Honda: ಕಮ್ಮಿ ಬಜೆಟ್‌ಗೆ ಇಷ್ಟು ದೊಡ್ಡ ಬೈಕ್? ಹೋಂಡಾದಿಂದ ಯಾರೂ ಇದನ್ನು ನಿರೀಕ್ಷಿಸಿರಲಿಲ್ಲ!

ಹೋಂಡಾ ತನ್ನ ಹೊಸ CB 300F ಅನ್ನು ರೂ 1.70 ಲಕ್ಷಕ್ಕೆ ಬಿಡುಗಡೆ ಮಾಡಿದೆ. ಬಿಗ್‌ವಿಲ್ ಡೀಲರ್‌ಶಿಪ್‌ಗಳಲ್ಲಿ ಈ ಬೈಕಿನ ಬುಕಿಂಗ್ ಈಗಾಗಲೇ ಪ್ರಾರಂಭವಾಗಿದೆ. ಹೋಂಡಾ ತನ್ನ CB 300F ಅನ್ನು ಭಾರತದಲ್ಲಿ ಬಹಳ ಹಿಂದಿನಿಂದಲೂ ಮಾರಾಟ ಮಾಡುತ್ತಿದೆ. ಆದ್ರೆ ಈಗ ಬೈಕ್ ಅನ್ನು ನವೀಕರಿಸಿ ಬಿಡುಗಡೆ ಮಾಡಿದೆ.

ಈ ಬೈಕ್ ಅನ್ನು BS6 OPD2 ನಿಯಮಗಳ ಪ್ರಕಾರ ನಿರ್ಮಿಸಲಾಗಿದೆ. ಈ ಬೈಕ್‌ಗಾಗಿ ಹೋಂಡಾ ಅಭಿಮಾನಿಗಳು ಬಹಳ ಸಮಯದಿಂದ ಕಾಯುತ್ತಿದ್ದು, ಇದೀಗ ಭಾರತದಲ್ಲಿ ನವೀಕರಣಗೊಂಡು ಬಿಡುಗಡೆಯಾಗಿರುವುದು ಉತ್ಸಾಹ ಹೆಚ್ಚಿಸಿದೆ. ಈ ಬೈಕ್‌ನ ಎಂಜಿನ್‌ನ ಬಗ್ಗೆ ಹೇಳುವುದಾದರೆ, ಇದು 293 ಸಿಸಿ ಸಿಂಗಲ್ ಸಿಲಿಂಡರ್ ಪೆಟ್ರೋಲ್ ಎಂಜಿನ್ ಅನ್ನು ಹೊಂದಿದೆ.

honda-launches-2023-cb300f-specs-features-price

ಇದು 24 bhp ಪವರ್ ಮತ್ತು 25.6 Nm ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಈ ಬೈಕ್ ಸ್ಲೀಪರ್ ಕ್ಲಚ್ ವೈಶಿಷ್ಟ್ಯದೊಂದಿಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಜೊತೆಗೆ ಬರುತ್ತದೆ. ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಬೈಕ್ ಮುಂಭಾಗದಲ್ಲಿ 276 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 220 ಎಂಎಂ ಡಿಸ್ಕ್ ಬ್ರೇಕ್ ಹೊಂದಿದೆ.

ಈ ಬ್ರೇಕ್‌ಗಳು ಡ್ಯುಯಲ್ ಚಾನೆಲ್ ABS ಗೆ ಸಂಪರ್ಕ ಹೊಂದಿದೆ. ಅಲ್ಲದೆ ಹೋಂಡಾ ಈ ಬೈಕ್ ನಲ್ಲಿ ಟಾರ್ಕ್ ಕಂಟ್ರೋಲ್ ಎಂಬ ಹೊಸ ವ್ಯವಸ್ಥೆಯನ್ನು ಅಳವಡಿಸಿದೆ. ಇನ್ನು ಸಸ್ಪೆನ್ಷನ್ ಬಗ್ಗೆ ಹೇಳುವುದಾದರೆ, ಈ ಬೈಕು ಮುಂಭಾಗದಲ್ಲಿ ಯುಎಸ್‌ಡಿ 4 ಸಸ್ಪೆನ್ಷನ್ ಅನ್ನು ಹೊಂದಿದೆ. ಹಿಂಭಾಗದಲ್ಲಿ 5-ಹಂತದ ಮೊನೊ ಶಾಕ್ ಅಬ್ಸಾರ್ಬರ್‌ಗಳನ್ನು ಒದಗಿಸಲಾಗಿದೆ.

honda-launches-2023-cb300f-specs-features-price

ಬೈಕ್‌ನ ಮುಂಭಾಗದಲ್ಲಿ ಸಂಪೂರ್ಣ ಡಿಜಿಟಲ್ ಇನ್‌ಸ್ಟ್ರೂಮೆಂಟ್ ಕ್ಲಸ್ಟರ್ ನೀಡಲಾಗಿದೆ. ಈ ಡಿಸ್ಪ್ಲೇ ಸಿಸ್ಟಮ್ ಐದು ಹಂತದ ಬ್ರೈಟ್ನೆಸ್ ಹೊಂದಾಣಿಕೆಯನ್ನು ಸಹ ಹೊಂದಿದೆ. ಇದು ಸ್ಪೀಡೋಮೀಟರ್, ಓಡೋಮೀಟರ್, ಟ್ಯಾಕೋಮೀಟರ್, ಫ್ಯುಯಲ್ ಗೇಜ್ ಮೀಟರ್, ಗೇರ್ ಇಂಡಿಕೇಟರ್ ಸೂಚಕ ಮತ್ತು ಗಡಿಯಾರವನ್ನು ಸಹ ಹೊಂದಿದೆ.

ಇದು ಎಲ್ಇಡಿ ಲೈಟಿಂಗ್ ಸಿಸ್ಟಮ್ ಮತ್ತು ಹೋಂಡಾ ಸ್ಮಾರ್ಟ್ಫೋನ್ ವಾಯಿಸ್ ಕಂಟ್ರೋಲ್ ಸಿಸ್ಟಮ್ ಹೊಂದಿದೆ. ಹೋಂಡಾ CB300F ಕುರಿತು ಪ್ರತಿಕ್ರಿಯಿಸಿದ ಹೋಂಡಾದ ಮಾರಾಟ ಮತ್ತು ಮಾರ್ಕೆಟಿಂಗ್ ನಿರ್ದೇಶಕ ಯೋಗೇಶ್ ಮಾಥುರ್, "BS6 OPT2 ನಿಯಂತ್ರಣದೊಂದಿಗೆ CB300F ಅನ್ನು ಪರಿಚಯಿಸಲು ನಾವು ಹೆಮ್ಮೆಪಡುತ್ತೇವೆ. ಗ್ರಾಹಕರಿಗೆ ಉತ್ತಮ ಅನುಭವ ನೀಡುವ ವಾಹನ ಇದಾಗಲಿದೆ.

CB 300F ತನ್ನ ಸವಾರರಿಗೆ ನಿಜವಾದ ಸ್ಟ್ರೀಟ್ ಫೈಟರ್ ಬೈಕ್ ಅನುಭವವನ್ನು ನೀಡುತ್ತದೆ ಮತ್ತು ನಗರ ಬಳಕೆಗೆ ಸೂಕ್ತವಾದ ಶಕ್ತಿಶಾಲಿ ಕಾರ್ಯಕ್ಷಮತೆಯ ಬೈಕ್ ಆಗಿದೆ ಎಂದರು. ಈ ಬೈಕಿನ ಬಗ್ಗೆ ಹೋಂಡಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಅಧ್ಯಕ್ಷ ಸುಸುಮೊ ಒಟಾನಿ ಮಾತನಾಡಿ, "ನಮ್ಮ ಕಂಪನಿ CB300F ಅನ್ನು ಬಿಡುಗಡೆ ಮಾಡಿದಾಗ, ಜನರನ್ನು ಹಿಂತಿರುಗಿ ನೋಡುವಂತೆ ಮಾಡಿತು.

ಈ ಬೈಕ್ ಅನ್ನು ನಿಜವಾದ ಸ್ಟ್ರೀಟ್ ಫೈಟರ್ ಬೈಕ್ ಆಗಿ ರಚಿಸಲಾಗಿದ್ದು ಕಾರ್ಯಕ್ಷಮತೆ ಮತ್ತು ಮಾದರಿ ನೋಟವನ್ನು ಸಮತೋಲನಗೊಳಿಸುತ್ತದೆ ಎಂದರು. ಇದೀಗ ಮುಂದಿನ ಪೀಳಿಗೆಯನ್ನು ಆಕರ್ಷಿಸಲು ಈ ಬೈಕ್ ಅನ್ನು ನವೀಕರಿಸಲಾಗಿದೆ. ಇದೀಗ ಈ ಬೈಕ್ ಅನ್ನು ಸರ್ಕಾರದ ನಿಯಮಗಳ ಪ್ರಕಾರ OPD 2 ನಿಯಂತ್ರಣ ನಿಯಮಗಳ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ಬೈಕ್‌ನ ಸವಾರಿಯ ಅನುಭವವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಮತ್ತು ಎಂಜಿನ್ ಕಾರ್ಯಕ್ಷಮತೆ ಅತ್ಯುತ್ತಮವಾಗಲು ನಾವು ಬೈಕ್‌ನ ಎಂಜಿನ್ ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ವಿನ್ಯಾಸಗೊಳಿಸಿದ್ದೇವೆ ಎಂದರು. ಹೋಂಡಾ ಭಾರತದಲ್ಲಿ ದ್ವಿಚಕ್ರ ವಾಹನಗಳ ಅತ್ಯುತ್ತಮ ತಯಾರಕ ಮತ್ತು ಮಾರಾಟಗಾರ. ಈ ಕಂಪನಿಯ ಎಲ್ಲ ಉತ್ಪನ್ನಗಳಿಗೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗ ನಾವು CV 300F ಉತ್ತಮ ಮಾರಾಟವನ್ನು ಪಡೆಯಬಹುದೆಂದು ನಿರೀಕ್ಷಿಸಬಹುದು.

Article Published On: Tuesday, September 12, 2023, 9:20 [IST]
English summary
Honda launches 2023 cb300f specs features price
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+