KTM 200 Duke: ಹೊಸ ಬದಲಾವಣೆಯೊಂದಿಗೆ ಯುವಕರ ಫೆವರೇಟ್ 'ಕೆಟಿಎಂ 200 ಡ್ಯೂಕ್' ಬಿಡುಗಡೆ

ಭಾರತದಲ್ಲಿ ಕೆಟಿಎಂ (KTM) ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾಗಿ ಗುರುತಿಸಿಕೊಂಡಿದೆ. ಬಹುತೇಕ ಯುವ ಗ್ರಾಹಕರನ್ನು ಆಕರ್ಷಿಸುವ ಬೈಕ್‌ಗಳನ್ನೇ ಬಿಡುಗಡೆ ಮಾಡುತ್ತಿರುತ್ತದೆ. ಸದ್ಯ, ಹೊಚ್ಚ ಹೊಸ ಬದಲಾವಣೆಯೊಂದಿಗೆ 'ಡ್ಯೂಕ್ 200' (2023) ಮೋಟಾರ್ ಸೈಕಲ್ ಲಾಂಚ್ ಮಾಡಿದೆ. ಇಲ್ಲಿದೆ ಹೆಚ್ಚಿನ ಮಾಹಿತಿ.

ಅಪ್‌ಗ್ರೇಡ್ ನೊಂದಿಗೆ ಬಿಡುಗಡೆಯಾಗಿರುವ ಕೆಟಿಎಂ 200 ಡ್ಯೂಕ್ ಬೈಕ್, ನೂತನ ಹೆಡ್‌ಲ್ಯಾಂಪ್ ಬಿಟ್ಟರೆ, ಇತರೆ ಯಾವುದೇ ಬದಲಾವಣೆಯನ್ನು ಪಡೆದುಕೊಂಡಿಲ್ಲ. ಈ ಬೈಕ್ ರೂ.1.96 ಲಕ್ಷ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ಲಭ್ಯವಿದೆ. ಪ್ರಸ್ತುತ, ದೇಶೀಯ ಮಾರುಕಟ್ಟೆಯಲ್ಲಿ ಸಿಗುವ 'ಡ್ಯೂಕ್ 200'ಗಿಂತ ರೂ.3,155 ಅಧಿಕ ದರವನ್ನು ಹೊಂದಿದೆ. ಎಲೆಕ್ಟ್ರಾನಿಕ್ ಆರೆಂಜ್ ಹಾಗೂ ಮೆಟಾಲಿಕ್ ಸಿಲ್ವರ್ ಬಣ್ಣಗಳ ಆಯ್ಕೆಯಲ್ಲಿ ನವೀಕರಣಗೊಂಡ ಕೆಟಿಎಂ 200 ಡ್ಯೂಕ್ ಬೈಕ್ ಸಿಗಲಿದೆ.

KTM 200 Duke: ಹೊಸ ಬದಲಾವಣೆಯೊಂದಿಗೆ ಯುವಕರ ಫೆವರೇಟ್ ಕೆಟಿಎಂ 200 ಡ್ಯೂಕ್ ಬಿಡುಗಡೆ

ಈ ಹಿಂದೆ, 'ಕೆಟಿಎಂ 1290 ಸೂಪರ್ ಡ್ಯೂಕ್ ಆರ್'ನಲ್ಲಿ ಬಳಕೆ ಮಾಡಲಾಗಿದ್ದ ಹೆಡ್‌ಲ್ಯಾಂಪ್ ಅನ್ನೇ 'ಡ್ಯೂಕ್ 200' ಬೈಕ್‌ನಲ್ಲಿಯೂ ಉಪಯೋಗ ಮಾಡಲಾಗಿದೆ. ಈ ಹೆಡ್‌ಲ್ಯಾಂಪ್ ಯುನಿಟ್ ನಲ್ಲಿ 32 ಎಲ್ಇಡಿ ಬಲ್ಬ್ ಹಾಗೂ 6 ರೆಫ್ಲೆಕ್ಟರ್ಸ್ ಇವೆ. ಜೊತೆಗೆ ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಪ್‌ಗಳ ಹೊಸ ಸೆಟ್ ಕೂಡ ಇದೆ.

ನವೀಕರಣಗೊಂಡಿರುವ ಕೆಟಿಎಂ 200 ಡ್ಯೂಕ್ ಎಂಜಿನ್ ಅನ್ನು ದೇಶಾದ್ಯಂತ ಜಾರಿಗೆ ಬಂದಿರುವ OBD2 ಎಮಿಷನ್ ಮಾನದಂಡ ಹಾಗೂ E20 (ಎಥನಾಲ್) ಇಂಧನಕ್ಕೆ ಬೆಂಬಲಿಸುವಂತೆ ಮೇಲ್ದರ್ಜೆರಿಸಲಾಗಿದೆ. ಇದು, 199.5 ಸಿಸಿ ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಹೊಂದಿದೆ. 10,000 rpmನಲ್ಲಿ 24.68 bhp ಪವರ್ ಹಾಗೂ 8,000 rpmನಲ್ಲಿ 19.3 Nm ಪೀಕ್ ಟಾರ್ಕ್ ಉತ್ಪಾದಿಸಲಿದ್ದು, 6 ಸ್ವೀಡ್ ಗೇರ್ ಬಾಕ್ಸ್ ಪಡೆದಿದೆ.

ಅಪ್‌ಗ್ರೇಡ್ ಮಾಡಲಾಗಿರುವ ಕೆಟಿಎಂ 200 ಡ್ಯೂಕ್ ಸಸ್ಪೆನ್ಷನ್ ಸೆಟಪ್ ಬಗ್ಗೆ ಹೇಳುವುದಾದರೆ, ಇದು ಫ್ರಂಟ್ 43 ಎಂಎಂ USD ಪೋರ್ಕ್ಸ್, ರೇರ್, 10- ಸ್ಟೆಪ್ ಅಡ್ಜಸ್ಟ್ಏಬಲ್ ಮೊನೊಶಾಕ್ ಸಸ್ಪೆನ್ಷನ್ ಸೆಟಪ್ ಹೊಂದಿದೆ. ಬ್ರೇಕಿಂಗ್ ಸಿಸ್ಟಮ್ ಬಗ್ಗೆ ಮಾತನಾಡುವುದಾದರೆ, ಫ್ರಂಟ್ 300 ಎಂಎಂ, ರೇರ್ 230 ಎಂಎಂ ಡಿಸ್ಕ್ ಬ್ರೇಕ್ ಆಯ್ಕೆಯನ್ನು ಹೊಂದಿದೆ. ಜೊತೆಗೆ ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್) ಅನ್ನು ಪಡೆದಿದೆ.

ರೈಡಿಂಗ್ ಸೇರಿದಂತೆ ಇನ್ನಿತರೇ ಅಂಕಿಅಂಶದ ಮಾಹಿತಿಯನ್ನು ತೋರಿಸಲು ಆಕರ್ಷಕ LCD ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಹೊಂದಿದ್ದು, ಟೈಲ್‌ ಲೈಟ್ಸ್ ಅನ್ನು ಪಡೆದಿದೆ. ಇನ್ನು, ಬಿಡುಗಡೆ ಬಗ್ಗೆ ಮಾತನಾಡಿರುವ ಬಜಾಜ್ ಆಟೋ ಲಿಮಿಟೆಡ್ (ಕೆಟಿಎಂ ಸಹಭಾಗಿತ್ವ) ಅಧ್ಯಕ್ಷ ಸುಮೀತ್ ನಾರಂಗ್, ಕೆಟಿಎಂ ಯುವ ರೈಡರ್ ಗಳಿಗೆ ಇಷ್ಟದ ಬೈಕ್ ಆಗಿದ್ದು, ಹೆಡ್‌ಲ್ಯಾಂಪ್ ಅಪ್‌ಗ್ರೇಡ್ ಮಾಡಲಾಗಿರುವುದರಿಂದ ಈ ಮೋಟಾರ್‌ಸೈಕಲ್ ಮೊದಲಿಗಿಂತ ಹೆಚ್ಚು ಅತ್ಯಾಧುನಿಕವಾಗಿದೆ' ಎಂದು ಹೇಳಿದ್ದಾರೆ.

ಸದ್ಯ, ಭಾರತದ ಮಾರುಕಟ್ಟೆಯಲ್ಲಿ ಖರೀದಿಗೆ ದೊರೆಯುವ ಕೆಟಿಎಂ 200 ಡ್ಯೂಕ್ ಬೈಕ್, ರೂ.1.93 ಲಕ್ಷ ಎಕ್ಸ್ ಶೋರೂಂ ದರವನ್ನು ಪಡೆದಿದೆ. 199.5 ಸಿಸಿ ಸಾಮರ್ಥ್ಯ ಎಂಜಿನ್ ಹೊಂದಿದ್ದು, 33 to 35 kmpl ಮೈಲೇಜ್ ನೀಡುತ್ತದೆ. ಎಲ್ಇಡಿ ಹೆಡ್‌ಲೈಟ್, ಎಲ್ಇಡಿ ಟೈಲ್‌ಲೈಟ್, ಅಲಾಯ್ ವೀಲ್ಸ್, ಎಲ್ಇಡಿ ಟರ್ನ್ ಇಂಡಿಕೇಟರ್ ಹಾಗೂ ಸ್ಪ್ಲಿಟ್ ಸೀಟ್ಸ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಕೆಟಿಎಂ 200 ಡ್ಯೂಕ್ ಬೈಕಿಗೆ ಬಜಾಜ್ ಪಲ್ಸರ್ NS200, ಟಿವಿಎಸ್ ಅಪಾಚೆ RTR 200 4V ಹಾಗೂ ಸುಜುಕಿ Gixxer 250 ಮೋಟಾರ್ ಸೈಕಲ್ ಗಳು ಪ್ರತಿಸ್ಪರ್ಧಿಯಾಗಿವೆ. ಅದರಲ್ಲೂ ನೂತನ ಹೆಡ್‌ಲ್ಯಾಂಪ್ ಪಡೆಯುವ ಮೂಲಕ ಕೆಟಿಎಂ 200 ಡ್ಯೂಕ್ ಬೈಕ್ ಲಾಂಚ್ ಆಗಿದ್ದು, ಹೆಚ್ಚಿನ ಯುವ ಜನರನ್ನು ಆಕರ್ಷಿಸಲಿದ್ದು, ಮುಂಬರುವ ದಿನಗಳಲ್ಲಿ ಕಂಪನಿಯ ಮಾರಾಟವನ್ನು ದ್ವಿಗುಣಗೊಳಿಸಿಕೊಳ್ಳಲು ನೇರವಾಗುತ್ತದೆ.

More from DriveSpark

Article Published On: Monday, June 19, 2023, 13:49 [IST]
English summary
Ktm 200 duke 2023 launched get led new headlamp details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+