CB500X ಬೈಕಿನ ಹೆಸರನ್ನು ವೆಬ್‌ಸೈಟ್‌ನಿಂದ ಕೈಬಿಟ್ಟ ಹೋಂಡಾ ಮೋಟಾರ್‌ಸೈಕಲ್

ಜನಪ್ರಿಯ ದ್ವಿಚಕ್ರ ತಯಾರಕ ಕಂಪನಿಯಾದ ಹೋಂಡಾ ಮೋಟಾರ್‌ಸೈಕಲ್ ತನ್ನ CB500X ಬೈಕಿನ ಹೆಸರನ್ನು ಭಾರತದಲ್ಲಿನ ತನ್ನ ಅಧಿಕೃತ ಬಿಗ್‌ವಿಂಗ್ ವೆಬ್‌ಸೈಟ್‌ನಿಂದ ತೆಗೆದುಹಾಕಿದೆ. ಹೋಂಡಾ CB500X ಬೈಕ್ ಸ್ಥಗಿತಗೊಂಡ ಬಗ್ಗೆ ಯಾವುದೇ ಮಾಹಿತಿಗಳು ಬಹಿರಂಗವಾಗಿಲ್ಲ. ಕಳೆದ ಬಾರೀ ಹೋಂಡಾ ಕಂಪನಿಯು ಈ ಬೈಕ್ ಮಾರಾಟವನ್ನು ಹೆಚ್ಚಿಸಲು ಬೆಲೆಯನ್ನು ಕಡಿತಗೊಳಿಸಿದ್ದರು.

ವರದಿಗಳ ಪ್ರಕಾರ, ಬಿಗ್‌ವಿಂಗ್ ಡೀಲರ್ ಗಳು ಹೋಂಡಾ CB500X ಬೈಕ್ ಅನ್ನು ಸ್ಟಾಕ್‌ನಲ್ಲಿ ಹೊಂದಿಲ್ಲ. ಈ ಬೈಕಿನ ಹೊಸ ಸ್ಟಾಕ್‌ 2023ರ ಆವೃತ್ತಿಯು ಏಪ್ರಿಲ್-ಮೇ ಆಸುಪಾಸಿನಲ್ಲಿ ಬರಬಹುದು. ಹೋಂಡಾ ಕಂಪನಿಯು ತನ್ನ CB500X ಬೈಕ್ ಅನ್ನು ಭಾರತದಲ್ಲಿ 2021ರ ಮಾರ್ಚ್ ತಿಂಗಳಿನಲ್ಲಿ ಎಕ್ಸ್ ಶೋ ರೂಂ ಬೆಲೆಯು ರೂ. 6.87 ಲಕ್ಷವಾಗಿದೆ. ಇದರ ನಂತರ ಬ್ರ್ಯಾಂಡ್ ಹೋಂಡಾ CB500X ಬೈಕ್ ಬೆಲೆಯನ್ನು 2022ರ ಫೆಬ್ರವರಿ ತಿಂಗಳಿನಲ್ಲಿ ಲಕ್ಷ ರೂ.ಗಳಷ್ಟು ಕಡಿತಗೊಳಿಸಿತು.

CB500X ಬೈಕಿನ ಹೆಸರನ್ನು ವೆಬ್‌ಸೈಟ್‌ನಿಂದ ಕೈಬಿಟ್ಟ ಹೋಂಡಾ

ಇದಕ್ಕೆ ಕಾರಣವೆಂದರೆ ಮೋಟಾರ್‌ಸೈಕಲ್‌ನ ಸ್ಟಾಕ್ ಅನ್ನು ತೆರವುಗೊಳಿಸುವುದು ಮತ್ತು ಈಗಾಗಲೇ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಲಭ್ಯವಿರುವ ನವೀಕರಿಸಿದ ಮಾದರಿಗೆ ದಾರಿ ಮಾಡಿಕೊಡುವುದಾಗಿದೆ.ಆದರೆ ಬೆಲೆ ಹೆಚ್ಚಾದ ಕಾರಣ ಮಾರಾಟದಲ್ಲಿ ಭಾರೀ ಕುಸಿತವನ್ನು ಕಂಡಿತ್ತು. ಇದರಿಂದ ಹೋಂಡಾ ಕಂಪನಿಯು ಈ ಬೈಕಿನ ಬೆಲೆಯನ್ನು ಕಡಿತಗೊಳಿಸಿತು. ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನಲ್ಲಿ 471ಸಿಸಿ, ಲಿಕ್ವಿಡ್-ಕೂಲ್ಡ್, ಡಿಒಹೆಚ್‌ಸಿ ಪ್ಯಾರಲಲ್-ಟ್ವಿನ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 8,500 ಆರ್‌ಪಿಎಂನಲ್ಲಿ 47 ಬಿಹೆಚ್‍ಪಿ ಪವರ್ ಮತ್ತು 6,500 ಆರ್‌ಪಿಎಂನಲ್ಲಿ 43.2 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಇನ್ನು ಎಂಜಿನ್ ನೊಂದಿಗೆ ಸ್ಲಿಪ್ಪರ್ ಮತ್ತು ಅಸಿಸ್ಟ್ ಕ್ಲಚ್ ಜೊತೆಗೆ 6-ಸ್ಪೀಡ್ ಗೇರ್‌ಬಾಕ್ಸ್‌ ಅನ್ನು ಜೋಡಿಸಲಾಗಿದೆ. ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಸಿಕೆಡಿ (ಕಂಪ್ಲೀಟ್ಲಿ ನಾಕ್ ಡೌನ್) ಮಾರ್ಗದ ಮೂಲಕ ಭಾರತಕ್ಕೆ ಆಮದು ಮಾಡಿಕೊಳ್ಳಲಾಗಿದೆ. ಹೊಸ ಹೋಂಡಾ ಅಡ್ವೆಂಚರ್ ಟೂರರ್ ಅನ್ನು ಬಿಗ್‌ವ್ಹಿಂಗ್ ಡೀಲರ್‌ಶಿಪ್ ನೆಟ್‌ವರ್ಕ್ ಮೂಲಕ ಮಾರಾಟ ಮಾಡಲಾಗುತ್ತದೆ. ಈ ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಹೊಂದಿದೆ.

ಇನ್ನು ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಸಸ್ಪೆಂಕ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, 150ಎಂಎಂ ಟ್ರ್ಯಾವೆಲ್ ನೊಂದಿಗೆ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್‌ಗಳು ಮತ್ತು ಹಿಂಭಾಗದ ಆಕ್ಸಲ್‌ಗಳಲ್ಲಿ 135 ಎಂಎಂ ಟ್ರಾವೆಲ್ ಯುನಿಟ್ ಮೊನೊಶಾಕ್ ಸೆಟಪ್ ಅನ್ನು ಹೊಂದಿದೆ. ಇನ್ನು ಈ ಹೊಸ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಮುಂಭಾಗದಲ್ಲಿ 19 ಇಂಚಿನ (110/80 ಆಲ್-ಟೆರೈನ್ ಟೈರ್) ಮತ್ತು ಹಿಂಭಾಗದಲ್ಲಿ 17 ಇಂಚಿನ (160/60 ಆಲ್-ಟೆರೈನ್ ಟೈರ್) ಅಲಾಯ್ ವ್ಹೀಲ್ ಅನ್ನು ಕೂಡ ನೀಡಲಾಗಿದೆ.

ಇನ್ನು ಈ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕಿನ ಬ್ರೇಕಿಂಗ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ 230 ಎಂಎಂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಇದರೊಂದಿಗೆ ಡ್ಯುಯಲ್-ಚಾನೆಲ್ ಎಬಿಎಸ್ (ಆಂಟಿ-ಲಾಕ್ ಬ್ರೇಕಿಂಗ್ ಸಿಸ್ಟಂ) ಅನ್ನು ಕೂಡ ಒಳಗೊಂಡಿದೆ. ಈ ಹೊಸ ಹೋಂಡಾ ಸಿಬಿ500ಎಕ್ಸ್ ಬೈಕಿನಲ್ಲಿ ಹೊಂದಾಣಿಕೆ ಮಾಡಬಹುದಾದ ವಿಂಡ್‌ಸ್ಕ್ರೀನ್, ಸ್ಟೆಪ್ ಅಪ್ ಸೀಟ್ ಮತ್ತು ಅಪ್‌ಸ್ವೆಪ್ಟ್ ಎಕ್ಸಾಸ್ಟ್ ಸಿಸ್ಟಂನಂತಹ ಫೀಚರ್ ಗಳೊಂದಿಗೆ ಇದು ಪೂರ್ಣ ಎಲ್ಇಡಿ ಸಿಸ್ಟಂ ಅನ್ನು ಹೊಂದಿದೆ.

ಈ ಬೈಕಿನಲ್ಲಿ ಸಂಪೂರ್ಣ ಡಿಜಿಟಲ್ ಎಲ್‌ಸಿಡಿ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಕೂಡ ಒಳಗೊಂಡಿದೆ. ಇನ್ನು ಹೋಂಡಾ ಹೊಸ 2022ರ ಸಿಬಿ500ಎಕ್ಸ್ ಅಡ್ವೆಂಚರ್ ಬೈಕನ್ನು ಅನಾವರಣಗೊಳಿಸಿದೆ. ಹೊಸ ನವೀಕರಣಗಳನ್ನು ಪಡೆದುಕೊಂಡಿರುವ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಹೊಸ ಹೋಂಡಾ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಗಮನಾರ್ಹವಾದ ನವೀಕರಣವನ್ನು ಸ್ವೀಕರಿಸಿದೆ. ಈ ಮಾದರಿಯು ಪರ್ಲ್ ಆರ್ಗ್ಯಾನಿಕ್ ಗ್ರೀನ್ ಎಂಬ ಬಣ್ಣದ ಪಡೆದುಕೊಂಡಿವೆ. ಈ ಬೈಕ್ ಫ್ಯೂಯಲ್ ಮತ್ತು ಮುಂಭಾಗದ ಫೆಂಡರ್‌ನಲ್ಲಿ ವೈಶಿಷ್ಟ್ಯಗಳನ್ನು ಹೊಂದಿದೆ ಆದರೆ ಹಿಂಭಾಗವನ್ನು ಕಪ್ಪು ಬಣ್ಣದಲ್ಲಿದೆ.

ಹೊಸ ಸಿಬಿ500ಎಕ್ಸ್ ಅಡ್ವೆಂಚರ್ ಬೈಕ್ ಆಗಿರುವುದರಿಂದ ಹೆಚ್ಚು ಅಗ್ರೇಸಿವ್ ಲುಕ್ ಅನ್ನು ಕೂಡ ಒಳಗೊಂಡಿದೆ. ಈ ಬೈಕಿನ ದೊಡ್ಡ ನವೀಕರಣವೆಂದರೆ ಹೊಸ ಮುಂಭಾಗದ ಸಸ್ಪೆಂಕ್ಷನ್ ಆಗಿದೆ. ಇದು ಶೋವಾ SF-BPF ಇನ್ವರ್ಟಡ್ ಫೋರ್ಕ್‌ಗಳಿಂದ ಟೆಲಿಸ್ಕೋಪಿಕ್ ಫೋರ್ಕ್‌ಗಳನ್ನು ಬದಲಾಯಿಸಲಾಗಿದೆ. ಎಸ್ಎಫ್ ಪ್ರತ್ಯೇಕ ಕಾರ್ಯವನ್ನು ಸೂಚಿಸುತ್ತದೆ ಆದರೆ 'BPF' ಬಿಗ್ ಪಿಸ್ಟನ್ ಫೋರ್ಕ್ಸ್ ಆಗಿದೆ. ಸೆಟಪ್ ಪ್ರೀಮಿಯಂ ಮತ್ತು ಹೆಚ್ಚು ದೊಡ್ಡ ಬೈಕ್ ಗಳಲಿ ಕಂಡುಬರುತ್ತದೆ. ಹೊಸ ಸಸ್ಪೆಂಕ್ಷನ್ ಜೊತೆಗೆ, ಹೋಂಡಾ ಸಹ ಮುಂದಕ್ಕೆ ಹೋಗಿದೆ ಮತ್ತು ಮೋಟಾರ್‌ಸೈಕಲ್‌ನ ಬ್ರೇಕ್‌ಗಳನ್ನು ಪರಿಷ್ಕರಿಸಿದೆ.

ಹೋಂಡಾ ಸಿಬಿ500ಎಕ್ಸ್ ಹಿಂದಿನ ಆವೃತ್ತಿಯು ಒಂದೇ 310mm ಡಿಸ್ಕ್ ಅನ್ನು ಬಳಸಿದರೆ, 2022 ಮಾದರಿಯು ಎಬಿಎಸ್ ಜೊತೆಗೆ ಮುಂಭಾಗದಲ್ಲಿ ಎರಡು 296ಎಂಎಂ ಡಿಸ್ಕ್ ಗಳನ್ನು ನೀಡುತ್ತದೆ. ಸಿಬಿ500ಎಕ್ಸ್ ತನ್ನ ಎಲ್ಲಾ ಪರಿಷ್ಕರಣೆಗಳನ್ನು ಮುಂಭಾಗದಲ್ಲಿಯೇ ಪಡೆದುಕೊಂಡಿದೆ. ಟೂರಿಂಗ್-ಕೇಂದ್ರಿತ ಮೋಟಾರ್‌ಸೈಕಲ್ ಈಗ ಹಗುರವಾದ ಮುಂಭಾಗದ ವ್ಹೀಲ್ ದೊಂದಿಗೆ ಬರುತ್ತದೆ. ಅದು ಮೋಟಾರ್‌ಸೈಕಲ್‌ನ ಒಟ್ಟು ತೂಕದ 1 ಕೆಜಿಯನ್ನು ಚೆಲ್ಲುತ್ತದೆ. ಇದು ಕ್ಯಾಸ್ಟ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದೆಯಾದ್ದರಿಂದ ಹೆಚ್ಚು ಆಕರ್ಷಕವಾಗಿದೆ.

Most Read Articles

Kannada
English summary
Honda removed cb500x in india website details in kannada
Story first published: Friday, January 20, 2023, 10:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X