ಕೈಗೆಟುಕುವ ಬೆಲೆಯಲ್ಲಿ ಹೊಸ ಹೀರೋ ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಿಡುಗಡೆ
ದೇಶದಲ್ಲಿ ಹೆಚ್ಚುತ್ತಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಯಿಂದಾಗಿ ಹೊಸ ಇವಿಗಳ ಆಗಮನವು ಹೆಚ್ಚಾಗುತ್ತಿದೆ. ಹೀರೋ ಎಲೆಕ್ಟ್ರಿಕ್ ಕೂಡ ಇದೀಗ ಅಂತಿಮವಾಗಿ ತನ್ನ ಹೊಸ ಸ್ಮಾರ್ಟ್ ಮತ್ತು ಸಂಪರ್ಕಿತ ಶ್ರೇಣಿಯ ಆಪ್ಟಿಮಾ CX ಮತ್ತು NYX ಎಲೆಕ್ಟ್ರಿಕ್ ಮಾದರಿಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ.
ಕಂಪನಿಯು ಆಪ್ಟಿಮಾ CX5.0 (ಡ್ಯುಯಲ್ ಬ್ಯಾಟರಿ), ಆಪ್ಟಿಮಾ CX2.0 (ಸಿಂಗಲ್ ಬ್ಯಾಟರಿ) ಮತ್ತು NYX CX5.0 (ಡ್ಯುಯಲ್ ಬ್ಯಾಟರಿ) ಎಂಬ ಮೂರು ಹೊಸ ಉತ್ಪನ್ನಗಳನ್ನು ಬಹಿರಂಗಪಡಿಸಿದೆ. ಬೆಲೆಗೆ ಸಂಬಂಧಿಸಿದಂತೆ, ಹೀರೋ ಎಲೆಕ್ಟ್ರಿಕ್ ಕಂಫರ್ಟ್ ಮತ್ತು ಸಿಟಿ ಸ್ಪೀಡ್ ಸ್ಕೂಟರ್‌ಗಳು ಕ್ರಮವಾಗಿ ರೂ. 85 ಸಾವಿರ, ರೂ. 95 ಸಾವಿರ ಮತ್ತು ರೂ. 1,05,000 ಹಾಗೂ ರೂ. 1,30,000 ಬೆಲೆ ಶ್ರೇಣಿಯಲ್ಲಿ ಖರೀದಿಗೆ ಲಭ್ಯವಿರಲಿವೆ.

ಹೊಸ ಎಲೆಕ್ಟ್ರಿಕ್ ಸ್ಕೂಟರ್‌ಗಳು ಸುಗಮ ಸವಾರಿಗಾಗಿ ಅತ್ಯಾಧುನಿಕ ಜಪಾನೀಸ್ ಮೋಟಾರ್ ತಂತ್ರಜ್ಞಾನದೊಂದಿಗೆ ಸಜ್ಜುಗೊಂಡಿವೆ. ಹಾಗೆಯೇ ವಿವಿಧ ಭಾರತೀಯ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಜರ್ಮನ್ ಇಸಿಯು ತಂತ್ರಜ್ಞಾನವನ್ನು ಹೊಂದಿವೆ. ಡಿಸೈನ್ ಹಾಗೂ ಇವುಗಳ ಆಕರ್ಷಣೀಯ ನೋಟವು ಐಸಿಇ ಎಂಜಿನ್ ಸ್ಕೂಟರ್‌ಗಳಂತಲ್ಲದೇ ಬಹಳ ಫ್ಯೂಚರಿಸ್ಟಿಕ್ ವಿನ್ಯಾಸವನ್ನು ಪಡೆದುಕೊಂಡಿವೆ. ಇವು ಸದ್ಯ ಮಾರುಕಟ್ಟೆಯಲ್ಲಿ ಓಲಾ, ಎಥರ್, ಟಿವಿಎಸ್ ಐಕ್ಯೂಬ್ ಹಾಗೂ ಮತ್ತಿತರ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್‌ಗಳೊಂದಿಗೆ ಸ್ಪರ್ಧಿಸಲಿವೆ.
Optima CX5.0, 3 kWh C5 Li-ion ಬ್ಯಾಟರಿಯಿಂದ ಚಾಲಿತವಾಗಿದೆ. ಇದು ಗಂಟೆಗೆ 55 ಕಿ.ಮೀ ವೇಗದಲ್ಲಿ ಚಲಿಸಬಲ್ಲದು, 165 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಸ್ಕೂಟರ್ ಸಂಪೂರ್ಣವಾಗಿ ಚಾರ್ಜ್ ಆಗಲು 3 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. Optima CX2.0 ವಿಷಯಕ್ಕೆ ಬಂದರೆ, ಇದು ಗಂಟೆಗೆ 48 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ಇದು ಕೂಡ Optima CX5.0 ನಂತೆ 165 mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಇದನ್ನು 4.5 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು.

ಇನ್ನು ಕೊನೆಯ ಮಾದರಿ NYX CX5.0 ಕುರಿತು ಮಾತನಾಡುವುದಾದರೆ, ಇತರ ಎರಡು ಸ್ಕೂಟರ್‌ಗಳಿಗಿಂತ ಹೆಚ್ಚಿನ 175 mm ಗ್ರೌಂಡ್ ಕ್ಲಿಯರೆನ್ಸ್ ನೀಡುತ್ತದೆ. ಗಂಟೆಗೆ 48 ಕಿ.ಮೀ ವೇಗದಲ್ಲಿ ಚಲಿಸಬಲ್ಲದು. ವಾಹನವು 3 kWh C5 Li-ion ಬ್ಯಾಟರಿಯಿಂದ ತನ್ನ ಶಕ್ತಿಯನ್ನು ಪಡೆಯುತ್ತದೆ. ಇದನ್ನು 3 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಮೂರು ಕೂಡ ಹಲವು ಆಧುನಿಕ ಫೀಚರ್‌ಗಳನ್ನು ಒಳಗೊಂಡಿವೆ.
ಎಲ್ಲಾ ಮೂರು ಎಲೆಕ್ಟ್ರಿಕ್ ಸ್ಕೂಟರ್‌ಗಳು ಬ್ಯಾಟರಿ ಸುರಕ್ಷತಾ ಎಚ್ಚರಿಕೆ, ಡ್ರೈವ್ ಮೋಡ್ ಲಾಕ್, ರಿವರ್ಸ್ ರೋಲ್ ಪ್ರೊಟೆಕ್ಷನ್, ಸೈಡ್ ಸ್ಟ್ಯಾಂಡ್ ಸೆನ್ಸಾರ್‌ಗಳನ್ನು ಒಳಗೊಂಡಿರುವ ವರ್ಧಿತ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಸುಸಜ್ಜಿತವಾಗಿವೆ. ಬಣ್ಣ ಆಯ್ಕೆಗಳನ್ನು ನೋಡುವುದಾದರೆ, Optima CX5.0 ಡಾರ್ಕ್ ಮ್ಯಾಟ್ ಬ್ಲೂ ಮತ್ತು ಮ್ಯಾಟ್ ಮರೂನ್‌ನಲ್ಲಿ ಲಭ್ಯವಿದೆ. ಹಾಗೆಯೇ ಆಪ್ಟಿಮಾ CX2.0 ಅನ್ನು ಡಾರ್ಕ್ ಮ್ಯಾಟ್ ಬ್ಲೂ ಮತ್ತು ಚಾರ್ಕೋಲ್ ಬ್ಲ್ಯಾಕ್‌ನಲ್ಲಿ ನೀಡಲಾಗುತ್ತದೆ. ಇನ್ನು NYX CX5.0 ಚಾರ್ಕೋಲ್ ಬ್ಲಾಕ್ ಮತ್ತು ಪರ್ಲ್ ವೈಟ್ ಬಣ್ಣದ ಯೋಜನೆಗಳಲ್ಲಿ ಲಭ್ಯವಿದೆ.

ಸದ್ಯಕ್ಕಿರುವ ಎಲೆಕ್ಟ್ರಿಕ್ ವಾಹನಗಳ ಬೇಡಿಕೆಗೆ ಅನುಗುಣವಾಗಿ ಹೀರೋ ತನ್ನ ಸ್ಕೂಟರ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಆದರೆ ಪ್ರಸ್ತುತ ತನ್ನ ಪ್ರತಿಸ್ಪರ್ಧಿಗಳಿಂದ ತೀರ್ವ ಪೈಪೋಟಿ ಎದುರಿಸಬೇಕಿದೆ. ಈಗಾಗಲೇ ಓಲಾ, ಎಥರ್ ಸೇರಿದಂತೆ ಹಲವು ಹೊಸ ಕಂಪನಿಗಳ ಸ್ಕೂಟರ್‌ಗಳು ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಆಧಿಪತ್ಯವನ್ನು ಮುಂದುವರಿಸಿವೆ. ಈಗ ಹೀರೋ ಕೂಡ ತನ್ನ ಹೊಸ ಎಲೆಕ್ಟ್ರಿಕ್ ಮಾದರಿಗಳ ಮೂಲಕ ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








