Kinetic - Ola - Ather: ಕೈನೆಟಿಕ್ ಜುಲು, ಓಲಾ ಎಸ್1 ಎಕ್ಸ್, ಎಥರ್ 450ಎಸ್... ಮೂರಕ್ಕೂ ಕಡಿಮೆ ಬೆಲೆ, ಬೆಸ್ಟ್ ಯಾವುದು?
ಪುಣೆ ಮೂಲದ ಕೈನೆಟಿಕ್ ಗ್ರೀನ್ (Kinetic Green) ಸೋಮವಾರ ಜುಲು ಎಲೆಕ್ಟ್ರಿಕ್ ಸ್ಕೂಟರ್ (Zulu Electric Scooter) ಅನ್ನು ಬಿಡುಗಡೆಗೊಳಿಸಿದೆ. ಇದಕ್ಕೆ ಎಂಟ್ರಿ ಲೆವೆಲ್ ಮಾದರಿಗಳಾದ ಓಲಾ ಎಸ್1 ಎಕ್ಸ್, ಎಥರ್ 450ಎಸ್ ಪ್ರತಿಸ್ಪರ್ಧಿಯಾಗಿವೆ. ಈ ಮೂರರ ವಿಶ್ಲೇಷಣೆ ಇಲ್ಲಿದ್ದು, ಯಾವುದು ಬೆಸ್ಟ್ ಎಂದು ನೀವೇ ನಿರ್ಧರಿಸಿರಿ.
ಮೊದಲಿಗೆ ಪವರ್‌ಟ್ರೇನ್ ಬಗ್ಗೆ ಮಾತನಾಡೋಣ. ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬಳಕೆ ಮಾಡಲಾಗಿರುವ ಎಲೆಕ್ಟ್ರಿಕ್ ಮೋಟಾರ್, 2.1 kW ಪವರ್ ಉತ್ಪಾದಿಸುತ್ತದೆ. ಎಥರ್ 450ಎಸ್ (Ather 450S) ಮತ್ತು ಓಲಾ ಎಸ್1 ಎಕ್ಸ್ (Ola S1 X) ಇ-ಸ್ಕೂಟರ್‌ನಲ್ಲಿ ಉಪಯೋಗಿಸಿರುವ ಮೋಟಾರ್‌ಗಳು ಕ್ರಮವಾಗಿ 5.4 kW ಹಾಗೂ 4.5 kW ಪವರ್ ಹೊರಹಾಕಲಿದ್ದು, ಕೈನೆಟಿಕ್ ಎಲೆಕ್ಟ್ರಿಕ್ ಸ್ಕೂಟರ್‌ಗಿಂತ ಅಧಿಕವೆಂಬುದು ಸುಲಭವಾಗಿ ಗೊತ್ತಾಗುತ್ತದೆ.

ಟಾಪ್ ಸ್ವೀಡ್ ವಿಚಾರವಾಗಿ ಹೇಳುವುದಾದರೆ, ಕೈನೆಟಿಕ್ ಜುಲು 60 kmph, ಎಥರ್ 450ಎಸ್ 90 kmph, ಓಲಾ ಎಸ್1 ಎಕ್ಸ್ 85 kmph - 90 kmph ಟಾಪ್ ಸ್ವೀಡ್ ಹೊಂದಿದ್ದು, ಇಲ್ಲಿಯೂ ಓಲಾ, ಎಥರ್ ಸ್ಕೂಟರ್‌ಗಳು ಮುಂದಿವೆ. 0-40 kmph ವೇಗವನ್ನು ಪಡೆಯಲು ಎಥರ್ 450ಎಸ್ 3.9 ಸೆಕೆಂಡ್, ಓಲಾ ಎಸ್1 ಎಕ್ಸ್ 3.3 ಸೆಕೆಂಡ್ ತೆಗೆದುಕೊಳ್ಳುತದೆ. ಆದರೆ, ಈ ಕುರಿತು ಕೈನೆಟಿಕ್‌ನಿಂದ ಯಾವುದೇ ವಿವರಗಳು ಲಭಿಸಿಲ್ಲ.
ಬ್ಯಾಟರಿ ಪ್ಯಾಕ್ & ರೇಂಜ್ ಬಗ್ಗೆ ತಿಳಿಯುವುದಾದರೆ, ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 2.27 kWh ಬ್ಯಾಟರಿ ಪ್ಯಾಕ್ ಉಪಯೋಗಿಸಲಾಗಿದ್ದು, ಸಂಪೂರ್ಣ ಚಾರ್ಜ್‌ನಲ್ಲಿ 104 km ರೇಂಜ್ ನೀಡುತ್ತದೆ. ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ 2.9 kWh ಬ್ಯಾಟರಿ ಪ್ಯಾಕ್ ಬಳಕೆ ಮಾಡಲಾಗಿದ್ದು, ಫುಲ್ ಚಾರ್ಜ್‌ನಲ್ಲಿ 115 km ಕ್ರಮಿಸುವ ಸಾಮರ್ಥ್ಯವನ್ನು ಹೊಂದಿದೆ.

ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್ ಎರಡು ಬೇರೆ - ಬೇರೆ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಹೊಂದಿದ್ದು, ಅದಕ್ಕೆ ಅನುಗುಣವಾಗಿ 91 km and 151 km ರೇಂಜ್ ನೀಡಲಿದೆ. ರೇಂಜ್ ಸಂಬಂಧಿಸಿದಂತೆಯೂ ಕೈನೆಟಿಕ್ ಜುಲು ಸ್ಕೂಟರ್‌ಗೆ ಹೋಲಿಸಿದರೆ, ಎಥರ್ 450ಎಸ್ ಹಾಗೂ ಓಲಾ ಎಸ್1 ಎಕ್ಸ್ ಎಲೆಕ್ಟ್ರಿಕ್ ಸ್ಕೂಟರ್‌ಗಳು ಉತ್ತಮವಾಗಿವೆ ಎಂದು ಹೇಳಬಹುದು.
ಬೆಲೆ ಕುರಿತು ತಿಳಿಯುವುದಾದರೆ, ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್ ರೂ.94,990 (ಎಕ್ಸ್ ಶೋರೂಂ - ಮುಂಬೈ), ಓಲಾ ಎಸ್1 ಎಕ್ಸ್ ರೂ.89,999 ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಇವುಗಳಲ್ಲಿ ಎಥರ್ 450ಎಸ್ ಎಲೆಕ್ಟ್ರಿಕ್ ಸ್ಕೂಟರ್ ಹೆಚ್ಚು ದುಬಾರಿಯಾಗಿದ್ದು, ರೂ.1.3 ಲಕ್ಷ (ಎಕ್ಸ್ ಶೋರೂಂ) ದರವನ್ನು ಹೊಂದಿದೆ.

ಓಲಾ ಎಸ್1 ಎಕ್ಸ್ 5-ಇಂಚಿನ LCD ಡಿಸ್ಪ್ಲೇ, LED ಲೈಟಿಂಗ್, ಸೈಡ್-ಸ್ಟ್ಯಾಂಡ್ ಅಲರ್ಟ್, ರಿವರ್ಸ್ ಮೋಡ್, ರಿಮೋಟ್ ಬೂಟ್ ಅನ್ಲಾಕ್, ನ್ಯಾವಿಗೇಷನ್, OTA ಅಪ್ಡೇಟ್, ಬ್ಲೂಟೂತ್ ಮತ್ತು ಜಿಪಿಎಸ್ ಕನೆಕ್ಟಿವಿಟಿ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಪಡೆದಿದೆ. ಎಥರ್ 450ಎಸ್ ಜಾಯ್‌ಸ್ಟಿಕ್‌ನಿಂದ ಕಂಟ್ರೋಲ್ ಮಾಡಬಹುದಾದ TFT ತಂತ್ರಜ್ಞಾನವನ್ನು ಪಡೆದಿರುವ LCD ನಾನ್-ಟಚ್ ಡಿಸ್ಪ್ಲೇಯನ್ನು ಹೊಂದಿದೆ.
ಕೈನೆಟಿಕ್ ಜುಲು ಎಲೆಕ್ಟ್ರಿಕ್ ಸ್ಕೂಟರ್, ಎಲ್ಇಡಿ ಹೆಡ್ ಲ್ಯಾಂಪ್, ಎಲ್ಇಡಿ DRL, ಡಿಜಿಟಲ್ ಸ್ಪೀಡೋಮೀಟರ್, ಆಟೋ-ಕಟ್ ಚಾರ್ಜರ್, ಸೈಡ್ ಸ್ಟ್ಯಾಂಡ್ ಸೆನ್ಸರ್, ಬೂಟ್ ಲೈಟ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಈ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬೆಲೆಗೆ ತಕ್ಕಂತೆ ವೈಶಿಷ್ಟ್ಯಗಳನ್ನು ಹೊಂದಿದ್ದು, ನಿಮಿಷ್ಟದ ಸ್ಕೂಟರ್ ಅನ್ನು ಆಯ್ಕೆ ಮಾಡಿಕೊಳ್ಳಿರಿ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications








