Honda: ಅಗ್ಗದ ಹೋಂಡಾ ಇವಿ ಸ್ಕೂಟರ್ ಹೆಸರು ಇದಾ? ಕೇವಲ ಒಂದಕ್ಷರದಲ್ಲಿ ಖದರ್ ತೋರಿದ ಹೋಂಡಾ

ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬೇಡಿಕೆ ಹೆಚ್ಚಾದಂತೆ ದ್ವಿಚಕ್ರ ವಾಹನ ತಯಾರಕರು ತಮ್ಮ ಹೊಸ ಸ್ಕೂಟರ್‌ಗಳಿಗಾಗಿ ಟ್ರೇಡ್‌ಮಾರ್ಕ್ ಸಲ್ಲಿಸುತ್ತಿವೆ. ಇದೀಗ ಹೋಂಡಾದ (Honda) ಅಗ್ಗದ ಬೆಲೆಯ ಹೊಸ ಇವಿ ಸ್ಕೂಟರ್ ಟ್ರೇಡ್‌ ಮಾರ್ಕ್‌ ಬಹಿರಂಗಗೊಂಡಿದೆ. ಕೇವಲ ಒಂದಕ್ಷರದಲ್ಲಿ ಭವಿಷ್ಯತ್ತನ್ನು ಸೂಚಿಸುವಂತಹ ಹೆಸರನ್ನು ನೀಡಲು ಹೋಂಡಾ ಹೊರಟಿದೆ.

ಹೋಂಡಾ ತನ್ನ ಮುಂಬರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ 'i-M' ಮತ್ತು 'i-M1 e' ಎಂಬ ಹೆಸರುಗಳನ್ನು ನೀಡಲು ಮುಂದಾಗಿದೆ ಎಂಬುದು ಇತ್ತೀಚಿನ ಟ್ರೇಡ್‌ಮಾರ್ಕ್‌ಗಳಿಂದ ಬಹಿರಂಗವಾಗಿದೆ. ಅಲ್ಲಿಗೆ ಭಾರತದಲ್ಲಿ ಹೋಂಡಾದ ಎರಡು ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬರುವುದು ಖಚಿತವಾಗಿದೆ. ಈ 'i-M' ಮತ್ತು 'i-M1 e' ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಹೋಂಡಾ ಇವಿ ವಲಯದಲ್ಲಿ ಕ್ರಾಂತಿ ಸೃಷ್ಟಿಸಲಿದೆಯೇ?

honda-new-ev-scooter-names-trademarked-india

ಈ ಒಂದಕ್ಷರಲ್ಲಿ ಭವಿಷ್ಯವಿದೆ: ವಾಹನ ಜಗತ್ತಿನಲ್ಲಿ, 'i' ಎಂಬ ಅಕ್ಷರವು ಸಾಮಾನ್ಯವಾಗಿ ಬುದ್ಧಿವಂತ ಅಥವಾ ನವೀನ ಎಂಬುದನ್ನು ಸೂಚಿಸುತ್ತದೆ. ಹೋಂಡಾದ ಹೊಸ ಟ್ರೇಡ್‌ಮಾರ್ಕ್‌ಗಳು ಈಗ ಎಲೆಕ್ಟ್ರಿಕ್ ವಲಯದಲ್ಲಿ ಬ್ರ್ಯಾಂಡ್‌ನ ನಾವೀನ್ಯತೆಯನ್ನು ತೋರಲಿವೆಯೇ ಎಂಬ ಪ್ರಶ್ನೆ ಎದ್ದಿದೆ. ಏಕೆಂದರೆ ಇವುಗಳು ಭಾರತದಲ್ಲಿ ಹೋಂಡಾದ ಮೊದಲ ಇ-ಸ್ಕೂಟರ್‌ಗಳಾಗಿವೆ.

ಮೊದಲಿನಿಂದಲೂ ಹೋಂಡಾದ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಆಕ್ಟೀವಾ ಆಗಿರಲಿದೆ ಎಂಬ ನಿರೀಕ್ಷೆಗಳಿದ್ದವು. ಆದ್ರೆ ಈ i-M ಮತ್ತು i-M1 e ಟ್ರೇಡ್‌ಮಾರ್ಕ್‌ಗಳು ಈಗ ಆ ಸಾಧ್ಯತೆಗಳನ್ನು ಹಿಂದಕ್ಕೆ ತಳ್ಳಿವೆ. ಈ ಟ್ರೇಡ್‌ ಮಾರ್ಕ್‌ಗಳನ್ನು 13/6/2023 ರಂದು ಸಲ್ಲಿಸಲಾಗಿದ್ದು, ಹೋಂಡಾ ಪ್ರಾಯಶಃ ತನ್ನ ಮುಂಬರುವ ಹೊಸ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಲ್ಲಿ ಬಳಸುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.

honda-new-ev-scooter-names-trademarked-india

2024 ರಲ್ಲಿ ಬಿಡುಗಡೆ?: ಹೋಂಡಾ ಭಾರತದಲ್ಲಿ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡುವ ಬಗ್ಗೆ ಹಲವು ಊಹಾಪೋಹಗಳಿವೆ. ವಾಸ್ತವವಾಗಿ, ಹೋಂಡಾ ಭಾರತದಲ್ಲಿ ಈ ಎರಡು ವಿಭಿನ್ನ ಇ-ಸ್ಕೂಟರ್‌ಗಳನ್ನು 2024 ರಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹೋಂಡಾ ಅವುಗಳನ್ನು 'ಆಕ್ಟಿವಾ' ಅಂಬ್ರೆಲ್ಲಾ ಅಡಿಯಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯೂ ಇದೆ.

ಏನನ್ನು ನಿರೀಕ್ಷಿಸಬಹುದು?: ಈ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗಾಗಿ ಹೋಂಡಾ ಹೊಸ ಪ್ಲ್ಯಾಟ್‌ಫಾರ್ಮ್ ಅನ್ನು ಅಭಿವೃದ್ಧಿಪಡಿಸಬಹುದು. ಈ ಪ್ಲಾಟ್‌ಫಾರ್ಮ್ ಸ್ಥಿರ ಬ್ಯಾಟರಿ ಮತ್ತು ಬದಲಾಯಿಸಬಹುದಾದ ಬ್ಯಾಟರಿ ಆರ್ಕಿಟೆಕ್ಚರ್‌ಗಳಿಗೆ ಹೊಂದಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ, ಎರಡು ಸ್ಕೂಟರ್‌ಗಳಲ್ಲಿ ಒಂದು ಸ್ಥಿರ ಬ್ಯಾಟರಿ ಸೆಟಪ್ ಅನ್ನು ಹೊಂದಿದ್ದು, ಇನ್ನೊಂದು ಬದಲಾಯಿಸಬಹುದಾದ ಬ್ಯಾಟರಿ ಕಿಟ್ ಅನ್ನು ಪಡೆಯಬಹುದು.

honda-new-ev-scooter-names-trademarked-india

ವೆಚ್ಚವನ್ನು ನಿಯಂತ್ರಣದಲ್ಲಿಡಲು ಉನ್ನತ ಮಟ್ಟದ ಸ್ಥಳೀಕರಣವು ಆದ್ಯತೆಯಾಗಿರುತ್ತದೆ. ಇದು ಹೋಂಡಾದಿಂದ ಬಂದಿರುವುದರಿಂದ, ಈ ಮುಂಬರುವ ಉತ್ಪನ್ನಗಳಿಗೆ ಸಂಬಂಧಿಸಿದಂತೆ ವಿಶ್ವಾಸಾರ್ಹತೆ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ಇರುತ್ತದೆ. ಹೋಂಡಾ ಮೋಟಾರ್‌ಸೈಕಲ್ಸ್ ಮತ್ತು ಸ್ಕೂಟರ್ಸ್ ಇಂಡಿಯಾ ಪ್ರಸ್ತುತ ಕರ್ನಾಟಕದ ನರಸಾಪುರದಲ್ಲಿ ಭವಿಷ್ಯದ ಇವಿ ಸ್ಕೂಟರ್ ಉತ್ಪಾದನೆಯ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಉತ್ಪಾದನಾ ಸೌಲಭ್ಯವನ್ನು ನಿರ್ಮಿಸುತ್ತಿದೆ.

ಬೆಲೆ?: ಸದ್ಯಕ್ಕಿರುವ ಓಲಾ ಹಾಗೂ ಎಥರ್ ಸ್ಕೂಟರ್‌ಗಳಿಗೆ ತೀವ್ರ ಪೈಪೋಟಿ ನೀಡುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಬೆಲೆ ವಿಷಯದಲ್ಲೂ ಈ ಎರಡೂ ಇವಿಗಳ ಆರಂಭಿಕ ಬೆಲೆಗಳಿಗೆ ಸ್ಪರ್ಧಾತ್ಮಕವಾಗಿರಲು ಆರಂಭಿಕವಾಗಿ ಒಂದು ಲಕ್ಷ ರೂ. ಒಳಗೆ ಇರಬಹುದು ಎಂದು ಹೇಳಲಾಗುತ್ತಿದೆ. ಹಾಗೆಯೇ ಕೈಗೆಟುಕುವ ಪೆಟ್ರೋಲ್ ಸ್ಕೂಟರ್‌ಗಳಿಗೆ ಇವು ಉತ್ತಮ ಪರ್ಯಾಯಗಳೆಂದು ಸಾಬೀತುಪಡಿಸುವ ಸಾಧ್ಯತೆಯೂ ಇದೆ. ಹೋಂಡಾ ಸಿಇಒ ದೃಢಪಡಿಸಿದಂತೆ ಜನವರಿ 2024 ರಲ್ಲಿ ಬಿಡುಗಡೆ ಆಗಬಹುದು.

honda-new-ev-scooter-names-trademarked-india

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Friday, September 15, 2023, 16:53 [IST]
English summary
Honda new ev scooter names trademarked india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+