ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯಗಳೊಂದಿಗೆ 'ಹೀರೋ ಸೂಪರ್ ಸ್ಪ್ಲೆಂಡರ್‌ XTEC' ಬಿಡುಗಡೆ

ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಕ 'ಹೀರೋ ಮೋಟೋಕಾರ್ಪ್' ತಯಾರಿಸುವ ಬೈಕ್, ಸ್ಕೂಟರ್ ಗಳು ದೊಡ್ಡ ಮಟ್ಟದ ಜನಪ್ರಿಯತೆಯನ್ನು ಗಳಿಸಿವೆ. ಸಾಕಷ್ಟು ನವೀನ ವೈಶಿಷ್ಟ್ಯಗಳೊಂದಿಗೆ 'ಸೂಪರ್ ಸ್ಪ್ಲೆಂಡರ್‌ XTEC' ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದು, ಆ ಬಗ್ಗೆ ಹೆಚ್ಚಿನ ವಿವರ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಬೆಲೆ ವಿವರ: ಈ ಹೊಚ್ಚ ಹೊಸ 'ಸೂಪರ್ ಸ್ಪ್ಲೆಂಡರ್‌ XTEC' ಎರಡು ರೂಪಾಂತರಗಳಲ್ಲಿ ಖರೀದಿಗೆ ಲಭ್ಯವಿದ್ದು, ದರಗಳು ಕೂಡ ಗ್ರಾಹಕರ ಕೈಗೆಟುಕಲಿದೆ ಎಂದು ಹೇಳಬಹುದು. ಫ್ರಂಟ್ ಡ್ರಮ್ ಬ್ರೇಕ್ ಆವೃತ್ತಿ ಬೆಲೆ ರೂ.83,368 ಇದ್ದು, ಫ್ರಂಟ್ ಡಿಸ್ಕ್ ಬ್ರೇಕ್ ಆವೃತ್ತಿಯು ರೂ.87,268, ಎಕ್ಸ್ ಶೋರೂಂ (ದೆಹಲಿ) ದರದಲ್ಲಿ ಖರೀದಿಗೆ ಸಿಗಲಿದೆ. ಸೂಪರ್ ಸ್ಪ್ಲೆಂಡರ್‌ನ ಸ್ಟ್ಯಾಂಡರ್ಡ್ ಆವೃತ್ತಿ ಇದಕ್ಕಿಂದ ಕಡಿಮೆ ಬೆಲೆ ಅಂದರೆ, ರೂ.79,118 ರಿಂದ ರೂ.83,248 ಇದೆ.

ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಹೀರೋ ಸೂಪರ್ ಸ್ಪ್ಲೆಂಡರ್‌ XTEC ಬಿಡುಗಡೆ

ನೂತನ ಹೀರೋ ಸೂಪರ್ ಸ್ಪ್ಲೆಂಡರ್‌ XTEC ಯಾವೆಲ್ಲ ಹೆಚ್ಚುವರಿ ವೈಶಿಷ್ಟಗಳನ್ನು ಪಡೆದುಕೊಂಡಿದೆ ಎಂದು ನೋಡುವುದಾದರೆ, ಇದು LED ಹೆಡ್‌ಲ್ಯಾಂಪ್, USB ಚಾರ್ಜಿಂಗ್ ಪಾಯಿಂಟ್, ಬ್ಲೂಟೂತ್ ಸಂಪರ್ಕ, ಹೊಸ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಇದರಲ್ಲಿ ಲೊ ಫ್ಯುಯೆಲ್ ಇಂಡಿಕೇಷನ್, ರಿಯಲ್ ಟೈಮ್ ಮೈಲೇಜ್ ಸೇರಿದಂತೆ ವಿವಿಧ ಮಾಹಿತಿಯನ್ನು ಒದಗಿಸಲಾಗುತ್ತದೆ. ಈ ಬೈಕ್, ಯುವ ಖರೀದಿದಾರರನ್ನು ಆಕರ್ಷಿಸುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಬಹುದು.

ಈ ಹೀರೋ ಸೂಪರ್ ಸ್ಪ್ಲೆಂಡರ್‌ XTEC ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 124.7 ಸಿಸಿ, ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಫ್ಯುಯೆಲ್ ಇಂಜೆಕ್ಟ್ದ್ ಎಂಜಿನ್ ಹೊಂದಿದ್ದು, 7,500 RPMನಲ್ಲಿ 10.7 bhp ಪವರ್ ಹಾಗೂ 6,000 RPMನಲ್ಲಿ 10.6 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದ್ದು, 5 ಸ್ವೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ ಖರೀದಿಗೆ ಲಭ್ಯವಿದೆ.

ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಹೀರೋ ಸೂಪರ್ ಸ್ಪ್ಲೆಂಡರ್‌ XTEC ಬಿಡುಗಡೆ

ಹೀರೋ ಮೋಟೋಕಾರ್ಪ್‌ನ ಚೀಫ್ ಗ್ರೋತ್ ಆಫೀಸರ್ ರಂಜಿವ್‌ಜಿತ್ ಸಿಂಗ್ ಮಾತನಾಡಿ, 'ನಾವು 125 ಸಿಸಿ ವಿಭಾಗದಲ್ಲಿ ಸೂಪರ್ ಸ್ಪ್ಲೆಂಡರ್‌ XTEC ಬೈಕ್ ಬಿಡುಗಡೆಗೊಳಿಸಲು ಸಂತೋಷ ತಂದಿದೆ. ಇದನ್ನು ನವೀನ ವೈಶಿಷ್ಟ್ಯಗಳೊಂದಿಗೆ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದೇವೆ' ಎಂದು ಹೇಳಿದ್ದಾರೆ. ಈಗಾಗಲೇ ಹೀರೋ ಸ್ಪ್ಲೆಂಡರ್‌ ತನ್ನದೇ ಜನಪ್ರಿಯತೆಯನ್ನು ಗಳಿಸಿದ್ದು, ನೂತನ ಬೈಕ್‍ನ್ನು ಹೆಚ್ಚಿನ ಗ್ರಾಹಕರು ಇಷ್ಟಪಟ್ಟಬಹುದೆಂದು ಕಂಪನಿ ನಂಬಿದೆ.

ಸದ್ಯ, ಬಹುತೇಕ ದೇಶೀಯ ಖರೀದಿದಾರರ ಆಯ್ಕೆಯಾಗಿರುವ ಹೀರೋ ಸ್ಪ್ಲೆಂಡರ್‌ ಪ್ಲಸ್ ಬಗ್ಗೆ ಹೇಳುವುದಾದರೆ, ಇದು ರೂ.72,076 ದಿಂದ ರೂ.74,396 ದರದಲ್ಲಿ ಖರೀದಿಗೆ ಲಭ್ಯವಿದೆ. 97.2 ಸಿಸಿ ಎಂಜಿನ್ ಹೊಂದಿದ್ದು, 8.01 PS ಹಾಗೂ 8.05 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 4 ಸ್ವೀಡ್ ಗೇರ್ ಬಾಕ್ಸ್ ಆಯ್ಕೆಯನ್ನು ಪಡೆದಿದೆ. 70 kmpl ಮೈಲೇಜ್ ನೀಡಲಿದ್ದು, ಡ್ರಮ್ ಬ್ರೇಕ್ ಆಯ್ಕೆಯನ್ನು ಹೊಂದಿದೆ.

ಕೈಗೆಟುಕುವ ಬೆಲೆ, ಆಕರ್ಷಕ ವೈಶಿಷ್ಟ್ಯಗಳೊಂದಿಗೆ ಹೀರೋ ಸೂಪರ್ ಸ್ಪ್ಲೆಂಡರ್‌ XTEC ಬಿಡುಗಡೆ

ಹೀರೋ ಸೂಪರ್ ಸ್ಪ್ಲೆಂಡರ್‌ ಬಗ್ಗೆ ಹೇಳುವುದಾದರೆ, ಇದು ಬೆಂಗಳೂರಿನಲ್ಲಿ ರೂ.1,01,060 ಆನ್-ರೋಡ್ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ. 55 kmpl ಮೈಲೇಜ್ ನೀಡುತ್ತದೆ. ಅಲ್ಲದೆ, 12 ಲೀಟರ್ ಸಾಮರ್ಥ್ಯದ ಫ್ಯೂಯೆಲ್ ಟ್ಯಾಂಕ್ ಪಡೆದುಕೊಂಡಿದ್ದು, ಎಂಜಿನ್ ಕಾರ್ಯಕ್ಷಮತೆ ಬಗ್ಗೆ ಹೇಳುವುದಾದರೆ, ಇದು 124.7 ಸಿಸಿ BS6 ಎಂಜಿನ್ ಪಡೆದಿದ್ದು, 10.72 bhp ಪವರ್ ಹಾಗೂ 10.6 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಒಟ್ಟಾರೆ, ಕೈಗೆಟುಕುವ ಬೆಲೆ, ನವೀನ ವೈಶಿಷ್ಟ್ಯಗಳೊಂದಿಗೆ 'ಹೀರೋ ಸೂಪರ್ ಸ್ಪ್ಲೆಂಡರ್‌ XTEC' ಭಾರತದ ಮಾರುಕಟ್ಟೆಗೆ ಬಂದಿದೆ. ಈಗಾಗಲೇ ಮೈಲೇಜ್ ಹಾಗೂ ದೀರ್ಘಕಾಲಿಕ ಬಾಳಿಕೆಯಿಂದ ಸ್ಪ್ಲೆಂಡರ್‌ ಸಾಕಷ್ಟು ಜನಪ್ರಿಯವಾಗಿದ್ದು, ನೂತನ ಸ್ಪ್ಲೆಂಡರ್‌ XTECನ್ನು ಹೆಚ್ಚಿನ ಗ್ರಾಹಕರು ಇಷ್ಟಪಟ್ಟು ಖರೀದಿಸಬಹುದು. ಬೆಲೆಯು ಕೂಡ ಕೈಗೆಟುಕುವಂತಿದ್ದು, ಮುಂಬರುವ ದಿನಗಳಲ್ಲಿ ಹೀರೋ ಕಂಪನಿಗೆ ದ್ವಿಚಕ್ರ ವಾಹನ ಮಾರಾಟ ಪ್ರಮಾಣವನ್ನು ಮತ್ತಷ್ಟು ವೃದ್ಧಿಗೊಳಿಸಿಕೊಳ್ಳಲು ಈ ಬೈಕ್, ನೆರವಾಗಬಹುದು.

More from DriveSpark

Article Published On: Tuesday, March 7, 2023, 12:40 [IST]
English summary
Hero super splendor xtec launched details kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+