ಭಾರತದ ಮಾರುಕಟ್ಟೆಗೆ 'ಕೀವೇ SR 250' ಬಿಡುಗಡೆ: ಅದೇ ಬೆಲೆಗೆ ದೊರೆಯುವ ಇತರೆ ಹೊಸ ಬೈಕ್‌ಗಳು..

ಹಂಗೇರಿಯದ ಕಂಪನಿ 'ಕೀವೇ' SR 250 ರೆಟ್ರೋ ಸ್ಟೈಲ್ ಬೈಕ್ ಅನ್ನು ಆಟೋ ಎಕ್ಸ್‌ಪೋ ಮೂಲಕ 1.49 ಲಕ್ಷ ರೂಪಾಯಿ ಬೆಲೆಯಲ್ಲಿ ದೇಶೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದು ಭಾರತದಲ್ಲಿ ಕೀವೇ ಕಂಪನಿಯ ಅಗ್ಗದ ಬೈಕ್ ಆಗಿದೆ. ಇನ್ನೂ ಇದೇ ಬೆಲೆಯಲ್ಲಿ ಹಲವು ದ್ವಿಚಕ್ರ ವಾಹನ ಲಭ್ಯವಿದ್ದು, ಇಲ್ಲಿದೆ ವಿವರ.

ಬಜಾಜ್ ಪಲ್ಸರ್ F250:
ದೇಶದ ಬಹುತೇಕ ಯುವಕರ ಹಾಟ್ ಫೆವರೇಟ್ ಆಗಿರುವ ಬಜಾಜ್ ಪಲ್ಸರ್ F250 ಬಹುತೇಕ 'ಕೀವೇ' SR 250 ಬೆಲೆಯಲ್ಲಿಯೇ ಖರೀದಿಗೆ ದೊರೆಯಲಿದೆ. ಪಲ್ಸರ್ F250 ಬೆಲೆ ರೂ.1,44,979 (ಎಕ್ಸ್ ಶೋ ರೂಂ ದೆಹಲಿ) ಇದೆ. 249 ಸಿಸಿ ಏರ್-/ಆಯಿಲ್-ಕೂಲ್ಡ್ ಎಂಜಿನ್ ಹೊಂದಿದ್ದು, 24.5 PS ಗರಿಷ್ಠ ಪವರ್ 21.5 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದ್ದು, ಈ ಬೈಕಿನ ಪ್ರಮುಖ ವೈಶಿಷ್ಟ್ಯಗಳೆಂದರೆ LED ಲೈಟಿಂಗ್ ಮತ್ತು USB ಚಾರ್ಜರ್ ಹೊಂದಿರುವುದು.

ಕೀವೇ SR 250 ಬೆಲೆಗೆ ದೊರೆಯುವ ಇತರೆ ಹೊಸ ಬೈಕ್‌ಗಳು..

ರಾಯಲ್ ಎನ್‌ಫೀಲ್ಡ್ ಹಂಟರ್ 350:
ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಹಂಟರ್ 350 ಬೈಕ್ ರೂ.1,49,900 ಆರಂಭಿಕ ಬೆಲೆ ಹೊಂದಿದ್ದು, 3 ರೂಪಾಂತರಗಳು, 8 ಬಣ್ಣಗಳ ಆಯ್ಕೆಯಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ಎಂಡ್ ರೂಪಾಂತರದ ಬೆಲೆ ರೂ..1,71,221 ಇದೆ. ಈ ಹೊಸ ಹಂಟರ್ 349 ಸಿಸಿ BS6 ಎಂಜಿನ್‌ ಹೊಂದಿದ್ದು , ಇದು 20.2 bhp ಗರಿಷ್ಠ ಪವರ್ ಮತ್ತು 27 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಪಡೆದಿದ್ದು, 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಹೀರೋ Xpulse 200 4V:
ಇದೊಂದು ಅಡ್ವೆಂಚರ್ ಬೈಕ್ ಆಗಿದ್ದು, ಆರಂಭಿಕ ಬೆಲೆ ರೂ.1,37,436 ಇದೆ. 1 ರೂಪಾಂತರ, 3 ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇದು 199.6 ಸಿಸಿ BS6 ಎಂಜಿನ್‌ ಹೊಂದಿದ್ದು, 18.8 bhp ಗರಿಷ್ಠ ಪವರ್ ಮತ್ತು 17.35 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಪಡೆದಿದೆ. ಫ್ರಂಟ್ ಮತ್ತು ರೇರ್ ಎರಡು ಡಿಸ್ಕ್ ಬ್ರೇಕ್‌ಗಳೊಂದಿಗೆ ಆಂಟಿ-ಲಾಕಿಂಗ್ ಬ್ರೇಕಿಂಗ್ ಸಿಸ್ಟಮ್‌ನೊಂದಿಗೆ ಖರೀದಿಗೆ ಲಭ್ಯವಿದೆ. ಇದು 158 ಕೆಜಿ ತೂಕ ಮತ್ತು 13 ಲೀಟರ್ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಯಮಹಾ ಏರೋಕ್ಸ್ 155:
ಭಾರತದಲ್ಲಿ ಯಮಹಾ ಏರೋಕ್ಸ್ 155 ಆರಂಭಿಕ ಬೆಲೆ ರೂ.1,41,554 ಇದ್ದು, 2 ರೂಪಾಂತರ ಹಾಗೂ 4 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ. ಟಾಪ್ ಎಂಡ್ ರೂಪಾಂತರದ ಬೆಲೆ ರೂ.1,43,574 ಇದೆ. ಈ ಬೈಕ್, 155 ಸಿಸಿ BS6 ಎಂಜಿನ್‌ ಹೊಂದಿದ್ದು, ಇದು 14.79 bhp ಗರಿಷ್ಠ ಪವರ್ ಮತ್ತು 13.9 Nm ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಫ್ರಂಟ್ ಡಿಸ್ಕ್ ಮತ್ತು ರೇರ್ ಡ್ರಮ್ ಬ್ರೇಕ್ ಇದ್ದು, ಇದು 5.5 ಲೀಟರ್ ಇಂಧನ ಸಾಮರ್ಥ್ಯದ ಇಂಧನ ಟ್ಯಾಂಕ್ ಹೊಂದಿದೆ.

ಎಥರ್ 450X:
ಇದೊಂದು ಎಂಟ್ರಿ ಲೆವೆಲ್ ಎಥರ್ 450X ಬೆಲೆ ರೂ.1.37 ಲಕ್ಷ (ಎಕ್ಸ್ ಶೋ ರೂಂ ದೆಹಲಿ) ಇದ್ದು, ಟಾಪ್-ಎಂಡ್ ಎಥರ್ 450X Gen 3 ರೂಪಾಂತರದ ಬೆಲೆ ರೂ.1,60,205 ಇದೆ. ಈ ಸ್ಕೂಟರ್, ಬ್ಲೂಟೂತ್ ಕನೆಕ್ಟಿವಿಟಿ, ಐದು ರೈಡಿಂಗ್ ಮೋಡ್‌ಗಳನ್ನು ಹೊಂದಿದೆ. ಅವುಗಳೆಂದರೆ, ಸ್ಮಾರ್ಟ್ ಇಕೋ, ಇಕೋ, ರೈಡ್, ಸ್ಪೋರ್ಟ್ ಮತ್ತು ವಾರ್ಪ್ (450Xಗೆ ಮಾತ್ರ). ಜೊತೆಗೆ ಎಥರ್ 450X ಎಲ್‌ಇಡಿ ಇಲ್ಯುಮಿನೇಷನ್, ಪಾರ್ಕಿಂಗ್ ಅಸಿಸ್ಟ್ (ರಿವರ್ಸ್ ಗೇರ್) ಮತ್ತು ಏಳು ಇಂಚಿನ ಟಚ್‌ಸ್ಕ್ರೀನ್ TFT ಡಿಸ್ಪ್ಲೇ ಅನ್ನು ಹೊಂದಿದೆ.

ಇಷ್ಟೇ ಅಲ್ಲದೆ, ಹೊಸ ಕೀವೇ SR 250, ಸರ್ಕ್ಯುಲರ್ ಹೆಡ್‌ಲ್ಯಾಂಪ್, ಟರ್ನ್ ಇಂಡಿಕೇಟರ್‌ಗಳು, ಕ್ರೋಮ್ ಸರೌಂಡ್‌ಗಳೊಂದಿಗೆ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಟೈಲ್ ಲ್ಯಾಂಪ್‌, ಸಿಲಿಂಡರ್ ಆಕಾರದ ಬ್ರೇಕ್ ಫ್ಲೂಯಿಡ್ ರಿಸರ್ವಾಯರ್, ನಾಬ್ಡ್ ಟೈರ್‌ಗಳು, ಸ್ಪೋಕ್ ವೀಲ್‌ಗಳಂತಹ ಪ್ರಮುಖ ವಿನ್ಯಾಸದ ವೈಶಿಷ್ಟ್ಯಗಳನ್ನು ಹೊಂದಿದ್ದು, ಡ್ಯುಯಲ್-ಚಾನೆಲ್ ABS, ಕಲರ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, LED DRLs, ಹಝರ್ಡ್ ಸ್ವಿಚ್, ಅಡ್ಜಸ್ಟ್ಏಬಾಲ್ ರೇರ್ ಸಸ್ಪೆನ್ಷನ್‌ನಂತಹ ವೈಶಿಷ್ಟ್ಯಗಳನ್ನು ಪಡೆದಿದೆ ಎಂದು ಹೇಳಬಹುದು.

ಈ ಬೈಕ್, 223 ಸಿಸಿ, ಸಿಂಗಲ್-ಸಿಲಿಂಡರ್, ಏರ್-ಕೂಲ್ಡ್ ಪೆಟ್ರೋಲ್ ಎಂಜಿನ್‌ ಹೊಂದಿದ್ದು, ಇದು 7,500 rpmನಲ್ಲಿ 16bhp ಗರಿಷ್ಠ ಪವರ್ ಮತ್ತು 6,500 rpmನಲ್ಲಿ 16Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 120 kg ತೂಕವಿದೆ. ಇನ್ನು, ಗ್ರಾಹಕರು ಕೀವೇ SR250 ಬೈಕ್ ದರದರಲ್ಲಿರುವ ಬಜಾಜ್ ಪಲ್ಸರ್ F250, ಹೀರೋ Xpulse 200 4V, ಯಮಹಾ ಏರೋಕ್ಸ್ 155 ಹಾಗೂ ಎಥರ್ 450X ದ್ವಿಚಕ್ರ ವಾಹನಗಳನ್ನು ಆಯ್ಕೆಯಾಗಿ ಪರಿಗಣಿಸಬಹುದು.

Most Read Articles

Kannada
English summary
Keyway sr 250 launched in indian market other new bikes same price
Story first published: Tuesday, January 17, 2023, 6:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X