹೀರೋ ಮೋಟೋಕಾರ್ಪ್ (Hero MotoCorp) ಘೋಷಣೆ ಮಾಡಿದೆ. ಅಧಿಕೃತ ಡೀಲರ್‌ಶಿಪ್‌ಗಳಿಗೆ ಈ ಬೈಕ್‌ಗಳನ್ನು ಈಗಾಗಲೇ ರವಾನಿಸುವುದಕ್ಕೆ ಶುರು ಮಾಡಲಾಗಿದೆ. ಈ ತಿಂಗಳ (ದಸರಾ) ಹಬ್ಬದ ವೇಳೆಗೆ ಗ್ರಾಹಕರಿಗೆ ವಿತರಣೆ ಮಾಡಲಾಗುತ್ತದೆ ಎಂದು ಹೀರೋದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಹೀರೋ ಕಂಪನಿಯು ಕರಿಜ್ಮಾ ಎಕ್ಸ್ಎಂಆರ್ ಬೈಕ್‌ನ್ನು ರೂ.1.73 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಬಿಡುಗಡೆ ಮಾಡಿತ್ತು. ಆದರೆ, ಕೆಲವೇ ದಿನಗಳಲ್ಲಿ ರೂ.7000 ದರವನ್ನು ಹೆಚ್ಚಳ ಮಾಡಿತ್ತು. ಪ್ರಸ್ತುತ, ದೆಹಲಿಯಲ್ಲಿ ರೂ.1.80 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಬುಕ್ಕಿಂಗ್‌ಗಾಗಿ ಹೊಸ ವಿಂಡೋವನ್ನು ಶೀಘ್ರದಲ್ಲಿ ತೆರೆಯುವುದಾಗಿ ಕಂಪನಿ ತಿಳಿಸಿದೆ.
ಕರಿಜ್ಮಾ ಬೈಕ್ ಪಡೆದಿರುವ ಬುಕ್ಕಿಂಗ್ ಬಗ್ಗೆ ಹೀರೋ ಮೋಟೋಕಾರ್ಪ್ ಚೀಫ್ ಬ್ಯುಸಿನೆಸ್ ಆಫೀಸರ್ (ಇಂಡಿಯಾ ಬ್ಯುಸಿನೆಸ್ ಯುನಿಟ್) ರಂಜಿವ್ಜಿತ್ ಸಿಂಗ್ ಅವರು ಮಾತನಾಡಿದ್ದು, 'ಹೀರೋ ಕರಿಜ್ಮಾ ಎಕ್ಸ್‌ಎಂಆರ್‌ಗೆ ನಮ್ಮ ಗ್ರಾಹಕರಿಂದ ವ್ಯಕ್ತವಾದ ಪ್ರತಿಕ್ರಿಯೆ ಕಂಡು ಸಂತೋಷ ತಂದಿದೆ. ಪ್ರತಿಯೊಬ್ಬರಿಗೂ ಅಸಾಧಾರಣ ಚಾಲನಾ ಅನುಭವವನ್ನು ನೀಡಲು ನಾವು ಬದ್ಧರಾಗಿದ್ದೇವೆ' ಎಂದು ಹೇಳಿದ್ದಾರೆ.
ಕೆಲವೇ ದಿನಗಳ ಹಿಂದೆಯಷ್ಟೇ ಹೀರೋ ಮೋಟೊಕಾರ್ಪ್ ತನ್ನ ಉತ್ಪಾದನಾ ಘಟಕದಲ್ಲಿ ಮೊದಲ ಕರಿಜ್ಮಾ ಎಕ್ಸ್ಎಂಆರ್ ಬೈಕ್‌ನ ತಯಾರಿಕಾ ಮಾದರಿಯನ್ನು ಹೊರತಂದಿತ್ತು. ಆ ಫೋಟೋವನ್ನು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಶೇರ್ ಮಾಡಿತ್ತು. ಇದನ್ನು ಗಮನಿಸಿದಾಗ ಕರಿಜ್ಮಾ ಉತ್ಪಾದನೆ ವೇಗವಾಗಿ ನಡೆಯುತ್ತಿದೆ ಎಂದು ಸುಲಭವಾಗಿ ಹೇಳಬಹುದು.
ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್ ಎಂಜಿನ್ ಕುರಿತು ಹೇಳುವುದಾದರೆ, ಇದು 210 ಸಿಸಿ ಸಿಂಗಲ್ - ಸಿಲಿಂಡರ್ ಲಿಕ್ವಿಡ್ ಕೂಲ್ಡ್ DOHC ಎಂಜಿನ್ ಹೊಂದಿದ್ದು, 9,250 rpmನಲ್ಲಿ 25.15 bhp ಗರಿಷ್ಠ ಪವರ್, 7,250 rpmನಲ್ಲಿ 20.4 Nm ಪೀಕ್ ಟಾರ್ಕ್ ಹೊರಹಾಕುತ್ತದೆ. ಜೊತೆಗೆ 6 - ಸ್ಪೀಡ್ ಗೇರ್‌ಬಾಕ್ಸ್ ಆಯ್ಕೆಯನ್ನು ಪಡೆದಿದೆ.
ಈ ಬೈಕ್, ವಿನ್ಯಾಸದ ದೃಷ್ಟಿಯಿಂದ ಅತ್ಯುತ್ತಮವಾಗಿದ್ದು, ಮುಂಭಾಗ ವೈ- ಆಕಾರದ ಎಲ್ಇಡಿ DRL, ಎಲ್ಇಡಿ ಹೆಡ್‌ಲೈಟ್ ಸೆಟಪ್, ಮಸ್ಕ್ಯುಲರ್ ಫ್ಯುಯಲ್ ಟ್ಯಾಂಕ್ ಹೊಂದಿದೆ. ವೈಶಿಷ್ಟ್ಯದ ವಿಚಾರವಾಗಿ ಹೇಳುವುದಾದರೆ, ಬ್ಲೂಟೂತ್ ಕನೆಕ್ಟಿವಿಟಿಯೊಂದಿಗೆ ಫುಲ್ ಡಿಜಿಟಲ್ LCD ಇನ್ಸ್ಟ್ರೂಮೆಂಟ್ ಕ್ಲಸ್ಟರ್, ಟರ್ನ್- ಬೈ- ಟರ್ನ್ ನ್ಯಾವಿಗೇಶನ್ ಸೇರಿದಂತೆ ಯುವ ಗ್ರಾಹಕರನ್ನು ಆಕರ್ಷಿಸುವ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
ಹೀರೋ ಕರಿಜ್ಮಾ ಎಕ್ಸ್ಎಂಆರ್ ಬೈಕ್, ಐಕಾನಿಕ್ ಯೆಲ್ಲೋ, ಟರ್ಬೊ ರೆಡ್ ಮತ್ತು ಮ್ಯಾಟ್ ಫ್ಯಾಂಟಮ್ ಬ್ಲಾಕ್ ಬಣ್ಣಗಳ ಆಯ್ಕೆಯಲ್ಲಿ ಗ್ರಾಹಕರಿಗೆ ಸಿಗುತ್ತದೆ. ಮುಂಭಾಗ ಟೆಲಿಸ್ಕೋಪಿಕ್ ಫೋರ್ಕ್ಸ್, ಹಿಂಭಾಗ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಎರಡು ತುದಿಗಳಲ್ಲಿ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಪಡೆದಿದೆ. 17 - ಇಂಚಿನ ಅಲಾಯ್ ವೀಲ್ಸ್ ಹೊಂದಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








