Honda Dio: ಸದ್ದಿಲ್ಲದೇ ಬಹುನೀರಿಕ್ಷಿತ ಹೋಂಡಾ ಡಿಯೋ H-ಸ್ಮಾರ್ಟ್ ಬಿಡುಗಡೆ.. ಬೆಲೆ ಎಷ್ಟು?

ಜಪಾನ್ ದೇಶದ ಪ್ರಮುಖ ವಾಹನ ತಯಾರಕ ಕಂಪನಿಯಾಗಿರುವ ಹೋಂಡಾ (Honda) ಭಾರತದ ಮಾರುಕಟ್ಟೆಯಲ್ಲಿ ಆಕ್ಟಿವಾ ಸ್ಕೂಟರ್ ಮೂಲಕ ಮನೆಮಾತಾಗಿದೆ. ಇದೀಗ, ತನ್ನ ಮತ್ತೊಂದು ಜನಪ್ರಿಯ 'ಡಿಯೋ H-ಸ್ಮಾರ್ಟ್' ಸ್ಕೂಟರ್‌ನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆ ಮಾಡಿದೆ. ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಹೋಂಡಾ ಕಂಪನಿ ಡಿಯೋ H-ಸ್ಮಾರ್ಟ್ ಸ್ಕೂಟರ್‌ನ್ನು ರೂ.77,712 ಎಕ್ಸ್ ಶೋರೂಂ ದರದಲ್ಲಿ ಲಾಂಚ್ ಮಾಡಿದೆ. ಬೆಲೆ ಕುರಿತ ವಿವರವನ್ನು ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಿದೆ. ಇದು ಕೂಡ 110 ಸಿಸಿ ಹಾಗೂ 125 ಸಿಸಿ ಆಕ್ಟಿವಾ H-ಸ್ಮಾರ್ಟ್ ಸ್ಕೂಟರ್‌ ಹೊಂದಿರುವಂತೆಯೇ ಅತ್ಯಾಧುನಿಕ ವೈಶಿಷ್ಟ್ಯಗಳನ್ನು ಹೊಂದಿರಲಿದೆ ಎಂದು ವರದಿಯಾಗಿದೆ. ಸದ್ಯಕ್ಕೆ ಅದರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

Honda Dio: ಸದ್ದಿಲ್ಲದೇ ಬಹುನೀರಿಕ್ಷಿತ ಹೋಂಡಾ ಡಿಯೋ H-ಸ್ಮಾರ್ಟ್ ಬಿಡುಗಡೆ.. ಬೆಲೆ ಎಷ್ಟು?

ಬಹುತೇಕ ನೂತನ ಹೋಂಡಾ ಡಿಯೋ H-ಸ್ಮಾರ್ಟ್ ಅಲಾಯ್ ವೀಲ್ಸ್ ಪಡೆದಿರಲಿದ್ದು, ತೂಕದಲ್ಲಿ ಕೊಂಚ ಹಗುರವಾಗಿರಲಿದೆ. ಈ ಸ್ಕೂಟರ್ ಎಮಿಷನ್ ಮಾನದಂಡಗಳಿಗೆ ಅನುಗುಣವಾಗಿ ಮೇಲ್ದರ್ಜೆಗೇರಿಸಿರುವ 109 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೋಲ್ಡ್ ಎಂಜಿನ್ ಹೊಂದಿದ್ದು, 7.8 bhp ಗರಿಷ್ಠ ಪವರ್ ಹಾಗೂ 9 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ.

ಈಗಾಗಲೇ, ಹೋಂಡಾ ಕಂಪನಿ ಸ್ಮಾರ್ಟ್ ಫೀಚರ್ಸ್ ಹೊಂದಿರುವ ಆಕ್ಟಿವಾ ಸ್ಕೂಟರ್ ಪರಿಚಯಿಸಿದ್ದು, ಅದರಂತೆಯೇ 'ಡಿಯೋ H-ಸ್ಮಾರ್ಟ್' ಕೂಡ ಭರಪೂರ ವೈಶಿಷ್ಟ್ಯಗಳನ್ನು ಹೊಂದಿರಲಿದೆ. ಪ್ರಮುಖವಾಗಿ ಸಾರ್ಟ್ ಅನ್‌ಲಾಕ್, ಸ್ಮಾರ್ಟ್ ಸ್ಟಾರ್ಟ್, ಸ್ಮಾರ್ಟ್ ಫೈಂಡ್ ಮತ್ತು ಸ್ಮಾರ್ಟ್ ಸೇಫ್ ಎಂಬ ಫೀಚರ್ಸ್ ಪಡೆದಿರಲಿದೆ. ಇದು, ಈಗಿನ ಯುವ ಗ್ರಾಹಕರಿಗೆ ಖಂಡಿತ ಇಷ್ಟವಾಗುತ್ತದೆ.

ಸ್ಮಾರ್ಟ್ ಅನ್‌ಲಾಕ್ ವೈಶಿಷ್ಟ್ಯ, ನಿಮ್ಮ ಹೋಂಡಾ ಸ್ಕೂಟರ್ ಹ್ಯಾಂಡಲ್‌ಬಾರ್ಸ್ ಸ್ಟೋರೇಜ್ ಏರಿಯಾ, ಫ್ಯುಯೆಲ್ ಫಿಲ್ಲರ್ ಕ್ಯಾಪ್ ಲಾಕ್/ಅನ್‌ಲಾಕ್ ಮಾಡಲು ನೆರವಾಗುತ್ತದೆ (2 ಮೀ. ಅಂತರದಲ್ಲಿ ಇರಬೇಕು). ಸ್ಮಾರ್ಟ್ ಫೈಂಡ್ ಫೀಚರ್ಸ್ ಸರಿ ಸುಮಾರು 10 ಮೀಟರ್‌ ದೂರದಿಂದಲ್ಲೇ ನಿಮ್ಮ ಸ್ಕೂಟರ್ ಹುಡುಕಲು ಸಹಾಯಕವಾಗಿದೆ. ಸ್ಮಾರ್ಟ್ ಸೇಫ್ ಎಂಬುದು ಆಂಟಿ-ಥೆಫ್ಟ್ ಸಿಸ್ಟಮ್ ಆಗಿದೆ.

ಹೋಂಡಾ ಕಂಪನಿ ಡಿಯೋ DLX ಬೆಲೆಯನ್ನು ರೂ.1,586 ಹೆಚ್ಚಳ ಮಾಡಿದ್ದು, ಈ ಸ್ಕೂಟರ್, ರೂ.74,212 ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಇದು 109.51 ಸಿಸಿ ಎಂಜಿನ್ ಹೊಂದಿದ್ದು, 7.76 PS ಗರಿಷ್ಠ ಪವರ್ ಹಾಗೂ 9 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. 55 kmpl ಮೈಲೇಜ್ ನೀಡುತ್ತದೆ.

ಈ ಡಿಯೋ DLX, ಮ್ಯಾಟ್ ಆಕ್ಸಿಸ್ ಗ್ರೇ ಮೆಟಾಲಿಕ್, ಮ್ಯಾಟ್ ಸಾಂಗ್ರಿಯಾ ರೆಡ್ ಮೆಟಾಲಿಕ್, ಡ್ಯಾಝೀ ಯೆಲ್ಲೋ ಮೆಟಾಲಿಕ್ ಸೇರಿದಂತೆ ನಾಲ್ಕು ಬಣ್ಣದ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಜೊತೆಗೆ ಗ್ರಾಹಕರನ್ನು ಆಕರ್ಷಿಸುವ ವೈಶಿಷ್ಟ್ಯಗಳೊಂದಿಗೆ ಫ್ರಂಟ್ ಹಾಗೂ ರೇರ್ ಡ್ರಮ್ ಬ್ರೇಕ್ ಹಾಗೂ ಟ್ಯೂಬ್ ಲೆಸ್ ಟೈಯರ್ಸ್ ಆಯ್ಕೆಯನ್ನು ಹೊಂದಿದೆ.

ಒಟ್ಟಾರೆ, ಹೋಂಡಾ ಸದ್ದಿಲ್ಲದೇ ಹೋಂಡಾ ಡಿಯೋ H-ಸ್ಮಾರ್ಟ್ ಸ್ಕೂಟರ್ ಅನ್ನು ಕೈಗೆಟುಕುವ ಬೆಲೆಯಲ್ಲಿ ಬಿಡುಗಡೆಗೊಳಿಸಿರುವುದು ಗ್ರಾಹಕರಿಗೆ ಖುಷಿ ತಂದಿದೆ. ಇದು ಕೂಡ ಬಹುತೇಕ ಆಕ್ಟಿವಾ ಹೊಂದಿರುವಂತೆ ವೈಶಿಷ್ಟ್ಯಗಳನ್ನು ಪಡೆದಿರಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ನೀರಿಕ್ಷೆಯಲ್ಲಿ ಕಂಪನಿಯಿದೆ. ಆದರೆ, ಡಿಯೋ DLX ಬೆಲೆ ಕೊಂಚ ಏರಿಕೆಯಾಗಿರುವುದು ಖರೀದಿದಾರರಿಗೆ ಬೇಸರ ತರಿಸಿದೆ.

Article Published On: Thursday, June 8, 2023, 19:20 [IST]
English summary
Honda dio h smart launched in india details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+