ಶೇ20 ಎಥೆನಾಲ್ ಮಿಶ್ರಣದಲ್ಲಿ ಚಲಿಸುವ ಹೊಂಡಾ CB300R ಬಿಡುಗಡೆ: ಆಕರ್ಷಕ ಬೆಲೆ, ಬುಕಿಂಗ್ ಆರಂಭ!

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾ (HMSI) ಇಂದು OBD2A ಕಂಪ್ಲೈಂಟ್ 2023 CB300R ಬೈಕನ್ನು 2,40,000 (ಎಕ್ಸ್ ಶೋ ರೂಂ, ದೆಹಲಿ) ರೂ.ಗೆ ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಹತ್ತಿರದ ಬಿಗ್‌ವಿಂಗ್ ಡೀಲರ್‌ಶಿಪ್‌ಗಳಲ್ಲಿ ಹೊಸ ಹೋಂಡಾ CB300R ಅನ್ನು ಬುಕ್ ಮಾಡಬಹುದು.

ಒಬಿಡಿ2ಎ(OBD2A-On-Board diagnostics): ಅಂದರೆ ಶೇ20 ರಷ್ಟು ಎಥೆನಾಲ್ ಮಿಶ್ರಣ ಹೊಂದಿರುವ ಪೆಟ್ರೋಲ್‌ ಬಳಸುವ ಎಂಜಿನ್ ತಯಾರಿಕೆಯ ನಿಯಮ ಅನುಸರಣೆಯ ಹೊಸ 2023 CB300R ದ್ವಿಚಕ್ರ ವಾಹನವನ್ನು ಹೋಂಡಾ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಒಟ್ಟಾರೆ ಶೇ 20 ರಷ್ಟು ಎಥನಾಲ್ ಬಳಸುವುದರಿಂದ ಕಾರ್ಬನ್ ಹೊರಸೂಸುವಿಕೆಯನ್ನು ಗಣನೀಯವಾಗಿ ತಗ್ಗಿಸಬಹುದು.

honda-cb300r-2023-motorcycle-launched-india

ಹೇಗಿದೆ ಹೊಸ ಬೈಕ್: ಐಕಾನಿಕ್ ರೆಟ್ರೊ-ಥೀಮಿನ CB1000R ಲೀಟರ್-ಕ್ಲಾಸ್ ರೋಡ್‌ಸ್ಟರ್‌ನಿಂದ ವಿನ್ಯಾಸ ಸ್ಫೂರ್ತಿ ಪಡೆದು, 2023 CB300R ವಿನ್ಯಾಸವನ್ನು ಮಾಡಲಾಗಿದೆ. ಇದು ಮಸ್ಕುಲರ್ ಇಂಧನ ಟ್ಯಾಂಕ್ ಮತ್ತು ನಿಯೋ ಸ್ಪೋರ್ಟ್ಸ್ ಕೆಫೆ ಡಿಎನ್‌ಎ ಆಧಾರಿತ ಬೀಫಿ ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಅನ್ನು ಹೊಂದಿದೆ. ಎಲ್ಇಡಿ ಲೈಟಿಂಗ್ ಸಿಸ್ಟಮ್ (ಎಲ್ಇಡಿ ಹೆಡ್ಲ್ಯಾಂಪ್, ಎಲ್ಇಡಿ ವಿಂಕರ್‌ಗಳು ಮತ್ತು ಎಲ್ಇಡಿ ಟೈಲ್) ಮೂಲಕ ಸ್ಟೈಲಿಂಗ್ ಅಂಶವನ್ನು ಮತ್ತಷ್ಟು ಹೆಚ್ಚಿಸಲಾಗಿದೆ.

ಕೇವಲ 146kg ತೂಕವಿದ್ದು, CB300R ಅದರ ವರ್ಗದಲ್ಲಿ ಅತ್ಯಂತ ಹಗುರವಾದ ಮೋಟಾರ್‌ಸೈಕಲ್ ಆಗಿದೆ. 41mm USD ಮುಂಭಾಗದ ಫೋರ್ಕ್‌ಗಳು ಮತ್ತು ಹಿಂಬದಿಯಲ್ಲಿ ಹೊಂದಾಣಿಕೆ ಮಾಡಬಹುದಾದ ಮೊನೊ-ಶಾಕ್ ಅಬ್ಸಾರ್ಬರ್ ಹೊಂದುವ ಮೂಲಕ ಇದು ಭಾರತೀಯ ರಸ್ತೆಗಳಿಗೆ ಪರಿಪೂರ್ಣ ಬೈಕ್ ಆಗಿರುವುದಾಗಿ ಕಂಪನಿ ಹೇಳಿಕೊಂಡಿದೆ.

honda-cb300r-2023-motorcycle-launched-india

ಬ್ರೇಕಿಂಗ್: ಬ್ರೇಕಿಂಗ್ ಬಗ್ಗೆ ಹೇಳುವುದಾದರೆ, 296mm ಡಿಸ್ಕ್ ಬ್ರೇಕ್ (ಮುಂಭಾಗ) ಮತ್ತು 220mm ಡಿಸ್ಕ್ (ಹಿಂಭಾಗ) ಜೊತೆಗೆ ಡ್ಯುಯಲ್ - ಚಾನೆಲ್ ಎಬಿಎಸ್ ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಸಂಪೂರ್ಣ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸಹ ಇದ್ದು, ಇದು ಈಗ ತುರ್ತು ನಿಲುಗಡೆ ಸಿಗ್ನಲ್ (ಎಮರ್ಜನ್ಸಿ ಸ್ಟಾಪ್ ಸಿಗ್ನಲ್) ಮತ್ತು ಅಪಾಯದ ಬೆಳಕಿನ ಸ್ವಿಚ್ (ಹಜಾರ್ಡ್ ಲೈಟ್) ಅನ್ನು ಪಡೆದಿದೆ.

ಎಂಜಿನ್ ಮತ್ತು ಪರ್ಫಾಮೆನ್ಸ್: ಹೊಸ ಹೋಂಡಾ CB300R ಶಕ್ತಿಶಾಲಿ 286.01cc, 4 ಸ್ಟ್ರೋಕ್, ಸಿಂಗಲ್-ಸಿಲಿಂಡರ್ BSVI OBD2A ಕಂಪ್ಲೈಂಟ್ PGM-FI ಎಂಜಿನ್ ಅನ್ನು ಹೊಂದಿದೆ. ಇದರ ಮೋಟಾರ್ 22.9 kW ಪವರ್ ಮತ್ತು 27.5 Nm ಟಾರ್ಕ್ ಅನ್ನು ಹೊರಹಾಕುತ್ತದೆ. ಜೊತೆಗೆ CB300R 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲ್ಪಟ್ಟಿರುವುದರಿಂದ ತನ್ನ ವಿಭಾಗದಲ್ಲಿ ಉತ್ತಮ ಪರ್ಫಾಮೆನ್ಸ್ ನೀಡುವುದಾಗಿ ಕಂಪನಿ ಹೇಳಿಕೊಂಡಿದೆ.

ಇನ್ನು ಇದರ ಹೆಚ್ಚುವರಿ ವೈಶಿಷ್ಟ್ಯಗಳ ಬಗ್ಗೆ ಹೇಳುವುದಾದರೆ, ಹೋಂಡಾ CB300R ಅಸಿಸ್ಟ್ ಸ್ಲಿಪ್ಪರ್ ಕ್ಲಚ್ ಅನ್ನು ಸಹ ಪಡೆದಿದೆ, ಇದು ಗೇರ್‌ಶಿಫ್ಟ್‌ಗಳನ್ನು ಸುಲಭಗೊಳಿಸುವುದು. ಮತ್ತು ನಿಧಾನಗೊಳಿಸುವಾಗ ಹಾರ್ಡ್ ಡೌನ್ ಶಿಫ್ಟ್‌ಗಳಲ್ಲಿ ಹಿಂಬದಿ ಚಕ್ರ ಲಾಕ್ - ಅಪ್ ಅನ್ನು ನಿರ್ವಹಿಸುತ್ತದೆ, ಇದರಿಂದಾಗಿ ಸವಾರರ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಕಂಪನಿ ತಿಳಿಸಿದೆ.

ಬಣ್ಣಗಳು, ಬೆಲೆ: 2023 ಹೋಂಡಾ CB300R ಪರ್ಲ್ ಸ್ಪಾರ್ಟಾನ್ ರೆಡ್ ಮತ್ತು ಮ್ಯಾಟ್ ಮ್ಯಾಸಿವ್ ಗ್ರೇ ಮೆಟಾಲಿಕ್ ಬಣ್ಣಗಳಲ್ಲಿ ಲಭ್ಯವಿದೆ. ಇದನ್ನು 2,40,000 (ಎಕ್ಸ್ ಶೋ ರೂಂ, ದೆಹಲಿ) ರೂ.ಗೆ ಖರೀದಿಗೆ ಲಭ್ಯವಾಗಿಸಿದ್ದಾರೆ. ಬುಕಿಂಗ್‌ಗಳು ಈಗ ತೆರೆದಿದ್ದು, ಈ ನಿಯೋ ಸ್ಪೋರ್ಟ್ಸ್ ಕೆಫೆ ರೋಡ್‌ಸ್ಟರ್ ಅನ್ನು ಕಂಪನಿಯ ಪ್ರೀಮಿಯಂ ಬಿಗ್‌ವಿಂಗ್ ಡೀಲರ್‌ಶಿಪ್‌ಗಳ ಮೂಲಕ ಮಾರಾಟ ಮಾಡಲಾಗುತ್ತದೆ.

ಹೋಂಡಾ ಮೋಟಾರ್‌ಸೈಕಲ್ ಮತ್ತು ಸ್ಕೂಟರ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ಟ್ಸುಟ್ಸುಮು ಒಟಾನಿ ಮಾತನಾಡಿ, "ಭಾರತದಲ್ಲಿ 2023 CB300R ಅನ್ನು ಬಿಡುಗಡೆ ಮಾಡಲು ನಾವು ಹೆಮ್ಮೆಪಡುತ್ತೇವೆ. ಇದೀಗ ಹೊಸ OBD2A ಕಂಪ್ಲೈಂಟ್ ಎಂಜಿನ್‌ನೊಂದಿಗೆ ಮತ್ತಷ್ಟು ಪರಿಸರ ಸ್ನೇಹಿಯಾಗಿ ಬೈಕನ್ನು ಪರಿಚಯಿಸಿದ್ದೇವೆ. CB300R ಯುವ ಸವಾರರು ಹೋಂಡಾದ ಎಂಜಿನಿಯರಿಂಗ್, ವಿನ್ಯಾಸ ತತ್ವಶಾಸ್ತ್ರ ಮತ್ತು ಪ್ರೀಮಿಯಂ ನಿರ್ಮಾಣ ಗುಣಮಟ್ಟಕ್ಕೆ ಮನಸೋಲುತ್ತಾರೆ ಎಂದರು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, October 16, 2023, 17:37 [IST]
English summary
Honda cb300r 2023 motorcycle launched india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+