ಹೊಸ KTM 390 Duke ಬಿಡುಗಡೆ: ಪವರ್‌ನಲ್ಲಿ ರಾಜಿಯಿಲ್ಲ, ಎಲ್ಲಾ ಬ್ರಾಂಡ್‌ಗಳನ್ನು ಹಿಂದಿಕ್ಕಿದ KTM
ಕೆಟಿಎಂಗೆ ಭಾರತದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ಇದೇ ಕಾರಣಕ್ಕೆ ಕಂಪನಿಯು ಕಾಲ ಕಾಲಕ್ಕೆ ತನ್ನ ಮಾದರಿಗಳನ್ನು ನವೀಕರಣ ಮಾಡುತ್ತಲೇ ಬಂದಿದೆ. ಇದೀಗ ಡ್ಯೂಕ್ 390 ಸರದಿಯಾಗಿದ್ದು, ಈ ಮಾದರಿಗೆ ಭಾರತದಲ್ಲಿ ವಿಪರೀತ ಅಭಿಮಾಗಳಿರುವ ಕಾರಣ ಸಾಕಷ್ಟು ನವೀಕರಣಗಳೊಂದಿಗೆ ಹೊಸ 390 ಡ್ಯೂಕ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡಲಾಗಿದೆ.
ಕಂಪನಿಯು ತನ್ನ ಹೊಚ್ಚಹೊಸ ಡ್ಯೂಕ್ 390 ಮಾದರಿಯನ್ನು ರೂ. 3.11 ಲಕ್ಷಕ್ಕೆ ಬಿಡುಗಡೆ ಮಾಡಿದೆ (ಎಕ್ಸ್ ಶೋ ರೂಂ). ವಾಸ್ತವವಾಗಿ, 390 ಡ್ಯೂಕ್ ಮೋಟಾರ್‌ಸೈಕಲ್ ಅನ್ನು 2013 ರಲ್ಲಿ ಪರಿಚಯಿಸಿದ ನಂತರ ತಯಾರಕರಿಂದ ಅತಿದೊಡ್ಡ ನವೀಕರಣವನ್ನು ಇದೀಗ ಮಾಡಲಾಗಿದೆ. ಈ ಹೊಸ ಮೋಟಾರ್‌ಸೈಕಲ್ ಹೊಸ ಪವರ್‌ಟ್ರೇನ್ ಸಿಸ್ಟಮ್ ಸೇರಿದಂತೆ ಅದರ ಹಿಂದಿನ ಮಾದರಿಗೆ ಹೋಲಿಸಿದರೆ ಕೆಲವು ಗಮನಾರ್ಹ ಬದಲಾವಣೆಗಳನ್ನು ಪಡೆದಿದೆ.

ವಿನ್ಯಾಸ ಮತ್ತು ಪವರ್‌ಟ್ರೇನ್ ಹೊರತುಪಡಿಸಿ ಇತರ ನವೀಕರಣಗಳೆಂದರೆ ಹೊಸ ಚಾಸಿಸ್ ಮತ್ತು ಸಬ್-ಫ್ರೇಮ್ ಎಂದು ಹೇಳಬಹದು. ಸದ್ಯ ಮಾರುಕಟ್ಟೆಯಲ್ಲಿ ಹೊಸ ಟ್ರಯಂಫ್, ಹಾರ್ಲೆಡೇವಿಡ್‌ಸನ್, ಟಿವಿಎಸ್ ಈಗಾಗಲೇ ತಮ್ಮ ಮಾದರಿಗಳೊಂದಿಗೆ KTM 390 ಡ್ಯೂಕ್ಗೆ ಪೈಪೋಟಿ ನೀಡಲು ಸಜ್ಜಾಗಿಬಿಟ್ಟಿವೆ. ಆದ್ರೆ ಇವೆಲ್ಲವೂ ಪ್ರೀ ಬುಕಿಂಗ್ ಹಾಗೂ ತಿಂಗಳ ಮಾರಾಟ ಅಂಕಿಅಂಶಗಳ ನಂತರವಷ್ಟೇ ಯಾವುದಕ್ಕೆ ಉತ್ತಮ ಬೇಡಿಕೆಯಿದೆ ಎಂದು ತಿಳಿದುಬರಲಿದೆ.
KTM 390 ಡ್ಯೂಕ್ ಹೊಸ ವಿನ್ಯಾಸ: ಹೊಸ KTM 390 ಡ್ಯೂಕ್ ಮೋಟಾರ್‌ಸೈಕಲ್ ತನ್ನ ದೊಡ್ಡ ಟ್ಯಾಂಕ್ ಮಸ್ಕುಲರ್ ಲುಕ್‌ನಲ್ಲಿ ಸ್ಪೋರ್ಟಿಯಾಗಿ ಕಾಣುತ್ತದೆ. ಅದರ ಮೇಲೆ, ಹಿಂಭಾಗದ ವಿಭಾಗವು ಫಾಕ್ಸ್ ಔಟ್ಲೆಟ್ಗಳನ್ನು ಹೊಂದಿದ್ದು, ಇದು ಬೃಹತ್ತನಕ್ಕೆ ಮತ್ತಷ್ಟು ಸಹಾಯ ಮಾಡುತ್ತದೆ. ಅಂಡರ್‌ಬೆಲ್ಲಿ ಎಕ್ಸಾಸ್ಟ್ ಅದರ ವಾಪಸಾತಿಯನ್ನು ಸಹ ಸೂಚಿಸುತ್ತದೆ.

ಸಸ್ಪೆನ್ಶನ್: ಹೊಸದಾಗಿ ಬಿಡುಗಡೆಯಾದ KTM 390 ಡ್ಯೂಕ್ ಮೋಟಾರ್‌ಸೈಕಲ್ ಈಗ ರೀಬೌಂಡ್-ಅಡ್ಜಸ್ಟ್‌ಮೆಂಟ್ ಸೆಟಪ್ ಜೊತೆಗೆ ಪ್ರೀ-ಲೋಡ್ ಹೊಂದಾಣಿಕೆಯನ್ನು ಹೊಂದಿದೆ. ಇದು ಬಳಕೆದಾರರಿಗೆ ತಮ್ಮ ಆದ್ಯತೆಗಳಿಗೆ ಅನುಗುಣವಾಗಿ ಸಸ್ಪೆನ್ಷನ್ ಸೆಟಪ್ ಅನ್ನು ಉತ್ತಮಗೊಳಿಸಲು ಅನುವು ಮಾಡಿಕೊಡುತ್ತದೆ. ಮುಂಭಾಗವು USD ಫೋರ್ಕ್‌ಗಳನ್ನು ಹೊಂದಿದ್ದರೇ ಹಿಂಭಾಗವು ಮೊನೊ ಸಸ್ಪೆನ್ಶನ್ ಅನ್ನು ಹೊಂದಿದೆ.
ಪವರ್‌ಟ್ರೇನ್: ಹೊಸ 2024 KTM 390 ಡ್ಯೂಕ್ ಮೋಟಾರ್‌ಸೈಕಲ್ ಈಗ ದೊಡ್ಡ 399cc, ಸಿಂಗಲ್-ಸಿಲಿಂಡರ್, DOHC, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಈ ಹೊಸ 399cc ಎಂಜಿನ್ 64mm ನಲ್ಲಿ ದೀರ್ಘವಾದ ಸ್ಟ್ರೋಕ್ ಅನ್ನು ಹೊಂದಿದೆ. ಬೋರ್ ಅದರ ಹಿಂದಿನ 89mm ನಲ್ಲಿ ಹೋಲುತ್ತದೆ. ಹೊಸ ಎಂಜಿನ್ ಕಡಿಮೆ ಆರ್‌ಪಿಎಂನಲ್ಲಿ ಹೆಚ್ಚು ಶಕ್ತಿ ಮತ್ತು ಟಾರ್ಕ್ ಅನ್ನು ಉತ್ಪಾದಿಸುವ ಸಮಾರ್ಥ್ಯವನ್ನು ಹೊಂದಿದೆ.

ಅಂಕಿಅಂಶಗಳ ಪ್ರಕಾರ, 2024 KTM 390 ಡ್ಯೂಕ್‌ನಲ್ಲಿನ ಹೊಸ 399cc ಎಂಜಿನ್ 8,500rpm ನಲ್ಲಿ 45.37bhp ಮತ್ತು 6,500rpm ನಲ್ಲಿ 39Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹಳೆಯ 390 ಡ್ಯೂಕ್ 42.9bhp @9,000rpm ಮತ್ತು 7,000rpm ನಲ್ಲಿ 37Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ: ಹೊಸ KTM 390 ಡ್ಯೂಕ್ ಮೋಟಾರ್‌ಸೈಕಲ್ ಬಿಡುಗಡೆಯೊಂದಿಗೆ ಕಂಪನಿಯು ಪರ್ಫಾಮೆನ್ಸ್ ಪರವಾಗಿ ತನ್ನ ಅಭಿಮಾನಿಗಳಿಗೆ ಮತ್ತಷ್ಟು ಉತ್ಸಾಹವನ್ನು ಹೆಚ್ಚಿಸಿದೆ. ರೂ. 3.11 ಲಕ್ಷ (ಎಕ್ಸ್ ಶೋರೂಂ) ಬೆಲೆಗೆ ಅನುಗುಣವಾಗಿ ಅದ್ಭುತ ಪರ್ಫಾಮೆನ್ಸ್ ಮತ್ತು ಹಾರ್ಡ್‌ವೇರ್ ಅನ್ನು ನೀಡುತ್ತಿದೆ. ಇದಲ್ಲದೆ, ನವೀಕರಿಸಿದ ಪವರ್‌ಟ್ರೇನ್ ಮೋಟಾರ್‌ಸೈಕಲ್ ಅನ್ನು ಇನ್ನಷ್ಟು ಬಲಿಷ್ಟವಾಗಿಸಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಶಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡಲು ಮರೆಯದಿರಿ.


Click it and Unblock the Notifications








